ಲಿಯಾನ್ ಯೋಯಿ ಎನ್ನುವ ಚೀನಾ ದೇಶದ ಈ ಹುಡುಗನ ಬಗ್ಗೆ ನೀವು ಕೇಳಿರಬಹುದು, ಒಂದು ವೇಳೆ ಈ ಹುಡುಗ ಮಾಡಿರುವ ಸಾಧನೆ ಬಗ್ಗೆ ವಿಷಯ ಗೊತ್ತಿಲ್ಲ ಎಂದರೆ ಇವನ ಸಾಧನೆ ತಿಳಿದ ಬಳಿಕ ನೀವು ಇದ್ದಲ್ಲಿಯೇ ಕೂಡ ಇವನಿಗೆ ನಮಸ್ಕರಿಸುತ್ತೀರಿ. ಅಂತಹ ಒಂದು ಸಾಧನೆಯನ್ನು ತನ್ನ 11ನೇ ವಯಸ್ಸಿಗೆ ಮಾಡಿ ಮುಗಿಸಿ ಹೋಗಿದ್ದಾನೆ ಈತ. ಇಂದು ಲಿಯಾನ್ ಯೋಯಿ ನಮ್ಮೆಲ್ಲರೊಂದಿಗೆ ಇಲ್ಲ ಆದರೆ ಅವನು ಮಾಡಿರುವ ಆ ಒಂದು ಕೆಲಸದಿಂದ ಇಂದಿಗೂ ಸಹ ಅವನನ್ನು ನೆನೆಯುವಂತಾಗಿದೆ.
2014 ರಲ್ಲಿ ಲಿಯಾನ್ ಕೊನೆ ಉಸಿರೆಳೆದಿದ್ದ ಆದರೆ ಅಂದು ಒಂದು ಆಸ್ಪತ್ರೆಯ 12 ಡಾಕ್ಟರ್ ಗಳು ಅವನ ಮೃತ ದೇಹದ ಮುಂದೆ ತಲೆಬಾಗಿ ನಿಂತಿದ್ದರು. ಅದಕ್ಕೆ ಕಾರಣ ಏನು ಎಂದರೆ ಅಷ್ಟು ಚಿಕ್ಕ ವಯಸ್ಸಿಗೆ ಆತ ಯಾರು ಮಾಡಿರದಂತಹ ಸಾಧನೆ ಮಾಡಿ ಈ ಲೋಕದ ಯಾತ್ರೆ ಮುಗಿಸಿಕೊಂಡಿದ್ದ. ಲಿಯಾನ್ ಯೋಯಿ ಕೂಡ ಎಲ್ಲಾ ಮಕ್ಕಳಂತೆ, ಚೆನ್ನಾಗಿ ಆಡಿಕೊಂಡು ಓದಿಕೊಂಡು ಬೆಳೆಯುತ್ತಿದ್ದ ಆದರೆ ಆತನ 9ನೇ ವಯಸ್ಸಿನಲ್ಲಿ ವಿಪರೀತವಾದ ಜ್ವರ ಕಾಡುತ್ತದೆ.
ಮೊದಲಿಗೆ ಸಾಮಾನ್ಯ ಜ್ವರ ಎಂದು ನಿರ್ಲಕ್ಷಿಸಿ ಸಾಮಾನ್ಯ ಚಿಕಿತ್ಸೆ ಕೊಡಿಸಿದರು ನಂತರದಲ್ಲಿ ಅದು ಗುಣವಾಗದೆ ಹೋದಾಗ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ದಾಗ ಆತನಿಗೆ ಕ್ಯಾನ್ಸರ್ ಅಟ್ಯಾಕ್ ಆಗಿದೆ ಎನ್ನುವುದು ತಿಳಿಯುತ್ತದೆ. ಮಗನನ್ನು ಈ ಗಂಭೀರ ಕಾಯಿಲೆಯಿಂದ ಗುಣಪಡಿಸಬೇಕು ಎಂದುಕೊಂಡು ಹೆತ್ತ ತಂದೆ ತಾಯಿ ತಮ್ಮಲ್ಲಿದ್ದ ಹಣವನ್ನೆಲ್ಲ ಚಿಕಿತ್ಸೆಗಾಗಿ ಸುರಿಯುತ್ತಾರೆ. ಆದರೆ ದೈವ ನಿರ್ಣಯ ಬೇರೆಯೇ ಇತ್ತು ಇದ್ದೊಂದ ಮನೆಯನ್ನು ಮಾರಿ ಚಿಕಿತ್ಸೆಗೆ ಹಣ ಖರ್ಚು ಮಾಡಿದರೂ ಮಗನ ಆರೋಗ್ಯದಲ್ಲಿ ಚೇತರಿಕೆ ಕಾಣಲೇ ಇಲ್ಲ.
ಲಿಯಾನ್ ಯೋಯಿ ಗೆ ಬಾಲ್ಯದಿಂದಲೂ ಕೂಡ ವಿಜ್ಞಾನಿ ಆಗಬೇಕೆಂದು ಆಸೆ. ಲಿಯಾನ್ ಯೋಯಿ ಆಸ್ಪತ್ರೆ ಸೇರಿದ ಬಳಿಕ ಅಲ್ಲಿರುವ ವೈದ್ಯರ ಸೇವೆಗಳನ್ನೆಲ್ಲ ಕಂಡು ತಾನು ಸಹ ವೈದ್ಯ ಆಗಬೇಕು ಎಂದು ಆ ಕುರಿತ ಕೆಲವು ಪುಸ್ತಕಗಳನ್ನು ಓದಲು ಶುರು ಮಾಡುತ್ತಾನೆ. ನಂತರ ಅಲ್ಲಿರುವ ಒಂದು ವಿಷಯವನ್ನು ಬಹಳ ಮನಸ್ಸಿಗೆ ತೆಗೆದುಕೊಂಡು ಆ ಕುರಿತು ಸಾಧನೆ ಮಾಡಿ ದೇಶದ ಎಲ್ಲರೂ ಇವನ ಸಾವಿನ ದಿನ ಈತನಿಗೆ ನಮಸ್ಕರಿಸುವಂತೆ ಮಾಡಿದ್ದಾನೆ.
ಈ ರೀತಿ ಪುಸ್ತಕ ಓದುತ್ತಿದ್ದಂತೆ ಅವನಿಗೆ ಒಂದು ವಿಷಯ ಆಗುತ್ತದೆ ಅದೇನೆಂದರೆ ಅಂಗಾಂಗ ದಾನ ಎನ್ನುವ ವಿಷಯ ಅರಿವಿಗೆ ಬಂದಿರುತ್ತದೆ. ವೈದ್ಯರು ತಂದೆ ತಾಯಿಯನ್ನು ಕರೆದು ಮಗ ಗುಣವಾಗುವುದು ಅನುಮಾನ ಎಂದು ಹೇಳಿದಾಗ ತಂದೆ ತಾಯಿಯನ್ನು ಹತ್ತಿರಕ್ಕೆ ಕರೆದ ಈತ ನನಗೆ ಅರಿವಿದೆ ನಾನು ಇದರ ಜೊತೆ ಹೋರಾಡಲು ಸಾಧ್ಯವಿಲ್ಲ. ಆದರೆ ನಾನು ವೈದ್ಯ ಆಗಬೇಕು ಎಂದು ಕಂಡ ಕನಸು ಮಣ್ಣಾಗೋದು ಬೇಡ, ಹಾಗಾಗಿ ನನ್ನ ಅಂಗಾಂಗ ದಾನವನ್ನು ಮಾಡಿಬಿಡಿ.
ಈ ಮೂಲಕ ನಾನು ಇತರರಲ್ಲಿ ಜೀವಿಸುತ್ತೇನೆ ಎಂದು ಹೇಳಿ ಕೆಲ ಕ್ಷಣದಲ್ಲಿಯೇ ಮರಣ ಹೊಂದುತ್ತಾನೆ. ಆಗ ವೈದ್ಯರೆಲ್ಲರೂ ಆ ಹುಡುಗನ ಕಣ್ಣು ಹೃದಯ ಕಿಡ್ನಿ ಲಿವರ್ ಸೇರಿದಂತೆ ಜೀವಂತವಾಗಿ ಆರೋಗ್ಯವಾಗಿ ಉಳಿದಿದ್ದ ಈತನ ಅಂಗಗಳನ್ನು ತೆಗೆದುಕೊಳ್ಳುತ್ತಾರೆ. ಚೀನಾ ದೇಶದಲ್ಲಿ ದೇಶಕ್ಕಾಗಿ ಮಣಿದವರಿಗೆ ಮಾತ್ರ ಈ ಪರಿಯಾಗಿ ಎಲ್ಲರೂ ತಲೆಬಾಗಿ ನಮಿಸುತ್ತಾರೆ. ಆದರೆ ಆ ಹುಡುಗ ಅಷ್ಟು ಚಿಕ್ಕ ವಯಸ್ಸಿಗೆ ಮಾಡಿದ ನಿರ್ಧಾರ ಯಾವುದೇ ವೀರನಿಗಿಂತ ಕಡಿಮೆ ಇರಲಿಲ್ಲ, ಹಾಗಾಗಿ ಆಸ್ಪತ್ರೆಯ ಸಿಬ್ಬಂದಿ, ಆತನಿಗೆ ತಲೆಬಾಗಿ ನಮಿಸಿದ್ದ ಆ ಫೋಟೋಗಳು ವಿಡಿಯೋಗಳು ಎಲ್ಲೆಡೆ ಜನಪ್ರಿಯವಾಯಿತು. ಇಂದು ಕೂಡ ಲಿಯಾನ್ ಯೋಯಿ ವಿಷಯ ಕಿವಿಗೆ ಬಿದ್ದರೆ ಎಲ್ಲರೂ ಕೂಡ ಆತನಿಗೆ ನಮಸ್ಕರಿಸುತ್ತಾರೆ.