ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಶ್ ರೂಮ್ ಗಳಲ್ಲಿ ಬಕೆಟ್ ಇಟ್ಟಿರುತ್ತೇವೆ. ಸ್ನಾನದ ಮನೆ ಹಾಗೂ ಟಾಯ್ಲೆಟ್ ಬಕೆಟ್ ಗಳಲ್ಲಿ ಸದಾ ಕಾಲ ನೀರು ತುಂಬಿರುವುದರಿಂದ ಅವು ಕಲೆ ಕಟ್ಟುತ್ತವೆ. ನಮ್ಮ ಮನೆಗೆ ಬರುವ ನೀರು ಗಡುಸಾಗಿದ್ದರೆ ಇದರ ಸುತ್ತ ಕಲೆ ಕಟ್ಟಿ ಬಿಡುತ್ತದೆ ಇದು ಹೇಗಾಗುತ್ತದೆ ಎಂದರೆ ಬಕೆಟ್ ಬಣ್ಣ ಹೋಗಿ ಮೇಲೆ ಬಿಳಿ ಬಣ್ಣದಲ್ಲಿ ಚಕ್ಕೆ ರೀತಿ ಕಟ್ಟಿಕೊಂಡು ಬಿಟ್ಟಿರುತ್ತದೆ.
ಇದನ್ನು ಬಳಸುವುದಕ್ಕೆ ಬೇಸರ ಯಾರಾದರೂ ಸ್ನೇಹಿತರು ನೆಂಟರು ಬಂದಾಗ ಇದನ್ನು ನೋಡಿದರೆ ಕ್ಲೀನ್ ಆಗಿ ಇಟ್ಟುಕೊಂಡಿಲ್ಲ ಎಂದುಕೊಳ್ಳುತ್ತಾರೆ ಎನ್ನುವ ಮುಜುಗರ. ಹಾಗಾಗಿ ಈ ಬಕೆಟ್ ಗಳನ್ನು ತೊಳೆದು ಕ್ಲೀನ್ ಮಾಡುವುದೇ ಒಂದು ಹರಸಾಹಸ ಎಂದೇ ಹೇಳಬಹುದು. ನಿಮಗೂ ಇದರ ಅನುಭವ ಆಗಿದ್ದರೆ ಇಂತಹ ಬಕೆಟ್ ಗಳನ್ನು ಪಳಪಳ ಎನಿಸಲು ಸುಲಭ ಟಿಪ್ಸ್ ಗಳನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಹೆಣ್ಣು ಮಕ್ಕಳಿಗೆ ಮನೆ ಕೆಲಸ ಎಷ್ಟು ಮಾಡಿದರೂ ಮುಗಿಯುವುದಿಲ್ಲ. ಒಂದು ಕಡೆ ಮಾಡಿದರೆ ಮತ್ತೊಂದು ಕಡೆ ಏನಾದರೂ ಎಡವಟ್ಟಾಗಿ ಕೆಲಸ ಜಾಸ್ತಿ ಆಗುತ್ತಿರುತ್ತದೆ ಹೊರತು ಇಡೀ ಮನೆ ನಿಭಾಯಿಸುವಷ್ಟರಲ್ಲಿ ಸುಸ್ತಾಗಿರುತ್ತದೆ. ಈ ಕಾರಣದಿಂದ ಆಗಾಗ ಯಾವುದಾದರೂ ಒಂದು ಪದಾರ್ಥ ಈ ರೀತಿ ಕರೆ ಕಟ್ಟಿ ಹಾಳಾಗುತ್ತಿರುತ್ತದೆ.
ಈ ಸುದ್ದಿ ಓದಿ:-ಕೇವಕ 20 ರೂಪಾಯಿನಲ್ಲಿ 20 ಸಾವಿರದ ರೇಷ್ಮೆ ಸೀರೆಯನ್ನು ಮನೆಯಲ್ಲಿ ಡ್ರೈ ವಾಶ್ ಮಾಡಬಹುದು.!
ನೀವು ಹೀಗೆ ವಾಶ್ ರೂಮ್ ನಲ್ಲಿ ಬಕೆಟ್ ಇಟ್ಟು ಅದನ್ನು ಸ್ವಲ್ಪ ದಿನ ಯಾವುದಾದರೂ ಕಾರಣದಿಂದ ಗಮನಿಸಲು ಆಗದೆ ಇದ್ದಾಗ ಕರೆ ಕಟ್ಟು ಕೊಂಡಿದ್ದರೆ ಈಝಿಯಾಗಿ ಕ್ಲೀನ್ ಮಾಡಬಹುದು. ಯಾವುದೇ ರೀತಿ ಟೆನ್ಶನ್ ಬೇಡ, ಈ ಟ್ರಿಕ್ ಟ್ರೈ ಮಾಡಿದ ನಂತರ ನೀವೇ ಆಶ್ಚರ್ಯ ಪಡುತ್ತೀರಿ, ಆ ಬಕೆಟ್ ಗೆ ಹೊಸ ಲುಕ್ ಬಂದಿರುತ್ತದೆ.
ಅನ್ಯಾಯವಾಗಿ ಈ ಗಲೀಜು ನೋಡಿ ಹೊಸ ಬಕೆಟ್ ಬಿಸಾಕುತ್ತಿದ್ದೆ ಸದ್ಯ ಅದರ ಹೊಸತನ ಹಾಗೆ ವಾಪಸ್ ಬಂತು ಎನ್ನುವ ಸಮಾಧಾನವು ಸಿಗುತ್ತದೆ. ನೀವು ಏನು ಮಾಡಬೇಕು ಎಂದರೆ ಆ ಬಕೆಟ್ ಗೆ ಫ್ಲೋರ್ ಕ್ಲೀನ್ ಮಾಡುವ ಹಾರ್ಪಿಕ್ ಪೂರ್ತಿ ಸ್ಪ್ರೆಡ್ ಮಾಡಬೇಕು. ಬಕೆಟ್ ಮೇಲೆ ಒಳಗಡೆ ಚೆನ್ನಾಗಿ ಸ್ಪ್ರೆಡ್ ಮಾಡಿ ಕನಿಷ್ಠ 1 ತಾಸು ಹಾಗೆ ಇಡಬೇಕು.
ಹಾರ್ಪಿಕ್ ನೀರು ನೀರಾಗಿ ಇರುವುದರಿಂದ ಹರಿದು ಹೋಗುತ್ತಿರುತ್ತದೆ ಹೀಗಾಗಬಾರದು ಎಂದರೆ ಅದು ಬಕೆಟ್ ನಲ್ಲೇ ಉಳಿದು ಕಲೆ ತೆಗಿಯಬೇಕು ಎಂದರೆ ಹಾರ್ಪಿಕ್ ಹಾಕಿದ ಮೇಲೆ ಒಂದು ನ್ಯೂಸ್ ಪೇಪರ್ ತೆಗೆದು ಒಳಮುಖವಾಗಿ ಹಾಗೂ ಮೇಲ್ಮುಖವಾಗಿ ಬಕೆಟ್ ಗೆ ಅಂಟಿಸಬೇಕು ಆಗ ಅದು ವೇಸ್ಟ್ ಆಗುವುದಿಲ್ಲ ಮತ್ತು ಚೆನ್ನಾಗಿ ಹಿಡಿಯುತ್ತದೆ.
ಈ ಸುದ್ದಿ ಓದಿ:-ವಾರದಲ್ಲಿ ಈ ಮೂರು ದಿನ ಹೊಸ ಬಟ್ಟೆ ಧರಿಸಿದರೆ ಧನಲಾಭ.!
ಈಗ ಒಂದು ಸ್ಟೀಲ್ ಸ್ಕ್ರಬ್ಬರ್ ಸಹಾಯದಿಂದ ಒಂದು ಕಡೆಯಿಂದ ಬಕೆಟ್ ಚೆನ್ನಾಗಿ ಉಜ್ಜುತ್ತಾ ಬರಬೇಕು ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಸುತ್ತಲು ಚೆನ್ನಾಗಿ ಉಜ್ಜಿ. ಒಂದು ಬಾರಿ ಉಜ್ಜಿ ಆದ ಮೇಲೆ ನೀರು ಹಾಕಿ ತೊಳೆಯಿರಿ. ಈಗ ಸುಮಾರಾಗಿ ಚೆನ್ನಾಗಿ ಕಾಣುತ್ತದೆ. ಅಲ್ಲಲ್ಲಿ ಅದೇ ರೀತಿ ಬರೆಗಳು ಉಳಿದಿರುವುದು ಕಾಣುತ್ತದೆ ಮತ್ತೆ ಅದಕ್ಕೆ ಹಾರ್ಪಿಕ್ ಹಾಕಿ ಉಜ್ಜಿ ತೊಳೆಯಿರಿ.
ಈ ರೀತಿ ಮಾಡಿದರೆ ಎಷ್ಟೇ ನೀರಿನ ಕಲೆ ಆಗಿದ್ದರು ಉಪ್ಪು ನೀರಿನ ಕಲೆಯಾಗಿ ಬಕೆಟ್ ಬಣ್ಣ ಬದಲಾಗಿದ್ದರು ನಿಮ್ಮ ಹೊಸ ಬಕೆಟ್ ಎಷ್ಟು ಹಳೇಯದರ ರೀತಿ ಕಾಣುತ್ತಿದ್ದರು ಅದೆಲ್ಲದಕ್ಕೂ ಮುಕ್ತಿ ಸಿಗುತ್ತದೆ. ಒಮ್ಮೆ ಈ ಟಿಪ್ ಟ್ರೈ ಮಾಡಿ ಯೂಸ್ಫುಲ್ ಅನಿಸಿದರೆ ಇತರರಿಗೂ ಕೂಡ ಈ ಟಿಪ್ ಬಗ್ಗೆ ಹೇಳಿ.