ಅಶ್ವಿನಿ ಪುನೀತ್ ರಾಜಕುಮಾರ್ ಇವರಿಬ್ಬರೂ ಕೂಡ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದ ವಿಚಾರ ಬಹಳಷ್ಟು ಅಭಿಮಾನಿಗಳಿಗೆ ತಿಳಿದಿದೆ. ಅಪ್ಪು ಅವರು ನಮ್ಮೆಲ್ಲರನ್ನು ಕೂಡ ಆಗಲಿ 6 ತಿಂಗಳಾದರೂ ಕೂಡ ಅವರ ನೆನಪು ಈಗಲೂ ಕೂಡ ನಮ್ಮನ್ನು ಸದಾ ಕಾಡುತ್ತಿದೆ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಅಪ್ಪು ಅವರು ಇಹಲೋಕವನ್ನು ತ್ಯಜಿಸಿದ ನಂತರ ಅಪ್ಪು ಅವರು ಮಾಡುತ್ತಿದ್ದಂತ ಸಂಪೂರ್ಣ ಕೆಲಸ ಕಾರ್ಯಗಳ ಜವಾಬ್ದಾರಿಯನ್ನು ಅಶ್ವಿನಿ ಅವರು ವಹಿಸಿಕೊಂಡಿದ್ದಾರೆ. ಅಶ್ವಿನಿ ಅವರು ಅಪ್ಪು ಅವರ ಸ್ಥಾನದಲ್ಲಿ ನಿಂತುಕೊಂಡು ಇದೀಗ ಅವರು ಮಾಡುವಂತಹ ಬಹಳಷ್ಟು ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಿರುವುದು ನಾವು ನೋಡಬಹುದಾಗಿದೆ. ಅದಕ್ಕೆ ಪ್ರತಿಯಾಗಿ ಅಪ್ಪು ಅವರ ಮಾಸಿಕ ಪುಣ್ಯತಿಥಿಯ ದಿನದಂದು ಹಾಗೂ ಕಳೆದ ತಿಂಗಳು ನಡೆದಂತಹ ಡಾಕ್ಟರ್ ರಾಜಕುಮಾರ್ ಅವರ ಜನ್ಮದಿನದಂದು ಅಶ್ವಿನಿ ಅವರು ಬಡ ಮಕ್ಕಳಿಗೆ ಆಹಾರ ವಸ್ತ್ರ ಮತ್ತು ವಿದ್ಯಾಭ್ಯಾಸಕ್ಕಾಗಿ ಬೇಕಾದಂತಹ ಕೆಲವೊಂದಷ್ಟು ಸವಲತ್ತುಗಳನ್ನು ಒದಗಿಸಿ ಕೊಟ್ಟಿದ್ದರು.
ಇದರಿಂದಲೇ ನಮಗೆ ತಿಳಿಯುತ್ತದೆ ಅಶ್ವಿನಿ ಅವರು ಕೂಡ ಅಪ್ಪು ಅವರ ರೀತಿಯಲ್ಲಿ ಹಲವಾರು ರೀತಿಯಾದಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಅಂತ. ನಿಮಗೆ ಅಪ್ಪು ಅವರ ಬಗ್ಗೆ ಮಾತ್ರ ತಿಳಿದಿತ್ತು ಅಂದರೆ ಅವರು ಎಷ್ಟು ಓದಿದ್ದಾರೆ, ಅವರ ಸಿನಿಮಾ ಹಿನ್ನೆಲೆಯನ್ನು ಮತ್ತು ಅವರ ಕುಟುಂಬದ ಹಿನ್ನೆಲೆ ಏನು ಅಂತ. ಆದರೆ ಎಲ್ಲಿಯೂ ಕೂಡ ಅಶ್ವಿನಿ ಅವರ ಹಿನ್ನೆಲೆಯ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ ಇಂದು ಈ ಲೇಖನದಲ್ಲಿ ಅಶ್ವಿನಿ ಅವರ ಹಿನ್ನೆಲೆ ಮತ್ತು ಅವರ ಹುಟ್ಟೂರು ಹಾಗೂ ಅವರ ವಿದ್ಯಾಭ್ಯಾಸ ಮತ್ತು ಅವರು ಮಾಡುತ್ತಿದ್ದ ಕೆಲಸ ಎಲ್ಲದರ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಯೋಣ ಬನ್ನಿ. ಅಶ್ವಿನಿ ಅವರು ಅಪ್ಪು ಮಾಡುತ್ತಿದ್ದಂತಹ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಕೂಡ ಬೆನ್ನೆಲುಬಾಗಿ ನಿಂತು ಕೊಳ್ಳುತ್ತಿದ್ದರು. ಹೌದು ಅಶ್ವಿನಿ ಅವರು ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದರು ಆದರೆ ಈ ವಿಚಾರ ಬಹಳಷ್ಟು ಜನರಿಗೆ ತಿಳಿದಿರಲಿಲ್ಲ.
ಸಿನಿಮಾ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಆದರೆ ಸಿನಿಮಾವನ್ನು ಹೊರತುಪಡಿಸಿ ಹಲವಾರು ಕೆಲಸಗಳನ್ನು ಕೂಡ ಅಶ್ವಿನಿ ಅವರು ಮಾಡುತ್ತಿದ್ದರು. ಹೌದು ಅಪ್ಪು ಅವರ ಹೆಸರಿನಲ್ಲಿ ಹಲವಾರು ಹೋಟೆಲ್ ಗಳು ಇದ್ದವು ಈ ಹೋಟೆಲ್ ನಾ ಸಂಪೂರ್ಣ ಜವಾಬ್ದಾರಿಯನ್ನು ಅಶ್ವಿನಿ ವಹಿಸಿಕೊಂಡಿದ್ದರು. ಕೇವಲ ಹೋಟೆಲ್ ಮಾತ್ರವಲ್ಲದೆ ರಿಯಲ್ ಎಸ್ಟೇಟ್ ಬಿಸಿನೆಸ್ ಅನ್ನು ಕೂಡ ಇವರು ಮಾಡುತ್ತಿದ್ದರು ಈ ವಿಚಾರವೂ ಕೂಡ ಬಹಳಷ್ಟು ಜನರಿಗೆ ತಿಳಿದಿಲ್ಲ ಇದನ್ನು ಹೊರತು ಪಡಿಸಿ ಕೆಲವೊಂದಷ್ಟು ಕಡೆ ಹೂಡಿಕೆಯನ್ನು ಕೂಡ ಮಾಡಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ಅಪ್ಪು ಅವರು ಸಿನಿಮಾ ಕ್ಷೇತ್ರದಲ್ಲಿ ಮಾತ್ರ ಗುರುತಿಸಿಕೊಂಡಿದ್ದರು ಆದರೆ ಅಶ್ವಿನಿ ಅವರು ಇದರ ಹಿಂದೆ ಬಹಳಷ್ಟು ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದರು. ಇನ್ನು ಅಪ್ಪು ಅವರು ಆಗಿರಬಹುದು ಅಥವಾ ಅಶ್ವಿನಿ ಅವರು ಆಗಿರಬಹುದು ತಾವು ಮಾಡುವಂತಹ ಕೆಲಸ ಕಾರ್ಯದಲ್ಲಿ ಬರುವಂತಹ ಲಾಭದಲ್ಲಿ ಶೇಕಡಾ 30% ರಷ್ಟು ಭಾಗವನ್ನು ಸಮಾಜ ಸೇವೆಗೆ ಮತ್ತು ಬಡವರಿಗೆ ಉಪಯುಕ್ತವಾಗುವಂತಹ ಕೆಲಸ ಕಾರ್ಯಗಳಿಗೆ ಮೀಸಲಿಡುತ್ತಿದ್ದರು.
ಇದಕ್ಕೆ ಪ್ರತಿಯಾಗಿ ಅಪ್ಪು ಅವರು ಸಾ’ಯು’ವ ಒಂದು ತಿಂಗಳ ಹಿಂದೆಯಷ್ಟೇ ಮೈಸೂರುನಲ್ಲಿ ಇರುವಂತಹ ಶಕ್ತಿದಾಮ ಮಕ್ಕಳ ಹೆಸರಿನಲ್ಲಿ 8 ಕೋಟಿ ರೂಪಾಯಿಗಳನ್ನು ಡೆಪೋಸಿಟ್ ಮಾಡಿದರು. ಇದರಿಂದಲೇ ನಮಗೆ ತಿಳಿಯುತ್ತದೆ ಅಪ್ಪು ಹಾಗೂ ಅಶ್ವಿನಿ ಅವರು ಸಮಾಜಕ್ಕೆ ಎಷ್ಟು ಸೇವೆ ಮಾಡುತ್ತಿದ್ದರು ಅಂತ. ಇದನ್ನು ಹೊರತು ಪಡಿಸಿ ಹಲವಾರು ಅನಾಥಾಶ್ರಮ ಮತ್ತು ವೃದ್ಧಾಶ್ರಮ ಹಾಗೂ ಗೋಶಾಲೆಗಳನ್ನು ಕೂಡ ಇವರು ದತ್ತು ಪಡೆದು ಕೊಂಡು ಪ್ರತಿ ತಿಂಗಳು ಕೂಡ ಅವುಗಳ ಖರ್ಚುವೆಚ್ಚ ವೆಲ್ಲವು ಕೂಡ ಭರಿಸುತ್ತಿದ್ದರು. ಈಗ ಅಪ್ಪು ಅವರು ಇಲ್ಲದೆ ಇದ್ದರೂ ಕೂಡ ಅವರ ಸ್ಥಾನದಲ್ಲಿ ನಿಂತು ಅಶ್ವಿನಿ ಅವರು ಇವೆಲ್ಲವನ್ನು ಕೂಡ ನಿಭಾಯಿಸುತ್ತಿರುವುದು ನೋಡಿದರೆ ನಿಜಕ್ಕೂ ಕೂಡ ಇವರು ಗಟ್ಟಿಗಿತ್ತಿ ಹೆಂಗಸು ಅಂತನೇ ಹೇಳಬಹುದು. ಸಾಮಾನ್ಯವಾಗಿ ಮನೆಯಲ್ಲಿ ಮನೆಯ ಯಜಮಾನ ತೀರಿಕೊಂಡ ಆತನ ಯೋಚನೆಯಲ್ಲಿ ಮಹಿಳೆಯ ಕುಳಿತುಕೊಳ್ಳುವುದನ್ನು ನಾವು ನೋಡಬಹುದು.
ಆದರೆ ಅಶ್ವಿನಿ ಅವರು ಈಗ ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡು ಮಕ್ಕಳ ಶಿಕ್ಷಣದ ಬಗ್ಗೆ ಮತ್ತು ಅವರ ಲಾಲನೆ ಪಾಲನೆ ಬಗ್ಗೆ ಹಾಗೂ ಅಪ್ಪು ಅವರು ನಿರ್ಮಾಣ ಮಾಡಿದಂತಹ ಪಿಆರ್ಕೆ ಪ್ರೊಡಕ್ಷನ್ ಬಗ್ಗೆ ಹೋಟೆಲ್ ಗಳು ರಿಯಲ್ ಎಸ್ಟೇಟ್ ಹೀಗೆ ಎಲ್ಲಾ ಕೆಲಸ ಕಾರ್ಯಗಳನ್ನು ಕೂಡ ಒಬ್ಬರೇ ನಿಂತುಕೊಂಡು ಮಾಡುತ್ತಿರುವುದನ್ನು ನೋಡಿದರೆ ಅಶ್ವಿನಿಯವರು ಗ್ರೇಟ್ ಅಂತಾನೆ ಅನಿಸುತ್ತಾರೆ. ಇನ್ನು ಅಶ್ವಿನಿ ಅವರ ವಿದ್ಯಾಭ್ಯಾಸ ಹಾಗು ಅವರ ಬಾಲ್ಯ ಮತ್ತು ಅವರ ಹಿನ್ನೆಲೆಯನ್ನು ನೋಡುವುದಾದರೆ ಅಶ್ವಿನಿ ರೇವನಾಥ್ ಅವರು ಮೂಲತಹ ಚಿಕ್ಕಮಂಗಳೂರಿನ ಆದರೂ ಕೂಡ ಹುಟ್ಟಿದ್ದು ಬೆಳೆದದ್ದು ಮತ್ತು ವಿದ್ಯಾಭ್ಯಾಸ ಮಾಡಿದ್ದು ಎಲ್ಲವೂ ಕೂಡ ಬೆಂಗಳೂರಿನಲ್ಲಿ. ಒಂದು ಮೂಲದ ಪ್ರಕಾರ ಇವರು ಗ್ರಾಜುಯೇಷನ್ ಪದವಿಯನ್ನು ಪೂರೈಸಿದ್ದಾರೆ ಎಂದು ತಿಳಿದು ಬಂದಿದೆ ಯಾವ ವಿಷಯದಲ್ಲಿ ಇವರು ಗ್ರಾಜುಯೇಷನ್ ಪದವಿಯನ್ನು ಪಡೆದಿದ್ದಾರೆ ಎಂಬ ಮಾಹಿತಿ ಇದುವರೆಗೂ ಕೂಡಲು ಕೂಡ ಅಶ್ವಿನಿ ಅವರು ಬಹಿರಂಗ ಪಡಿಸಿಕೊಂಡಿಲ್ಲ ಹಾಗಾಗಿ ಇದೊಂದು ಮಾಹಿತಿ ಮಾತ್ರ ಈಗಲೂ ಕೂಡ ರಹಸ್ಯಮಯವಾಗಿದೆ.
ಅಪ್ಪು ಮತ್ತು ಅಶ್ವಿನಿ ಅವರು ಇಬ್ಬರೂ ಕೂಡ ಒಬ್ಬರನ್ನೊಬ್ಬರು ಪರಸ್ಪರ ಭೇಟಿ ಆದಂತಹ ಜಾಗ ಅಂದರೆ ತಮ್ಮ ಸ್ನೇಹಿತರೊಬ್ಬರ ಮದುವೆಯ ಕಾರ್ಯದಲ್ಲಿ ಹೌದು ಅನುಪ್ರಭಾಕರ್ ಅವರು ಅಶ್ವಿನಿ ಅವರಿಗೆ ಸ್ನೇಹಿತರು ಆಗಿದ್ದರು. ಇವರ ಮುಖಾಂತರ ಅಪ್ಪು ಅವರಿಗೆ ಅಶ್ವಿನಿ ಅವರು ಪರಿಚಯವಾಗುತ್ತದೆ ಕೆಲದಿನದ ನಂತರ ಅವರಿಬ್ಬರ ನಡುವೆ ಪ್ರೀತಿ ಹುಟ್ಟುತ್ತದೆ. ಈ ಪ್ರೀತಿಯ ವಿಚಾರವನ್ನು ಅಪ್ಪು ಅವರು ತಮ್ಮ ಮನೆಯಲ್ಲಿ ಹೇಳಿಕೊಳ್ಳುವುದಕ್ಕೆ ಬಹಳನೇ ಹಿಂಜರಿಯುತ್ತಾರೆ ಅಷ್ಟೇ ಅಲ್ಲದೆ ಅಣ್ಣಾವ್ರ ಬಳಿ ಒಂದು ವಿಚಾರವನ್ನು ಹೇಳಿಕೊಳ್ಳುವುದಕ್ಕೆ ಭಯ ಬೀಳುತ್ತಾರೆ. ಅಂತಹ ಸಮಯದಲ್ಲಿ ಶಿವಣ್ಣ ಅವರು ಅವರಿಗೆ ಸಹಾಯವನ್ನು ಮಾಡಿ ಅಣ್ಣಾವ್ರ ಬಳಿ ಅಶ್ವಿನಿ ಅವರ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತಾರೆ. ನಂತರ ರಾಜಕುಮಾರ್ ಕುಟುಂಬ ಈ ಮದುವೆಗೆ ಸಮ್ಮತಿಯನ್ನು ಒದಗಿಸುತ್ತದೆ ಅಶ್ವಿನಿ ಅವರ ಮನೆಯವರು ಕೂಡ ಒಪ್ಪಿಗೆಯನ್ನು ಸೂಚಿಸುತ್ತಾರೆ. ತದನಂತರ ಇವರಿಬ್ಬರ ವಿವಾಹ ಡಿಸೆಂಬರ್ 1. 1999ರಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಲ್ಯಾಣ ಮಂಟಪವೊಂದರಲ್ಲಿ ನಡೆಯುತ್ತದೆ.
ಇಬ್ಬರ ಮದುವೆ ನಡೆದ ನಂತರ 2002ರಲ್ಲಿ ಪುನೀತ್ ರಾಜಕುಮಾರ್ ಅವರು ನಾಯಕನಟನಾಗಿ ಅಪ್ಪು ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಪಾದರ್ಪಣೆ ಮಾಡುತ್ತಾರೆ. ಅಶ್ವಿನಿ ಅವರು ತಪ್ಪು ಅವರ ಜೀವನದಲ್ಲಿ ಬಂದಿದ್ದು ಅಪ್ಪು ಅವರಿಗೆ ಲಕ್ ಅಂತಾನೆ ಹೇಳಬಹುದು. ಏಕೆಂದರೆ ಅಲ್ಲಿಂದ ಇಲ್ಲಿಯವರೆಗೂ ಕೂಡ ಅಪ್ಪು ಅವರು ತೆಗೆದಂತಹ ಪ್ರತಿಯೊಂದು ಸಿನಿಮಾ ಕೂಡ ಹಿಟ್ ಆಗಿರುವುದನ್ನು ನಾವು ನೋಡಬಹುದಾಗಿದೆ ಇದಿಷ್ಟು ಕೂಡ ಅಶ್ವಿನಿ ಅವರು ಮತ್ತು ಅಪ್ಪು ಅವರ ಬಗ್ಗೆ ದೊರೆತಂತಹ ಮಾಹಿತಿಯಾಗಿದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ. ಅಪ್ಪು ಮತ್ತು ಅಶ್ವಿನಿ ಜೋಡಿಯನ್ನು ನೀವು ಇಷ್ಟಪಡುವುದಾದರೆ ಇವರಿಬ್ಬರ ಹೆಸರನ್ನು ನಮಗೆ ಕಾಮೆಂಟ್ ನಲ್ಲಿ ತಿಳಿಸಿ.