ಮಹಿಳೆಯರು ತಾಳಿಯ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ. ಗಂಡನ ಆಯಸ್ಸು, ಶ್ರೇಯಸ್ಸು ಇದರಲ್ಲಿಯೇ ನಿರ್ಧಾರವಾಗುವುದು.!

ಮಾಂಗಲ್ಯ ಎಂಬುವುದು ಮುತ್ತೈದೆಯರಿಗೆ ಒಂದು ಸೌಭಾಗ್ಯ. ಮದುವೆ ಆಗಿರುವ ಸುಮಂಗಲಿಗೆ ಮಾತ್ರ ಅದನ್ನು ಧರಿಸಲು ಸಾಧ್ಯ. ಮಾಂಗಲ್ಯ ಎನ್ನುವುದು ಒಂದು ಬಂಗಾರದ ಒಡವೆ ಮಾತ್ರ ಆಗಿರದೆ ಆಕೆಯ ಸುಖ ಸೌಭಾಗ್ಯ ಎಲ್ಲವೂ ಆಗಿರುತ್ತದೆ. ಮುತ್ತೈದೆತನ ಎನ್ನುವುದು ಹೆಣ್ಣಿನ ಜೀವನದ ಅತಿದೊಡ್ಡ ಸಂಪತ್ತು ಮದುವೆ ಆದ ಪ್ರತಿಹೆಣ್ಣು ಕೂಡ ತನಗೆ ಶಾಶ್ವತವಾಗಿ ತಾಳಿಭಾಗ್ಯ ಸಿಗಲಿ ಎಂದು ದೇವರಲ್ಲಿ ಕೇಳುತ್ತಾಳೆ.

ಮದುವೆಯಾದ ಹೆಣ್ಣು ಮಕ್ಕಳು ಯಾವ ಒಡವೆಯನ್ನು ಧರಿಸದೆ ಇದ್ದರೂ ಕೂಡ ಅವರ ಕೊರಳಿನಲ್ಲಿರುವ ಮಾಂಗಲ್ಯವೇ ಅವರಿಗೆ ಶ್ರೀರಕ್ಷೆಯಾಗಿ ಕಾವಲಿರುತ್ತದೆ. ಆದ್ದರಿಂದಲೇ ಆಕೆಗೆ ಅಷ್ಟೊಂದು ಗೌರವ ಸ್ಥಾನಮಾನ ಸಿಗುವುದು. ತಾಳಿ ಕೊರಳಿನಲ್ಲಿದ್ದರೆ ಆಕೆ ಯಾವ ಕಾರ್ಯವನ್ನು ಕೂಡ ಜಯಿಸಬಳ್ಳಲು. ಇದರ ಅರ್ಥ ಆಕೆ ಒಬ್ಬಳೇ ಅಲ್ಲ ಮಾಂಗಲ್ಯ ರೂಪದಲ್ಲಿ ಆತನ ಗಂಡನೂ ಜೊತೆಗಿರುತ್ತಾನೆ ಎಂದು.

ಮದುವೆ ಕಾರ್ಯದ ಭಾಗವಾಗಿ ಶಾಸ್ತ್ರಗಳಲ್ಲಿ ಮಾಂಗಲ್ಯ ಧಾರಣೆ ಕೂಡ ಒಂದು. ಪುರೋಹಿತರು ಅರಿಶಿನ ದಾರದಲ್ಲಿ ತಾಳಿಬಟ್ಟುಗಳನ್ನು ಗಂಟು ಹಾಕಿ ಅದರ ಜೊತೆ ಕರಿಮಣಿ ಹಾಗೂ ಹವಳಗಳನ್ನು ಹಾಕಿ ವರನ ಕೈಗೆ ಕೊಟ್ಟು ವಧುವಿನ ಕೊರಳಿಗೆ ಮೂರು ಗಂಟು ಹಾಕುವಂತೆ ಹೇಳುತ್ತಾರೆ. ಆ ಮೂರು ಗಂಟುಗಳು ಮುಕ್ಕೋಟಿ ದೇವರುಗಳ ಸಾಕ್ಷಿಯಾಗಿ ಅವರ ಆಶೀರ್ವಾದದೊಂದಿಗೆ ಹೆಣ್ಣಿಗೆ ಸಿಗುವ ಉಡುಗೊರೆ ಆಗಿದೆ.

ಇನ್ನು ಮುಂದೆ ಅವರಿಬ್ಬರು ಮಾಂಗಲ್ಯ ಸಾಕ್ಷಿಯಾಗಿ ಒಬ್ಬರಿಗೊಬ್ಬರು ಜೊತೆಯಾಗಿ ಬದುಕುವುದಕ್ಕಾಗಿ ಮಾಡಿಕೊಳ್ಳುವ ಒಪ್ಪಂದದ ಸಂಕೇತ ಈ ಮಾಂಗಲ್ಯ ಧಾರಣೆ. ಇದನ್ನು ನಂಬಿ ಆಚರಣೆ ಮಾಡಿಕೊಂಡು ಬರುತ್ತಿರುವ ಸಂಸ್ಕೃತಿ ಭಾರತ ದೇಶದದ್ದು. ಆದರೆ ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಲೋಕವು ಇದನ್ನು ಹದಗೆಡಿಸುತ್ತಿದೆ. ತಾಳಿಗಿರುವ ಮಹತ್ವವನ್ನು ಮರೆತು ಅದನ್ನು ಸಹ ಒಂದು ಅಲಂಕಾರಿಕ ವಸ್ತುವನ್ನಾಗಿ ಮಾಡಿಕೊಂಡುಬಿಟ್ಟಿದ್ದಾರೆ.

ನೀವೇನಾದರೂ ತಪ್ಪಾದ ರೀತಿಯಲ್ಲಿ ಮಾಂಗಲ್ಯ ಧಾರಣೆ ಮಾಡಿದರೆ ಅಥವಾ ಅದನ್ನು ಧರಿಸುವುದು ತಪ್ಪಾದ ರೀತಿಯಲ್ಲಿ ಇದ್ದರೆ ನಿಮಗೆ ಮಾತ್ರವಲ್ಲದೇ ನಿಮ್ಮ ಗಂಡನಿಗೂ ಕೂಡ ಅದು ತೊಂದರೆ ಆಗುತ್ತದೆ. ಮತ್ತು ಇಡೀ ಕುಟುಂಬಕ್ಕೆ ಅದರ ಪ್ರಭಾವ ಕೆಟ್ಟದಾಗಿ ಬೀರುತ್ತದೆ. ಹಾಗಾಗಿ ತಾಳಿ ವಿಷಯದಲ್ಲಿ ಈಗ ನಾವು ಹೇಳುವ ಕೆಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅದೇ ರೀತಿ ನಡೆದುಕೊಂಡು ನಿಮ್ಮ ಸೌಭಾಗ್ಯವನ್ನು ಹೆಚ್ಚಿಸಿಕೊಳ್ಳಿ.

ಗಂಡನ ಏಳಿಗೆ ಹಾಗೂ ಮನೆಯ ಅಭಿವೃದ್ಧಿಗೆ ಕಾರಣರಾಗಿ. ಯಾವಾಗಲೂ ಕರಿಮಣಿ ಜೊತೆಗೆ ಮಾಂಗಲ್ಯವನ್ನು ಧರಿಸಬೇಕು, ಬಂಗಾರದ ಸರದಲ್ಲಿ ಧರಿಸಿದರು ಕೂಡ ಮಧ್ಯೆ ಮಧ್ಯೆ ಕರಿಮಣಿ ಇರಬೇಕು. ಕರಿಮಣಿ ಜೊತೆ ಹವಳ ಮುತ್ತು ಇವುಗಳನ್ನು ಕೂಡ ಸೇರಿಸಿ ಧರಿಸುವುದರಿಂದ ಇನ್ನು ಒಳ್ಳೆಯದೇ ಆಗುತ್ತದೆ.

ಕರಿಮಣಿ ಸಮೇತ ಮಾಂಗಲ್ಯವನ್ನು ಪಾರ್ವತಿ ಪರಮೇಶ್ವರ ರೂಪ ಎಂದು ಕಾಣುವುದರಿಂದ ಅದು ಹೃದಯ ಭಾಗದಲ್ಲಿ ಇರುವಂತೆ ಧರಿಸಬೇಕು. ವೃಕ್ಷ ಸ್ಥಳಕ್ಕೆ ಬರುವಂತೆ ಮಾಂಗಲ್ಯ ಧರಿಸಬೇಕ. ನಮ್ಮ ಮಾಂಗಲ್ಯ ಸರದ ಜೊತೆ ಯಾವುದೇ ಕಾರಣಕ್ಕೂ ಪಿನ್ನುಗಳನ್ನಾಗಲಿ ಅಥವಾ ಕಬ್ಬಿಣದ ಪದಾರ್ಥಗಳನ್ನಾಗಲಿ ಹಾಕಬಾರದು, ಇದರಿಂದ ದೋಷ ಉಂಟಾಗುತ್ತದೆ.

ಒಂದು ವೇಳೆ ಯಾವುದಾದರೂ ಸಮಯದಲ್ಲಿ ಮಾಂಗಲ್ಯ ಸರ ಕಟ್ ಆಗಿ ಹೋದರೆ ಅದನ್ನು ಸರಿಪಡಿಸುವ ತನಕ ಐದು ಎಳೆ ಅರಿಶಿನದ ದಾರದಲ್ಲಿ ಅರಿಶಿನ ಕೊಂಬನ್ನು ಹಾಕಿ ಗಂಡನ ಕೈಯಿಂದ ಕಟ್ಟಿಸಿಕೊಂಡು. ನಂತರ ನಿಮ್ಮ ಸರವನ್ನು ಸರಿಪಡಿಸಿಕೊಂಡು ಬೆಳಗ್ಗೆ ಒಂಬತ್ತು ಗಂಟೆ ಒಳಗೆ ಅದನ್ನು ಧರಿಸಬೇಕು. ನಂತರ ಆ ಅರಿಶಿನದ ದಾರವನ್ನು ತುಳಸಿ ಗಿಡದ ಕೆಳಗೆ ಅಥವಾ ದೇವಾಲಯದ ಹುಂಡಿಯಲ್ಲಿ ಅಥವಾ ಆಲದ ಮರದ ಕೆಳಗೆ ಹಾಕಬೇಕು. ಈ ರೀತಿ ಮಾಂಗಲ್ಯ ಸರ ಧರಿಸುವುದರ ಬಗ್ಗೆ ಇನ್ನಷ್ಟು ಮಹತ್ವದ ಅಂಶಗಳನ್ನು ತಿಳಿದುಕೊಳ್ಳಲು ಈ ವಿಡಿಯೋ ಪೂರ್ತಿಯಾಗಿ ನೋಡಿ.

Leave a Comment