ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಿರುವ ನಾವು ಜೀವನಕ್ಕೆ ಬಹಳ ಮುಖ್ಯವಾಗಿ ಬೇಕಾಗಿರುವ ಆಹಾರದ ಬಗ್ಗೆ ಬಹಳ ನಿರ್ಲಕ್ಷ ವಹಿಸುತ್ತಿದ್ದೇನೆ. ನಾವು ಇರುವವರೆಗೂ ಕೂಡ ಈ ದೇಹವು ನಮ್ಮ ಜೊತೆ ಸಾಥ್ ಕೊಡಬೇಕು ಎಂದರೆ ಆ ದೇಹಕ್ಕೆ ಬೇಕಾದ ಶಕ್ತಿಯನ್ನು ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ಪಡೆದುಕೊಂಡು ದೇಹವನ್ನು ಗಟ್ಟಿಮುಟ್ಟಾಗಿ ಇಟ್ಟುಕೊಳ್ಳಬೇಕು.
ಆದರೆ ಪಾಶ್ಚಾತ್ಯ ಜೀವನಶೈಲಿಗೆ ಬದಲಾಗುತ್ತಿರುವ ನಮ್ಮ ಜನತೆಯು ತಿನ್ನುವ ಆಹಾರದಿಂದ ಹಿಡಿದು ಸೇವಿಸುವ ಔಷಧಿಯವರೆಗೂ ಕೂಡ ಎಲ್ಲವೂ ಇಂಗ್ಲಿಷ್ ಮಯವಾಗುತ್ತಿದೆ. ಆಗಿನ ಕಾಲದಲ್ಲಿ ಜನರು 70ರ ಹರೆಯದಲ್ಲೂ ಕೂಡ ಆರಾಮಾಗಿ ಹೊಲಗದ್ದೆಗಳಲ್ಲಿ ದುಡಿಯುತ್ತಿದ್ದರು, ಮನೆಯ ಹೆಂಗಸರು ಕೂಡ ನೀರು ಸೇದುವುದು, ಸೌದೆ ಕಡೆಯುವುದು, ಬೀಸು ಕಲ್ಲು ಬೀಸುವುದು, ಬಟ್ಟೆ ಒಗೆಯುವುದು ಇತ್ಯಾದಿ ಕಠಿಣಿತಿ ಕಠಿಣ ಕೆಲಸಗಳನ್ನು ಸಲೀಸಾಗಿ ಮಾಡಿ ಮುಗಿಸಿ ಸುಸ್ತೇ ಇಲ್ಲದಂತೆ ಉಲ್ಲಾಸದಿಂದ ಇರುತ್ತಿದ್ದರು.
ಈಗಿನ ಕಾಲಕ್ಕೆ ಹೋಲಿಸಿಕೊಂಡರೆ ಆಗಿನ ಕಾಲದಲ್ಲಿ ಆಹಾರದ ಕೊರತೆ ಹಾಗೂ ಹಣಕಾಸಿನ ಕೊರತೆ ಹೆಚ್ಚಾಗಿತ್ತು. ಈಗ ನಾವು ಹೆಚ್ಚೆಚ್ಚು ದುಡಿಯುತ್ತಾ ಹೋದಂತೆ ತೋರಿಸಿಕೊಳ್ಳುವಿಕೆ ಹೆಚ್ಚಾಗುತ್ತಿದೆ ಹೊರತು ಮೌಲ್ಯಗಳನ್ನು ಅರಿಯುತ್ತಿಲ್ಲ. ಸ್ಪಷ್ಟ ಉದಾಹರಣೆಯೆಂದರೆ ಆಗಿನ ಕಾಲದಲ್ಲಿ ಸಾಲ ಮಾಡಿ ಆದರೂ ತುಪ್ಪ ತಿನ್ನು ಎನ್ನುವ ಗಾದೆ ಇತ್ತು, ಯಾಕೆಂದರೆ ತುಪ್ಪಕ್ಕೆ ಅಷ್ಟೊಂದು ಮಹತ್ವ ಇತ್ತು.
ಚಿಕ್ಕ ಮಕ್ಕಳಿಗೆ ಅತಿ ಹೆಚ್ಚು ತುಪ್ಪ ತಿನಿಸುವುದರಿಂದ ಮಗುವಿನ ಬೆಳವಣಿಗೆ ಚೆನ್ನಾಗಾಗುತ್ತದೆ, ಮಗುವಿನ ಸ್ನಾಯುಗಳು ಗಟ್ಟಿ ಮುಟ್ಟಾಗುವುದರಿಂದ ಹಿಡಿದು ದೇಹ ಕಾಂತಿಯುತವಾಗುವುದುವರೆಗೆ ತುಪ್ಪದಲ್ಲಿರುವ ಅಂಶಗಳು ಪೂರಕವಾಗಿರುತ್ತವೆ ಎನ್ನುವುದ ಕಾರಣದಿಂದಾಗಿ ತುಪ್ಪ ತಿನಿಸುತ್ತಿದ್ದರು ಮತ್ತು ಮನೆಯಲ್ಲಿರುವ ಎಲ್ಲರೂ ಕೂಡ ತುಪ್ಪ, ಹಾಲು, ಮೊಸರು ಮಜ್ಜಿಗೆ ಸೇವಿಸುವುದು ಪ್ರತಿ ಹೊತ್ತಿನ ಊಟದಲ್ಲೂ ಕಾಮನ್ ಆಗಿತ್ತು.
ಆದರೆ ಈಗ ಡಯಟ್ ಫ್ಯಾಟ್ ಹೆಚ್ಚು ಇತ್ಯಾದಿ ಇತ್ಯಾದಿ ಕಾರಣಗಳನ್ನು ಹೇಳಿಕೊಂಡು ತುಪ್ಪ ತಿನ್ನುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಆಗಿನ ಕಾಲದಲ್ಲಿ ಹರಿಯುತ್ತಿದ್ದ ಹೊಳೆನೀರು ಅಥವಾ ಯಾವುದೋ ನಿಂತ ಕೆರೆಯ ನೀರನ್ನು ಕುಡಿದು ಆರೋಗ್ಯವಾಗಿ ಇರುತ್ತಿದ್ದರು. ಈಗ ಮನೆಯಲ್ಲಿರುವ ಸಾಕು ಪ್ರಾಣಿಗೂ RV ವಾಟರ್ ಕುಡಿಸುವ ಮಟ್ಟಕ್ಕೆ ನಮ್ಮ ಮನಸ್ಥಿತಿ ಬದಲಾಗುತ್ತಿದೆ.
ಮಕ್ಕಳಿಗೆ ನೀರು ಕುಡಿಸುವುದಕ್ಕೆ ನಾವು ಬಹಳಷ್ಟು ಎದುರುತ್ತಿದ್ದೇವೆ ಎಂದೇ ಹೇಳಬಹುದು. ಈಗಿನ ಕಾಲದವರು ಆರೋಗ್ಯದ ಬಗ್ಗೆ ಎಷ್ಟು ನಿರ್ಲಕ್ಷ ತೋರಿಸುತ್ತಿದ್ದಾರೆ ಎಂದರೆ ಪ್ರತಿದಿನವೂ ಕೂಡ ಒಂದು ಸೇಬು ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು ಎಂದರೆ ಸೇಬಿನ ಬೆಲೆ ಹೆಚ್ಚು ಎನ್ನುತ್ತಾರೆ ಆದರೆ ವಾರಕ್ಕೆ ಎರಡು ಮೂರು ಬಾರಿ ಪಾನಿಪುರಿ, ಕಬಾಬ್, ಪಿಜ್ಜಾ, ಬರ್ಗರ್ ತಿನ್ನುವುದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ.
ವಾಲ್ ನಟ್, ಬಾದಾಮಿ, ಗೋಡಂಬಿ ಆರೋಗ್ಯಕ್ಕೆ ಒಳ್ಳೆಯದು ಉತ್ತಮ ಆಹಾರ ಸೇವಿಸಿ ಎಂದರೆ ಬೆಲೆ ಹೆಚ್ಚು ಅನ್ನುತ್ತಾರೆ, ಅದರ ಹತ್ತರಷ್ಟು ಹಣ ಕೊಟ್ಟು ಧೂಮಪಾನ ಮಧ್ಯಪಾನ ದಂತಹ ದುಷ್ಟಗಳನ್ನು ಬೆಳೆಸಿಕೊಳ್ಳುತ್ತಾರೆ. ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವಿಸುವುದರಿಂದ ಹಣ ಉಳಿಯುತ್ತದೆ ಆರೋಗ್ಯವಾಗಿರುತ್ತೇವೆ ಎನ್ನುವುದು ಗೊತ್ತು.
ಆದರೂ ಹೊರಗೆ ಹೋಗಿ ಊಟ ಮಾಡುವುದಕ್ಕಿಂತ ಫೋಟೋವನ್ನು ಸ್ಟೇಟಸ್ ಗೆ ಹಾಕಿಕೊಂಡು ಶೋಕಿ ಮಾಡುವುದರಲ್ಲಿ ಜನ ಹೆಚ್ಚು ಕುಳಿತು ಖುಷಿ ಕಾಣುತ್ತಿದ್ದಾರೆ. ಆದರೆ ನಾಲ್ಕು ನಿಮಿಷಗಳ ನಾಲಿಗೆಯ ರುಚಿ 40 ವರ್ಷಗಳ ಆಯಸ್ಸನ್ನು ಕಿತ್ತುಕೊಳ್ಳುತ್ತದೆ ಎನ್ನುವುದು ಸರಿಯಾಗಿ ಮನದಟ್ಟಾಗಿಲ್ಲ.
ಆರೋಗ್ಯದ ಬಗ್ಗೆ ಮತ್ತು ದೇಹದ ಬಗ್ಗೆ ಗೌರವ ಇರುವವರು ತಿನ್ನುವ ಆಹಾರದ ಬಗ್ಗೆ ಹೆಚ್ಚು ಗಮನಹರಿಸಬೇಕು.
ಆದಷ್ಟು ಜಂಕ್ ಫುಡ್ ಗಳಿಂದ, ಆಲ್ಕೋಹಾಲಿಂದ, ಬೀಡಿ, ಸಿಗರೇಟ್, ಗುಟ್ಕಾ ಇತ್ಯಾದಿ ದು’ಷ್ಚ’ಟಗಳಿಂದ, ಪಾಕೆಟ್ ಫುಡ್ ಗಳಿಂದ ದೂರ ಇದ್ದಷ್ಟು ಆಯಸ್ಸುವೃದ್ಧಿ ಆಗುತ್ತದೆ.
ಹಾಗೆ ಸಣ್ಣ ಪುಟ್ಟ ಖಾಯಿಲೆಗಳು ಕೂಡ ಮಾತ್ರೆ ಸೇವಿಸುವುದಕ್ಕೆ ಹೋಗುವುದು ಕೂಡ ತಪ್ಪು. ಸಾಧ್ಯವಾದಷ್ಟು ಆಯುರ್ವೇದಿಕ್ ಮನೆಮದ್ದುಗಳಿಂದ ಗುಣಪಡಿಸಿಕೊಳ್ಳಬಹುದಾದ ಸಮಸ್ಯೆಗಳನ್ನು ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ನಿಧಾನವಾಗಿ ಸುಧಾರಿಸಿಕೊಳ್ಳುವುದಕ್ಕೆ ಪ್ರಯತ್ನಿಸುವುದು ಬಹಳ ಒಳ್ಳೆಯ ಆಪ್ಷನ್. ಈ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.