Skip to content

Kannada Trend News

Just another WordPress site

  • News
  • Cinema Updates
  • Serial Loka
  • Devotional
  • Health Tips
  • Interesting Facts
  • Useful Information
  • Astrology
  • Terms and Conditions
  • Privacy Policy
  • Contact Us
  • About Us
  • Toggle search form

ಇದೇ ನೋಡಿ ಅಪ್ಪು ಅವರ ಇನ್ನೊಂದು ಮುಖ, ಅಪ್ಪು ಅಶ್ವಿನಿ ಅವರ ತವರು ಮನೆಗೆ ಹೋದಾಗ ಏನೇನು ಮಾಡುತ್ತಿದ್ದರು ಗೊತ್ತಾ?

Posted on May 23, 2022 By Kannada Trend News No Comments on ಇದೇ ನೋಡಿ ಅಪ್ಪು ಅವರ ಇನ್ನೊಂದು ಮುಖ, ಅಪ್ಪು ಅಶ್ವಿನಿ ಅವರ ತವರು ಮನೆಗೆ ಹೋದಾಗ ಏನೇನು ಮಾಡುತ್ತಿದ್ದರು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಲನಚಿತ್ರರಂಗ ಮಾತ್ರವಲ್ಲದೆ ಇಡೀ ಕರುನಾಡಿಗೆ ಬೆಳಕು ಆಗಿದ್ದವರು. ಇಂದು ಅವರನ್ನು ಕಳೆದುಕೊಂಡ ಕರ್ನಾಟಕವು ಕಳೆಯನ್ನು ಕರೆದುಕೊಂಡು ಮಂಕಾಗಿದೆ. ಅಪ್ಪು ಅವರು 2021, ಅಕ್ಟೋಬರ್ 29ನೇ ತಾರೀಕಿನಂದು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಅಕಾಲಿಕ ಮರಣಕ್ಕೆ ತುತ್ತಾದರು. ಅಂದಿನಿಂದ ಇಂದಿನವರೆಗೂ ಕರುನಾಡಿಗೆ ಸೂತಕದ ಛಾಯೆ. ಯಾರೊಬ್ಬರೂ ಕೂಡ ಪುನೀತ್ ರಾಜಕುಮಾರ್ ಅವರು ನಮ್ಮೊಂದಿಗೆ ಇಲ್ಲ ಎನ್ನುವ ಸತ್ಯವನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ. ಪುನೀತ್ ರಾಜ್ ಕುಮಾರ್ ಅವರಿಗೆ ಮನೆ ಮನೆಗಳಲ್ಲೂ ಕೂಡ ಫ್ಯಾನ್ಸ್ ಇದ್ದಾರೆ. ಅದರಲ್ಲೂ ಅವರ ಸಾವಿನ ಬಳಿಕ ಅವರು ಮಾಡಿದ ಸಮಾಜಸೇವೆಯೂ ಬೆಳಕಿಗೆ ಬಂದ ಮೇಲೆ ಪ್ರತಿಯೊಬ್ಬರೂ ಕೂಡ ಅಪ್ಪು ಅಭಿಮಾನಿಗಳೇ ಎಂದರೆ ತಪ್ಪಾಗಲಾರದು. ಇಂತಹ ದೇವತಾ ಮನುಷ್ಯನನ್ನು ಕಳೆದುಕೊಂಡ ಕರುನಾಡಿನ ಜನತೆ ಆ ನೋವಿನಿಂದ ಹೊರಬರಲು ಕಷ್ಟಪಡುತ್ತಿದ್ದಾರೆ.

WhatsApp Group Join Now
Telegram Group Join Now

ಅಭಿಮಾನಿಗಳಿಗೆ ಈ ರೀತಿಯ ಸಂಕಟ ಆಗುತ್ತಿರಬೇಕಾದರೆ ಅವರ ಕುಟುಂಬ ವರ್ಗ ಮತ್ತು ಅವರ ಆಪ್ತ ಬಳಗದ ನೋವನ್ನು ವಿವರಿಸಲು ಸಾಧ್ಯವಿಲ್ಲ. ಅಪ್ಪು ಅವರು ಇದ್ದಿದ್ದರೆ ಇನ್ನಷ್ಟು ಸಮಾಜಸೇವೆ ಮೂಲಕ ಸಾವಿರಾರು ನೊಂದವರ ಪಾಲಿಗೆ ಆಸರೆ ಆಗುತ್ತಿದ್ದರು ಹಾಗೂ ಕನ್ನಡ ಸಿನಿಮಾ ಇಂಡಸ್ಟ್ರಿ ಸಾವಿರಾರು ಜನಕ್ಕೆ ಕೆಲಸಕೊಟ್ಟು ಅನ್ನದಾತ ರಾಗುತ್ತಿದ್ದರು. ಈಗ ಆ ಎಲ್ಲ ಹೊರೆಯನ್ನು ಅಪ್ಪು ಅವರ ಪತಿ ಅಶ್ವಿನಿ ಅವರು ಹೊರಬೇಕಾಗಿದೆ. ಅಪ್ಪು ಅವರಂತೆ ಅಶ್ವಿನಿ ಅವರೂ ಸಹ ತುಂಬಾ ಸರಳ ಜೀವಿ. ಅಪ್ಪು ಅವರ ಎಲ್ಲಾ ಕೆಲಸಕಾರ್ಯಗಳಲ್ಲಿ ಬೆನ್ನೆಲುಬಾಗಿ ನಿಲ್ಲುತ್ತಿದ್ದರು ಅಶ್ವಿನಿ ಅವರು. ಆದರೆ ಕ್ಯಾಮೆರಾ ಮುಂದೆ ಬಂದು ಮಾತ್ರ ಎಂದಿಗೂ ಮಾತನಾಡಿದವರೆಲ್ಲ. ದೊಡ್ಮನೆ ಗತ್ತಿಗೆ ತಕ್ಕನಾದ ಸೊಸೆ ಎನಿಸಿಕೊಂಡಿದ್ದರು ಅಶ್ವಿನಿ ಅವರು. ಪುನೀತ್ ರಾಜಕುಮಾರ್ ಅವರು ಅಷ್ಟೇ ಪಕ್ಕಾ ಫ್ಯಾಮಿಲಿ ಎನಿಸಿಕೊಂಡವರು.

ಎಷ್ಟೇ ಬ್ಯುಸಿ ಶೆಡ್ಯೂಲ್ ನಲ್ಲಿ ಇದ್ದರೂ ಕೂಡ ತಮ್ಮ ಮಡದಿ ಹಾಗೂ ಮಕ್ಕಳಿಗಾಗಿ ಸಮಯ ಮೀಸಲಿಡುತ್ತಿದ್ದರು. ಪ್ರತಿದಿನ ರಾತ್ರಿ ತಮ್ಮ ಮಗಳ ಜೊತೆ ವಾಕ್ ಮಾಡಿ ಬಂದ ನಂತರವೇ ಅವರು ನಿದ್ದೆ ಮಾಡುತ್ತಿದ್ದು. ಈ ರೀತಿ ಮಕ್ಕಳ ಮಡದಿಯೊಂದಿಗೆ ಗಾಢವಾದ ಬಾಂಧವ್ಯ ಬೆಳೆಸಿಕೊಂಡಿದ್ದ ಅಪ್ಪು ಅವರ ಅನುಪಸ್ಥಿತಿಯಲ್ಲಿ ಈಗ ಕುಟುಂಬದವರ ಸ್ಥಿತಿ ನೋಡಲು ತುಂಬಾ ದುಃಖವಾಗುತ್ತದೆ. ಮಕ್ಕಳಿಗೆ ರಜೆ ಸಿಕ್ಕಾಗಲೆಲ್ಲಾ ಅವರು ಫ್ಯಾಮಿಲಿ ಕರೆದುಕೊಂಡು ಟ್ರಿಪ್ ಹೋಗುತ್ತಿದ್ದರಂತೆ. ಕರ್ನಾಟಕದ ಪ್ರಸಿದ್ಧ ಸ್ಥಳಗಳು, ಭಾರತದ ಟೂರಿಸ್ಟ್ ಪ್ಲೇಸ್ ಗಳು ಹಾಗೂ ವಿದೇಶಗಳಿಗೂ ಸಹ ಮಕ್ಕಳು ಮತ್ತು ಅಶ್ವಿನಿ ಅವರ ಜೊತೆ ಪುನೀತ್ ರಾಜಕುಮಾರ್ ಅವರು ಟ್ರಿಪ್ ಹೋಗುತ್ತಿದ್ದರಂತೆ. ಅಲ್ಲಿಯ ಸ್ಥಳಗಳನ್ನು ನೋಡುವುದರ ಜೊತೆಗೆ ಅಲ್ಲಿಯ ಹಿನ್ನೆಲೆ ತಿಳಿದುಕೊಂಡು ಅಲ್ಲಿಯ ಜೀವನ ಪದ್ಧತಿ, ಆಹಾರ ಪದ್ಧತಿ ಅವುಗಳ ಬಗ್ಗೆ ಎಲ್ಲ ತುಂಬಾ ಇಂಟರೆಸ್ಟಿಂಗ್ ಆಗಿ ಕೇಳುತ್ತಿದ್ದರಂತೆ.

ಅಷ್ಟೇ ಅಲ್ಲದೆ ಕರ್ನಾಟಕದ ವಿಷಯವಾಗಿ ಹೇಳುವುದಾದರೆ ಪುನೀತ್ ರಾಜಕುಮಾರ್ ಅವರಿಗೆ ಚಿಕ್ಕಮಗಳೂರು ಎಂದರೆ ತುಂಬಾ ಇಷ್ಟವಂತೆ. ಪುನೀತ್ ರಾಜ್ ಕುಮಾರ್ ಅವರ ಮಾವನ ಮನೆ ಅಂದರೆ ಅಶ್ವಿನಿ ಅವರ ತಂದೆಯ ಮನೆ ಕೂಡ ಚಿಕ್ಕಮಗಳೂರಿನಲ್ಲಿದೆ. ಪುನೀತ್ ರಾಜಕುಮಾರ್ ಅವರು ವರ್ಷಕ್ಕೆ ಒಮ್ಮೆಯಾದರೂ ಅಲ್ಲಿಗೆ ಹೋಗಿ ಅಲ್ಲಿ ರೆಸ್ಟ್ ಮಾಡುತ್ತಿದ್ದರಂತೆ. ಹಾಗೂ ಯಾವಾಗ ಚಿಕ್ಕಬಳ್ಳಾಪುರದ ಕಡೆ ಶೂಟಿಂಗ್ ಹೋದರೂ ಮಾವನ ಮನೆಗೆ ತಪ್ಪದೇ ಹೋಗುತ್ತಿದ್ದರಂತೆ. ಮಾವನ ಮನೆಯಲ್ಲಿ ಮಾಡುತ್ತಿದ್ದ ಅಡುಗೆ ಪದಾರ್ಥಗಳು ಎಂದರೆ ಪುನೀತ್ ರಾಜಕುಮಾರ್ ಅವರಿಗೆ ಬಹಳ ಇಷ್ಟವಂತೆ. ಪುನೀತ್ ರಾಜಕುಮಾರ್ ಅವರ ಮಾವನ ಮನೆಯವರೆಗೂ ಸಹ ಅಪ್ಪು ಅಂದರೆ ಬಹಳ ಪ್ರೀತಿ. ಅಪ್ಪು ಅವರನ್ನು ಮಾವನ ಮನೆಯವರು ಮನೆ ಮಗನಂತೆ ಕಾಣುತ್ತಿದ್ದರಂತೆ. ಮೊದಮೊದಲು ಅಶ್ವಿನಿ ಹಾಗೂ ಪುನೀತ್ ಮದುವೆ ವಿಚಾರಕ್ಕೆ ಅಶ್ವಿನಿ ಮನೆಯಿಂದ ಒಪ್ಪಿಗೆ ಸಿಗದೆ ಹೋದರು ನಂತರ ಅಪ್ಪುವಿನ ಒಳ್ಳೆಯ ಗುಣವನ್ನು ನೋಡಿ ಅವರನ್ನು ತುಂಬಾ ಇಷ್ಟಪಡುತ್ತಿದ್ದರಂತೆ.

ಈಗ ಅಪ್ಪು ಅವರನ್ನು ಕಳೆದುಕೊಂಡು ದೊಡ್ಡಮನೆ ಮಾತ್ರವಲ್ಲದೆ ಅಶ್ವಿನಿ ಅವರ ಮನೆ ಕೂಡ ಮೌನವಾಗಿದೆ. ಅಶ್ವಿನಿ ಅವರ ತಂದೆ ಮನೆಯಲ್ಲಿ ಅಪ್ಪು ಅವರ ದೊಡ್ಡ ಫೋಟೋ ಹಾಕಿ ಪೂಜೆ ಮಾಡುತ್ತಾರೆ. ಅಶ್ವಿನಿ ಅವರನ್ನು ಅಪ್ಪು ಅವರ ಅಗಲಿಕೆ ಸಂದರ್ಭದಲ್ಲಿ ಅಶ್ವಿನಿ ಅವರ ತಮ್ಮ ವಿನಯ್ ಅವರು ಸಮಾಧಾನ ಮಾಡುತ್ತಿದ್ದ ದೃಶ್ಯವನ್ನು ನೋಡಿದರೆ ಎಂಥವರ ಕರುಳು ಕೂಡ ಕಿತ್ತು ಬರುವಂತಿದೆ. ಆದರೆ ಇತ್ತೀಚೆಗೆ ಅಶ್ವಿನಿ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ. ಅಪ್ಪು ಅವರ ಅಗಲಿಕೆಯ ನೋವಿನಿಂದ ಮನನೊಂದು ಕೊಂಡಿದ್ದ ಅಶ್ವಿನಿ ಅವರ ತಂದೆಯು ಕೂಡ ಅಪ್ಪು ಅವರು ಮರಣ ಹೊಂದಿದ ಕೆಲವೇ ದಿನಗಳಲ್ಲಿ ಇವರು ಕೂಡ ಇಹಲೋಕ ತ್ಯಜಿಸಿದ್ದಾರೆ. ಗಂಡನನ್ನು ಕಳೆದುಕೊಂಡು ಕಂಗಾಲಾಗಿದ್ದ ಅಶ್ವಿನಿ ಅವರಿಗೆ ಈಗ ತಂದೆಯ ವಿಯೋಗವನ್ನು ಸಹಿಸಿಕೊಳ್ಳುವ ಧೈರ್ಯವನ್ನು ಭಗವಂತ ನೀಡಬೇಕಾಗಿದೆ.

ಇಷ್ಟೆಲ್ಲಾ ನೋವುಗಳನ್ನು ಸಹಿಸಿಕೊಂಡು ಅಶ್ವಿನಿ ಅವರು ತಮ್ಮ ಕರ್ತವ್ಯಗಳ ಕಡೆ ನೋಡುತ್ತಿದ್ದಾರೆ. ಮಕ್ಕಳ ಜೊತೆಗೆ ಬಂದು ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಪೂಜೆ ಮಾಡಿ ಹೋಗುತ್ತಿದ್ದಾರೆ. ಇದರ ಜೊತೆಗೆ ಅಪ್ಪು ಅವರ ದೊಡ್ಡ ಕನಸಾಗಿದ್ದ ಪಿಆರ್ಕೆ ಸಂಸ್ಥೆಯನ್ನು ಮುಂದುವರಿಸಿಕೊಂಡು ಹೋಗುವ ನಿರ್ಧಾರ ಮಾಡಿದ್ದಾರೆ. ಗಂಧದಗುಡಿ ಟ್ರೈಲರ್ ಅನ್ನು ಪಿಆರ್ಕೆ ಪ್ರೊಡಕ್ಷನ್ಸ್ ರಿಲೀಸ್ ಕೂಡ ಮಾಡಿದೆ. ಇದರ ಜೊತೆಗೆ ಅಶ್ವಿನಿ ಅವರು ಪುನೀತ್ ರಾಜಕುಮಾರ್ ಅವರಿಗೆ ಸಂಬಂಧಪಟ್ಟ ಎಲ್ಲಾ ಕಾರ್ಯಕ್ರಮಗಳಿಗೂ ಭಾಗಿಯಾಗುತ್ತಿದ್ದಾರೆ. ಅಶ್ವಿನಿ ಅವರಿಗೆ ಧೈರ್ಯ ಹೇಳಲು ಸಮಾಧಾನ ಮಾಡಲು ಇಡೀ ರಾಜ್ ಕುಟುಂಬವೇ ಅವರ ಜೊತೆಗೆ ಇದೆ. ಕುಟುಂಬದ ಎಲ್ಲಾ ಸದಸ್ಯರಿಗೂ ಕೂಡ ಅಶ್ವಿನಿ ಎಂದರೆ ತುಂಬಾ ಪ್ರೀತಿ. ಅಪ್ಪು ಅನ್ನು ಕಳೆದುಕೊಂಡಿರುವ ದೊಡ್ಡ್ಮನೆ ಅಶ್ವಿನಿ ಯಲ್ಲೇ ಈಗ ಅಪ್ಪುವನ್ನು ಕಾಣಬೇಕಾಗಿದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
Cinema Updates Tags:Appu, Appu ashwini

Post navigation

Previous Post: ಅಶ್ವಿನಿ ಹಾಗೂ ಅಪ್ಪು ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ.? ಅಶ್ವಿನಿ ಅವರು ಮದುವೆಯಾದಾಗ ಅವರ ವಯಸ್ಸೆಷ್ಟು ನೋಡಿ.
Next Post: ಅಪ್ಪು ಬಗ್ಗೆ ಡ್ಯಾನ್ಸಿಂಗ್ ಚಾಂಪಿಯನ್ ಶೋ ಕಾರ್ಯಕ್ರಮದಲ್ಲಿ ಅಶ್ವಿನಿ ಸ್ಟೇಜ್ ಮೇಲೆ ನಿಂತು ಎಲ್ಲರ ಮುಂದೆ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ.

Leave a Reply Cancel reply

Your email address will not be published. Required fields are marked *

Copyright © 2023 Kannada Trend News.

Powered by PressBook WordPress theme