ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಟೊಮೇಟೊ ಹಣ್ಣು ಇದ್ದೇ ಇರುತ್ತದೆ ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಟೊಮೆಟೊ ಹಣ್ಣನ್ನು ಎರಡರಿಂದ ಮೂರು ದಿನಗಳ ಕಾಲ ಹಾಗೆ ಇಟ್ಟರೆ ಅದು ಕೊಳೆತು ಹೋಗುವ ಸಾಧ್ಯತೆ ಇರುತ್ತದೆ ಅಂತಹ ಒಂದು ಸಂದರ್ಭದಲ್ಲಿ ನಾವು ಅದನ್ನು ಆಚೆ ಬಿಸಾಡುತ್ತೇವೆ.
ಆದರೆ ಇನ್ನು ಮುಂದೆ ಕೊಳೆತ ಟೊಮೇಟೊ ಹಣ್ಣನ್ನು ಆಚೆ ಬಿಸಾಡುವ ಅವಶ್ಯಕತೆ ಇಲ್ಲ. ಬದಲಿಗೆ ಅದನ್ನು ಈ ವಿಧವಾಗಿ ಉಪಯೋಗಿಸಿದರೆ ಅದು ನಿಮ್ಮ ಮನೆಯ ದೊಡ್ಡ ಕೆಲಸಕ್ಕೆ ಉಪಯೋಗವಾಗುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ಟೊಮೇಟೊ ಹಣ್ಣು ಕೊಳೆತಿದ್ದರೆ ಅದನ್ನು ಯಾವ ಒಂದು ವಿಧಾನವನ್ನು ಅನುಸರಿಸಿ ಅದನ್ನು ಯಾವ ಕೆಲಸಕ್ಕೆ ಉಪಯೋಗಿಸ ಬೇಕು.
ಹಾಗೂ ಅದನ್ನು ಉಪಯೋಗಿಸುವ ಮುನ್ನ ನಾವು ಯಾವ ಕೆಲವು ವಸ್ತುಗಳನ್ನು ಅದರಲ್ಲಿ ಹಾಕಿ ಆನಂತರ ಅದನ್ನು ಉಪಯೋಗಿಸಬೇಕು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ತಿಳಿದುಕೊಳ್ಳೋಣ.
* ಮೊದಲು ಕೊಳೆತಿರುವಂತಹ ಟೊಮ್ಯಾಟೋ ಹಣ್ಣನ್ನು ಸಣ್ಣದಾಗಿ ಕತ್ತರಿಸಿ ಮಿಕ್ಸಿ ಜಾರಿನಲ್ಲಿ ಹಾಕಿ ನುಣ್ಣನೆಯ ರೂಪಿಕೊಳ್ಳಬೇಕು
ಯಾವುದೇ ರೀತಿಯ ನೀರನ್ನು ಸಹ ಮಿಶ್ರಣ ಮಾಡದೆ ಅದನ್ನು ಪೇಸ್ಟ್ ರೀತಿ ತಯಾರಿಸಿಕೊಳ್ಳಬೇಕು. ಅದನ್ನು ಒಂದು ಚಿಕ್ಕ ಬೌಲಿಗೆ ಹಾಕಿ ಅದಕ್ಕೆ ಒಂದು ಚಮಚ ಅಡುಗೆ ಸೋಡಾ ಹಾಗೂ ಒಂದು ಚಮಚ ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
* ಮನೆಯಲ್ಲಿ ನಾವು ಬೆಳ್ಳಿ ಪದಾರ್ಥಗಳನ್ನು ಉಪಯೋಗಿಸುವುದರಿಂದ ಅದು ಸ್ವಲ್ಪ ದಿನ ಕಳೆದರೆ ಅದು ಕಪ್ಪಾಗುವ ಸಾಧ್ಯತೆ ಇರುತ್ತದೆ ಇಂತಹ ಒಂದು ಸಂದರ್ಭದಲ್ಲಿ ಬೆಳ್ಳಿ ಸಾಮಾನುಗಳನ್ನು ನಾವು ಮೇಲೆ ತಯಾರಿಸಿದ ಈ ಮಿಶ್ರಣದಿಂದ ಉಜ್ಜಿ ತೊಳೆದರೆ ಸಾಕು ಬೆಳ್ಳಿ ಮೇಲೆ ಇರುವಂತಹ ಕಪ್ಪು ಕೊಳೆ ಧೂಳು ಎಲ್ಲವೂ ಸಹ ಹೋಗುತ್ತದೆ. ಈ ವಿಧಾನ ಬಹಳ ಸುಲಭವಾಗಿದ್ದು ಮನೆಯಲ್ಲಿರುವಂತಹ ಮಹಿಳೆಯರು ಈ ವಿಧಾನವನ್ನು ಅನುಸರಿಸುವುದು ಉತ್ತಮ.
* ಅದೇ ರೀತಿಯಾಗಿ ದೇವರ ಮನೆಯಲ್ಲಿ ಇರುವಂತಹ ಪೂಜಾ ಸಾಮಗ್ರಿಗಳನ್ನು ಅಂದರೆ ತಾಮ್ರ ಹಿತ್ತಾಳೆ ಪಾತ್ರೆಗಳನ್ನು ಸಹ ನಾವು ಇದರಲ್ಲಿ ಸ್ವಚ್ಛ ಮಾಡಬಹುದು. ಈ ಒಂದು ಪೇಸ್ಟ್ ಅನ್ನು ಹಚ್ಚಿ ಎರಡ ರಿಂದ ಮೂರು ನಿಮಿಷ ಹಾಗೆ ಬಿಟ್ಟು ಆನಂತರ ಎಲ್ಲಾ ಕೊಳೆ ಅಂಶವು ಕೂಡ ದೂರವಾಗುತ್ತದೆ.
* ಅದೇ ರೀತಿಯಾಗಿ ಅಡುಗೆ ಮನೆಯಲ್ಲಿ ನಾವು ಸದಾ ಕಾಲ ಪಾತ್ರೆ ಯನ್ನು ಸಿಂಕ್ ನಲ್ಲಿ ತೊಳೆಯುವುದರಿಂದ ಅಲ್ಲಿ ನಾನಾ ರೀತಿಯ ಬ್ಯಾಕ್ಟೀರಿಯಾ ಗಳು ಕೊಳೆಗಳು ಇರುತ್ತದೆ. ಇದನ್ನು ದೂರ ಮಾಡುವುದಕ್ಕೂ ಕೂಡ ಈ ಒಂದು ಪೇಸ್ಟ್ ಸಹಾಯ ಮಾಡುತ್ತದೆ. ಮೊದಲು ಸಿಂಕ್ ಅನ್ನು ಚೆನ್ನಾಗಿ ತೊಳೆದು ಅದಕ್ಕೆ ಈ ಒಂದು ಪೇಸ್ಟ್ ಅನ್ನು ಹಚ್ಚಿ ಐದರಿಂದ ಹತ್ತು ನಿಮಿಷ ಹಾಗೆ ಬಿಡಬೇಕು. ಆನಂತರ ಒಂದು ಕಡೆಯಿಂದ ಚೆನ್ನಾಗಿ ಉಜ್ಜಿದರೆ ಸಾಕು ಸಿಂಕ್ ನಲ್ಲಿ ಇರುವಂತಹ ಎಲ್ಲಾ ಕೊಳೆ ಅಂಶವು ಕೂಡ ದೂರವಾಗುತ್ತದೆ.
* ಇನ್ನು ಬಾತ್ರೂಮ್ ನಲ್ಲಿ ನಾವು ಟ್ಯಾಪ್ ಗಳನ್ನು ತೊಳೆಯುವುದಕ್ಕೂ ಕೂಡ ಈ ಒಂದು ಪೇಸ್ಟ್ ಅನ್ನು ಉಪಯೋಗಿಸಬಹುದು. ವಾರದಲ್ಲಿ ಒಮ್ಮೆ ಈ ಒಂದು ವಿಧಾನವನ್ನು ಮಾಡಿ ಅನುಸರಿಸುವುದರಿಂದ ಅದರಲ್ಲಿ ಇರುವಂತಹ ಕೊಳೆಯನ್ನು ಸಹ ಇದು ಸಂಪೂರ್ಣವಾಗಿ ದೂರ ಮಾಡುತ್ತದೆ.