ಜೀವನದಲ್ಲಿ ಏನೇ ಕಷ್ಟ ಬಂದರೂ ಆಂಜನೇಯನ ಈ ಬೀಜಾಕ್ಷರವನ್ನು ಈ ರೀತಿ ಪಠಣೆ ಮಾಡಿ ಸಾಕು ಕಷ್ಟಗಳೆಲ್ಲ ನಿವಾರಣೆಯಾಗಿ ಹೋಗುತ್ತೆ. ಒಮ್ಮೆ ಪಠಿಸಿ ನೋಡಿ ಫಲಿತಾಂಶ ಸಿಕ್ಕೆ ಸಿಗುತ್ತೆ.!

 

ಆಂಜನೇಯರು ಶ್ರೀ ರಾಮನ ಪರಮ ಭಕ್ತರು. ಭಕ್ತಿ, ಶಕ್ತಿ, ಯುಕ್ತಿಗೆ ಹೆಸರಾದ ಇವರು ಯಾವುದೇ ಸ್ವಾರ್ಥವಿಲ್ಲದೆ ಶ್ರೀರಾಮನ ಸೇವೆ ಮಾಡಿ ಶ್ರೀರಾಮನ ಪ್ರೀತಿಯ ಭಂಟರಾದವರು. ಹಾಗಾಗಿ ಇಂದಿಗೂ ಸಹ ಈ ಕಲಿಯುಗದಲ್ಲೂ ಜನ ಶ್ರೀರಾಮನನ್ನು ಎಷ್ಟು ಪೂಜಿಸುತ್ತಾರೋ ಆಂಜನೇಯನಿಗೂ ಕೂಡ ಅಷ್ಟೇ ನಮಿಸುತ್ತಾರೆ. ಈ ಭಾರತದಲ್ಲಿ ಶ್ರೀರಾಮನ ದೇವಸ್ಥಾನ ಇರುವ ಪ್ರತಿಯೊಂದು ಕಡೆಗೂ ಕೂಡ ಆಂಜನೇಯರಿಗೂ ಸಹ ಅಲ್ಲಿ ಪುಟ್ಟದೊಂದು ಗುಡಿ ಇದ್ದೇ ಇರುತ್ತದೆ.

ಆಂಜನೇಯ ಇಲ್ಲದೆ ಇದ್ದರೆ ರಾಮಾಯಣವನ್ನು ಊಹಿಸಲು ಕೂಡ ಅಸಾಧ್ಯ. ಇಷ್ಟು ಪ್ರಮುಖ ಪಾತ್ರ ವಹಿಸಿ ಲಂಕೆಯಲ್ಲಿದ್ದ ಸೀತಾಮಾತೆಯನ್ನು ಮರಳಿ ಅಯೋಧ್ಯಕ್ಕೆ ತರಲು ಶ್ರೀರಾಮ ಕೈಗೊಂಡ ಕಾರ್ಯದಲ್ಲಿ ಜೊತೆಗೆ ನಿಂತು ಹೋರಾಡಿದ ಆಂಜನೇಯನು ಕಲಿಯುಗದಲ್ಲೂ ಕೂಡ ಅಷ್ಟೇ ಪ್ರಭಾವಶಾಲಿ.

ಮಾರುತಿ, ಆಂಜನೇಯ, ಹನುಮಂತ, ಅಂಜನಿಪುತ್ರ, ಬಜರಂಗಬಲಿ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಆಂಜನೇಯನು ನಮ್ಮ ಕರ್ನಾಟಕದವರು, ಅವರ ಮೂಲ ಕರ್ನಾಟಕ. ಅಂಜನಾದ್ರಿ ಬೆಟ್ಟದಲ್ಲಿ ಜನ್ಮ ತಾಳಿದ ಆಂಜನೇಯ ಇಂದು ಭಾರತದಾತ್ಯಂತ ಪೂಜಿಸಿಕೊಳ್ಳುವ ದೇವರಾಗಿದ್ದಾರೆ. ಮನುಷ್ಯರು ಬೇಡಿದರೆ ಮೊದಲು ಒಲಿಯುವಂತಹ ದೈವ ಆಂಜನೇಯ ಮನುಷ್ಯನಿಗೂ ಆಂಜನೇಯನಿಗೂ ಅವಿನಾಶಭಾವ ಸಂಬಂಧ ಇದೆ.

ಹಾಗಾಗಿ ಮನುಷ್ಯನ ಕಷ್ಟ ಸುಖಗಳು ಆಂಜನೇಯನಿಗೆ ಬೇಗ ತಿಳಿಯುತ್ತದೆ ಎನ್ನುವುದನ್ನು ಭಕ್ತಾದಿಗಳು ನಂಬುತ್ತಾರೆ. ಮನುಷ್ಯನಿಗೆ ಅಧೈರ್ಯ ಉಂಟಾದಾಗ ಅಥವಾ ಚಂಚಲತೆ ಉಂಟಾದಾಗ ಏಕಾಗ್ರತೆಗಾಗಿ ಶಿಸ್ತಿಗಾಗಿ ಮತ್ತು ಮನಶಾಂತಿಗಾಗಿ ಭಕ್ತಿಯಿಂದ ಆಂಜನೇಯನನ್ನು ಪೂಜಿಸುತ್ತಾರೆ. ಆಂಜನೇಯನಿಗೆ ಮಂಗಳವಾರ ಹಾಗೂ ಶನಿವಾರ ಬಹಳ ವಿಶೇಷ. ಈ ದಿನಗಳಂದು ಆಂಜನೇಯನನ್ನು ಪೂಜಿಸಿದರೆ ಫಲ ಹೆಚ್ಚಾಗಿ ದೊರೆಯುತ್ತದೆ.

ನಾವು ಆಂಜನೇಯನ ದೇವಸ್ಥಾನದಲ್ಲಿ ಆಂಜನೇಯನಿಗೆ ಬೆಣ್ಣೆ ಅಲಂಕಾರ ಮಾಡಿರುವುದು ವೀಳ್ಯದೆಲೆ ಅಲಂಕಾರ ಮಾಡಿರುವುದು ಇವುಗಳನ್ನು ನೋಡಿದ್ದೇವೆ. ಈ ರೀತಿ ಅಲಂಕಾರ ಮಾಡಿ ಭಕ್ತಿಯಿಂದ ಆಂಜನೇಯನು ಪ್ರಾರ್ಥಿಸಿದರೆ ಎಷ್ಟು ಫಲ ದೊರೆಯುತ್ತದೆ ಹಾಗೆಯೇ ಒಳ್ಳೆ ಮನಸ್ಸಿನಿಂದ ನಿಸ್ವಾರ್ಥ ಭಾವನೆಯಿಂದ ಒಳ್ಳೆ ವಿಷಯಗಳಿಗಾಗಿ ಬೇಡಿಕೊಂಡರೆ ಆಗಲು ಸಹ ಆಂಜನೇಯರು ಆ ಕೋರಿಕೆಗಳನ್ನು ಈಡೇರಿಸುತ್ತಾರೆ.

ಆಂಜನೇಯನಿಗೆ ಪ್ರಾಮಾಣಿಕತೆ ಇಂದ ಇರುವವರು ಸತ್ಯವನ್ನು ಹೇಳುವವರು ಹಾಗೂ ಎಲ್ಲರಿಗೂ ಒಳ್ಳೆಯದನ್ನೇ ಬಯಸುವವರನ್ನು ಕಂಡರೆ ಬಹಳ ಇಷ್ಟ. ಇದರ ಜೊತೆಗೆ ಬೀಜಾಕ್ಷರಗಳಿಂದ ಪಠಿಸಿದರೆ ಇನ್ನು ಹೆಚ್ಚಿನ ಆಶೀರ್ವಾದ ಸಿಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಕೂಡ ಹನುಮಾನ್ ಚಾಲೀಸವನ್ನು ಹೇಳಿ ಅವರ ಭಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ ಮತ್ತು ಆಂಜನೇಯ ಅನುಗ್ರಹವನ್ನು ಸಿದ್ದಿಸಿಕೊಳ್ಳುತ್ತಾರೆ ಮತ್ತು ಅವರಿಗಿರುವ ಸಂಕಷ್ಟದಿಂದ ಹೊರ ಬರುತ್ತಾರೆ, ಧೈರ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ.

ಇದೇ ರೀತಿಯಾಗಿ ಈ ಬೀಜಾಕ್ಷರವನ್ನು ಕೂಡ 11 ಬಾರಿ ಅಥವಾ ನಿಮಗೆ ಎಷ್ಟು ಬಾರಿ ಸಾಧ್ಯ ಅಷ್ಟು ಬಾರಿ ಪ್ರತಿದಿನ ಭಕ್ತಿಯಿಂದ ಪಠಿಸಿದರೆ ನಿಮಗೆ ಆರೋಗ್ಯ ಹಣಕಾಸು ಉದ್ಯೋಗ ವಿದ್ಯಾಭ್ಯಾಸ ಮದುವೆ ಸಂತಾನ ಮುಂತಾದ ಯಾವುದೇ ತರದ ಸಮಸ್ಯೆ ಇದ್ದರೂ ಕೂಡ ಎಲ್ಲವೂ ನಿವಾರಣೆ ಆಗುತ್ತದೆ ಆದರೆ ಪ್ರತಿದಿನವೂ ಕೂಡ ತಪ್ಪದೆ ಈ ಮಂತ್ರವನ್ನು ಭಕ್ತಿಯಿಂದ ಪಠಿಸಬೇಕು.

ನಂಬಿಕೆಯನ್ನು ಇಟ್ಟುಕೊಂಡು ಆಂಜನೇಯನಿಗೆ ಇಷ್ಟವಾಗುವ ಮಾರ್ಗದಲ್ಲಿ ನಡೆದು ಈ ಮಂತ್ರವನ್ನು ಪಠಿಸಬೇಕು. ಓಂ ಏಂ ಬ್ರೀಂ ಹನುಮತೆ ಶ್ರೀರಾಮದೂತಾಯ ನಮಃ ಈ ಶಕ್ತಿಶಾಲಿ ಮಂತ್ರವನ್ನು ಇನ್ನು ಮುಂದೆ ಯಾವುದೇ ಕಷ್ಟ ಬಂದಾಗಲೂ ಭಕ್ತಿಯಿಂದ ಪಠಿಸಿ ಸಾಕು ಮತ್ತು ಈ ಮಾಹಿತಿಯನ್ನು ನಿಮ್ಮ ಕುಟುಂಬದವರ ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

Leave a Comment