ನಾವು ಕೆಲವೊಂದು ಸಂದರ್ಭದಲ್ಲಿ ಎಷ್ಟೇ ಜೋಪಾನವಾಗಿ ಇದ್ದರೂ ಕೂಡ ನಾವು ನಮ್ಮ ಬಟ್ಟೆಯ ಮೇಲೆ ಕೆಲವೊಂದಷ್ಟು ಕಲೆಗಳನ್ನು ಮಾಡಿಕೊಳ್ಳುತ್ತಿರುತ್ತೇವೆ. ಯಾವುದಾದರೂ ಒಂದು ಮದುವೆ ಮನೆಗೆ ಹೋದರೆ ಅಲ್ಲಿ ಪೂಜೆ ಮಾಡುವಂತಹ ಸಂದರ್ಭದಲ್ಲಿ ಅರಿಶಿಣದ ಕಲೆ ಆಗಿರಬಹುದು.
ಎಣ್ಣೆಯ ಕಲೆ ಕೆಲವೊಂದು ಸಂದರ್ಭದಲ್ಲಿ ಅಡುಗೆ ಮಾಡುವಂತಹ ಸಂದರ್ಭದಲ್ಲಿ ಅಡುಗೆ ಎಣ್ಣೆ ಹೀಗೆ ಎಲ್ಲವನ್ನೂ ಸಹ ನಾವು ನಮ್ಮ ಬಟ್ಟೆಯ ಮೇಲೆ ನಮಗೆ ತಿಳಿಯದ ಹಾಗೆ ಕಲೆ ಮಾಡಿ ಕೊಂಡಿರುತ್ತೇವೆ. ಅದನ್ನು ದೂರ ಮಾಡುವುದಕ್ಕೆ ನಾವು ಎಷ್ಟೇ ಪ್ರಯತ್ನ ಪಟ್ಟರು ಕೂಡ ಅದು ಸಾಧ್ಯ ಗೊತ್ತಿರುವುದಿಲ್ಲ.
ಇಂತಹ ಒಂದು ಸಂದರ್ಭದಲ್ಲಿ ಆ ಒಂದು ಬಟ್ಟೆಯನ್ನು ನಾವು ಉಪಯೋಗಿಸುವುದೇ ಇಲ್ಲ ಬದಲಿಗೆ ಅದನ್ನು ಬೇರೆ ಕೆಲಸಕ್ಕೆ ಸ್ವಚ್ಛ ಮಾಡುವುದಕ್ಕೆ ಅಥವಾ ಇನ್ನೂ ಕೆಲವರು ಅದನ್ನು ಆಚೆ ಬಿಸಾಡುತ್ತಾರೆ. ಇನ್ನು ಮುಂದೆ ಇಂತಹ ಕಲೆ ಆಗಿರುವಂತಹ ಬಟ್ಟೆಯನ್ನು ಆಚೆ ಬಿಸಾ ಡುವ ಅಗತ್ಯ ಇರುವುದಿಲ್ಲ ಬದಲಿಗೆ ಅದರಲ್ಲಿ ಇರುವಂತಹ ಕೊಳೆ ಯನ್ನು ಹೇಗೆ ತೆಗೆಯಬೇಕು ಎನ್ನುವುದನ್ನು ನೀವು ತಿಳಿಯಬಹುದು.
ಹಾಗಾದರೆ ಬಟ್ಟೆಯ ಮೇಲೆ ಆಗಿರುವಂತಹ ಎಣ್ಣೆಯ ಕಲೆ ಅರಿಶಿಣದ ಕಲೆ ಅಥವಾ ಇನ್ಯಾವುದೇ ಕಲೆ ಇದ್ದರೂ ಸಹ ಅದನ್ನು ಹೇಗೆ ದೂರ ಮಾಡುವುದು ಅದನ್ನು ದೂರ ಮಾಡುವುದಕ್ಕೆ ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.
* ಯಾವುದಾದರೂ ಬಟ್ಟೆಯ ಮೇಲೆ ಟೀ ಅಥವಾ ಕಾಫಿ ಕಲೆ ಇದ್ದರೆ ಮೊದಲು ಆ ಬಟ್ಟೆಯನ್ನು ಅಗಲವಾಗಿ ಹಾಕಿ ಅದರ ಮೇಲೆ ಸ್ವಲ್ಪ ಅಡುಗೆ ಸೋಡವನ್ನು ಆ ಜಾಗಕ್ಕೆ ಹಾಕಿ ಆನಂತರ ಸ್ವಲ್ಪ ಸ್ವಲ್ಪ ವಿನಿಗರ್ ಹಾಕಿ ಆ ಒಂದು ಸ್ಥಳದಲ್ಲಿ ಮೆಲ್ಲನೆ ಉಜ್ಜಬೇಕು. ಆನಂತರ ಇದನ್ನು ಎರಡು ಗಂಟೆಗಳ ತನಕ ಹಾಗೆ ಬಿಡಬೇಕು.
ಕೊನೆಯಲ್ಲಿ ಮತ್ತೊಮ್ಮೆ ಆ ಒಂದು ಸ್ಥಳಕ್ಕೆ ಡಿಟರ್ಜೆoಟ್ ಪೌಡರ್ ಅನ್ನು ಹಾಕಿ ಮತ್ತೊಮ್ಮೆ ಉಜ್ಜಿ ಎರಡರಿಂದ ಮೂರು ಗಂಟೆಗಳ ಸಮಯ ಹಾಗೆ ಬಿಡಬೇಕು ಆನಂತರ ಕೊನೆಯಲ್ಲಿ ಒಂದು ಬ್ರಷ್ ಸಹಾಯದಿಂದ ಉಜ್ಜಿದರೆ ಸಾಕು ಬಟ್ಟೆಯ ಮೇಲೆ ಆಗಿರುವಂತಹ ಟೀ ಅಥವಾ ಕಾಫಿಯ ಕಲೆ ಸಂಪೂರ್ಣವಾಗಿ ಹೋಗುತ್ತದೆ.
ಅದಕ್ಕೂ ಮೊದಲು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ಬಟ್ಟೆಯ ಮೇಲೆ ಯಾವುದೇ ಕಲೆ ಆಗಿದೆ ಎಂದರೆ ಆ ಬಟ್ಟೆಯನ್ನು ಸಂಪೂರ್ಣವಾಗಿ ತೊಳೆಯಬಾರದು. ಬದಲಿಗೆ ಕಲೆ ಆಗಿರುವಂತಹ ಜಾಗದ ಬಟ್ಟೆಯನ್ನು ಮಾತ್ರ ಒಂದು ಕಡೆ ಮಾಡಿ ಅಲ್ಲಿ ಕಲೆಯನ್ನು ಓಗಿಸುವುದಕ್ಕೆ ಪ್ರಯತ್ನ ಪಡಬೇಕು ಬದಲಿಗೆ ಎಲ್ಲವನ್ನೂ ಸಹ ನೀರಿನಲ್ಲಿ ಅಜ್ಜುವುದರಿಂದ ಆ ಕಲೆ ಇಡೀ ಬಟ್ಟೆಗೆ ಸಾಕುವ ಸಾಧ್ಯತೆ ಇರುತ್ತದೆ.
* ಇನ್ನು ಬಟ್ಟೆಯ ಮೇಲೆ ಅರಿಶಿನದ ಕಲೆ ಆಗಿದ್ದರೆ ಆ ಒಂದು ಬಟ್ಟೆಯಲ್ಲಿ ಅರಿಶಿಣ ಆಗಿರುವಂತಹ ಜಾಗದಲ್ಲಿ ನೀರನ್ನು ಹಾಕಿ ಚೆನ್ನಾಗಿ ಅರಿಶಿನ ವನ್ನು ಆ ಬಟ್ಟೆಯಿಂದ ಬೇರ್ಪಡಿಸಬೇಕು ಆನಂತರ ಅರಿಶಿಣ ಆಗಿರುವ ಸ್ಥಳಕ್ಕೆ ಸ್ವಲ್ಪ ಡಿಟರ್ಜೆಂಟ್ ಪೌಡರ್ ಹಾಕಿ ಚೆನ್ನಾಗಿ ಉಜ್ಜಿಕೊಳ್ಳಬೇಕು.
ಆನಂತರ ಅದನ್ನು ತೊಳೆದರೂ ಇನ್ನೂ ಅರಿಶಿಣದ ಬಣ್ಣ ಹಾಗೆ ಇದೆ ಎಂದರೆ ಆ ಬಟ್ಟೆಯನ್ನು ಅಗಲವಾಗಿ ಇಟ್ಟು ಅದರ ಮೇಲೆ ಅಡಿಗೆ ಸೋಡವನ್ನು ಹಾಕಿ ಚೆನ್ನಾಗಿ ಉಜ್ಜಬೇಕು ಆನಂತರ ಇದನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಹಾಕಿದರೆ ಆ ಬಟ್ಟೆಯ ಮೇಲೆ ಇರುವಂತಹ ಅರಿಶಿನದ ಬಣ್ಣ ದೂರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.