ಪ್ರತಿಯೊಬ್ಬರಿಗೂ ಕೂಡ ಪಾತ್ರೆ ತೊಳೆಯುವಂತಹ ಕೆಲಸ ಎಂದರೆ ಮುಖ ಮೇಲೆ ಮಾಡುತ್ತಾರೆ. ಏಕೆಂದರೆ ಉಜ್ಜಿ ತಿಕ್ಕಿ ತೊಳೆಯುವಂತಹ ಕೆಲಸ ಅದಾಗಿರುವುದರಿಂದ ಯಾರೂ ಕೂಡ ಈ ಕೆಲಸ ಮಾಡುವುದಕ್ಕೆ ಮುಂದೆ ಬರುವುದಿಲ್ಲ. ಆದರೆ ನಾವು ಎಷ್ಟೇ ಕಷ್ಟ ಆದರೂ ಕೂಡ ಅಡುಗೆ ಮನೆಯಲ್ಲಿ ಇರುವಂತಹ ಪಾತ್ರೆಗಳನ್ನು ಸ್ವಚ್ಛ ಮಾಡಬೇಕು.
ಇಂತಹ ಒಂದು ಸಂದರ್ಭದಲ್ಲಿ ನಾವು ಪಾತ್ರೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡುವುದಕ್ಕೆ ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದಷ್ಟು ಡಿಶ್ ವಾಷರ್ ಗಳನ್ನು ಉಪಯೋಗಿಸುತ್ತಿರುತ್ತೇವೆ. ಆದರೆ ಕೆಲ ವೊಂದಷ್ಟು ಜನ ಇವುಗಳನ್ನು ಉಪಯೋಗಿಸುವುದರಿಂದ ಅವರ ಕೈಗಳಲ್ಲಿ ತುರಿಕೆ ಕಾಣಿಸಿ ಕೊಳ್ಳುತ್ತಿರುತ್ತದೆ. ಆದ್ದರಿಂದ ಅವರು ಮತ್ತೆ ಯಾವ ವಿಧಾನವನ್ನು ಅನುಸರಿಸಿ ಪಾತ್ರೆಯನ್ನು ತೊಳೆಯಬೇಕು ಎನ್ನುವಂತಹ ಆಲೋಚನೆಯನ್ನು ಮಾಡುತ್ತಿರುತ್ತಾರೆ.
ಈ ಸುದ್ದಿ ಓದಿ:- ವಾಷಿಂಗ್ ಮೆಷಿನ್ ಗೆ ಬಟ್ಟೆ ಹಾಕುವಾಗ ಈ ತಪ್ಪುಗಳನ್ನು ಮಾಡಬೇಡಿ.!
ಏಕೆಂದರೆ ಅವುಗಳಲ್ಲಿ ಹೆಚ್ಚಿನ ಕೆಮಿಕಲ್ ಪದಾರ್ಥಗಳನ್ನು ಉಪಯೋ ಗಿಸಿರುತ್ತಾರೆ. ಅದನ್ನು ಹೆಚ್ಚಾಗಿ ನಾವು ಉಪಯೋಗಿಸುವುದರಿಂದ ನಮ್ಮ ಚರ್ಮಕ್ಕೆ ಅದು ಕೆಲವೊಂದಷ್ಟು ಸಮಸ್ಯೆಗಳನ್ನು ಉಂಟು ಮಾಡಬಹುದು. ಆದ್ದರಿಂದ ಮಾರುಕಟ್ಟೆಗಳಲ್ಲಿ ಸಿಗುವಂತಹ ಹೆಚ್ಚಾಗಿ ಕೆಮಿಕಲ್ ಪದಾರ್ಥದಿಂದ ತಯಾರಿಸಿರುವಂತಹ ಡಿಶ್ ವಾಷರ್ ಗಳನ್ನು ಉಪಯೋಗಿಸುವುದರ ಬದಲು.
ಈಗ ನಾವು ಹೇಳುವಂತಹ ಈ ಒಂದು ಕೆಲವು ವಸ್ತುಗಳನ್ನು ಉಪಯೋಗಿಸಿ ನೀವೇ ಸ್ವತಹ ಮನೆಯಲ್ಲಿ ಡಿಶ್ ವಾಷರ್ ಅನ್ನು ತಯಾರಿಸಬಹುದು. ಹಾಗಾದರೆ ಮನೆಯಲ್ಲಿಯೇ ಸುಲಭವಾಗಿ ಹೇಗೆ ಡಿಶ್ ವಾಷರ್ ಅನ್ನು ತಯಾರಿಸುವುದು ಹಾಗೂ ಅದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
* ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಡಿಶ್ ವಾಷರ್ ಅನ್ನು ನೀವು ತಯಾರಿಸಿ ಇಟ್ಟುಕೊಳ್ಳಬಹುದು ಇದನ್ನು ನೀವು ಕೇವಲ ಪಾತ್ರೆ ತೊಳೆಯುವುದಕ್ಕೆ ಅಷ್ಟೇ ಅಲ್ಲದೆ ದೇವರ ಮನೆಯ ಪಾತ್ರೆಗಳನ್ನು ಸಹ ತೊಳೆಯಬಹುದು ಹಾಗೂ ಇನ್ನೂ ಹಲವಾರು ರೀತಿಯ ಕೆಲಸಗಳಿಗೆ ಇದನ್ನು ಉಪಯೋಗಿಸಬಹುದು ಹಾಗಾದರೆ ಈ ಒಂದು ಡಿಶ್ ವಾಷರ್ ಅನ್ನು ಹೇಗೆ ತಯಾರಿಸುವುದು ಇದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ಈಗ ತಿಳಿಯೋಣ.
ಈ ಸುದ್ದಿ ಓದಿ:- ಗಡಿಯಾರದ ಹಿಂದೆ ಇದನ್ನು ಬರೆಯಿರಿ ಖರ್ಚು 5 ರೂಪಾಯಿ ಲಾಭ ಮಾತ್ರ ಲಕ್ಷ ರೂಪಾಯಿ.!
* ಮೂರು ನಿಂಬೆಹಣ್ಣು
* ಎರಡು ಚಮಚ ಪುಡಿ ಉಪ್ಪು
* ಮೂರು ಚಮಚ ಅಡುಗೆ ಸೋಡಾ
* ಒಂದು ಶಾಂಪು
ತಯಾರಿಸುವ ವಿಧಾನ :- ಮೊದಲು ನಿಂಬೆ ಹಣ್ಣನ್ನು ಸಣ್ಣದಾಗಿ ಕತ್ತರಿಸಿ ಕೊಂಡು ಒಂದು ಲೋಟ ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ಆನಂತರ ಆ ನಿಂಬೆಹಣ್ಣನ್ನು ಮಿಕ್ಸಿ ಜಾರಲ್ಲಿ ಹಾಕಿ ಚೆನ್ನಾಗಿ ರುಬ್ಬಿ ಪೇಸ್ಟ್ ರೀತಿ ತಯಾರಿಸಿ ಅದನ್ನು ಅದೇ ನೀರಿನಲ್ಲಿ ಮಿಶ್ರಣ ಮಾಡಿಕೊಳ್ಳಬೇಕು.
ಆನಂತರ ಅದನ್ನು ಮತ್ತೆ 10 ನಿಮಿಷಗಳ ಕಾಲ ಚೆನ್ನಾಗಿ ಬಿಸಿ ಮಾಡಿ ಅದನ್ನು ಶೋಧಿಸಿಕೊಳ್ಳಬೇಕು ಶೋಧಿಸಿಕೊಂಡಂತಹ ನೀರಿಗೆ ಎರಡು ಚಮಚ ಉಪ್ಪು ಹಾಗೂ ಮೂರು ಚಮಚ ಅಡುಗೆ ಸೋಡಾ ಹಾಗೂ ಒಂದು ಚಮಚ ಶಾಂಪು ಇಷ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಬಾಟಲ್ ನಲ್ಲಿ ಶೇಖರಣೆ ಮಾಡಿಟ್ಟುಕೊಂಡು ನೀವು ಎರಡರಿಂದ ಮೂರು ತಿಂಗಳುಗಳ ತನಕ ಅದನ್ನು ಉಪಯೋಗಿಸಬಹುದು.
ಈ ಸುದ್ದಿ ಓದಿ:- ವಿಪರೀತ ಸಾಲ ಆಗಿದೆಯಾ.? ಚಿಂತೆ ಬಿಡಿ ಕೇವಲ 3 ರೂಪಾಯಿ ಇಲ್ಲಿ ಬಚ್ಚಿಡಿ ಸಾಕು 21 ದಿನದಲ್ಲೇ ಸಾಲ ತೀರುತ್ತೆ.!
ಇದು ಸಂಪೂರ್ಣವಾಗಿ ಶುದ್ಧವಾದoತಹ ಯಾವುದೇ ರೀತಿಯ ಕೆಮಿಕಲ್ ಪದಾರ್ಥಗಳನ್ನು ಉಪಯೋಗಿಸದೆ ತಯಾರಿಸಿರುವಂತಹ ಡಿಶ್ ವಾಷರ್ ಆಗಿದ್ದು ಇದನ್ನು ಉಪಯೋಗಿಸುವುದರಿಂದ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. ಬದಲಿಗೆ ಇದು ಸಂಪೂರ್ಣವಾಗಿ ನಿಮ್ಮ ಎಲ್ಲಾ ಪಾತ್ರೆಗಳನ್ನು ಸಹ ಸ್ವಚ್ಛ ಮಾಡುತ್ತದೆ. ಇದನ್ನು ನೀವು ಮೂರು ತಿಂಗಳಿಗೊಮ್ಮೆ ಅಥವಾ ಒಂದು ತಿಂಗಳಿಗೆ ಒಮ್ಮೆ ಎಷ್ಟು ಬೇಕೋ ಅಷ್ಟು ಅಳತೆಗೆ ತಯಾರಿಸಿಕೊಂಡು ಉಪಯೋಗಿಸುವುದು ಉತ್ತಮ.