ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶ, ಆಸಕ್ತರು ಈ ಅರ್ಜಿ ಸಲ್ಲಿಸಿ.! ವೇತನ 35000/-

ಕರ್ನಾಟಕದಲ್ಲಿರುವ ಎಲ್ಲಾ ನಿರುದ್ಯೋಗಿ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸದಾವಕಾಶ. ಮೈಸೂರಿನಲ್ಲಿರುವ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಕರ್ನಾಟಕದಾದ್ಯಂತ ಅರ್ಹತೆ ಹೊಂದಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತ ಪ್ರಕಟಣೆಯೊಂದನ್ನು ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ ಹೊರಡಿಸಿದೆ. ಇದು ಕರ್ನಾಟಕ ರಾಜ್ಯ ಸರ್ಕಾರದ ಉದ್ಯೋಗವಾಗಿದ್ದು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿವರದ ಬಗ್ಗೆ ಕೂಡ ನೋಟಿಫಿಕೇಶನಲ್ಲಿ ತಿಳಿಸಿದೆ.

ಪ್ರಕಟಣೆಯಲ್ಲಿ ತಿಳಿಸಿರುವಂತೆ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಉದ್ಯೋಗ ಪಡೆಬಹುದು. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಈ ಅಂಕಣದಲ್ಲಿ ಈ ಹುದ್ದೆಗಳ ಕುರಿತಂತೆ ಪೂರ್ತಿ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಈ ಉಪಯುಕ್ತ ಮಾಹಿತಿಯ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ತಪ್ಪದೇ ಶೇರ್ ಮಾಡಿ.

ಉದ್ಯೋಗ ಸಂಸ್ಥೆ:- ರೈಲ್ವೆ ಕೋ ಆಪರೇಟಿವ್ ಬ್ಯಾಂಕ್
ಉದ್ಯೋಗದ ಮಾದರಿ:- ರಾಜ್ಯ ಸರ್ಕಾರದ ಉದ್ಯೋಗ
ಉದ್ಯೋಗ ಸ್ಥಳ:- ಮೈಸೂರು
ಒಟ್ಟು ಹುದ್ದೆಗಳ ಸಂಖ್ಯೆ:- 21

ಹುದ್ದೆಗಳ ವಿವರ:-
● ಬ್ರಾಂಚ್ ಮ್ಯಾನೇಜರ್ – 1
ಅಕೌಂಟೆಂಟ್ – 4
● ಸೀನಿಯರ್ ಕ್ಯಾಷಿಯರ್ – 1
● ಕಂಪ್ಯೂಟರ್ ಸೂಪರ್ವೈಸರ್ – 1
● ಜೂನಿಯರ್ ಕ್ಲರ್ಕ್ – 10
● ಆಫೀಸ್ ಅಸಿಸ್ಟೆಂಟ್ – 4

ಶೈಕ್ಷಣಿಕ ವಿದ್ಯಾರ್ಹತೆ:-
● ಬ್ರಾಂಚ್ ಮ್ಯಾನೇಜರ್ – ಸಹಕಾರ ವಿಷಯದಲ್ಲಿ ಪದವಿ
● ಅಕೌಂಟೆಂಟ್ – ವಾಣಿಜ್ಯಶಾಸ್ತ್ರದಲ್ಲಿ ಪದವಿ
● ಸೀನಿಯರ್ ಕ್ಯಾಷಿಯರ್ – ಸಹಕಾರ ವಿಷಯದಲ್ಲಿ ಪದವಿ
● ಕಂಪ್ಯೂಟರ್ ಸೂಪರ್ವೈಸರ್ – ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಇಂಜಿನಿಯರಿಂಗ್ / B.Sc. / BCA
● ಜೂನಿಯರ್ ಕ್ಲರ್ಕ್ – PUC
● ಆಫೀಸ್ ಅಸಿಸ್ಟೆಂಟ್ – SSLC

ವೇತನ ಶ್ರೇಣಿ:- ಮಾಸಿಕವಾಗಿ
● ಬ್ರಾಂಚ್ ಮ್ಯಾನೇಜರ್ – 35,400
● ಅಕೌಂಟೆಂಟ್ – 35,400
● ಸೀನಿಯರ್ ಕ್ಯಾಷಿಯರ್ – 35,400
● ಕಂಪ್ಯೂಟರ್ ಸೂಪರ್ವೈಸರ್ – 29,200
● ಜೂನಿಯರ್ ಕ್ಲರ್ಕ್ – 19,900
● ಆಫೀಸ್ ಅಸಿಸ್ಟೆಂಟ್ – 18,000

ವಯೋಮಿತಿ:-
● ಕನಿಷ್ಠ 18 ವರ್ಷಗಳು
● ಗರಿಷ್ಠ 35 ವರ್ಷಗಳು

ಅರ್ಜಿ ಶುಲ್ಕ:-
● SC/ST, ಪ್ರವರ್ಗ 1, ಅಂಗವಿಕಲರು, ಮಾಜಿ ಸೈನಿಕರ ಅಭ್ಯರ್ಥಿಗಳಿಗೆ – 500ರೂ.
● ಸಾಮಾನ್ಯ, ಪ್ರವರ್ಗ 2A,2B,3A,3B ಅಭ್ಯರ್ಥಿಗಳಿಗೆ – 1000ರೂ.
● ಅರ್ಜಿ ಶುಲ್ಕವನ್ನು DD ಅಥವಾ ಪೇ ಆರ್ಡರ್ ಮೂಲಕ ಪಾವತಿಸಬೇಕು.

ಆಯ್ಕೆ ವಿಧಾನ:-
● ಲಿಖಿತ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ

ಅರ್ಜಿ ಸಲ್ಲಿಸುವ ವಿಧಾನ:-
● ಪ್ರಕಟಣೆಯಲ್ಲಿ ತಿಳಿಸಿದಂತೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
● ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಳಗೆ ತಿಳಿಸುವ ವಿಳಾಸಕ್ಕೆ ರೆಸ್ಯುಮ್ ಮತ್ತು ಅರ್ಜಿ ಶುಲ್ಕ ಪಾವತಿ ಮಾಡಿರುವ ದಾಖಲೆಯನ್ನು ಕಳುಹಿಸಿಕೊಡಬೇಕು.
● ಭವಿಷ್ಯದಲ್ಲಿ ಅಭ್ಯರ್ಥಿಗಳ ಜೊತೆ ಪರೀಕ್ಷಾ ಪ್ರಾಧಿಕಾರ ಸಂಪರ್ಕಿಸಲು ರೆಸ್ಯೂಮ್ ನಲ್ಲಿ ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಅಧಿಕೃತ ವಿಳಾಸವನ್ನು ಸರಿಯಾಗಿ ತಿಳಿಸಿರಬೇಕು.

ವಿಳಾಸ:-
ಮೆಂಬರ್ ಸೆಕ್ರೆಟರಿ, ರೆಕ್ಯೂಟ್ಮೆಂಟ್ ಕಮಿಟಿ
ದ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್
ಶೇಷಾದ್ರಿ ಅಯ್ಯರ್ ರಸ್ತೆ
ಮೈಸೂರು – 570001

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 28 ಜೂನ್, 2023.
● ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ – 28 ಜೂನ್, 2023.

Leave a Comment