ಬ್ಯಾಂಕ್ ನಲ್ಲಿ 1 ಲಕ್ಷ ಹಣ ಇಟ್ಟರೆ ಎಷ್ಟು ಲಾಭ ಸಿಗಲಿದೆ ಗೊತ್ತಾ.? ಬ್ಯಾಂಕಿನ ಪ್ರಸ್ತುತ ಬಡ್ಡಿದರ ಎಷ್ಟಿದೆ ನೋಡಿ.! ಬೇರೆ ಅವರಿಗೆ ಬಡ್ಡಿಗೆ ಕೊಡದಕ್ಕಿಂತ ಇದೇ ಬೆಸ್ಟ್ ನೋಡಿ.!

 

 

RBI ಈ ವರ್ಷ ತನ್ನ ರೆಪೋ ದರವನ್ನು ಹೆಚ್ಚಿಸಿದೆ. ಈ ರೀತಿ ರೆಪೋ ದರ ಹೆಚ್ಚಿಗೆ ಆಗುವುದರಿಂದ ಅದು ದೇಶದಲ್ಲಿನ ಎಲ್ಲಾ ಖಾಸಗಿ ಮತ್ತು ಸರ್ಕಾರ ವಲಯದ ಹಣಕಾಸು ಸಂಸ್ಥೆಗಳ ವ್ಯವಹಾರದ ಮೇಲೆ ಪರಿಣಾಮ ಬೀರಲಿದೆ. ರೆಪೋದರ ಹೆಚ್ಚಿಗೆ ಆದಾಗ ಬ್ಯಾಂಕ್ ಗಳಲ್ಲಿ ಹೂಡಿಕೆ ಮಾಡುವವರಿಗೆ ಅವರ ಉಳಿತಾಯದ ಮೇಲೆ ಸಿಗುವ ಬಡ್ಡಿದರ ಕೂಡ ಹೆಚ್ಚಿಗೆ ಆಗಲಿದೆ.

ಕಳೆದ ಎರಡು ವರ್ಷಗಳ ಹಿಂದೆ ಆದ ಕೊರೋನಾ ಲಾಕ್ಡೌನ್ ದೇಶದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಿದ ಕಾರಣ ರೆಪೋ ದರದಲ್ಲಿ ತೀವ್ರ ಇಳಿಕೆ ಆಗಿತ್ತು. ಆದರೀಗ ಚೇತರಿಕೆ ಕಾಣುತ್ತಿದೆ. ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ ಗಳು ತಮ್ಮ ಬಡ್ಡಿದರವನ್ನು ಹೆಚ್ಚಿಸುವುದರಿಂದ ಗ್ರಾಹಕರಿಗೂ ಕೂಡ ತಮ್ಮ ಉಳಿತಾಯಗಳ ಮೇಲೆ ಹೆಚ್ಚಿನ ಲಾಭ ಸಿಗುತ್ತದೆ.

ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಒಂದಾದ SBI ಕೂಡ ಈಗ ಈ ವರ್ಷ ತನ್ನ ದರವನ್ನು ಹೆಚ್ಚಿಗೆ ಮಾಡಿದೆ. SBI ಬ್ಯಾಂಕಿನಲ್ಲಿ ಹಿರಿಯ ನಾಗರಿಕರಿಗಾಗಿ, ಹೆಣ್ಣು ಮಕ್ಕಳಿಗಾಗಿ ಮತ್ತು ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆಗಳ ಅನುಕೂಲತೆ ಇರುವುದರಿಂದ ದೇಶದ ಅತೀ ಹೆಚ್ಚಿನ ಜನರು SBI ಬ್ಯಾಂಕಿನಲ್ಲಿ ತಮ್ಮ ಉಳಿತಾಯವನ್ನು ನಿಶ್ಚಿತ ಠೇವಣಿ ಮೂಲಕ ಹೂಡಿಕೆ ಮಾಡಲು ಇಚ್ಛೆ ಪಡುತ್ತಾರೆ.

ಈಗ ಬಡ್ಡಿದರವು ಹೆಚ್ಚಿಗೆ ಆಗಿರುವುದರಿಂದ ನಿಶ್ಚಿತ ಠೇವಣಿಗಳ ಮೇಲೆ ಸಿಗುತ್ತಿದ್ದ ಲಾಭದ ಮೊತ್ತವು ಕೂಡ ಹೆಚ್ಚಾಗುತ್ತದೆ. ಪ್ರಸ್ತುತವಾಗಿ SBI ಬ್ಯಾಂಕಿನಲ್ಲಿ ಯಾವ ಯಾವ ಯೋಜನೆಗಳಿಗೆ ಎಷ್ಟೆಷ್ಟು ಬಡ್ಡಿದರ ಇದೆ ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ನೋಡಿ.

SBI ನಲ್ಲಿ 7 ದಿನಗಳಿಂದ 10 ವರ್ಷಗಳ ಅವಧಿಗೆ ಹಣವನ್ನು ನಿಶ್ಚಿತ ಠೇವಣಿ ಇಡಬಹುದು.
● SBIನಲ್ಲಿ ಹಲವು ರೀತಿಯ ಯೋಜನೆಗಳು ಇವೆ. ಯೋಜನೆಗಳಿಗೆ ಅನುಸಾರವಾಗಿ ಮತ್ತು ಠೇವಣಿ ಇಡುವ ವರ್ಷಗಳ ಆಧಾರದ ಮೇಲೆ ಬಡ್ಡಿ ದರದಲ್ಲಿ ವ್ಯತ್ಯಾಸ ಆಗುತ್ತಿರುತ್ತದೆ.
● SBI ಜಾರಿಗೆ ತಂದಿರುವ ಅಮೃತ ಕಳಶ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದವರಿಗೆ ಅವರ ಉಳಿತಾಯದ ಹಣದ ಮೇಲೆ 7.6% ಬಡ್ಡಿದರದಲ್ಲಿ ಲಾಭ ಸಿಗುತ್ತದೆ.

● ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿಗೆ ಪರಿಷ್ಕರಿಸಿದ ತನ್ನ ಬಡ್ಡಿದರಗಳ ಪ್ರಕಾರ ಸಾಮಾನ್ಯ ನಾಗರಿಕರು ಒಂದು ವರ್ಷದಿಂದ ಎರಡು ವರ್ಷದವರೆಗೆ ನಿಶ್ಚಿತ ಠೇವಣಿ ಇಡುವ ಹಣದ ಮೊತ್ತದ ಮೇಲೆ 6.80% ಬಡ್ಡಿದರವು ನಿಗದಿ ಆಗಿದೆ.
ಆದರೆ ಹಿರಿಯ ನಾಗರಿಕರಿಗೆ ಇದರಲ್ಲಿ ಹೆಚ್ಚಿನ ವಿನಾಯಿತಿ ಇದೆ ಹಿರಿಯ ನಾಗರಿಕರು ಇದೇ ಅವಧಿಯಲ್ಲಿ ಹೂಡಿಕೆ ಮಾಡುವ ಅದೇ ಮೊತ್ತದ ಹಣಕ್ಕೆ 7.30% ಬಡ್ಡಿದರದಲ್ಲಿ ಲಾಭವನ್ನು ಪಡೆಯುತ್ತಾರೆ.

● ಸಾಮಾನ್ಯ ನಾಗರಿಕರು ಎರಡು ವರ್ಷದಿಂದ ಮೂರು ವರ್ಷಗಳ ವರೆಗೆ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಇಟ್ಟರೆ ಅವರಿಗೆ 7% ಮತ್ತು ಹಿರಿಯ ನಾಗರಿಕರಿಗೆ 0.5% ಹೆಚ್ಚುವರಿಯಾಗಿ 7.50% ಬಡ್ಡಿದರ ಅನ್ವಯಿಸಲಿದೆ.
● ಮೂರು ವರ್ಷದಿಂದ ಐದು ವರ್ಷಗಳವರೆಗಿನ FD ಮೇಲೆ ಸಾಮಾನ್ಯ ನಾಗರಿಕರಿಗೆ 6.50% ಮತ್ತು ಹಿರಿಯ ನಾಗರಿಕರಿಗೆ 7% ಮತ್ತು ರಿಂದ 10 ವರ್ಷದವರೆಗಿನ FD ಹೂಡಿಕೆ ಮೇಲೆ ಸಾಮಾನ್ಯ ನಾಗರಿಕ 6.50% ಮತ್ತು ಹಿರಿಯ ನಾಗರಿಕರಿಗೆ 7.50% ಬಡ್ಡಿದರ ನಿಗದಿಪಡಿಸಲಾಗಿದೆ. ಇದರ ಕುರಿತು ಹೆಚ್ಚಿನ ಮಾಹಿತಿಗೆ ಹತ್ತಿರದಲ್ಲಿರುವ SBI ಶಾಖೆಗೆ ಭೇಟಿ ಕೊಡಿ.

Leave a Comment