ಮನೆ ಕಟ್ಟಿಸುವುದು ಈಗ ಸುಲಭದ ಮಾತಲ್ಲ ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡಿ ಎನ್ನುವ ಮಾತೇ ಇದೆ. ಬೇಕಾದರೆ ಸರಳವಾಗಿ ಮದುವೆ ಕೂಡ ಮಾಡಿಸಬಹುದು ಆದರೆ ಮನೆ ಕಟ್ಟುವ ವಿಷಯ ಬಹಳ ದೊಡ್ಡದು. ಬಡವರಿಗೆ ಹಾಗೂ ಸಾಮಾನ್ಯ ವರ್ಗದವರಿಗೆ ಮನೆ ಎನ್ನುವುದು ಬಹುದೊಡ್ಡ ಕನಸು. ಜೀವಮಾನದಲ್ಲಿ ಪದೇ ಪದೇ ಮನೆ ಕಟ್ಟಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ.
ಕೆಲವರಿಗೆ ಜೀವನಪೂರ್ತಿ ಒಂದು ಸಣ್ಣ ಮನೆಯನ್ನು ಕಟ್ಟಿಕೊಳ್ಳಲು ಆಗುವುದಿಲ್ಲ, ಅದಕ್ಕೆ ಕಾರಣ ಹಣಕಾಸಿನ ಕೊರತೆ. ಈಗಿನ ಕಾಲದ ದುಬಾರಿ ಬೆಲೆಯಲ್ಲಿ ಮನೆ ಕಟ್ಟಬೇಕು ಎಂದರೆ ದೊಡ್ಡ ಮೊತ್ತದ ಹಣದ ಅವಶ್ಯಕತೆ ಇರುತ್ತದ. ಕಬ್ಬಿಣ, ಮರಳು, ಸಿಮೆಂಟು, ಜಲ್ಲಿ ಕಲ್ಲು, ಇಟ್ಟಿಗೆ ಹೀಗೆ ಮನೆಗೆ ಬೇಕಾದ ಇನ್ನಿತರ ಸಾಮಾನುಗಳ ಬೆಲೆ ಜೊತೆ ಕೂಲಿ ಆಳುಗಳ ಖರ್ಚು ಇದೆಲ್ಲಾ ಸೇರಿ ಬಹಳ ಸರಳವಾಗಿ ಎಂದರು 5 ಲಕ್ಷವಾದರೂ ಖಂಡಿತ ಬೇಕಾಗುತ್ತದೆ. ಆದರೆ ಕೆಲವರಿಗೆ ಇಷ್ಟು ಹಣ ಹೊಂದಿಸುವುದು ಬಹಳ ಕಷ್ಟ.
ದಾಖಲೆ ಪತ್ರಗಳು ಇಲ್ಲದವರಿಗೆ ಸಾಲ ಸೌಲಭ್ಯ ಸಿಗದೇ ಹೋಗಬಹುದು ಅಥವಾ ಸರಿಯಾದ ಡಾಕುಮೆಂಟ್ ಇಲ್ಲದ ಕಾರಣ ಸರ್ಕಾರದ ಯೋಜನೆಗಳು ಅನುಕೂಲತೆ ಸಿಗದೇ ಇರಬಹುದು. ಅಂತವರು ಒಂದೇ ಒಂದು ಲಕ್ಷದಲ್ಲಿ ಮನೆ ಕಟ್ಟಿಕೊಳ್ಳುವ ಸುಲಭ ವಿಧಾನವನ್ನು ನಾವು ಇಂದು ಈ ಅಂಕಣದಲ್ಲಿ ಹೇಳಿಕೊಡುತ್ತಿದ್ದೇವೆ.
ನಿರಾಶ್ರಿತರಿಗೆ ಅಥವಾ ಪದೇ ಪದೇ ವಲಸೆ ಹೋಗುವಂತವರಿಗೆ ಅಥವಾ ಬಡವರಿಗೆ ಅಥವಾ ಸೆಕ್ಯೂರಿಟಿ ರೂಮ್, ಸಣ್ಣ ಆಫೀಸ್ ಅಥವಾ ಜಮೀನಿನಲ್ಲಿ ಸಣ್ಣದಾಗಿ ಮನೆ ಕಟ್ಟಿಕೊಳ್ಳುವುದು ಇಂತಹ ಪ್ಲಾನಿಂಗ್ ಇದ್ದವರಿಗೆ ಈ ಒಂದು ವಿಧಾನ ಬಹಳ ಅನುಕೂಲವಾಗಬಹುದು. ಯಾಕೆಂದರೆ ಇದು ಕಟ್ಟುವುದು ಕೂಡ ಸುಲಭ ಮತ್ತು ಇದನ್ನು ಮೋಡಿಫೈ ಮಾಡುವುದು ಸುಲಭ ಮತ್ತು ತಗಲುವ ಖರ್ಚು ಹಾಗೂ ನಿರ್ಮಾಣಕ್ಕೆ ತೆಗೆದುಕೊಳ್ಳುವ ಸಮಯ ಕೂಡ ಬಹಳ ಕಡಿಮೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ ಸ ಮನೆ ವಾಚ್ಮನಿಗಳಿಗೆ ಇಂತಹ ಮನೆಯನ್ನು ಮನೆ ಮುಂದೆ ಕಟ್ಟಿಸಿ ಕೊಡುತ್ತಾರೆ ಅಥವಾ ಆಫೀಸಿನ ಮುಂದೆ ಸೆಕ್ಯೂರಿಟಿ ರೂಮಾ ಈ ರೀತಿ ಇರುತ್ತದೆ . ಇದು ಕಬ್ಬಿಣದ ರೇಖೆಗಳಿಂದ ಆಗಿರುವಂತಹ ಮನೆ ಆಗಿರುತ್ತದೆ. ಇವುವಶಿಪ್ಪಿಂಗ್ ಕಂಟೇನರ್ ಗಳಾಗಿರುತ್ತವೆ. ಇವುಗಳನ್ನು ಮೂರರಿಂದ ನಾಲ್ಕು ಸರಿ ಮಾತ್ರ ಹಡಗುಗಳಿಗೆ ಬಳಸಬಹುದು ನಂತರ ಅದು ವೇಸ್ಟ್ ಆಗುತ್ತದೆ.
ಇದನ್ನು ತಪ್ಪಿಸಲು ಇದನ್ನ ರೀ ಸೈಕಲ್ ಮಾಡಲಾಗುತ್ತದೆ. ಈ ರೀತಿ ಮನೆ ಕಟ್ಟಿಸುವ ಕೆಲಸಗಳಿಗೆ ಉಪಯೋಗಿಸಲಾಗುತ್ತದೆ. ಈ ರೀತಿ ಇವುಗಳಿಂದ ಮನೆ ಕಟ್ಟಿಕೊಂಡರೆ ಮನೆಯನ್ನು ಬೇಕಾದ ರೀತಿಯಲ್ಲಿ ಮಾಡಿಫೈ ಮಾಡಬಹುದು. ಈ ಮನೆಗಳಿಗೆ ಕರೆಂಟ್, ನೀರಿನ ಕನೆಕ್ಷನ್ ಕೂಡ ಕೊಡಿಸಬಹುದು. ಒಳಗಿನಿಂದ ಥರ್ಮಕೋಲ್ ಕವರಿಂಗ್ ಮಾಡಿಸಿದರೆ ಅತಿಯಾದ ಶಾಖ ಹಾಗೂ ಅತಿಯಾದ ಚಳಿಯ ಕಂಟ್ರೋಲರ್ ಆಗಿ ಇದು ಕೆಲಸ ಮಾಡುತ್ತದೆ.
ಆದರೆ ಇದನ್ನು ನಿರ್ಮಿಸುವ ಮುನ್ನ ಆ ಜಾಗವನ್ನು ಗುರುತಿಸಿ ಅದಕ್ಕೆ ಸಿಮೆಂಟ್ ಮತ್ತು ಮರಳಿನಿಂದ ಸ್ವಲ್ಪ ಅಡಿಪಾಯ ಹಾಕಬೇಕು ಅಷ್ಟೇ. ಜಾಗ ನಿಮ್ಮದಾಗಿದ್ದು, ಅಡಿಪಾಯದ ಖರ್ಚಿಗೆ ಸ್ವಲ್ಪ ಹಣ ಖರ್ಚು ಮಾಡಿದರೆ ಒಂದೇ ಒಂದು ಲಕ್ಷದ ಒಳಗೆ ನಿಮಗೆ ಈ ರೀತಿ ವಾಸಿಸಲು ಯೋಗ್ಯವಾದ ಚಿಕ್ಕ ಮನೆ ಸಿಗುತ್ತದೆ. ಪ್ರತಿವರ್ಷ ಕೂಡ ಇವುಗಳಿಗೆ ಪೇಂಟಿಂಗ್ ಮಾಡಿಸಬೇಕು ಇಲ್ಲವಾದಲ್ಲಿ ತುಕ್ಕು ಹಿಡಿಯುತ್ತದೆ. ಸರಿಯಾಗಿ ಇದನ್ನು ಮೇಂಟೇನ್ ಮಾಡಿದರೆ 30 ವರ್ಷಗಳ ಕಾಲ ಈ ಮನೆಗಳಲ್ಲಿ ವಾಸಿಸಬಹುದು. ಇವುಗಳ ಬಗ್ಗೆ ಆಸಕ್ತಿ ಇದ್ದರೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.