Home Useful Information ಪತಿ-ಪತ್ನಿಯರಿಗೆ ವಿಶೇಷ ಸೂಚನೆಗಳು, ಪ್ರತಿ ದಂಪತಿಗಳು ತಿಳಿದುಕೊಳ್ಳಬೇಕಾದ ವಿಷಯ ಇದು, ಇದನ್ನು ಅರಿತವರ ಮನೆ ನಂದನವನವಾಗುತ್ತದೆ.!

ಪತಿ-ಪತ್ನಿಯರಿಗೆ ವಿಶೇಷ ಸೂಚನೆಗಳು, ಪ್ರತಿ ದಂಪತಿಗಳು ತಿಳಿದುಕೊಳ್ಳಬೇಕಾದ ವಿಷಯ ಇದು, ಇದನ್ನು ಅರಿತವರ ಮನೆ ನಂದನವನವಾಗುತ್ತದೆ.!

0
ಪತಿ-ಪತ್ನಿಯರಿಗೆ ವಿಶೇಷ ಸೂಚನೆಗಳು, ಪ್ರತಿ ದಂಪತಿಗಳು ತಿಳಿದುಕೊಳ್ಳಬೇಕಾದ ವಿಷಯ ಇದು, ಇದನ್ನು ಅರಿತವರ ಮನೆ ನಂದನವನವಾಗುತ್ತದೆ.!

 

ಮನೆಯಲ್ಲಿ ಕ’ಲ’ಹ ಬರಲು, ಜ’ಗ’ಳ’ವಾಗಲು ಸಣ್ಣ ಪುಟ್ಟ ಮನಸ್ತಾಪಗಳಿಂದ ಇಬ್ಬರು ಬೇರೆಯಾಗುವ ಮಟ್ಟಕ್ಕೆ ಹೋಗಲು ಚಿಕ್ಕ ಚಿಕ್ಕ ವಿಷಯಗಳು ಕಾರಣವಾಗಿರುತ್ತವೆ. ಕೆಲವೊಮ್ಮೆ ಪರಿಸ್ಥಿತಿ ಕೈಮೀರಿ ಹೋದಮೇಲೆ ಪಶ್ಚಾತಾಪ ಪಡುವುದಕ್ಕಿಂತ ಬೇರೆಯವರ ಉದಾಹರಣೆಗಳನ್ನು ನೋಡಿ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.

ಯಾಕೆಂದರೆ ಎಲ್ಲ ತಪ್ಪುಗಳನ್ನು ನಾವೇ ಮಾಡಿ ಕಲಿಯುವಷ್ಟು ಬದುಕು ಸುದೀರ್ಘವಾಗಿಲ್ಲ ಹಾಗಾಗಿ ಪತಿ-ಪತ್ನಿ ಮಧ್ಯೆ ಅನ್ಯೋನ್ಯತೆ ಹೆಚ್ಚಾಗಲು ಹಾಗೂ ಬಿರುಕಾಗದಂತೆ ಬಾಂಧವ್ಯ ಕಾಪಾಡಿಕೊಳ್ಳಲು ಇಬ್ಬರು ಈ ವಿಚಾರಗಳನ್ನು ಅರಿತುಕೊಳ್ಳಬೇಕು.

* ಹೊರಗಡೆ ದುಡಿಯಲು ಹೋಗುವ ಗಂಡಸರಿಗೆ ಸಾವಿರಾರು ಸಮಸ್ಯೆಗಳು ಇದ್ದೇ ಇರುತ್ತವೆ, ಹಾಗಾಗಿ ಪತ್ನಿ ಯಾವಾಗಲೂ ಗಂಡನೊಂದಿಗೆ ಸಮಯಮದಿಂದ ಮಾತನಾಡಬೇಕು. ಇದು ಪತ್ನಿಗೆ ಮಾತ್ರವಲ್ಲದೆ ಪತಿಗೂ ಅನ್ವಯಿಸುತ್ತದೆ. ಪತ್ನಿಗೂ ಕೂಡ ಅವರದ್ದೇ ಆದ ಸಮಸ್ಯೆಗಳು ಇರುತ್ತವೆ, ಹಾಗಾಗಿ ಯಾವುದೋ ಟೆನ್ಶನ್ ನ್ನು ತಂದು ಹೆಂಡತಿ ಮೇಲೆ ಹಾಕುವುದನ್ನು ಮಾಡಬಾರದು.

* ಪತಿ ಮನೆಗೆ ಬರುತ್ತಿದ್ದಂತೆ ಸಮಸ್ಯೆಗಳ ಪಟ್ಟಿ ಹಿಡಿದುಕೊಂಡು ನಿಲ್ಲಬೇಡಿ. ಮನೆಗೆ ಬಂದವರನ್ನು ಸ್ವಾಗತಿಸಿ, ಅವರಿಗೆ ವಿಶ್ರಾಂತಿ ಮಾಡಲು ಸಮಯ ಕೊಡಿ ನಂತರ ಸಮಯ ಸಂದರ್ಭ ನೋಡಿಕೊಂಡು ನಿಮ್ಮ ಸಮಸ್ಯೆಗಳು ಏನು ಎನ್ನುವುದೇ ಬಗ್ಗೆ ಚರ್ಚೆ ಮಾಡಿ.

* ಮನುಷ್ಯ ಎಂದ ಮೇಲೆ ತ’ಪ್ಪು ಮಾಡುವುದು ಸಹಜ, ತ’ಪ್ಪು ದಾರಿ ಹಿಡಿದಾಗ ತಿದ್ದುವ ಹಾಗೂ ಕಣ್ಣಿಟ್ಟು ಕಾಪಾಡಿಕೊಳ್ಳುವ ಜವಾಬ್ದಾರಿ ಪತ್ನಿಯದ್ದಾಗಿರುತ್ತದೆ ಮತ್ತು ಅವರಿಗೆ ಅರ್ಥವಾಗುವಂತೆ ಮತ್ತೊಮ್ಮೆ ಅವರು ಆ ತಪ್ಪನ್ನು ಮಾಡದಂತೆ ಬುದ್ದಿವಂತಿಕೆಯಿಂದ ಸರಿದಾರಿಗೆ ತರಲು ನೋಡಬೇಕು.

* ದುಡ್ಡಿದ್ದಾಗ ಗಂಡನ ಜೊತೆ ಚೆನ್ನಾಗಿರುವುದು ಆತನಿಗೆ ಆದಾಯ ಕಡಿಮೆ ಆದಾಗ ಸದಾ ಜ’ಗ’ಳ ಆಡುವುದು ಒಳ್ಳೆ ಹೆಂಡತಿ ಲಕ್ಷಣವಲ್ಲ. ಕಷ್ಟ ಸುಖ ಏನೇ ಬಂದರೂ ಪತಿಯ ಜೊತೆಗಿದ್ದು ಧೈರ್ಯ ತುಂಬಾ ಬೇಕು ಅನಾರೋಗ್ಯದ ಸಮಯದಲ್ಲಿ ಕಾಳಜಿ ಮಾಡಬೇಕು. ಇದು ಆದರ್ಶ ಪತ್ನಿ ಲಕ್ಷಣ.

* ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟ ಮೇಲೆ ಹೆಂಡತಿಗೆ ಆ ಮನೆಯೂ ಕೂಡ ಸ್ವಂತ. ಗಂಡನನ್ನು ಮಾತ್ರವಲ್ಲದೆ ಗಂಡನ ತಂದೆ ತಾಯಿಯನ್ನು ಕೂಡ ಪ್ರೀತಿಸಿ ಕಾಳಜಿ ಮಾಡಬೇಕು, ಇದು ಗಂಡನಿಗೂ ಅನ್ವಯಿಸುತ್ತದೆ ಪತ್ನಿಯ ತಂದೆ ತಾಯಿಯನ್ನು ಗೌರವಿಸುವುದು ಆತನ ಕರ್ತವ್ಯ.

* ಪತಿಗೆ ಗೌರವವನ್ನು ಕೊಡಿ ಅವರ ಭಾವನೆಗಳಿಗೆ ಸ್ಪಂದಿಸಿ ಅವರ ನಿರ್ಧಾರಗಳಿಗೆ ಜೊತೆಯಾಗಿ. ಈ ರೀತಿ ಪತ್ನಿಯಾದವಳು ನಡೆದುಕೊಂಡರೆ ಪತಿಗೆ ಏನನ್ನಾದರೂ ಜಯಿಸಲು ಧೈರ್ಯ ಬರುತ್ತದೆ.

* ಸಣ್ಣಪುಟ್ಟ ವಿಷಯಗಳಿಗೂ ಅನುಮಾನ ಪಡುವುದು, ಎಲ್ಲದರ ಮೇಲೂ ಕುತೂಹಲ ತೋರಿಸುವುದು ಈ ರೀತಿ ಮಾಡುವುದು ಗಂಡಂದಿರಿಗೆ ಇಷ್ಟ ಆಗುವುದಿಲ್ಲ. ಇದೇ ರೀತಿ ಹೆಂಡತಿಗೂ ಸ್ವಾತಂತ್ರ್ಯ ಬೇಕು. ಆದರೆ ಇಬ್ಬರೂ ಕೂಡ ಒಬ್ಬರ ನಂಬಿಕೆಯನ್ನು ಇನ್ನೊಬ್ಬರು ಮುರಿಯಬಾರದು. ಪರಸ್ಪರ ನಂಬಿಕೆ ಸಂಸಾರದ ರಥ ನಡೆಯುವುದಕ್ಕೆ ಗಾಲಿ ಎಂದೇ ಹೇಳಬಹುದು.

* ಪತ್ನಿಯೂ ಧರ್ಮ ಮಾರ್ಗದಲ್ಲಿ ನಡೆಯಬೇಕು ಇದರಿಂದ ಮನೆಯಲ್ಲಿರುವ ಮಕ್ಕಳು ತಾಯಿಯನ್ನು ಮೊದಲ ಗುರುವಾಗಿ ನೋಡಿ ಕಲಿಯುತ್ತಾರೆ ಮತ್ತು ಪತಿಗೂ ಕೂಡ ಪತ್ನಿಯನ್ನು ನೋಡಿ ಗೌರವ ಬರುತ್ತದೆ.

* ಹೆಣ್ಣು ಮಕ್ಕಳಿಗೆ ತಾವು ಸುಖವಾಗಿ ರಾಣಿಯಂತೆ ಇರಬೇಕು ಎನ್ನುವ ಆಸೆ ಇರುತ್ತದೆ. ನೀವು ಈ ರೀತಿ ಇರಬೇಕು ನಿಮ್ಮ ಮನೆ ಅರಮನೆ ಆಗಬೇಕು ಎಂದರೆ ಮೊದಲು ನಿಮ್ಮ ಪತಿ ರಾಜನಾಗುವಂತೆ ಅವರಿಗೆ ಜೀವನದಲ್ಲಿ ಯಶಸ್ವಿಯಾಗಲು ಸಹಕರಿಸಬೇಕು. ಅವರ ಕನಸುಗಳಿಗೆ ಆಸೆಗಳಿಗೆ ನೀವು ಆಸರೆಯಾಗಿದ್ದರೆ ನಿಮ್ಮ ಇಡೀ ಕುಟುಂಬ ಸಂತೋಷವಾಗಿರಬಹುದು.

* ಪತಿ ತನ್ನ ವ್ಯಾಪಾರದ ಅಥವಾ ಉದ್ಯೋಗದ ವಿಚಾರವನ್ನು ಕೂಡ ಮನೆಯಲ್ಲಿ ಮಾತನಾಡುವುದು ಸೂಕ್ತವಲ್ಲ ಮನೆಗೆ ಬಂದ ಮೇಲೆ ಹೆಂಡತಿ ಮಕ್ಕಳಿಗೆ ಸಮಯ ಕೊಡಬೇಕು.
* ಬಿಡುವಿದ್ದಾಗ ಪತ್ನಿಯರಿಗೆ ಮನೆ ಕೆಲಸಗಳಿಗೆ ಸಹಾಯ ಮಾಡಿ ಆಗ ಆತ್ಮೀಯತೆ ಹೆಚ್ಚಾಗುತ್ತದೆ. ಹೆಣ್ಣು ಮಕ್ಕಳಿಗೆ ದುಡಿಯುವ ಅವಕಾಶವಿದ್ದರೆ ಆಸಕ್ತಿ ಇದ್ದರೆ ಅನಿವಾರ್ಯತೆ ಇದ್ದರೆ ನೀವು ಕೂಡ ಕೆಲಸಕ್ಕೆ ಹೋಗಿ ಪತಿಯ ಕಷ್ಟಗಳಿಗೆ ನೆರವಾಗಿ.

* ಪ್ರಾಪಂಚಿಕ ಸುಖ, ಹಣ, ಬಟ, ಟೆ ಐಶಾರಾಮಿ ವಸ್ತುಗಳು ಮತ್ತು ಸೌಂದರ್ಯ ಇವುಗಳೇ ಮುಖ್ಯವಲ್ಲ ಇವುಗಳಿಗೆ ಹೆಚ್ಚು ಬೆಲೆ ಕೊಡಬೇಡಿ.
* ಗಂಡ ಕೋ’ಪಗೊಂಡಾಗ ಹೆಂಡತಿ, ಹೆಂಡತಿಗೆ ಕೋ’ಪ ಬಂದಾಗ ಗಂಡ ಸಮಾಧಾನ ಮಾಡಬೇಕು. ಇಬ್ಬರ ನಡುವೆ ಇಗೋ ಬರಬಾರದು.
* ಹೆಣ್ಣು ಮಕ್ಕಳಿಗೆ ತವರಿನ ಬಗ್ಗೆ ಅತಿಯಾದ ವ್ಯಾಮೋಹ ಇರಬಾರದು.

LEAVE A REPLY

Please enter your comment!
Please enter your name here