ಕಳಸ ಇಟ್ಟು ಪೂಜೆ ಮಾಡುವವರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!

 

ಕಳಶ ಎಂದರೆ ಲಕ್ಷ್ಮಿ ದೇವಿಯ ಸ್ವರೂಪ. ಹಾಗಾಗಿ ಅಂತಹ ಕಳಶವನ್ನು ಮನೆಯಲ್ಲಿ ಇಡುವಂತಹ ಸಮಯದಲ್ಲಿ ಬಹಳಷ್ಟು ಎಚ್ಚರಿಕೆಯಿಂದ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ ವಾಗಿರುತ್ತದೆ. ಇಲ್ಲವಾದರೆ ನಿಮ್ಮ ಮನೆಯಲ್ಲಿ ಹಲವಾರು ರೀತಿಯ ಸಮಸ್ಯೆಗಳು ತೊಂದರೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.

ಹಾಗಾದರೆ ಈ ದಿನ ಮನೆಯಲ್ಲಿ ಕಳಸ ಇಟ್ಟು ಪೂಜೆ ಮಾಡುವಂತಹ ಸಮಯದಲ್ಲಿ ನಾವು ಯಾವುದೆಲ್ಲ ರೀತಿಯ ವಿಷಯಗಳನ್ನು ತಿಳಿದು ಕೊಂಡಿರಬೇಕು ಹಾಗೂ ಯಾವ ನಿಯಮಗಳನ್ನು ಅನುಸರಿಸಬೇಕಾಗು ತ್ತದೆ ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ. ಹಾಗಾದರೆ ನಾವು ಕಳಶವನ್ನು ಯಾವುದರಲ್ಲಿ ಇಡಬೇಕು ಅಂದರೆ ಯಾವ ಒಂದು ಚೊಂಬನ್ನು ಬಳಸಬೇಕಾಗುತ್ತದೆ ಎಂದು ನೋಡುವುದಾದರೆ.

• ಕಳಸಕ್ಕೆ ಯಾವತ್ತಿಗೂ ಸ್ಟೀಲ್ ಅಥವಾ ಕೋಟಿಂಗ್ ಕಳಸದ ಚೊಂಬನ್ನು ಬಳಸಲೇಬಾರದು.
• ಕಳಸಕ್ಕೆ ಬೆಳ್ಳಿ, ಹಿತ್ತಾಳೆ, ತಾಮ್ರದ ಚೊಂಬುಗಳು ಬಹಳ ಶ್ರೇಷ್ಠ ನಿಮ್ಮ ಶಕ್ತಿಗನುಸಾರವಾಗಿ ಇಟ್ಟು ಪೂಜಿಸಿ.
• ನಿಮ್ಮ ಪೂರ್ವಜರು ಯಾವ ರೀತಿ ಕಳಸ ಸ್ಥಾಪನೆ ಮಾಡಿ ಪೂಜಿಸು ತ್ತಿದ್ದರೋ ಅದೇ ರೀತಿ ನೀವು ಪಾಲಿಸುವುದು ಉತ್ತಮ.

• ಕೆಲವರು ಲಕ್ಷ್ಮೀ ಕಳಸ ಇಡುತ್ತಾರೆ ಇನ್ನೂ ಕೆಲವರು ಮನೆ ದೇವರ ಕಳಸ ಇಡುತ್ತಾರೆ, ಇನ್ನೂ ಕೆಲವರು ಕಾಯಿ ಕಳಸ ಇಡುತ್ತಾರೆ, ಹಾಗೂ ಇನ್ನೂ ಕೆಲವರು ಎಲೆ ಕಳಸ ಇಡುತ್ತಾರೆ, ಯಾವುದೇ ಆದರೂ ನಿಯಮ ಪಾಲಿಸುವುದು ಉತ್ತಮ. ಒಂದು ವೇಳೆ ನೀವು ಲಕ್ಷ್ಮೀ ಕಳಸ ಇಡುವುದಾ ದರೆ ಕಳಸಕ್ಕೆ ಮಾಂಗಲ್ಯಹಾಕಲೇಬೇಕು ಮಾಂಗಲ್ಯ ಇಲ್ಲದಿದ್ದರೆ ಅರಿಶಿನದ ಕೊಂಬನ್ನಾದರೂ ಕಟ್ಟಬೇಕು ನೆನಪಿರಲಿ.

• ಕಳಸವನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು ಒಂದು ತಟ್ಟೆಗೆ 3 ಅಳತೆ / ಹಿಡಿ ಅಥವಾ 5 ಅಳತೆ | ಹಿಡಿ ಅಕ್ಕಿಯನ್ನು ಹಾಕಿ ಅದಕ್ಕೆ ಅರಿಶಿನ ಕುಂಕುಮ ಹಾಕಿ ಉಂಗುರುದ ಬೆರಳಿನಿಂದ ಅಷ್ಟದಳದ ಕಮಲವನ್ನು ಬಿಡಿಸಿ ಅದರ ಮೇಲೆ ಇಡಬೇಕು.

• ಕಳಸಕ್ಕೆ ಶುದ್ಧವಾದ ಚೊಂಬನ್ನು ತೆಗೆದುಕೊಳ್ಳಿ ನಂತರ ಅದಕ್ಕೆ ಅರಿಶಿನ ಕುಂಕುಮ, ಗಂಧ ಹಚ್ಚಿ ಶುದ್ಧವಾದ ನೀರು ಹಾಕಿ ನಂತರ ಅದಕ್ಕೆ 1ಚಿಟಿಕೆ ಅರಿಶಿನ ಕುಂಕುಮ ಹಾಕಿ ಸ್ವಲ್ಪ ಮಂತ್ರಾಕ್ಷತೆ ಹಾಕಿ ನಂತರ ಒಂದು ಹೂವು ಹಾಗೂ ಒಂದು ನಾಣ್ಯ ಯಾವುದಾದರು ಸರಿ ಹಿತ್ತಾಳೆ, ಬೆಳ್ಳಿ ಅಥವಾ ನಾವು ಪ್ರತಿನಿತ್ಯ ಉಪಯೋಗಿಸುವಂತಹ ನಾಣ್ಯ ಯಾವುದಾದರೂ ಸರಿ ಮರೆಯದೇ ಹಾಕಿ ಇದು ಪ್ರಾಣದ ಪ್ರತೀಕ. ಕಳಸಕ್ಕೆ ಹಾಕುವ ನೀರು ತೆಂಗಿನಕಾಯಿಗೆ ತಾಕುವಂತೆ ಇರಬೇಕು.

ಆದರೆ ಚೊಂಬಿನಿಂದ ಚೆಲ್ಲುವಂತೆ ಇರಬಾರದು. ಇನ್ನೂ ಕೆಲವರು ಕವಡೆ, ಗೋಮತಿ ಚಕ್ರ, ಕಮಲದ ಬೀಜವನ್ನು ಹಾಕುತ್ತಾರೆ. ಆದರೆ ಇದು ಹಾಕಲೇಬೇಕು ಎಂದೇನಿಲ್ಲ. ಬದಲಿಗೆ ಹಬ್ಬ ಹರಿದಿನದಲ್ಲಿ ಇವುಗಳನ್ನು ಬಳಸಬಹುದು.
• ತೆಂಗಿನಕಾಯಿ ವಿಷಯಕ್ಕೆ ಬಂದರೆ ಹಾಳಾಗದ ಅಥವಾ ಒಳ್ಳೆಯ ತೆಂಗಿನಕಾಯಿ ಆರಿಸಿ ಜೊತೆಗೆ ಜುಟ್ಟು ಇರುವ ತೆಂಗಿನಕಾಯಿ ಇಡಬೇಕು ಕಣ್ಣು ಕಾಣಿಸದ ತೆಂಗಿನಕಾಯಿ ಇಡಬೇಕು ಇದು ಬಹಳ ಮುಖ್ಯ.

• ಕಳಸಕ್ಕೆ ವೀಳ್ಯದೆಲೆ ಅಥವಾ ಮಾವಿನ ಎಲೆ ಯಾವುದಾದರೂ ಸರಿ ಇಡಬಹುದು. ಆದರೆ ಎಲೆ ಹರಿದಿರಬಾರದು, ತೂತಾಗಿರಬಾರದು ಹಾಗೂ ಎಲೆಗಳು ಒಂದೇ ಅಳತೆಯಲ್ಲಿರಬೇಕು ಇದನ್ನು ಗಮನದಲ್ಲಿಡಿ.
• ಯಾವುದೇ ಕಾರಣಕ್ಕೂ ಮಂಗಳವಾರ, ಶುಕ್ರವಾರ, ಅಮಾವಾಸ್ಯೆ, ಹುಣ್ಣಿಮೆ ದಿನ ಕಳಸ ಕದಲಿಸಬಾರದು. ನಾಳೆ ಇದೆ ಅನ್ನುವಾಗಲೇ ತೆಗೆದು ಸ್ವಚ್ಚ ಮಾಡಿ.
• ಕಳಸ ಕದಲಿಸುವಾಗ 3 ಸಲ ಬಲಕ್ಕೆ ಸರಿಸಿ ನಂತರ ತೆಗೆಯಬೇಕು.
• ಇನ್ನೂ ತುಂಬಾ ಮುಖ್ಯವಾದ ವಿಷಯ ಎಂದರೆ ಕಳಸ ಪ್ರತಿಷ್ಠಾಪನೆ ಮಾಡಿದ ನಂತರ ಯಾವುದೇ ಕಾರಣಕ್ಕೂ ಪದೇ ಪದೇ ಮುಟ್ಟುವುದು ಸರಿಪಡಿಸುವುದು ಮಾಡಲೇಬಾರದು.

Leave a Comment