ಸಾಮಾನ್ಯವಾಗಿ ಅಧಿಕಾರ ಅಂತಸ್ತು ಪ್ರತಿಷ್ಠೆ ಅಂದರೆ ಎಲ್ಲರೂ ಕೂಡ ಇಷ್ಟ ಪಡುತ್ತಾರೆ ಆದರೆ ನಮ್ಮ ಪುನೀತ್ ರಾಜಕುಮಾರ್ ಅವರು ಮಾತ್ರ ತಮಗೆ ಸಿಗಬೇಕಾದಂತಹ ಸ್ಥಾನವನ್ನು ತಮ್ಮ ಅತ್ತಿಗೆ ಆದಂತಹ ಗೀತಾ ಅವರಿಗೆ ನೀಡಿ ಇದೀಗ ಮಾನವೀಯತೆ ಮೆರೆದಿದ್ದಾರೆ. ನಿಜಕ್ಕೂ ಇಂತಹ ಮನಸ್ಸು ಎಷ್ಟು ಜನರಿಗೆ ತಾನೆ ಇರುತ್ತದೆ ಹೇಳಿ ಅಪ್ಪು ಅವರು ಎಷ್ಟು ಸಮಾಜ ಸೇವೆ ಮಾಡಿದ್ದಾರೆ ಹಾಗೂ ಬಡವರಿಗೆ ಎಷ್ಟು ಸಹಾಯ ಮಾಡಿದ್ದಾರೆ ಎಂಬ ವಿಚಾರ ಈಗಾಗಲೇ ಸಾಕಷ್ಟು ಜನರಿಗೆ ತಿಳಿದಿದೆ. ಅವರು ಹಲವಾರು ವೃದ್ಧಾಶ್ರಮ, ಗೋಶಾಲೆ ಹಾಗೂ ಯಾರಿಗೂ ತಿಳಿಯದಂತೆ ಸರ್ಕಾರಿ ಶಾಲೆಗಳಿಗೆ ಅನುದಾನ ನೀಡಿದ್ದಾರೆ ಅಷ್ಟೇ ಅಲ್ಲದೆ ಶಕ್ತಿದಾಮ ಎಂಬ ಕೇಂದ್ರದಲ್ಲಿ ಕೂಡ ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸವನ್ನು ಒದಗಿಸುವುದರ ಜೊತೆಗೆ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
ಅಪ್ಪು ಅವರು ಬದುಕಿದ್ದಾಗ ನಿಜಕ್ಕೂ ಕೂಡ ಯಾರಿಗೂ ಅವರು ಇಷ್ಟೆಲ್ಲಾ ಸಹಾಯ ಮಾಡಿದ್ದಾರೆ ಎಂಬುದು ತಿಳಿದಿರಲಿಲ್ಲ ಅವರು ನಮ್ಮೆಲ್ಲರನ್ನು ಬಿಟ್ಟು ಹೋದ ನಂತರವಷ್ಟೇ ಅವರು ಮಾಡುತ್ತಿದ್ದ ಅಂತಹ ಸಹಾಯ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಅಪ್ಪು ಅವರು ಈಗಾಗಲೇ ನಮ್ಮನ್ನೆಲ್ಲಾ ಅಗಲಿ ಆರು ತಿಂಗಳು ಕಳೆಯುತ್ತಾ ಬಂದಿದ್ದರೂ ಕೂಡ ಅವರು ಮಾಡಿದಂತಹ ಸಹಾಯ ಈಗಲೂ ಕೂಡ ಪ್ರತಿನಿತ್ಯವೂ ಕೂಡ ಯಾವುದಾದರೂ ಒಂದು ರೂಪದಲ್ಲಿ ಜನರಿಗೆ ತಿಳಿಯುತ್ತದೆ. ಅವರು ಮಾಡಿರುವಂತಹ ಕೇಳಿದರೆ ಒಬ್ಬ ಮನುಷ್ಯ ಇಷ್ಟೆಲ್ಲಾ ಸಹಾಯ ಮಾಡುತ್ತಾನ ಅಂತ ನಮಗೆ ಆಶ್ಚರ್ಯವಾಗುತ್ತದೆ ತಾವೂ ಬದುಕಿರುವ ವರೆಗೂ ಕೂಡ ಇತರರಿಗೆ ಹಿತವನ್ನೇ ಬಯಸಿಕೊಂಡ ಬಂದಂತಹ ವ್ಯಕ್ತಿ ಇಂತಹ ಮಹಾನ್ ವ್ಯಕ್ತಿಗೆ ವಿಧಿ ಎಂತಹ ಘೋ’ರ ಸಾ’ವು ನೀಡಿತು ಅಂದರೆ ನಿಜಕ್ಕೂ ಕೂಡ ನಮಗೆ ದೇವರ ಮೇಲೆ ನಂಬಿಕೆ ಹೋಗುತ್ತಿದೆ ಅಂತ ಅನಿಸುತ್ತದೆ. ಒಳ್ಳೆತನಕ್ಕೆ ಕಾಲ ಇಲ್ಲ ಒಳ್ಳೆಯವರಿಗೆ ಇದು ಕಾಲವಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ.
ಪುನೀತ್ ರಾಜಕುಮಾರ್ ಅವರು ಮಾಡುತ್ತಾ ಹೋದಂತಹ ಸಹಾಯಗಳನ್ನು ಬರೆಯುತ್ತಾ ಹೋದರೆ ನಿಜಕ್ಕೂ ಕೂಡ ಬಹಳಷ್ಟು ಪುಸ್ತಕವೇ ಬೇಕಾಗುತ್ತದೆ ಅಂತ ಅನಿಸುತ್ತದೆ ಪುಟಗಳು ಅವರು ಮಾಡಿದಂತಹ ಸಹಾಯವನ್ನು ಬರೆಯುವುದಕ್ಕೆ ಸಾಕಾಗುವುದಿಲ್ಲ ಅಂತಹ ಪುಣ್ಯಾತ್ಮ ಇವರು. ಪುನೀತ್ ರಾಜಕುಮಾರ್ ಇಂದು ಇಲ್ಲದೆ ಇರುವುದು ನಿಜಕ್ಕೂ ಕೂಡ ಸಾಕಷ್ಟು ಬಡವ ಬಲ್ಲಿದರಿಗೆ ತುಂಬಲಾರದ ನಷ್ಟ ಉಂಟಾಗಿದೆ ಅಂತಾನೆ ಹೇಳಬಹುದು. ಏಕೆಂದರೆ ಈ ಜಗತ್ತಿನಲ್ಲಿ ಸಾಕಷ್ಟು ಜನ ಶ್ರೀಮಂತರು ಇದ್ದಾರೆ ಕೈತುಂಬಾ ಹಣವನ್ನು ಹೊಂದಿರುವಂತಹ ವ್ಯಕ್ತಿಗಳು ಇದ್ದಾರೆ ಆದರೆ ಎಲ್ಲರಿಗೂ ಕೂಡ ಪುನೀತ್ ರಂತೆ ಸಹಾಯ ಮಾಡುವಂತಹ ಗುಣ ಇರುವುದಿಲ್ಲ ಹಾಗಾಗಿಯೇ ಇಲ್ಲದಿರುವುದು ನಿಜಕ್ಕೂ ಬಹಳಷ್ಟು ಮಂದಿಗೆ ಕಷ್ಟವಾಗಿದೆ.
ನಿಮ್ಮೆಲ್ಲರಿಗೂ ತಿಳಿದಿರುವಂತೆ ಶಕ್ತಿಧಾಮವನ್ನು ಪುನೀತ್ ಅವರಿಗಿಂತ ಮುಂಚೆ ಪಾರ್ವತಮ್ಮ ರಾಜಕುಮಾರ್ ಅವರು ನಡೆಸಿಕೊಂಡು ಬರುತ್ತಿದ್ದರು. ಅಲ್ಲಿದ್ದಂತಹ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಕೂಡ ವಿದ್ಯಾಭ್ಯಾಸವಾಗಲಿ, ಬಟ್ಟೆಯಾಗಲೀ, ಆಹಾರವಾಗಲೀ ಅಥವಾ ಇನ್ನಿತರ ದಿನಚರಿಗೆ ಬೇಕಾಗುವಂತಹ ಎಲ್ಲ ವಸ್ತುಗಳನ್ನು ಕೂಡ ನೀಡುತ್ತಿದ್ದರು. ಆದರೆ ಪಾರ್ವತಮ್ಮ ರಾಜಕುಮಾರ್ ಅವರು ವಿಧಿವಶರಾದ ನಂತರ ಪುನೀತ್ ರಾಜಕುಮಾರ್ ಅವರು ಈ ಶಕ್ತಿಗಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಮಕ್ಕಳಿಗೆ ಬೇಕಾದಂತಹ ಎಲ್ಲ ವಸ್ತುಗಳನ್ನು ಕೂಡ ತಮ್ಮ ಹಣದಲ್ಲಿ ನೀಡುತ್ತಾರೆ ಆದರೆ ಎಂದಿಗೂ ಕೂಡ ಪುನೀತ್ ರಾಜಕುಮಾರ್ ಅವರು ಶಕ್ತಿಧಾಮ ಮುಖ್ಯಸ್ಥರಾಗಿ ಗುರುತಿಸಿಕೊಳ್ಳುವುದಿಲ್ಲ. ಬದಲಿಗೆ ತಮ್ಮ ತಾಯಿಯ ಸ್ಥಾನದಲ್ಲಿ ಇದ್ದಂತಹ ಶಿವರಾಜ್ ಕುಮಾರ್ ಅವರ ಧರ್ಮಪತ್ನಿ ಆದಂತಹ ಗೀತಾ ಅವರನ್ನು ಪುನೀತ್ ರಾಜಕುಮಾರ್ ಅವರು ತಮ್ಮ ತಾಯಿಯ ಸ್ಥಾನದಲ್ಲಿ ನೋಡುತ್ತಿದ್ದರು.
ಈ ಒಂದು ಕಾರಣಕ್ಕಾಗಿಯೇ ಪಾರ್ವತಮ್ಮ ರಾಜಕುಮಾರ್ ಅವರ ಇದ್ದಂತಹ ಮುಖ್ಯಸ್ಥ ಸ್ಥಾನಕ್ಕೆ ತಾವು ಕೂರುವುದರ ಬದಲಾಗಿ ಗೀತಕ್ಕ ಅವರೇ ಕುಳಿತುಕೊಳ್ಳಬೇಕು ಅಂತ ಪಟ್ಟು ಹಿಡಿದು ಆ ಸ್ಥಾನಕ್ಕೆ ಗೀತಾ ಅವರನ್ನು ಆಯ್ಕೆ ಮಾಡಿದರಂತೆ. ನೀವೇ ಯೋಚನೆ ಮಾಡಿ ನೋಡಿ ಈಗಿನ ಕಾಲದಲ್ಲಿ ಎಲ್ಲರೂ ಕೂಡ ತಮಗೆ ಸ್ಥಾನಮಾನ ಗೌರವ ಸಿಗಬೇಕು ಅಂತ ಬಯಸುತ್ತಾರೆ. ಅದರಲ್ಲಿಯೂ ಕೂಡ ಯಾವುದಾದರೂ ಒಂದು ಸಂಸ್ಥೆಯನ್ನು ನಡೆಸುತ್ತಿದ್ದರೆ ಆ ಸಂಸ್ಥೆಯ ಮುಖ್ಯಸ್ಥ ಅಂತ ಹೇಳಿಕೊಂಡು ತಿರುಗಾಡುತ್ತರೆ. ಪುನೀತ್ ರಾಜಕುಮಾರ್ ಅವರು ಮಾತ್ರ ಎಲೆಮರೆಯ ಕಾಯಿಯಂತೆ ಆ ಸಂಸ್ಥೆಗೆ ಎಲ್ಲಾ ಸೌಲಭ್ಯಗಳು ಮತ್ತು ಕಾರ್ಯಗಳು ಬೇಕು ಅವುಗಳನ್ನು ಒದಗಿಸುತ್ತಾರೆ ಆದರೂ ಕೂಡ ತಾನು ಆ ಸಂಸ್ಥೆಯ ಮುಖ್ಯಸ್ಥ ಅಥವಾ ಆ ಸಂಸ್ಥೆಯನ್ನು ನಡೆಸಿರುವಂತಹ ಕಾರ್ಯದರ್ಶಿ ಅಂತ ಅವರು ಹೇಳಿಕೊಳ್ಳುವುದಿಲ್ಲ.
ಬದಲಿಗೆ ಆ ಸಂಸ್ಥೆಯ ಕಾರ್ಯದರ್ಶಿ ಆಗಿರಬಹುದು ಅಥವಾ ಮುಖ್ಯಸ್ಥೆ ಆಗಿರಬಹುದು ಎಲ್ಲವೂ ಕೂಡ ಗೀತಾ ಶಿವರಾಜ್ ಕುಮಾರ್ ಅವರೇ ಆಗಿರುತ್ತಾರೆ ಅಂತ ಘೋಷಣೆ ಮಾಡುತ್ತಾರೆ. ನಿಜಕ್ಕೂ ಕೂಡ ಅಪ್ಪು ಅವರು ಮಾಡಿರುವಂತಹ ಈ ಕೆಲಸವನ್ನು ನಾವು ಮೆಚ್ಚಿಕೊಳ್ಳಲೇಬೇಕು. ಇಂತಹ ಮನಸ್ಸು ಈಗಿನ ಕಾಲದಲ್ಲಿ ಯಾರಿಗೆ ತಾನೇ ಬರುತ್ತದೆ ಹೇಳಿ ಇಂತಹ ಮುಗ್ಧ ಮನಸ್ಸನ್ನು ಹೊಂದಿರುವಂತಹ ವ್ಯಕ್ತಿ ನಮ್ಮೆಲ್ಲರನ್ನು ಬಿಟ್ಟು ಇಷ್ಟು ಬೇಗ ಹೋಗಿದ್ದು ನಿಜಕ್ಕೂ ಕೂಡ ದಾ’ರು’ಣ ಅಂತಾನೆ ಹೇಳಬಹುದು. ಒಂದು ವೇಳೆ ಪುನೀತ್ ರಾಜಕುಮಾರ್ ಅವರು ಬದುಕಿದ್ದರೆ ಇಂತಹ ಇನ್ನಷ್ಟು ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದರು. ಆದರೆ ವಿಧಿಯಾಟ ಅಪ್ಪು ಅವರು ಇನ್ನು ಮುಂದೆ ನಮಗೆ ಕೇವಲ ನೆನಪಾಗಿ ಮಾತ್ರ ಉಳಿಯುತ್ತಾರೆ ನಿಜಕ್ಕೂ ಕೂಡ ಈ ಒಂದು ನೋವನ್ನು ಸಹಿಸಿಕೊಳ್ಳುವ ಶಕ್ತಿ ಅಭಿಮಾನಿಗಳಿಗೆ ಮತ್ತು ಕುಟುಂಬಕ್ಕೆ ಆ ದೇವರು ನೀಡಬೇಕು ಎಂಬುದಕ್ಕೆ ನಮ್ಮ ಆಶಾಯ. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಅಪ್ಪು ಮಾಡಿರುವಂತಹ ಈ ಕೆಲಸ ನಿಮಗೆ ಇಷ್ಟ ಆದರೆ ಅಪ್ಪು ಗ್ರೇಟ್ ಅಂತ ಕಾಮೆಂಟ್ ಮಾಡಿ.