ನಿಮ್ಮ ಹೆಸರಿನ ಮೊದಲ ಅಕ್ಷರ ನಿಮ್ಮ ಗುಣದ ಬಗ್ಗೆ ಹೇಳುತ್ತದೆ, ಜೀವನದ ಅದೇಷ್ಟೋ ಸತ್ಯ ನಿಮ್ಮ ಹೆಸರಿನಲ್ಲೆ ಅಡಗಿದೆ ಏನದು ಅಂತ ನೋಡಿ.!

 

ಹುಟ್ಟಿದ ಪ್ರತಿಯೊಬ್ಬರಿಗೂ ಕೂಡ ಅವರನ್ನು ಗುರುತಿಸುವ ಕಾರಣದಿಂದ ಒಂದು ಹೆಸರನ್ನು ಇಡುತ್ತಾರೆ. ಕೆಲವರು ತಮ್ಮ ಅಭಿಮಾನವನ್ನು ತೋರಿಸುವ ಇಚ್ಛೆಯಿಂದ ಅವರು ಯಾರ ಅಭಿಮಾನಿಗಳ ಆಗಿರುತ್ತಾರೆ ಅಂತ ಸ್ಟಾರ್ಗಳ ಹೆಸರು ಇಡುತ್ತಾರೆ. ಕೆಲವರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅವರ ರಾಶಿ ನಕ್ಷತ್ರಗಳ ಅನುಗುಣವಾಗಿ ಹೆಸರು ಇಟ್ಟರೆ, ಕೆಲವರು ಯಾರು ಜೀವನದಲ್ಲಿ ಏಳಿಗೆ ಕಂಡಿರುತ್ತಾರೋ ಅವರಂತೆ ತಮ್ಮ ಮಕ್ಕಳಾಗಲಿ ಎಂದು ಹೆಸರು ಇಡುತ್ತಾರೆ.

ಈ ರೀತಿ ಇಟ್ಟ ಹೆಸರಿನಿಂದ ಅಥವಾ ಕರೆವ ಹೆಸರಲ್ಲೂ ವೈಬೇಷನ್ ಇರುತ್ತದೆ ಹಾಗಾಗಿಯೇ ಹೆಸರನ್ನು ಕೇಳಿ ಅಥವಾ ಯಾವ ಅಕ್ಷರದಿಂದ ಹೆಸರು ಆರಂಭ ಆಗುತ್ತದೆ ಎನ್ನುವುದರ ಮೇಲೆ ಅವರ ವ್ಯಕ್ತಿತ್ವವನ್ನು ಕೂಡ ತಿಳಿದುಕೊಳ್ಳಬಹುದು. ಈ ಅಂಕಣದಲ್ಲಿ ನಾವು ಎಲ್ಲಾ ಅಕ್ಷರಗಳ ಗುಣಲಕ್ಷಣಗಳ ಉದಾಹರಣೆಯನ್ನು ಕೊಡುತ್ತಿದ್ದೇವೆ. ನೀವು ಕೂಡ ನಿಮ್ಮ ಹೆಸರು ಹಾಗೂ ನಿಮ್ಮ ಗುಣದ ಬಗ್ಗೆ ತಾಳೆ ಮಾಡಿ ನೋಡಿ.

A ಹೆಸರಿನಿಂದ ಆರಂಭವಾಗುವ ಹೆಸರಿನಲ್ಲಿ ಹುಟ್ಟಿದವರಿಗೆ ನಾಯಕತ್ವದ ಗುಣ ಹೆಚ್ಚಾಗಿರುತ್ತದೆ. ಇವರು ಧೈರ್ಯವಂತರು ಸಾಹಸವಂತರು ಮತ್ತು ಛಲಗಾರರಾಗಿರುತ್ತಾರೆ, ಇವರಿಗೆ ಆತ್ಮವಿಶ್ವಾಸ ಹೆಚ್ಚಾಗಿ ಇರುತ್ತದೆ.
B ಅಕ್ಷರದವರಿಗೆ ಭಾವನೆಗಳನ್ನು ಕಂಟ್ರೋಲ್ ಮಾಡಲು ಚೆನ್ನಾಗಿ ತಿಳಿದಿರುತ್ತದೆ, ಇವರು ಮತ್ತೊಬ್ಬರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಗುಣ ಹೊಂದಿರುತ್ತಾರೆ, ಆದರೆ ಸ್ವಾರ್ಥ ಬುದ್ಧಿ ಇರುತ್ತದೆ.

C ಅಕ್ಷರದವರು ಹೆಚ್ಚು ಪ್ರತಿಭಾವಂತರಾಗಿರುತ್ತಾರೆ ಮತ್ತು ಎಲ್ಲರೊಡನೆ ಬೇಗ ಹೊಂದಿಕೊಳ್ಳುತ್ತಾರೆ ಹೆಚ್ಚು ಮಾತನಾಡುವ ಗುಣ ಹೊಂದಿದ್ದರು ಪ್ರಾಮಾಣಿಕರಾಗಿರುತ್ತೀರಿ.
D ಅಕ್ಷರದವರು ಯಾವಾಗಲೂ ಸ್ಥಿತಪ್ರಜ್ಞರಾಗಿರುತ್ತಾರೆ. ಸಮತೋಲನ ಭದ್ರತೆ ಹಾಗೂ ಕಠಿಣ ಪರಿಶ್ರಮವನ್ನು ಪ್ರತಿನಿಧಿಸುತ್ತಾರೆ. ಸ್ವಚ್ಛತೆ ಹಾಗೂ ಜೋಡಣೆಗೆ ಹೆಚ್ಚು ಗಮನ ಕೊಡುತ್ತಾರೆ.

E ಅಕ್ಷರದಿಂದ ಹೆಸರು ಆರಂಭವಾಗುವವರು ಸ್ನೇಹ ಮತ್ತು ಪ್ರೀತಿಗೆ ಬದ್ಧರು. ಕಠಿಣ ಸಮಸ್ಯೆಯನ್ನು ಕೂಡ ಉಪಾಯದಿಂದ ಬಗೆಹರಿಸುವವರು. ದೊಡ್ಡ ಸ್ನೇಹ ಬಳಗವನ್ನು ಹೊಂದಿರುವವರು.
F ಅಕ್ಷರದವರು ಕುಟುಂಬಕ್ಕೆ ಹೆಚ್ಚು ಗಮನ ಕೊಡುತ್ತಾರೆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ರೋಮ್ಯಾಂಟಿಕ್ ಹಾಗೂ ಚೈಲ್ಡೀಷ್ ಗುಣವನ್ನು ಹೊಂದಿರುತ್ತಾರೆ.

G ಅಕ್ಷರದವರು ಶಾಂತ ಸ್ವಭಾವ ಹಾಗೂ ದೃಢ ಮನಸ್ಸನ್ನು ಹೊಂದಿರುತ್ತಾರೆ. ಕೋಪವನ್ನು ಹೊರಗೆ ತೋರಿಸಿಕೊಳ್ಳದ ಇವರು ಜೀವನವನ್ನು ಅವರಿಷ್ಟದಂತೆ ಕಳೆಯಲು ಬಯಸುತ್ತಾರೆ.
I ಅಕ್ಷರದವರು ಶುದ್ದ ಮನಸ್ಸಿನವರ ಆದರೆ ಹೆಚ್ಚು ಅವಲಂಬಿತರು. ಯಾವಾಗಲೂ ಓವರ್ ಥಿಂಕ್ ಮಾಡುವಂತವರು. ಬೇರೆಯವರ ಕಷ್ಟಕ್ಕೆ ಬೇಗ ಮರಗುವ ಗುಣ ಇರುತ್ತದೆ.

J ಅಕ್ಷರದವರು ಜೀವನದಲ್ಲಿ ಮಹತ್ವಕಾಂಕ್ಷೆಯನ್ನು ಹೊಂದಿರುತ್ತಾರೆ. ಅಂದುಕೊಂಡಿದ್ದನ್ನು ಸಾಧಿಸುವ ಗುಣ ಇವರಲ್ಲಿ ಇರುತ್ತದೆ.
K ಅಕ್ಷರದವರು ನಾಚಿಕೆ ಸ್ವಭಾವದವರು. ತುಂಬಾ ಸೀಕ್ರೆಟ್ ಪರ್ಸನ್ ಆಗಿರುತ್ತಾರೆ ಬಹಳ ಬೇಗ ಎಲ್ಲರಿಗೂ ಅರ್ಥವಾಗುವುದಿಲ್ಲ.
L ಅಕ್ಷರದವರು ಜೀವನವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಾರೆ. ಸಂಗಾತಿಯನ್ನು ಬಹಳ ಇಷ್ಟಪಡುತ್ತಾರೆ.

M ಅಕ್ಷದವರು ಕಷ್ಟಪಟ್ಟು ಕೆಲಸ ಮಾಡುವ ಶ್ರಮಜೀವಿಗಳು. ಇವರು ಯಾರ ತಂಟೆಗೆ ಹೋಗುವುದಿಲ್ಲ, ಇವರ ತಂಟೆಗೆ ಯಾರಾದರೂ ಬಂದರೆ ಅವರನ್ನು ಬಿಡುವುದಿಲ್ಲ.
N ಅಕ್ಷರದವರು ನೇರ ನಡೆನುಡಿಯವರು, ಎಲ್ಲದರಲ್ಲೂ ಪರ್ಫೆಕ್ಷನ್ ಬಯಸುವವರು. ಬದುಕಿನಲ್ಲಿ ಅವರದ್ದೇ ಆದ ಸಿದ್ಧಾಂತಗಳನ್ನು ನಂಬಿ ಬದುಕುವವರು.
O ಅಕ್ಷರದವರು ಬಹಳ ಅಪರೂಪದ ಗುಣ ಹೊಂದಿರುವವರು ನಂಬಿಕಸ್ಥರು, ಎಲ್ಲರ ಮೇಲು ಪ್ರೀತಿ ಕರುಣೆ ತೋರುವವರು.

P ಅಕ್ಷರದವರು ಹಾಸ್ಯಪ್ರಜ್ಞೆ ಉಳ್ಳವರು ಸದಾ ಲವಲವಿಕೆಯಿಂದ ಇದ್ದು ಸುತ್ತಲಿನವರನ್ನು ಕೂಡ ಖುಷಿಯಾಗಿಡಿಯಲು ಪ್ರಯತ್ನಿಸುವವರು.
Q ಅಕ್ಷರದವರು ಸದಾ ನಿಗೂಢತೆ ಕಾಯ್ದುಕೊಂಡರು ನಂಬಿಕೆಗೆ ಅರ್ಹರು. ನಂಬಿದರೆ ಪ್ರಾಣ ಸ್ನೇಹಿತರು ಆಗಬಲ್ಲರು.
S ಅಕ್ಷರದವರು ಪ್ರೀತಿಗಾಗಿ ಏನು ಬೇಕಾದರೂ ಸಹಿಸಿಕೊಳ್ಳುವಂತವರು. ಹತ್ತಾರು ಜನರ ಮಧ್ಯೆ ಕೂಡ ಗಮನ ಸೆಳೆಯುವಂತಹ ವಿಶೇಷ ಕೂಡ ಉಳ್ಳವರು.

T ಅಕ್ಷರದವರು ಎಲ್ಲದಕ್ಕೂ ವಾದ ಮಾಡುತ್ತಾರೆ, ಯಾವುದೇ ವಿಷಯವಿದ್ದರೂ ಕೂಡ ಮಧ್ಯ ಪ್ರವೇಶಿಸಿ ಗೆಲ್ಲಬಲ್ಲ ಮಾತುಗಾರರು.
U ಅಕ್ಷರದವರು ಜೀವನದಲ್ಲಿ ಫೇಮಸ್ ಆಗಲು ಬಯಸುತ್ತಾರೆ. ಯಾವಾಗ ಏನು ಮಾಡಬೇಕು ಎನ್ನುವ ಕ್ಲಾರಿಟಿ ಜೊತೆಗೆ ಸದಾ ಹೊಸದಕ್ಕೆ ತುಡಿಯುತ್ತಿರುತ್ತಾರೆ.
V ಅಕ್ಷರದವರು ಸಣ್ಣ ಪುಟ್ಟ ವಿಷಯಗಳನ್ನು ಕೂಡ ಹೆಚ್ಚು ಗಮನಿಸುತ್ತಾರೆ ಮತ್ತು ಎಲ್ಲಾ ವಿಷಯಗಳನ್ನು ಕೂಡ ದೀರ್ಘಕಾಲ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಗುಣವನ್ನು ಹೊಂದಿರುತ್ತಾರೆ.

W ಅಕ್ಷರದವರು ಸುಲಭವಾಗಿ ಯಾರನ್ನು ನಂಬುವುದಿಲ್ಲ, ಯಾವುದೇ ವಿಷಯವಿದ್ದರೂ ಕೂಡ ಮುನ್ನುಗ್ಗುವ ಸ್ವಭಾವದವರು.
X ಅಕ್ಷರದವರು ಅಪರೂಪದಲ್ಲಿ ಅಪರೂಪದ ಗುಣದವರು. ಎಲ್ಲರಿಗಿಂತ ಬಹಳ ವಿಶೇಷ ಎಣಿಸುವವರು.
Y ಅಕ್ಷರದವರು ಜನರೊಂದಿಗೆ ಹೆಚ್ಚು ಬೆರೆಯುವುದಿಲ್ಲ ಸದಾ ಸ್ವಾತಂತ್ರ್ಯದಿಂದ ಇರಲು ಇಚ್ಛೆ ಪಡುತ್ತಾರೆ.
Z ಅಕ್ಷರದವರು ಅಂದುಕೊಂಡ ಗುರಿ ಸಾಧನೆಗಾಗಿ ಎಷ್ಟು ಬೇಕಾದರೂ ಕಷ್ಟ ಪಡುತ್ತಾರೆ ಜೀವನದಲ್ಲಿ ಉತ್ತಮ ಸ್ಥಾನಗಳಿಗೆ ಇವರು ತಲುಪುತ್ತಾರೆ.

Leave a Comment