ಆತ ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ದೇವರ ಮಗ ಇತ್ತೀಚಿಗೆ ಸೋಲು ಗಳಿಲ್ಲದೆ ವ್ಯಕ್ತಿಗಳು ಸಿಗುವುದು ತೀರಾ ಅಪರೂಪ ಅಂಥವರಲ್ಲಿ ಈ ಕನ್ನಡದ ಕುಲಪುತ್ರ ಒಬ್ಬ ಅವನಿಗೆ ಯಾವ ಕೆಲಸದ ಅನಿವಾರ್ಯತೆಯೂ ಇರಲಿಲ್ಲ ಯಾರ ಮುಂದೆಯೂ ಕೈಕಟ್ಟಿ ಕೂರುವಂತಹ ಸ್ಥಿತಿಯು ಬಂದಿರಲಿಲ್ಲ ಕಾಯಕವೇ ಮಾಡದೇ ಕೂತು ತಿನ್ನುವಂತಹ ಶ್ರೀಮಂತಿಕೆ ಆತನ ಮನೆಯಲ್ಲಿ ಇತ್ತು. ಆದರೂ ಅಪ್ಪಾ ತೋರಿಸಿದ ದಾರಿಯಲ್ಲಿ ನಡೆದು ತಂದೆಗೆ ತಕ್ಕ ಮಗ ಎಂದು ಕರೆಸಿಕೊಂಡ ಈತನ ನಟನೆ ಹಾಡು ಡ್ಯಾನ್ಸ್ ನೋಡಿ ಮುದುಕರೆ ಎದ್ದುನಿಂತು ವಿಸಿಲ್ ಹೊಡೆದಿದ್ದು ಇದೆ. ತನ್ನ ತಂದೆಯ ಹಾದಿಯಲ್ಲಿ ನಡೆದು ತಂದೆಯನ್ನು ಮೀರಿಸುವಂತೆ ಬೆಳೆದ ಈ ಅಪರೂಪದ ನಕ್ಷತ್ರ ಇಷ್ಟು ಬೇಗ ತನ್ನ ಹೊಳಪು ಕಳುಚಿ ಧರೆಗೆ ಬೀಳುತ್ತೆ ಅಂತ ಯಾರು ಕೂಡ ಅಂದುಕೊಂದಿರಳು ಸಾಧ್ಯವಿಲ್ಲ. ಅಪ್ಪು ಪವರ್ ಸ್ಟಾರ್ ನಟಸಾರ್ವಭೌಮ ರಾಜರತ್ನ ಹೀಗೆ ಅನೇಕ ಬಿರುದುಗಳಿಂದ ಕನ್ನಡಿಗರ ಪ್ರೀತಿಯ ಮಗನಾಗಿದ್ದ ಪುನೀತ್ ರಾಜಕುಮಾರ್ ಶುಕ್ರವಾರ ಹೃ’ದ’ಯ’ಘಾ’ತದಿಂದ ಎಂದೆಂದೂ ಬಾರದ ಲೋಕಕ್ಕೆ ತೆರಳಿದರು.
ಸ್ನೇಹಿತರೆ ಪುನೀತ್ ರಾಜಕುಮಾರ್ ಬಾಲ್ಯದಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು. ಪುನೀತ್ ರಾಜಕುಮಾರ್ ಹುಟ್ಟಿದ್ದು ಹದಿನೇಳು ಮಾರ್ಚ್ 1975ರಲ್ಲಿ ಕಿರಿಯಮಗ ಆಗಿದ್ದರಿಂದ ರಾಜಕುಮಾರ್ ದಂಪತಿ ಅಪ್ಪು ಅವರನ್ನು ಪ್ರೀತಿಯಿಂದ ಬೆಳೆಸುತ್ತಾರೆ. ರಾಜಕುಮಾರ್ ಶೂಟಿಂಗ್ ಗೆ ಹೋಗುವ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರನ್ನು ಕೂಡ ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಬಾಲ್ಯದಲ್ಲಿ ಪುನೀತ್ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಾರೆ ಆರನೇ ತಿಂಗಳಿಗೆ ಪ್ರೇಮದ ಕಾಣಿಕೆ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಮಗುವಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಅಪ್ಪು ಅಭಿನಯಿಸುವುದಕ್ಕೆ ಕೂಡ ಕಾರಣ ಇದೆ ಆ ಸಿನಿಮಾದಲ್ಲಿ ಆರು ತಿಂಗಳ ಹಸುಗೂಸಿನ ಪಾತ್ರ ಬೇಕಿತ್ತು. ಚಿತ್ರೀಕರಣ ಮಾಡುವ ವೇಳೆ ಮಗುವಿನ ಪಾತ್ರ ಮಾಡುತ್ತಿದ್ದ ಎಲ್ಲ ಮಕ್ಕಳು ಅಳುತ್ತಾ ಇದ್ದಾರಂತೆ ಹೀಗಾಗಿ ಶೂಟಿಂಗ್ ಮಾಡುವುದಕ್ಕೆ ಆಗುತ್ತಾ ಇರಲಿಲ್ಲ ಮಕ್ಕಳು ಅಳುವುದನ್ನು ನಿಲ್ಲಿಸುತ್ತಿರಲಿಲ್ಲ.
ಇದನ್ನು ನೋಡಿದ ರಾಜಕುಮಾರ್ ಶೂಟಿಂಗ್ ಗೆ ಬಂದಿದ್ದ ಪಾರ್ವತಮ್ಮ ರಾಜಕುಮಾರ್ ಬಳಿ ಬರುತ್ತಾರೆ ಯಾರ ಮಕ್ಕಳಿಂದಲೂ ಕೂಡ ಆಕ್ಟಿಂಗ್ ಮಾಡಿಸುವುದಕ್ಕೆ ಆಗುತ್ತಿಲ್ಲ. ನಮ್ಮ ಮಗುವನ್ನು ಆಕ್ಟ್ ಮಾಡಿಸೋಣ ಅಂತಾರೆ ಅದಕ್ಕೆ ಪಾರ್ವತಮ್ಮ ಕೂಡ ಓಕೆ ಅಂದರು ಈ ಮೂಲಕ ಆರು ತಿಂಗಳ ಮಗುವಾಗಿದ್ದ ಅಪ್ಪು ಪ್ರೇಮದ ಕಾಣಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇಲ್ಲಿ ಮತ್ತೊಂದು ವಿಶೇಷವಿದೆ ಅದೇ ವರ್ಷ ಸೂಪರ್ ಸ್ಟಾರ್ ರಜನಿಕಾಂತ್ ಪೂರ್ವರಂಗ್ ಅನ್ಗಲ್ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗುತ್ತಾರೆ. ಅಲ್ಲಿಗೆ ರಜನಿಕಾಂತ್ ಅವರು 1975ರಲ್ಲಿ ಚಿತ್ರರಂಗವನ್ನ ಪ್ರವೇಶ ಮಾಡುತ್ತಾರೆ ಅದೇ ವರ್ಷ ಕೂಡ ಪುನೀತ್ ರಾಜಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ಇಡೀ ಭಾರತೀಯ ಚಿತ್ರರಂಗದಲ್ಲಿ ಕಮಲ್ ಹಾಸನ್ ಅವರನ್ನು ಹೊರತು ಪಡಿಸಿದರೆ ಬಾಲನಟನಾಗಿ ಮತ್ತು ನಾಯಕನಟನಾಗಿ ಯಶಸ್ವಿಯ ಉತ್ತುಂಗಕ್ಕೇರಿದ ಏಕೈಕ ನಟ ಪುನೀತ್ ರಾಜಕುಮಾರ್ ಬಾಲ್ಯದಲ್ಲಿ ಇರುವಾಗ ಶಾಲೆಗೆ ರಜೆ ಸಿಕ್ಕರೆ ಸಾಕು ತಮ್ಮ ಊರು ಗಾಜಿನ ಊರಿಗೆ ಹೋಗುತ್ತಿದ್ದರು.
ಗಾಜನೂರಿನಲ್ಲಿ ಸ್ನೇಹಿತರ ಜೊತೆಗೂಡಿ ಧನ ಕಾಯುವುದಕ್ಕೆ ಪುನೀತ್ ಹೋಗುತ್ತಿದ್ದರು ಅಷ್ಟೇ ಅಲ್ಲ ಮರಕೋತಿಯಾಟ ಕೂಡ ಹಾಡುತ್ತಿದ್ದರಂತೆ. 1980ರಲ್ಲಿ ಅಂದರೆ ಕೇವಲ ಪುನೀತ್ಗೆ 5 ವರ್ಷ ವಯಸ್ಸಾಗಿದ್ದಾಗ ತಂದೆಯೊಂದಿಗೆ ವಸಂತ ಗೀತಾ ಸಿನಿಮಾದಲ್ಲಿ ಬಾಲನಟನಾಗಿ ಬಣ್ಣ ಹಚ್ಚುತ್ತಾರೆ. ಸ್ನೇಹಿತರೆ ನಿಮಗೆ ಗೊತ್ತಿರಲಿ ಪುನೀತ್ ರಾಜಕುಮಾರ್ ಹುಟ್ಟಿದ್ದು ಚೆನ್ನೈನಲ್ಲಿ ಐದು ವರ್ಷದವರೆಗೂ ಪುನೀತ್ ಅಲ್ಲಿ ಬೆಳೆಯುತ್ತಾರೆ. ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ನಂತರ ಅಂದರೆ ಪುನೀತ್ ಐದು ವರ್ಷ ವಯಸ್ಸಾಗಿದ್ದಾಗ ಪಾರ್ವತಮ್ಮ ರಾಜಕುಮಾರ್ ಮತ್ತು ರಾಜಕುಮಾರ್ ಬೆಂಗಳೂರಿಗೆ ಶಿಫ್ಟ್ ಆಗುತ್ತಾರೆ. ಇದಾದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಅಪ್ಪು ಕಾಣಿಸಿಕೊಳ್ಳುತ್ತಾರೆ. ಚಲಿಸುವ ಮೋಡಗಳು ಭಾಗ್ಯದಾತ ಎರಡು ನಕ್ಷತ್ರಗಳು ಸಿನಿಮಾದಲ್ಲಿ ಪುನೀತ್ ಅದ್ಭುತವಾಗಿ ಅಭಿನಯ ಮಾಡುತ್ತಾರೆ. 1985 ರಲ್ಲಿ ಬೆಟ್ಟದ ಹೂವು ಸಿನಿಮಾದಲ್ಲಿ ಅಪ್ಪು ಮಾಡಿದ ರಾಮು ಪಾತ್ರ ಕೋಟಿ ಕನ್ನಡಿಗರ ಮನ ಗೆದ್ದಿತ್ತು.
ಸಿನಿಮಾದಲ್ಲಿನ ಪುನೀತ್ ಅದ್ಭುತ ನಟನೆ ರಾಷ್ಟ್ರಪ್ರಶಸ್ತಿ ಕೂಡ ಒಲಿದು ಬಂದಿತ್ತು. ಇದಾದ ನಂತರ 2002ರಲ್ಲಿ ಅಪ್ಪು ಸಿನಿಮಾದ ಮೂಲಕ ಪುನೀತ್ ರಾಜಕುಮಾರ್ ನಾಯಕನಾಗಿ ಕೆರಿಯರ್ ಶುರು ಮಾಡುತ್ತಾರೆ. ಅಂದಿನಿಂದ ಪುನೀತ್ ರಾಜಕುಮಾರ್ ಸ್ಯಾಂಡಲ್ವುಡ್ ಅಪ್ಪು ಆಗಿ ಬದಲಾಗುತ್ತಾರೆ. ಮುಂದೆ ಅಪ್ಪು ಮುಟ್ಟಿದ್ದೆಲ್ಲವೂ ಚಿನ್ನ. ಒಂದಾದ ನಂತರ ಒಂದು ಸೂಪರ್ ಹಿಟ್ ಸಿನಿಮಾಗಳನ್ನು ಪುನೀತ್ ರಾಜಕುಮಾರ್ ಕೊಡುತ್ತಾರೆ. ಅಪ್ಪು ಸಿನಿಮಾದ ಮೂಲಕ ಪುನೀತ್ ಒಂದು ದೊಡ್ಡ ಆಸೆಯನ್ನು ನೆರವೇರಿಸಿ ಕೊಳ್ಳುತ್ತಾರೆ ತಾನು ಅಭಿನಯಿಸಿದ ಚಿತ್ರ ವನ್ನು ತಂದೆ ರಾಜಕುಮಾರ್ ಅವರು ಥಿಯೇಟರ್ ನಲ್ಲಿ ಕುಳಿತುಕೊಂಡು ನೋಡಬೇಕು ಎನ್ನುವ ದೊಡ್ಡ ಆಸೆ ಪುನೀತ್ ಗೆ ಇತ್ತು. ವಿಶೇಷ ಅಂದರೆ ಅಪ್ಪು ಸಿನಿಮಾ ನೂರು ದಿನ ಪೂರೈಸುವ ವೇಳೆ ಡಾಕ್ಟರ್ ರಾಜಕುಮಾರ್ 100 ದಿನ ಪೂರೈಸಿದ ಬಹುತೇಕ ಎಲ್ಲ ಥಿಯೇಟರ್ ಗಳಿಗೆ ಹೋಗಿ ಅಪ್ಪು ಸಿನಿಮಾ ನೋಡಿದ್ದಾರಂತೆ ಮುಂದೆ ಅಪ್ಪು ಸಿನಿಮಾ ಸೂಪರ್ ಹಿಟ್ ಪ್ರದರ್ಶನವನ್ನು ಕಾಣುತ್ತಿದೆ.
ತೆಲುಗು ತಮಿಳು ಬೆಂಗಾಲಿ ಭಾಷೆಗಳಲ್ಲಿ ಈ ಸಿನಿಮಾ ರಿಮೇಕ್ ಆಗುತ್ತೆ ಇದರ ನಂತರ ಅಭಿ ವೀರ ಕನ್ನಡಿಗ ಅರಸು, ಆಕಾಶ್, ಮಿಲನ, ಬಿಂದಾಸ್, ವಂಶಿ, ಜಾಕಿ, ಹುಡುಗರು, ಪರಮಾತ್ಮ ಅಂಜನಿಪುತ್ರ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಪುನೀತ್ ಬಣ್ಣ ಹಚ್ಚುತ್ತಾರೆ. ಪವರ್ ಸ್ಟಾರ್ ಎನ್ನುವ ಬಿರುದು ಪಡೆದುಕೊಳ್ಳುತ್ತಾರೆ. ಇದಾದನಂತರ ನಿನ್ನಿಂದಲೇ, ದೊಡ್ಮನೆ ಹುಡುಗ, ರಾಜಕುಮಾರ ನಟ ಸಾರ್ವಭೌಮ ಸಿನಿಮಾಗಳು ಸೂಪರ್ ಹಿಟ್ ಆಗುತ್ತವೆ ಇದರ ಮಧ್ಯ ಪುನೀತ್ ರಾಜಕುಮಾರ್ ಕಿರುತೆರೆಯಲ್ಲಿ ಕೂಡ ಕಾಣಿಸಿಕೊಂಡಿದ್ದರು ಕನ್ನಡದ ಕೋಟ್ಯಾಧಿಪತಿ ಯನ್ನು ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದರು. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನೀವೇನಾದರೂ ಅಪ್ಪು ಅಭಿಮಾನಿಗಳಾಗಿದ್ದರೆ ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ