ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಮಹಿಳೆಯರ ಬಳಿ ಇರಲೇಬೇಕು ಈ ದಾಖಲೆಗಳು… ಅದ್ಯಾವುವು ಗೊತ್ತಾ.?

 

ಕಾಂಗ್ರೆಸ್‌ ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ ಎಲ್ಲ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣವನ್ನು ಘೋಷಣೆ ಮಾಡಿದೆ. ಈ ಯೋಜನೆಗೆ ಯಾವುದೇ ನಿರ್ಬಂಧವನ್ನು ರಾಜ್ಯ ಸರ್ಕಾರ ವಿಧಿಸಿಲ್ಲ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣದ ಯೋಜನೆ ‘ಶಕ್ತಿ’ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಜೂನ್‌ 11 ರಿಂದ ಹವಾ ನಿಯಂತ್ರಿತ ಬಸ್‌ಗಳು ಮತ್ತು ಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ಪ್ರಯಾಣ ಮಾಡಬಹುದು ಎಂದು ಘೋಷಿಸಿದ್ದಾರೆ. ಪುರುಷರಿಗೆ ಶೇ.50ರಷ್ಟು ಮೀಸಲಾತಿ ಘೋಷಿಸಲಾಗಿದೆ.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಅದಲ್ಲದೇ ಕರ್ನಾಟಕದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಪ್ರಯಾಣಿಸಬಹುದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಮಹಿಳೆಯರ ಉಚಿತ ಪ್ರಯಾಣಕ್ಕೆ ನಿಯಮಗಳೇನು?

* ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿ ನಾಲ್ಕು ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣ
* ಎಸಿ, ಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ ಎಲ್ಲ ಬಸ್‌ಗಳಲ್ಲೂ ಉಚಿತ ಪ್ರಯಾಣ
* ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಶೇ.50ರಷ್ಟು ಪುರುಷರಿಗೆ ಮೀಸಲಾತಿ ಘೋಷಣೆ
* ಬಿಎಂಟಿಸಿ ಬಸ್‌ಗಳಲ್ಲಿ ಮಾತ್ರ ಪುರುಷರಿಗೆ ಮೀಸಲಾತಿ ಇಲ್ಲ
* ಜೂನ್‌ 11ರಿಂದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಪ್ರಾರಂಭ
* ಕರ್ನಾಟಕದ ಎಲ್ಲ ಮಹಿಳೆಯರಿಗೂ ‘ಶಕ್ತಿ’ ಯೋಜನೆ ಅನ್ವಯ
* ಕರ್ನಾಟಕ ರಾಜ್ಯದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಪ್ರಯಾಣಿಸಲು ಅವಕಾಶ

ಜೂನ್‌ 11ರಿಂದ ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣ ಘೋಷಿಸಲಾಗಿದೆ. ಆದರೆ, ಟಿಕೆಟ್‌ ನೀಡುವ ಬಗ್ಗೆ ಇನ್ನು ಚರ್ಚೆಯಾಗಿಲ್ಲ. ದಿಲ್ಲಿ ಮಾದರಿಯಲ್ಲಿ ಪಿಂಕ್‌ ಟಿಕೆಟ್‌ ಅಥವಾ ಬಸ್‌ ಪಾಸ್‌ ವಿತರಿಸುತ್ತಾರೋ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಗುರುತಿನ ಚೀಟಿಗಳನ್ನು ಪರಿಶೀಲಿಸಿ ಎಲ್ಲ ಮಹಿಳೆಯರಿಗೂ ಬಸ್‌ ಪಾಸ್‌ ವಿತರಿಸುವ ಸಾಧ್ಯತೆ ಇದೆ.

ಉಚಿತವಾಗಿ ಪ್ರಯಾಣಿಸಲು ಈ ದಾಖಲೆಗಳು ಕಡ್ಡಾಯ

ಹೌದು, ಉಚಿತವಾಗಿ ಪ್ರಯಾಣಿಸಲು ಸ್ಮಾರ್ಟ್‌ ಕಾರ್ಡ್‌ ಅಗತ್ಯವಾಗಿದೆ. ಇದನ್ನು ಮಾಡಿಸಿದರೆ ಅದು ನಮ್ಮ ಕೈ ತಲುಪಲು 3 ತಿಂಗಳಾದ್ರೂ ಬೇಕಾಗುತ್ತದೆ. ಹೀಗಾಗಿ, ಅಲ್ಲಿಯವರೆಗೂ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಡ್ರೈವಿಂಗ್‌ ಲೈಸೆನ್ಸ್‌, ವಾಸಸ್ಥಳ ನಮೂದಿಸಿರುವ ಗುರುತಿನ ಚೀಟಿ, ಅಂಗವಿಕಲ, ಹಿರಿಯ ನಾಗರೀಕರ ಕಲ್ಯಾಣ ಇಲಾಖೆ ನೀಡಿರುವ ಗುರುತಿನ ಪತ್ರ ಅಥವಾ ಇವುಗಳಲ್ಲಿ ಯಾವುದಾದರೊಂದು ಗುರುತಿನ ಪತ್ರ ಭೌತಿಕವಾಗಿ ಅಥವಾ ಡಿಜಿಲಾಕರ್‌ನಲ್ಲಿ ಇರಬೇಕು. ಈ ಗುರುತಿನ ಚೀಟಿಗಳಲ್ಲಿ ಫೋಟೋ ಮತ್ತು ವಾಸಸ್ಥಳ ನಮೂದಾಗಿರಬೇಕು.( ಸ್ಮಾರ್ಟ್‌ ಕಾರ್ಡ್‌ ಬರುವವರೆಗೂ ಮಾತ್ರ).

ಸ್ಮಾರ್ಟ್‌ಕಾರ್ಡ್‌ ಬರೋವರೆಗೂ ಉಚಿತ ಪ್ರಯಾಣ ಇಲ್ವಾ?

ಇಲ್ಲ, ಸ್ಮಾರ್ಟ್‌ಕಾರ್ಡ್‌ ವಿತರಣೆ ತಡವಾಗುತ್ತದೆ. ಈ ಹಿನ್ನೆಲೆ ಮಹಿಳೆಯರಿಗೆ ಶೂನ್ಯ ದರದ ಟಿಕೆಟ್‌ ನೀಡಲು ಸೂಚಿಸಲಾಗಿದೆ. ಆದ್ದರಿಂದ ಸ್ಮಾರ್ಟ್‌ಕಾರ್ಡ್‌ ಮಹಿಳೆಯರ ಕೈ ಸೇರೋವರೆಗೂ ಕೂಡ ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸಬಹುದು.

ಅರ್ಜಿ ಸಲ್ಲಿಕೆಗೆ ಅಥವಾ ಸ್ಮಾರ್ಟ್‌ಕಾರ್ಡ್‌ ಪಡೆಯಲು ಹಣ ನೀಡಬೇಕಾ?

ಇಲ್ಲ, ಅರ್ಜಿ ಸಲ್ಲಿಕೆಗೆ ಯಾವುದೇ ಹಣವನ್ನು ಮಹಿಳೆಯರು ನೀಡಬೇಕಿಲ್ಲ. ನೀವೇ ಸೇವಾಸಿಂಧು ಪೋರ್ಟಲ್‌ನಲ್ಲಿ ಲಾಗಿನ್‌ ಆಗಿ ಅರ್ಜಿ ಸಲ್ಲಿಸಬಹುದು. ಇನ್ನು, ಸ್ಮಾರ್ಟ್‌ಕಾರ್ಡ್‌ ಪಡೆಯಲು ಸದ್ಯದ ಮಾಹಿತಿ ಪ್ರಕಾರ ಸರ್ಕಾರ ಯಾವುದೇ ಶುಲ್ಕವನ್ನು ವಿಧಿಸಿಲ್ಲ.

ಲಗೇಜ್‌ಗೆ ಏನಾದ್ರೂ ಶುಲ್ಕ ಇದ್ಯಾ?

ಸಾಮಾನ್ಯವಾಗಿ ಬಸ್‌ಗಳಲ್ಲಿ ಪ್ರಯಾಣಿಸುವಾಗ ಎಲ್ಲರಿಗೂ ಉಚಿತ ಲಗೇಜ್‌ ಮಿತಿ ಇದೆ. ಅದನ್ನು ಹೊರತುಪಡಿಸಿ ಹೆಚ್ಚು ಲಗೇಜ್‌ ಇದ್ದರೆ ಅದರ ಶುಲ್ಕವನ್ನು ನೀವು ಪಾವತಿಸಬೇಕು.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

Leave a Comment