ಜೀವನದಲ್ಲಿ ಆರೋಗ್ಯದ, ಹಣಕಾಸು, ಸಂತಾನ ಭಾಗ್ಯ, ವಿದ್ಯಾಭ್ಯಾಸ, ಆಸ್ತಿ ವಿಚಾರದಲ್ಲಿ ತೊಂದರೆ ಇನ್ನೂ ಮುಂತಾದ ಯಾವುದೇ ಸಂಕಷ್ಟಗಳು ಇದ್ದರೂ ಕೂಡ ಅಥವಾ ಜೀವನದಲ್ಲಿ ಮನೆ ಕಟ್ಟಬೇಕು ಆಸ್ತಿ ಖರೀದಿಸಬೇಕು ಒಳ್ಳೆಯ ಉದ್ಯೋಗ ಪಡೆಯಬೇಕು ಅಥವಾ ಇಷ್ಟ ಪಟ್ಟವರನ್ನು ಕುಟುಂಬದ ಒಪ್ಪಿಗೆ ಮೇರೆಗೆ ಮದುವೆ ಆಗಬೇಕು ಎನ್ನುವ ಕೋರಿಕೆಗಳು ಇದ್ದರೂ ಕೂಡ ಅದು ಶೀಘ್ರವಾಗಿ ನೆರವೇರಬೇಕು ಎಂದರೆ.
ಶ್ರೀ ಸತ್ಯ ಶಿರಡಿ ಸಾಯಿಬಾಬಾ ಅವರ ಪ್ರಾರ್ಥನೆಯನ್ನು ಮಾಡಿ ಈಗ ನಾವು ಹೇಳುವ ಈ ರೀತಿ ಸಾಯಿಬಾಬಾ ಅವರನ್ನು 9 ದಿನಗಳು 9 ನಾಣ್ಯಗಳ ಮೂಲಕ ಪ್ರಾರ್ಥಿಸಿ. ನಿಮಗೆ ಯಾವ ರೀತಿಯ ಸಂಕಷ್ಟಗಳು ಇದ್ದರೂ 9 ದಿನಗಳಲ್ಲಿ ಪರಿಹಾರ ಆಗುತ್ತದೆ ಅಥವಾ ನಿಮ್ಮ ಕೋರಿಕೆಗಳು ನೆರವೇರುವ ಮುನ್ಸೂಚನೆಗಳು 9 ದಿನಗಳಿಗೂ ಮುಂಚೆಯೇ ದೊರೆಯುತ್ತದೆ.
ಒಂದು ಗುರುವಾರದಿಂದ ಮನೆ ಶುದ್ಧ ಮಾಡಿ ಸ್ಥಾನ ಮಾಡಿ ಮಡಿಯುಟ್ಟು ಸಾಯಿಬಾಬಾ ಅವರ ವಿಗ್ರಹವಿದ್ದರೆ ಅಥವಾ ಫೋಟೋ ಇದ್ದರೆ ಅದನ್ನು ಸ್ವಚ್ಛ ಮಾಡಿ ಗಂಧ ಇಟ್ಟು ಹಳದಿ ಹೂವನ್ನು ಇಟ್ಟು ಪೂಜೆ ಮಾಡಿ ಧೂಪ ದೀಪದಿಂದ ಆರತಿ ಮಾಡಿದ ಮೇಲೆ ಮನೆಯಲ್ಲಿ ಇರುವ ಪದಾರ್ಥವನ್ನು ಅಥವಾ ನಿಮ್ಮ ಶಕ್ತಿಯನುಸಾರ ಏನು ಸಾಧ್ಯವೋ ಆ ರೀತಿ ನೈವೇದ್ಯವನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡಿ.
ಸಾಯಿಬಾಬಾ ಪ್ರಾರ್ಥನೆ ಮಾಡುವ ಭಕ್ತರಿಂದ ಸಾಯಿಬಾಬಾ ಅವರು ಏನನ್ನು ನಿರೀಕ್ಷೆ ಮಾಡುವುದಿಲ್ಲ ಮನಸ್ಸಿನಲ್ಲಿ ಭಕ್ತಿಯಿಂದ ವಿಶ್ವಾಸದಿಂದ ಪೂಜೆ ಮಾಡಿದರೆ ಅದೇ ಅವರಿಗೆ ತೃಪ್ತಿ ಈ ರೀತಿ ಆದ ಮೇಲೆ ನೀವು 9 ನಾಣ್ಯಗಳನ್ನು ತೆಗೆದುಕೊಳ್ಳಬೇಕು. ಒಂದು ರೂಪಾಯಿ ಅಥವಾ ಎರಡು ರೂಪಾಯಿ ಅಥವಾ ಐದು ರೂಪಾಯಿಯ 9 ನಾಣ್ಯಗಳನ್ನು ತೆಗೆದುಕೊಂಡು ಸಾಯಿಬಾಬಾ ಅವರ ಫೋಟೋ ಮುಂದೆ ಕಂಚು ಬೆಳ್ಳಿ, ಅಥವಾ ಹಿತ್ತಾಳೆಯ ತಟ್ಟೆಯಲ್ಲಿ ಅಕ್ಕಿಯನ್ನು ತುಂಬಿದೆ ಇಡಬೇಕು.
ಯಾವುದೇ ಕಾರಣಕ್ಕೂ ಸ್ಟೀಲ್ ತಟ್ಟೆಯನ್ನು ಬಳಸಬಾರದು. ಅಕ್ಕಿ ತುಂಬಿದ ಮೇಲೆ ಅದಕ್ಕೆ 3 ನಾಣ್ಯಗಳಂತೆ 9 ನಾಣ್ಯಗಳನ್ನು 3 ಸಾಲಿನಲ್ಲಿ ಜೋಡಿಸಬೇಕು. ಅದನ್ನು ಸಹಾ ದೇವರ ಫೋಟೋ ಅಥವಾ ವಿಗ್ರಹದ ಮುಂದೆ ಇಟ್ಟು ಅದಕ್ಕೂ ಸಹ ನೀರು ಇಟ್ಟು ಪೂಜೆ ಮಾಡಿ ಕೆಲಸಮಯ ಸಾಯಿಬಾಬಾ ಮುಂದೆ ಕುಳಿತು ಧ್ಯಾನ ಮಾಡಿ ಆಮೇಲೆ ನಿಮ್ಮ ಸಮಸ್ಯೆ ಏನು ಹೇಳುವುದನ್ನು ಹೇಳಿಕೊಡಬೇಕು ಅಥವಾ ನಿಮ್ಮ ಯಾವ ಆಸೆ ನೆರವೇರಬೇಕು ಎನ್ನುವುದನ್ನು ಹೇಳಿಕೊಡಬೇಕು.
9 ದಿನಗಳವರೆಗೆ ಪ್ರತಿದಿನವೂ ಕೂಡ ಆ ತಟ್ಟೆಯನ್ನು ಬದಲಾಯಿಸದೆ ಅಲ್ಲೇ ದೇವರ ವಿಗ್ರಹ ಅಥವಾ ಫೋಟೋ ಮುಂದೆ ಇಟ್ಟು ಒಂಬತ್ತನೇ ದಿನವು ಭಕ್ತಿಯಿಂದ ಇದೇ ರೀತಿ ಹೂವು ನೀರು ಇಟ್ಟು ಪೂಜೆ ಮಾಡಿ ಸಾಯಿಬಾಬಾ ಅವರನ್ನು ಕೂಡ ಪೂಜೆ ಮಾಡಿ ಪ್ರಾರ್ಥಿಸಿಕೊಳ್ಳಬೇಕು. 9 ದಿನಗಳು ಆದ ಬಳಿಕ 10ನೇ ದಿನ ಆ ನಾಣ್ಯಗಳಿಂದ ಯಾವುದಾದರೂ ಚಾಕಲೇಟ್ ತೆಗೆದುಕೊಂಡು ಅದನ್ನು ಚಿಕ್ಕ ಮಕ್ಕಳಿಗೆ ಕೊಡಬೇಕು, ಅಥವಾ ವಯಸ್ಸಾದವರು ಇದ್ದರೆ.
ಅವರಿಗೆ ಎಲೆ ಅಡಿಕೆಯನ್ನು ತೆಗೆದುಕೊಡಬೇಕು ಅಥವಾ ಯಾರಾದರೂ ತೀರ ಅವಶ್ಯಕತೆ ಇರುವವರಿಗೆ ಕಷ್ಟದಲ್ಲಿ ಇರುವವರಿಗೆ ಸಹಾಯವಾಗಲಿ ಎಂದು ಕೊಡಬೇಕು. ಈ ರೀತಿ ಮಾಡಿ ನೋಡಿ ನೀವು ಈ 9 ದಿನಗಳ ಪೂಜೆ ಮುಗಿಸುವ ಒಳಗಡೆ ನಿಮ್ಮ ಸಮಸ್ಯೆ ಪರಿಹಾರ ಆಗಿರುತ್ತದೆ ಅಥವಾ ನಿಮ್ಮ ಕೋರಿಕೆಯು ನೆರವೇರಿರುತ್ತದೆ.