ಪುನೀತ್ ರಾಜಕುಮಾರ್ ಅವರು ಕರ್ನಾಟಕದ ಆಸ್ತಿ. ಇಡೀ ಕರುನಾಡಿನಲ್ಲಿ ಮನೆಮನೆಗೂ ಕೂಡ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಅಪ್ಪು ಅಭಿಮಾನಿಗಳೇ. ಆದರೆ ಅಪ್ಪು ಅವರ ಅಕಾಲಿಕ ಮರಣ ಮಾತ್ರ ಇಡೀ ಕರುನಾಡನ್ನು ಕತ್ತಲೆಗೆ ದೂಡಿದೆ. ಅಷ್ಟೊಂದು ಆರೋಗ್ಯವಾಗಿದ್ದ ವ್ಯಕ್ತಿ ಈ ರೀತಿ ಹೃ’ದ’ಯಾ’ಘಾ’ತ’ಕ್ಕೆ ಒಳಗಾಗುತ್ತಾರೆ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ. ಬಾಲ್ಯದಿಂದಲೇ ಭಕ್ತ ಪ್ರಹ್ಲಾದ, ಚಲಿಸುವ ಮೋಡಗಳು, ಯಾರಿವನು, ಎರಡು ನಕ್ಷತ್ರಗಳು, ಭಾಗ್ಯವಂತ, ಬೆಟ್ಟದ ಹೂವು ಇನ್ನು ಮುಂತಾದ ಸಿನಿಮಾಗಳ ಅದ್ಭುತ ಅಭಿನಯದಿಂದ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದ ಪುನೀತ್ ರಾಜಕುಮಾರ್ ಅವರು ಬೆಳೆಯುತ್ತ ಹೋದಂತೆ ನಮ್ಮ ಅತ್ಯದ್ಭುತವಾದ ವ್ಯಕ್ತಿತ್ವದ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿದ್ದರು. ಅಪ್ಪು ಅವರು ಬದುಕಿದ ರೀತಿಯನ್ನು ನಿಜಕ್ಕೂ ಪ್ರತಿಯೊಬ್ಬ ಮನುಷ್ಯನೂ ಜೀವನದಲ್ಲಿ ಅನುಸರಿಸಲೇಬೇಕು.
ಇಂತಹ ಅಭೂತಪೂರ್ವ ವ್ಯಕ್ತಿಯನ್ನು ಕಳೆದುಕೊಂಡ ಕರುನಾಡು ಹಾಗೂ ಅಭಿಮಾನಿ ಬಳಗ ಇನ್ನು ಕೂಡ ಅವರ ಅಗಲಿಕೆ ನೋವಿನಿಂದ ಹೊರಗೆ ಬಂದಿಲ್ಲ. ಅಪ್ಪು ಅವರು ನಮ್ಮನ್ನೆಲ್ಲಾ ಅಗಲಿ ಆರು ತಿಂಗಳುಗಳು ಕಳೆದರೂ ಕೂಡ ಇನ್ನು ಅಪ್ಪು ಹೆಸರಿನಲ್ಲಿ ಅಭಿಮಾನಿಗಳು ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಅಪ್ಪು ಅವರ ಹುಟ್ಟುಹಬ್ಬವನ್ನು ಜಾತ್ರೆಯ ರೀತಿ ಸಂಭ್ರಮಿಸಿ ಕರುನಾಡ ತುಂಬೆಲ್ಲಾ ಹಬ್ಬವನ್ನಾಗಿ ಆಚರಿಸಿದ ಅವರ ಅಭಿಮಾನಿಗಳಿಗಾಗಿ ಅಪ್ಪು ಅವರ ಕಡೆಯ ಸಿನಿಮಾದ ಜೇಮ್ಸ್ ಚಿತ್ರವನ್ನು ಅಂದೇ ಬಿಡುಗಡೆ ಮಾಡಲಾಗಿತ್ತು. ಜೇಮ್ಸ್ ಚಿತ್ರವನ್ನು ಅವರ ಅಭಿಮಾನಿಗಳು ತುಂಬಾ ದಾಖಲೆಯ ಮಟ್ಟದಲ್ಲಿ ಹಿಟ್ ಆಗುವಂತೆ ಮಾಡಿದರು. ಅಷ್ಟು ಮಾತ್ರ ಅಲ್ಲದೆ ಅಪ್ಪು ಅವರ ಅಭಿಮಾನಿಗಳು ಇಂದಿಗೂ ಸಹ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರನ್ನು ಕರ್ನಾಟಕ ಜನತೆ ಎಷ್ಟು ಇಷ್ಟಪಡುತ್ತಾರೆ ಎನ್ನುವುದಕ್ಕೆ ಅವರ ಅಂತ್ಯಸಂಸ್ಕಾರಕ್ಕೆ ಮಳೆ ಗಾಳಿ ಎನ್ನದೆ ಚಿಕ್ಕಮಕ್ಕಳ ಸಮೇತ ಬಂದಿದ್ದ 25 ಲಕ್ಷಕ್ಕಿಂತ ಹೆಚ್ಚಿನ ಜನರೇ ಸಾಕ್ಷಿ. ಯಾಕೆಂದರೆ ಇತಿಹಾಸದಲ್ಲಿ ಈವರೆಗೆ ಕೂಡ ಈ ರೀತಿ ದಾಖಲೆಯ ಮಟ್ಟದಲ್ಲಿ ಯಾವೊಬ್ಬ ಸೆಲೆಬ್ರಿಟಿಗೆ ಆಗಲಿ, ರಾಜಕಾರಣಿಗಳು ಹಾಗೂ ಗಣ್ಯ ವ್ಯಕ್ತಿಗೂ ಇಷ್ಟೊಂದು ಜನರು ಅಂತ್ಯಸಂಸ್ಕಾರಕ್ಕೆ ಬಂದಿರಲಿಲ್ಲ. ಅಪ್ಪು ಅವರ ಅಂತಿಮ ದರ್ಶನ ಪಡೆಯಲು ಬಂದಿದ್ದ ಜನತೆ ಅಪ್ಪು ಅವರನ್ನು ದೇವರಂತೆ ಕಂಡರು. ಮತ್ತು ಇಂದಿಗೂ ಸಹ ಅಪ್ಪು ಅವರ ಸಮಾಧಿಗೆ ಭೇಟಿ ಕೊಡುತ್ತಿರುವ ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯೇನೂ ಆಗಿಲ್ಲ. ಇನ್ನು ಅಪ್ಪು ಅವರ ಹುಟ್ಟುಹಬ್ಬದ ಸಲುವಾಗಿ ಅವರ ಅಭಿಮಾನಿಗಳು ಏರಿಯಾ ಏರಿಯಾಗಳಲ್ಲಿ ಕೂಡ ದೊಡ್ಡ ದೊಡ್ಡ ಕಟೌಟ್ ಗಳನ್ನು ಹಾಕಿಸಿ ಮತ್ತು ಅಪ್ಪು ಅವರ ಪೋಸ್ಟರ್ ಗಳನ್ನು ಹಾಕುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದರು.
ಇದರ ಜೊತೆಗೆ ಅಭಿಮಾನಿಗಳೆಲ್ಲ ಸೇರಿ ರಕ್ತದಾನ ನೇತ್ರದಾನ ಅನ್ನದಾನ ಅಂಗಾಂಗ ದಾನ ಈ ರೀತಿ ಕಾರ್ಯಕ್ರಮಗಳನ್ನು ನಡೆಸಿ ಅಪ್ಪು ಅವರ ಮೇಲಿರುವ ಅಭಿಮಾನವನ್ನು ಒಂದು ಆದರ್ಶ ರೀತಿಯಲ್ಲಿ ಪ್ರದರ್ಶಿಸಿದರು. ಇದಷ್ಟೇ ಅಲ್ಲದೆ ಅಪ್ಪು ಅವರು ಅಗಲಿದ ದಿನದಿಂದ ಎಷ್ಟೋ ಜನರ ಸೋಶಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಮತ್ತು ವಾಟ್ಸಪ್ ಡಿಪಿ ಹಾಗೂ ಸ್ಟೇಟಸ್ ಗಳಲ್ಲಿ ತಪ್ಪದೆ ಪ್ರತಿದಿನ ಅವರ ಫೋಟೋ ಮತ್ತು ವಿಡಿಯೋಗಳನ್ನು ನೋಡುತ್ತಿರುತ್ತೇವೆ. ಯಾವುದೇ ಒಂದು ಹಳ್ಳಿಯ ರಸ್ತೆಗೆ ಹೋದರು ಪುನೀತ್ ರಾಜಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿರುವ ಪೋಸ್ಟರ್ಗಳು ಕಣ್ಣಿಗೆ ಬೀಳುತ್ತವೆ. ಚಿಕ್ಕ ಮಕ್ಕಳಿಂದ ಹಿಡಿದು ಪ್ರಾಣಿಗಳು ವೃದ್ದರೂ ಕೂಡ ಬಸ್ಟಾಂಡ್ ಗಳಲ್ಲಿ ಗೋಡೆಗಳ ಮೇಲೆ ಅವರ ಫೋಟೋ ಅನ್ನು ನೋಡಿ ಅಳುತ್ತಾ ನಿಂತಿರುವ ವಿಡಿಯೋಗಳನ್ನು ನೋಡಿದರೆ ಅಪ್ಪು ಅವರನ್ನು ಜನರು ಎಷ್ಟು ಇಷ್ಟಪಡುತ್ತಿದ್ದರು ಎನ್ನುವುದು ತಿಳಿಯುತ್ತದೆ.
ಇಷ್ಟೆಲ್ಲಾ ಅಭಿಮಾನಿಗಳಿಂದ ಪ್ರೀತಿಯನ್ನು ಗಳಿಸುತ್ತಿರುವ ಅಪ್ಪು ಅವರು ಇದನ್ನೆಲ್ಲ ನೋಡಲು ಇಂದು ಭೂಮಿ ಮೇಲೆ ಇಲ್ಲ ಎನ್ನುವುದು ತುಂಬಾ ದುಃಖದ ವಿಷಯವಾಗಿದೆ.ದೇವರ ಮಗನಾಗಿ ದೇವರ ಬಳಿ ಹೋಗಿರುವ ಅಪ್ಪು ಅವರ ಫೋಟೋವನ್ನು ಊರಿನ ಜಾತ್ರೋತ್ಸವ ರಥೋತ್ಸವ ಮುಂತಾದ ಸಮಯದಲ್ಲಿ ದೇವರ ಉತ್ಸವದ ಜೊತೆಗೆ ಇವರ ಫೋಟೋವನ್ನು ಉತ್ಸವ ಮಾಡಿರುವ ಸಾಕಷ್ಟು ಘಟನೆಗಳು ಕರುನಾಡಲ್ಲಿ ನಡೆದಿದೆ. ಹಾಗೂ ಮದುವೆ ಪತ್ರಿಕೆಗಳಲ್ಲಿ ಅಪ್ಪು ಅವರ ಫೋಟೋ ಹಾಕಿಸಿ ಅಭಿಮಾನ ಮೆರೆದಿದ್ದಾರೆ. ಹಾಗೂ ಕೆಲವರು ಅಪ್ಪು ಅವರ ಹೆಸರನ್ನು ಟ್ಯಾಟು ಹಾಕಿಸಿಕೊಳ್ಳುವುದು ಈ ರೀತಿ ಕೂಡ ಮಾಡಿದ್ದಾರೆ ಆದರೆ ಮತ್ತೊಬ್ಬ ವ್ಯಕ್ತಿ ಇದೆಲ್ಲಕ್ಕಿಂತ ಇನ್ನು ಮುಂದೆ ಹೋಗಿ ಅಪ್ಪು ಅವರ ಕಲರ್ ಫೋಟೋವನ್ನು ಬೆನ್ನಿಗೆ ಅಂಟಿಸಿಕೊಂಡು ಅದಕ್ಕೆ ನಿಂಬೆಹಣ್ಣಿನ ಹಾರದಂತೆ ನಿಂಬೆಹಣ್ಣುಗಳನ್ನು ದೇಹಕ್ಕೆ ಚುಚ್ಚಿಕೊಂಡು ಜೋಡಿಸಿಕೊಂಡಿದ್ದಾರೆ. ಇದನ್ನು ನೋಡಿದ ದೊಡ್ಮನೆ ಕುಟುಂಬ ದಯವಿಟ್ಟು ಅಪ್ಪು ಅವರ ಹೆಸರಿನಲ್ಲಿ ಆರೋಗ್ಯ ಹಾಳುಮಾಡಿಕೊಳ್ಳಬೇಡಿ. ಅಪ್ಪು ಇದ್ದಿದ್ದರೆ ಖಂಡಿತ ಇದನ್ನು ಸಹಿಸುತ್ತಿರಲಿಲ್ಲ ಎಂದು ಬುದ್ಧಿಮಾತುಗಳನ್ನು ಹೇಳಿದ್ದಾರೆ.