ಆಂಜನೇಯ ಸ್ವಾಮಿ ಕಲಿಯುಗದಲ್ಲಿ ಮನುಷ್ಯನಿಗೆ ಕಷ್ಟ ಎಂದ ಕೂಡಲೇ ಕೈಹಿಡಿಯುವ ದೇವರು ಎಂದು ಹೇಳಲಾಗುತ್ತದೆ. ಯಾಕೆಂದರೆ ಮನುಷ್ಯನಿಗೂ ಆಂಜನೇಯ ಸ್ವಾಮಿಗೂ ಅವಿನಾಭಾವ ಸಂಬಂಧವಿದೆ. ಆಂಜನೇಯ ಸ್ವಾಮಿಯು ತೀಕ್ಷ್ಣ ಬುದ್ಧಿ ಉಳ್ಳವರು, ಸಾಹಸವಂತರು, ಧೈರ್ಯವಂತರು ಹಾಗೆ ಹೃದಯವಂತರು ಕೂಡ.
ಈ ಸುದ್ದಿ ಓದಿ:- ಏಪ್ರಿಲ್ 09 ರ ನಂತರ ಈ ಮೂರು ರಾಶಿಯವರಿಗೆ ರಾಜಯೋಗ, ನಿಮ್ಮ ರಾಶಿಯು ಇದೆಯೇ ಚೆಕ್ ಮಾಡಿ ತಿಳಿದುಕೊಳ್ಳಿ…
ನಿಸ್ವಾರ್ಥದಿಂದ ರಾಮಧ್ಯಾನವನ್ನೇ ಉಸಿರಾಗಿಸಿಕೊಂಡು ಬದುಕಿದ ಆಂಜನೇಯ ಸ್ವಾಮಿಗೆ ರಾಮನ ಹೆಸರು ಹೇಳಿದರೆ ಸಾಕು ಅಲ್ಲಿ ಪ್ರತ್ಯಕ್ಷರಾಗಿರುತ್ತಾರೆ ಮತ್ತು ಅವರನ್ನು ಈ ಹೆಸರಿನಿಂದ ಪ್ರಸನ್ನಗೊಳಿಸುವುದು ಬಹಳ ಸುಲಭ. ಯಾವುದೇ ಕಠಿಣ ವ್ರತ ಆಚರಣೆಗಳು ಇಲ್ಲದೆ ನಮ್ಮ ಕಷ್ಟ ಪರಿಹಾರಕ್ಕಾಗಿ ಆಂಜನೇಯನನ್ನು ಸಿಂಧೂರ ಹಾಗೂ ಶ್ರೀರಾಮನ ಹೆಸರಿನಿಂದ ಪ್ರಸನ್ನರಾಗಿಸಿ ಆಶೀರ್ವಾದ ಪಡೆಯಬಹುದು.
ಈ ಭೂಮಿ ಮೇಲೆ ಜೀವ ತಾಳಿ ಭಗವಂತನಾದ ಆಂಜನೇಯ ಸ್ವಾಮಿಗೆ ಮನುಷ್ಯನ ಕಷ್ಟಗಳು ಚೆನ್ನಾಗಿ ತಿಳಿದಿರುತ್ತವೆ. ಹಾಗಾಗಿ ಮನುಷ್ಯನಿಗೆ ಮನುಷ್ಯ ಸಹಜವಾದ ಯಾವುದೇ ಕಷ್ಟ ಬಂದರೂ ಬಹಳ ಬೇಗ ಅರ್ಥ ಮಾಡಿಕೊಂಡು ಪರಿಹಾರ ಮಾಡಿಕೊಡುತ್ತಾರೆ ಎಂದು ಹಿರಿಯರು ಹೇಳುತ್ತಾರೆ.
ಈಗಿನ ಕಾಲದಲ್ಲಿ ಮನುಷ್ಯನಿಗೆ ಇರುವ ಒಂದು ಬಹಳ ದೊಡ್ಡ ಸಮಸ್ಯೆ ಎಂದರೆ ಹಣಕಾಸಿನ ಸಮಸ್ಯೆ. ಈ ಹಣಕಾಸಿನ ತೊಡಕಿನಿಂದಾಗಿ ಆತ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ ಆ ಬಳಿಕ ಒಂದೊಂದು ಸಮಸ್ಯೆ ಆರಂಭವಾಗಿ ಒಟ್ಟಾರೆಯಾಗಿ ತನ್ನ ಉದ್ಯೋಗ ವ್ಯಾಪಾರ ಮನೆ ಮಠ ಎಲ್ಲದರಲ್ಲೂ ಆನಂದ ಕಳೆದುಕೊಳ್ಳುತ್ತಾನೆ ಬದುಕಿದ್ದಾಗಲೇ ನರಕ ನೋಡುವಂತಹ ಪರಿಸ್ಥಿತಿ ಎದುರಾಗುತ್ತದೆ.
ಈ ಸುದ್ದಿ ಓದಿ:- ಈ ಕ್ಷೇತ್ರಕ್ಕೆ ಕಾಲಿಟ್ಟರೆ ಶ್ರೀಮಂತರಾಗುವುದರಲ್ಲಿ ಅನುಮಾನವೇ ಇಲ್ಲ, ಸೈಕಲ್ ನಲ್ಲಿ ಹೋದವರು ಇಂದು ಕಾರ್ ಕೊಂಡುಕೊಂಡಿದ್ದಾರೆ.!
ಹಾಗಾಗಿ ಈ ರೀತಿ ಕಷ್ಟ ಬಂದಾಗ ತಕ್ಷಣವೇ ಈ ಪಾವಮಾನವನ್ನು ನೆನೆದು ಸಮಸ್ಯೆ ಪರಿಹರಿಸಿಕೊಳ್ಳಲು ಮಾರ್ಗ ತೋರಿಸುವುದಕ್ಕಾಗಿ ಪ್ರಾರ್ಥನೆ ಮಾಡಿ. ಆಂಜನೇಯನನ್ನು ಪೂಜೆ ಮಾಡಿದವರಿಗೆ ಏನು ಕಷ್ಟ ನೀಡುವುದಿಲ್ಲ ಎಂದು ಶನೇಶ್ವರ ಸ್ವಾಮಿಯು ಕೂಡ ಹೇಳಿದ್ದಾರೆ ಹಾಗಾಗಿ ನಿಮ್ಮ ಅದೃಷ್ಟ ಸರಿ ಹೋಗಬೇಕು ಹಣೆಬರಹ ಗಟ್ಟಿ ಆಗಬೇಕು ಎಂದರೆ ಮೊದಲಾಗಿ ನಿಮ್ಮ ಸಾಲ ತೀರಬೇಕು ಎಂದರೆ ಒಂದು ಮಂಗಳವಾರದ ದಿನದಂದು ಈಗ ನಾವು ಹೇಳುತ್ತಿರುವ ಈ ಸರಳ ಆಚರಣೆ ಮಾಡಿ.
ನೀವು ಮನೆ ಶುದ್ಧ ಮಾಡಿಕೊಂಡು ನೀವು ಸ್ನಾನ ಮಾಡಿ ಮಡಿಯುಟ್ಟು ದೇವರ ಕೋಣೆಯಲ್ಲಿ ಕುಳಿತು ಶ್ರೀರಾಮ ಆಂಜನೇಯ ನಿಮ್ಮ ಮನೆದೇವರು ಇಷ್ಟ ದೇವರು ಎಲ್ಲರನ್ನು ನೆನೆದು ಪೂಜೆ ಮಾಡಿ. ದೀಪದ ಬೆಳಕಿನಲ್ಲಿ ಭಗವಂತನನ್ನು ನೆನೆಯುತ್ತಾ ನಿಮ್ಮ ಕಷ್ಟಗಳನೆಲ್ಲ ಹೇಳಿಕೊಳ್ಳಿ, ನಂತರ 11 ವೀಳ್ಯದೆಲೆ, 11 ಅಡಿಕೆ, ಕೇಸರಿ ಸಿಂಧೂರ ಮತ್ತು ಕೆಂಪು ದಾರ ಇವಿಷ್ಟು ಸಿದ್ಧಪಡಿಸಿಕೊಳ್ಳಿ.
ಈ ಸುದ್ದಿ ಓದಿ:- 3 ಒಲೆ ಇರುವ ಗ್ಯಾಸ್ ಸ್ಟವ್ ಬಳಸುವವರು ತಪ್ಪದೆ ನೋಡಿ.!
ಒಂದೊಂದು ವೀಳ್ಯದೆಲೆ ಮೇಲೂ ಕೂಡ ಕೇಸರಿ ಸಿಂಧೂರದಿಂದ ಶ್ರೀರಾಮ ಎಂದು ಬರೆಯಿರಿ. ಅಡಿಕೆಗೂ ಕೂಡ ಕೇಸರಿ ಹಚ್ಚಿ ಒಂದೊಂದು ಎಲೆ ಮೇಲೆ ಒಂದೊಂದು ಅಡಿಕೆ ಇಟ್ಟು ಪಾನ್ ರೀತಿ ಮಡಚಿಕೊಳ್ಳಿ ಇವುಗಳನ್ನು ಕೆಂಪು ದಾರದಿಂದ ಸುತ್ತಿ ಹಾರ ಮಾಡಿಕೊಳ್ಳಿ ಇದನ್ನು ನಿಮ್ಮ ಮನೆಯಲ್ಲಿರುವ ಆಂಜನೇಯನ ವಿಗ್ರಹ ಅಥವಾ ಆಂಜನೇಯನ ಫೋಟೋಗೆ ಹಾಕಿ ಭಕ್ತಿಯಿಂದ ಆರಾಧನೆ ಮಾಡಿ.
11 ಬಾರಿ ಹನುಮಾನ್ ಚಾಲೀಸವನ್ನು ಪಡಿಸಿ ಮತ್ತು 11 ದಿನಗಳವರೆಗೆ ಪ್ರತಿನಿತ್ಯವೂ ಈ ಪೂಜೆಯನ್ನು ಮುಂದುವರಿಸಿ ಅಥವಾ 11 ವಾರಗಳವರೆಗೂ ಕೂಡ ಮಾಡಬಹುದು. ಈ ರೀತಿ ಮಾಡಿದರೆ ನಿಮ್ಮ ವ್ರತ ಮುಗಿಯುವುದರ ಒಳಗೆ ನಿಮ್ಮ ಸಮಸ್ಯೆ ಪರಿಹಾರ ಆಗುವುದರಲ್ಲಿ ಯಾವುದೇ ಅನುಮಾನ ಬೇಡ. ಶ್ರದ್ಧಾ ಭಕ್ತಿಯಿಂದ ಈ ವ್ರತ ಅನುಸರಿಸಿ ಹಣಕಾಸಿನ ಪರಿಸ್ಥಿತಿ ಉತ್ತಮಗೊಳಿಸಿಕೊಳ್ಳಿ.