Friday, June 9, 2023
HomeUseful Informationಊಟದಲ್ಲಿ ಕೈಮದ್ದು ಯಾಕೆ ಹಾಕ್ತಾರೆ.? ಇದನ್ನು ತಿಂದ್ರೆ ದೇಹದಲ್ಲಿ ಏನೆಲ್ಲಾ ತೊಂದರೆ ಆಗುತ್ತೆ.! ಕೈಮದ್ದು ಹಾಕಿದ್ದಾರೆ...

ಊಟದಲ್ಲಿ ಕೈಮದ್ದು ಯಾಕೆ ಹಾಕ್ತಾರೆ.? ಇದನ್ನು ತಿಂದ್ರೆ ದೇಹದಲ್ಲಿ ಏನೆಲ್ಲಾ ತೊಂದರೆ ಆಗುತ್ತೆ.! ಕೈಮದ್ದು ಹಾಕಿದ್ದಾರೆ ಅಂತ ಕಂಡು ಹಿಡಿಯೋದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಹಳ್ಳಿ ಕಡೆ ಊಟಕ್ಕೆ ಕೈ ಮದ್ದು ಹಾಕುತ್ತಾರೆ ಎಂದು ಮಾತನಾಡುತ್ತಾರೆ.ಅದನ್ನು ಯಾರು ಹಾಕುತ್ತಾರೆ? ಹೇಗೆ ಹಾಕುತ್ತಾರೆ ಮತ್ತು ಅದರ ಪರಿಣಾಮ ಎಷ್ಟು ಕೆಟ್ಟದಾಗಿರುತ್ತದೆ ಗೊತ್ತಾ?. ಹೆಚ್ಚಾಗಿ ಹಳ್ಳಿಕಡೆ ಈ ಮಾತನ್ನು ಕೇಳುತ್ತೇವೆ ಕೈ ಮದ್ದು ಹಾಕಿದ್ದಾರೆ ಎಂದು ಮಾತನಾಡುತ್ತಿರುತ್ತಾರೆ. ಈ ಕೈಮದ್ದು ಹಾಕುವುದು ಎಂದರೆ ಊಟದಲ್ಲಿ ಯಾವುದೋ ಒಂದು ಪದಾರ್ಥವನ್ನು ಸೇರಿಸಿ ಹಾಕುವುದು ಎಂದರ್ಥ. ಆದರೆ ನಿಖರವಾಗಿ ಅದರಲ್ಲಿ ಏನು ಇರುತ್ತದೆ ಎಂದು ಇದುವರೆಗೂ ಸಹ ಯಾರಿಗೂ ಭೇದಿಸಲು ಸಾಧ್ಯವಾಗಿಲ್ಲ.

ಅಮವಾಸ್ಯೆ ಮತ್ತು ಹುಣ್ಣಿಮೆ ದಿನವನ್ನು ಮದ್ದು ಹಾಕಲು ಆರಿಸಿಕೊಳ್ಳುತ್ತಾರೆ. ಯಾಕೆಂದರೆ ಈ ದಿನ ಮದ್ದು ಹಾಕಿದರೆ ಅದು ಹಾಕಿಸಿ ಕೊಂಡವರ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತದೆ ಎಂದು ಈ ರೀತಿ ಮಾಡುತ್ತಾರೆ. ಈ ದಿನ ಬಿಟ್ಟು ಬೇರೆ ದಿನಗಳಲ್ಲಿ ಸಹ ಮದ್ದು ಹಾಕುತ್ತಾರೆ. ಮದ್ದು ಹಾಕಿದ ತಕ್ಷಣವೇ ಅಥವಾ ಮರುದಿನವೇ ಹಾಕಿಸಿಕೊಂಡವರಿಗೆ ಅದರ ಪರಿಣಾಮ ಗೊತ್ತಾಗುವುದಿಲ್ಲ.

ಮೂರು ತಿಂಗಳು ಆದ ಬಳಿಕ ಅವರಿಗೆ ವಾಂತಿ ಆಗಲು ಶುರುವಾಗುತ್ತದೆ, ಯಾವ ಆಹಾರ ಪದಾರ್ಥಗಳ ಮೇಲೂ ಆಸಕ್ತಿ ಇರುವುದಿಲ್ಲ, ಜೊತೆಗೆ ಇವರಿಗೆ ಎಣ್ಣೆ ವಾಸನೆ ಮತ್ತು ಒಗ್ಗರಣೆ ವಾಸನೆ ಕಂಡರೆ ಆಗುವುದಿಲ್ಲ. ವಿಪರೀತವಾದ ಹೊಟ್ಟೆ ನೋವು ಕೂಡ ಕಾಡುತ್ತದೆ, ಎಷ್ಟೇ ಆಸ್ಪತ್ರೆ ಸುತ್ತಿದರೂ ಕೂಡ ಇವರ ಹೊಟ್ಟೆ ನೋವಿಗೆ ಹಾಗು ವಾಂತಿಗೆ ಪರಿಹಾರ ಸಿಗುವುದಿಲ್ಲ. ಆಗ ಮದ್ದು ಹಾಕಿರಬಹುದು ಎಂದು ಕೆಲವರು ಗುರುತಿಸುತ್ತಾರೆ.

ಈ ರೀತಿ ಮದ್ದು ಹೊಟ್ಟೆಗೆ ಮತ್ತು ಸೇರಿದಿಯಾ ಎಂದು ಕಂಡು ಹಿಡಿಯಲು ಕೆಲ ವಿಧಾನಗಳು ಇವೆ. ಹೆಚ್ಚಿನ ಜನ ನುಗ್ಗೆರಸದ ಮೂಲಕ ಇದನ್ನು ಕಂಡು ಹಿಡಿಯುತ್ತಾರೆ. ಹೇಗೆಂದರೆ ಅವರ ಮನೆಯ ಯಾರಾದರೂ ಒಬ್ಬರು ಈ ರೀತಿ ಮದ್ದು ಹಾಕಿಸಿಕೊಂಡು ನರಳುತ್ತಿರುವವರ ಕೈಯ ಮೇಲೆ ನುಗ್ಗೆ ಸೊಪ್ಪಿನ ರಸವನ್ನು ಹಿಂಡುತ್ತಾರೆ. ಆ ಸೊಪ್ಪಿನ ರಸ ಗಟ್ಟಿಯಾದರೆ ಅವರ ಹೊಟ್ಟೆಯಲ್ಲಿ ಮದ್ದು ಬಿದ್ದಿದೆ ಎಂದು ಅರ್ಥ. ಇದಲ್ಲದೆ ಹುರುಳಿ ಕಾಳಿನಿಂದ ಕೂಡ ಮದ್ದು ಆಗಿದೆಯಾ ಇಂದು ಕಂಡುಹಿಡಿಯುತ್ತಾರೆ.

ಮದ್ದು ಬಿದ್ದಿದೆ ಎಂದು ತಿಳಿದ ಸಮಯದಲ್ಲಿ ಅವರನ್ನು ಕರೆದುಕೊಂಡು ಮದ್ದು ತೆಗೆಯುವವರ ಬಳಿ ಹೋಗಿ ತೆಗೆಸುತ್ತಾರೆ. ಆದರೆ ಎಲ್ಲರೂ ಕೂಡ ಈ ರೀತಿ ಮತ್ತು ತೆಗೆಯಲು ಆಗುವುದಿಲ್ಲ. ಅದಕ್ಕೆ ಕೆಲ ನಿಯಮಗಳು ಇವೆ. ಅದನ್ನು ಮದ್ದು ತೆಗೆಯುವವರ ಮಾತ್ರ ತಿಳಿದು ಕೊಂಡಿರುತ್ತಾರೆ, ಆ ಕುಟುಂಬದವರಿಗೆ ಮಾತ್ರ ಅದು ಗೊತ್ತಿರುತ್ತದೆ. ಅವರು ವಿಭಿನ್ನವಾದ ರೀತಿಯಲ್ಲಿ ಮದ್ದು ತೆಗೆದು ಪಥ್ಯ ಇರಲು ಹೇಳುತ್ತಾರೆ.

ಹೊಟ್ಟೆಯಲ್ಲಿ ಇರುವ ಮದ್ದನ್ನು ತೆಗೆದ ಮೇಲೆ ಯಾವ ಪದಾರ್ಥದ ಮೂಲಕ ಮದ್ದು ನಿಮ್ಮ ದೇಹ ಸೇರಿತ್ತು ಆ ಪದಾರ್ಥವನ್ನು ತಿಂದರೆ ವಾಂತಿಯಾಗಲು ಶುರುವಾಗುತ್ತದೆ. ಒಂದು ವೇಳೆ ಇದನ್ನು ಪತ್ತೆ ಮಾಡಲು ಆಗದೆ ಹೋದಲ್ಲಿ ಮದ್ದು ಹಾಕಿ ಒಂದು ವರ್ಷ ತುಂಬಿ ಬಿಟ್ಟರೆ ಹೊಟ್ಟೆಯಲ್ಲಿ ಅದರ ಮೇಲೆ ಕೂದಲು ಬೆಳೆಯುತ್ತದೆ. ಆಗ ಅದು ಮತ್ತು ಹಾಕಿಸಿಕೊಂಡವರನ್ನು ಸಾ.ವಿ.ನ ದವಡೆಗೂ ನೂಕಬಹುದು. ಆದ್ದರಿಂದ ಅಮಾವಾಸ್ಯೆ ಹುಣ್ಣಿಮೆ ದಿನದಂದು ಯಾರ ಮನೆಯಲ್ಲಿ ಆಗಲಿ ಹೋಟೆಲ್ ನಲ್ಲಿ ಆಗಲಿ ಊಟ ಮಾಡಬಾರದು.

ಮದ್ದು ಹಾಕುವವರು ಇವರೇ ಆಗಿರುತ್ತಾರೆ ಎಂದು ನಿಖರವಾಗಿ ಹೇಳಲು ಅಸಾಧ್ಯ, ಊಹಿಸಬಹುದು ಅಷ್ಟೇ. ಆದ್ದರಿಂದ ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು . ಕೆಲವರು ಇದನ್ನು ಹರಕೆ ಹೊತ್ತು ಹಾಕುತ್ತಾರೆ ಎನ್ನುವ ಮಾತುಗಳು ಇವೆ ಆದರೆ ಇನ್ನೂ ಕೆಲವರು ವಂಶ ಪಾರಂಪರ್ಯವಾಗಿ ಪಾಲಿಸಿಕೊಂಡು ಬಂದಿರುತ್ತಾರೆ ಅದಕ್ಕೆ ಅದನ್ನು ಅವರು ಮುಂದುವರಿಸಲೇಬೇಕು ಇಲ್ಲವಾದಲ್ಲಿ ಅವರಿಗೆ ಆರೋಗ್ಯ ಸಮಸ್ಯೆ ಆಗುತ್ತದೆ ಎನ್ನುವ ಕಾರಣಕ್ಕೆ ಹಾಕುತ್ತಾರೆ ಎಂದು ಮಾತನಾಡುತ್ತಾರೆ. ಅದೇನಿದ್ದರೂ ಇನ್ನೊಬ್ಬರ ಮನೆಯಲ್ಲಿ ಹೋಗಿ ಊಟ ಮಾಡುವ ಮುನ್ನ ಎಚ್ಚರಿಕೆಯಿಂದ ಇರಿ.