ಗುರುವಾರದಂದು ಈ ರೀತಿ ಉಪವಾಸ ಇದ್ದು ನೋಡಿ. ನಿಮ್ಮ ಬೇಡಿಕೆ ಬೇಗ ಈಡೇರುತ್ತದೆ.! ಮನಸ್ಸಿನಲ್ಲಿ ಅಂದುಕೊಂಡ ಕೆಲಸ 100% ನಡೆಯುತ್ತದೆ.!

 

ಶ್ರೀ ಸದ್ಗುರು ಸಾಯಿಬಾಬಾ ಅವರ ಜೀವನವೇ ಒಂದು ಆದರ್ಶ. ಹಾಗಾಗಿ ಇಂದು ಸಾಕಷ್ಟು ಮಂದಿ ಅವರ ಅನುಯಾಯಿಗಳಾಗಿ, ಭಕ್ತರಾಗಿ ಅವರ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಕಲಿಯುದ ಸಾಕ್ಷಾತ್ ದೇವರಂತೆ ಗುರುಗಳಂತೆ ಅವರನ್ನು ಸ್ವೀಕರಿಸಿ ಅವರ ಕೃಪಾಕಟಾಕ್ಷದಲ್ಲಿ ಬದುಕುತ್ತಿದ್ದಾರೆ. ಈ ಸಾಯಿಬಾಬಾ ಅವರು ಮಾಡಿರುವ ಪವಾಡಗಳ ಬಗ್ಗೆ ನಾವು ಕೇಳಿದ್ದೇವೆ.

ಅವರು ಬದುಕಿದ ರೀತಿಯಲ್ಲಿ ಸರ್ವ ಧರ್ಮಗಳನ್ನು ಸಮನಾಗಿ ಕಂಡು ಹಾಗೆ ಸಕಲ ಮನುಷ್ಯರನ್ನು ಕೂಡ ಒಳ್ಳೆಯದನ್ನೇ ಕಂಡು ಯಾರಿಂದ ಏನನ್ನು ಬಯಸದೆ, ಯಾರಿಗೂ ಕೂಡ ನೋವು ಮಾಡದೆ ಬದುಕಿದರೆ ಆ ಬದುಕು ಒಂದು ಸಾರ್ಥಕ. ಆದರೆ ಈಗಿನ ಕಾಲದಲ್ಲಿ ಈ ರೀತಿ ಬದುಕುವುದು ಸಾಮಾನ್ಯ ಜನರಿಗೆ ಬಹಳ ಕಷ್ಟ ಎಲ್ಲರೂ ಸಹ ಅವರದ್ದೇ ಆದ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದಾರೆ.

ಇಂದು ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ರೀತಿಯ ಕಷ್ಟಕಾರ್ಪಣ್ಯಗಳು ಇದ್ದೇ ಇದೆ. ಈ ಮಾನಸಿಕ ತೊಳಲಾಟಗಳು, ಬದುಕಿನ ಜಂಜಾಟಗಳಿಂದ ಮುಕ್ತಿ ಬೇಕು ಎಂದರೆ ಸಾಯಿಬಾಬಾ ಅವರ ಕೃಪೆಗೆ ಪಾತ್ರರಾಗಬೇಕು. ಆದರೆ ಶ್ರೀ ಸಾಯಿಬಾಬಾ ಅವರು ಬಹಳ ಬೇಗ ಭಕ್ತರಿಗೆ ಒಲಿಯುತ್ತಾರೆ. ಅದರಲ್ಲೂ ಗುರುವಾರಗಳಂದು ಸಾಯಿಬಾಬಾ ಅವರ ಪೂಜೆ ಮಾಡುವುದಕ್ಕೆ ವಿಶೇಷ.

ಈಗಾಗಲೇ ಪೂಜೆ ಮಾಡಿದ ಅನೇಕರಿಗೆ ಅವರ ಪವಾಡಗಳ ಅನುಭವ ಕೂಡ ಆಗಿದೆ. ಇಂತಹ ಪವಾಡ ನಿಮ್ಮ ಬದುಕಿನಲ್ಲಿ ನಡೆದು ನಿಮ್ಮ ಇಷ್ಟಾರ್ಥಗಳು ಸಿದ್ದಿ ಆಗಬೇಕು ಅಥವಾ ಯಾವುದಾದರೂ ಕಷ್ಟ ಪರಿಹಾರ ಆಗಬೇಕು ಅಥವಾ ಸಾಯಿಬಾಬಾರ ಕೃಪಾಕಟಾಕ್ಷ ನಿಮ್ಮ ಮೇಲೆ ಬಿದ್ದು ನೀವು ಕೂಡ ಸನ್ಮಾರ್ಗದಲ್ಲಿ ಬದುಕಿನಲ್ಲಿ ಬದುಕುವಂತೆ ಅನುಗ್ರಹ ಆಗಬೇಕು ಎಂದರೆ ಗುರುವಾರಗಳಂದು ಸಾಯಿಬಾಬಾ ಅವರು ತಿಳಿಸಿರುವಂತೆ ಈ ರೀತಿ ಅವರ ವ್ರತವನ್ನು ಆಚರಣೆ ಮಾಡಿ.

ಗುರುವಾರಗಳಂದು ಮನೆಯನ್ನು ಶುದ್ಧ ಮಾಡಿ ತಾವು ಸಹ ಶುದ್ಧಿಯಾಗಿ ಮಾಡಿ ಮಡಿಯುಟ್ಟು ಸಾಯಿಬಾಬಾ ಅವರ ಫೋಟೋ ಅಥವಾ ಸಾಯಿಬಾಬಾ ಅವರ ವಿಗ್ರಹದ ಮುಂದೆ ಕುಳಿತು ಅರಿಶಿನ, ಗಂಧ, ಅಕ್ಷತೆ ಹಾಗು ಹಳದಿ ಹೂವನ್ನು ಇಟ್ಟು ಭಕ್ತಿಯಿಂದ ಆರಾಧಿಸಿ ಫೋಟೋ ಹಾಗೂ ವಿಗ್ರಹಕ್ಕೆ ದೀಪ ಬೆಳಗಿಸಿ ಅಲಂಕಾರ ಮಾಡಿ ಧೂಪ ದೀಪಗಳಿಂದ ಆರತಿ ಮಾಡಿ.

ಮನೆಯಲ್ಲಿ ತಯಾರಿಸಿದ ಯಾವುದಾದರು ಆಹಾರವನ್ನು ಅಥವಾ ಹಾಲು ಬೆಲ್ಲವನ್ನು ನೈವೇದ್ಯವಾಗಿ ತೋರಿ, ದಿನಪೂರ್ತಿ ಉಪವಾಸವನ್ನು ಆಚರಿಸಿ ಆ ದಿನ ಹೋಗಿ ಸಾಯಿಬಾಬಾ ಮಂದಿರದಲ್ಲಿ ಬಾಬಾ ಅವರ ದರ್ಶನವನ್ನು ಪಡೆದು ಸ್ವಲ್ಪ ಹೊತ್ತು ಅಲ್ಲೇ ಸಮಯ ಕಳೆದು ನಂತರ ಮನೆಗೆ ಬಂದು ಸಂಜೆ ಕೂಡ ಪೂಜೆ ಮಾಡಿದರೆ ಅದೊಂದು ವ್ರತವಾಗುತ್ತದೆ.

ಈ ರೀತಿ ಗುರುವಾರದ ಪೂಜೆಯನ್ನು ಮಾಡಬೇಕು ಹಾಗೂ ಆ ದಿನಪೂರ್ತಿ ಉಪವಾಸ ಇದ್ದರೆ ಇನ್ನು ಒಳ್ಳೆಯದು ಎನ್ನುವುದು ಭಕ್ತರ ಅಭಿಪ್ರಾಯ ಆದರೆ ಶ್ರೀ ಸಾಯಿಬಾಬಾ ಸತ್ಚರಿತೆಯಲ್ಲಿ ಬಾಬಾ ಅವರೇ ಶಿರಡಿಯಲ್ಲಿ ತಮ್ಮ ಭಕ್ತರಿಗೆ ತಿಳಿಸಿದಂತೆ ಯಾವ ಭಕ್ತರಿಗೂ ಅವರು ಉಪವಾಸ ಮಾಡಿ ತಮ್ಮನ್ನು ಪೂಜೆ ಮಾಡಿ ಎಂದು ತಿಳಿಸಿಲ್ಲ. ಯಾಕೆಂದರೆ ಅವರ ಭಕ್ತರಲ್ಲಿ ರೋಗಿಗಳು ಹಾಗೂ ವೃದ್ಧರು ಸಹ ಇರುತ್ತಾರೆ ಹಾಗಾಗಿ ಅವರ ಶಕ್ತಿಗೆ ಅನುಸಾರವಾಗಿ ಅವರು ಪೂಜೆ ಮಾಡಬಹುದು.

ಸಾಯಿಬಾಬಾ ಅವರ ಪೂಜೆಯನ್ನು ಉಪವಾಸ ಇದ್ದುಕೊಂಡೇ ಮಾಡಬೇಕು ಎನ್ನುವ ಯಾವ ನಿಯಮವು ಇಲ್ಲ, ಅಲ್ಲದೆ ಹಸಿದುಕೊಂಡು ಪೂಜೆ ಮಾಡುವವರ ಪೂಜೆಯನ್ನು ಬಾಬಾ ಅವರು ಒಪ್ಪುವುದಿಲ್ಲ. ಅವರ ಮನಸ್ಸಿಗೆ ಇಚ್ಛೆಯಾದಂತೆ ಮಾಡಬೇಕು ಎಂದು ಅವರು ಹೇಳಿದ್ದಾರೆ. ಭಕ್ತಿಯಿಂದ ಉಪವಾಸ ಇರಬೇಕು ಎನ್ನುವ ಇಚ್ಛೆಯಿಂದ ಪೂಜೆ ಮಾಡುವವರು ಹಸಿವು ತಡೆಯಲು ಆಗದೆ ಇದ್ದರೆ ಹಾಲು ಹಣ್ಣು ಮತ್ತು ನೀರನ್ನು ಸೇವಿಸಿಬಹುದು.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

Leave a Comment