ಕರ್ನಾಟಕ ರಾಜ್ಯದ ಜನತೆ ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳ ಅನೌನ್ಸ್ಮೆಂಟ್ ಇಂದು ನಡೆದಿದೆ. ಸಚಿವ ಸಂಪುಟದ ಜೊತೆ ಕ್ಯಾಬಿನೆಟ್ ಮೀಟಿಂಗ್ ನಡೆಸಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳ ಸುದ್ದಿಗೋಷ್ಠಿ ನಡೆಸಿ 5 ಗ್ಯಾರಂಟಿ ಕಾರ್ಡ್ ಯೋಜನೆಗಳಿಗೂ ಇರುವ ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ವಿವರವಾಗಿ ತಿಳಿಸಿದ್ದಾರೆ.

ಇದರಲ್ಲಿ ಎರಡನೇ ಗ್ಯಾರಂಟಿ ಕಾರ್ಡ್ ಆದ ಗೃಹಲಕ್ಷ್ಮಿ ಯೋಜನೆ ಅನೌನ್ಸ್ಮೆಂಟ್ ಬಗ್ಗೆ ಕರ್ನಾಟಕ ಎಲ್ಲಾ ಮಹಿಳೆಯರೂ ಕಾಯುತ್ತಿದ್ದರು. ಯಾಕೆಂದರೆ ಸರ್ಕಾರದ ವತಿಯಿಂದ ಇನ್ನು ಮುಂದೆ ಕುಟುಂಬದ ಯಜಮಾನಿಗೆ 2,000ರೂ. ಸಹಾಯಧನ ಸಿಗುತ್ತದೆ ಎಂದು ಹೇಳಿದ ಕಾರಣ ಒಂದು ಕುಟುಂಬದಲ್ಲಿ ಹೆಚ್ಚು ಮಹಿಳೆಯರಿದ್ದರೆ ಅತ್ತೆಗೆ ಸಿಗಲಿದೆಯೋ ಅಥವಾ ಸೊಸೆಗೆ ಸಿಗಲಿದೆಯೋ.
ಈಗಾಗಲೇ ಸರ್ಕಾರದಿಂದ ಯಾವುದಾದರೂ ಪಿಂಚಣಿ ಪಡೆಯುತ್ತಿದ್ದರೆ ಅವರಿಗೂ ಸಿಗುತ್ತದೆಯಾ, BPL ಕಾರ್ಡ್ ಹೊಂದಿದ್ದ ಕುಟುಂಬದ ಯಜಮಾನಿಗೆ ಮಾತ್ರ ಸಿಗುತ್ತದೆಯಾ ಎನ್ನುವ ಗೊಂದಲಗಳಿತ್ತು. ಈಗ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಗೃಹಲಕ್ಷ್ಮಿ ಯೋಜನೆ ಬಗ್ಗೆ ಸ್ಪಷ್ಟವಾಗಿ ಘೋಷಣೆ ಮಾಡಿದ್ದಾರೆ.
ಇಂದಿನ ಸುದ್ದಿಗೋಷ್ಠಿಯಲ್ಲಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು ಹೇಳಿದ ಪ್ರಮುಖ ಅಂಶಗಳು:-
● ಆಗಸ್ಟ್ 15 ರಂದು ಸ್ವತಂತ್ರ ದಿನಾಚರಣೆ ದಿನ ಗೃಹಲಕ್ಷ್ಮಿ ಯೋಜನೆಗೆ ಲಾಂಚ್ ಆಗುತ್ತದೆ.
● ಜೂನ್ 15ರಿಂದ ಜುಲೈ 15 ರ ತನಕ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ.
● ಕೆಲ ತಾಂತ್ರಿಕ ತೊಂದರೆ ಮತ್ತು ಇನ್ನು ಕರ್ನಾಟಕದಲ್ಲಿ ಎಷ್ಟೋ ಮಹಿಳೆಯರ ಅಕೌಂಟ್ ಹೊಂದಿರದ ಕಾರಣ ಯೋಜನೆ ಜಾರಿಗೆ ತಡವಾಗುತ್ತಿದೆ ಆದರೆ ಆಗಸ್ಟ್ ತಿಂಗಳಿಂದ ಪ್ರತಿ ತಿಂಗಳು ಕೂಡ ಕುಟುಂಬದ ಯಜಮಾನಿ ಖಾತೆಗೆ 2000 ರೂಪಾಯಿ DBT ಮೂಲಕ ನೇರವಾಗಿ ಮನೆ ಒಡತಿ ಖಾತೆಗೆ ಜಮೆ ಆಗಲಿದೆ.
● ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
● ಪೂರಕ ದಾಖಲೆಗಳಾಗಿ ಅರ್ಜಿಯಲ್ಲಿ ಕೇಳಿರುವ ವಿವರಗಳು ಮತ್ತು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಮೊಬೈಲ್ ಸಂಖ್ಯೆ ಇತ್ಯಾದಿಗಳನ್ನು ಕೂಡ ಕೊಡಬೇಕು.
● APL, BPL ಯಾವುದೇ ಭೇದ ಇಲ್ಲದೆ ಎಲ್ಲರಿಗೂ ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಸಿಗಲಿದೆ
● ಅತ್ತೆಗೆ ಸಿಗಬೇಕು ಅಥವಾ ಸೊಸೆಗೆ ಸಿಗಬೇಕು ಎನ್ನುವ ಯಾವುದೇ ಗೊಂದಲಗಳು ಇಲ್ಲ, ಕರ್ನಾಟಕದಲ್ಲಿ ಎಷ್ಟು ಕುಟುಂಬಗಳು ಇವೆ ಎನ್ನುವ ದಾಖಲೆ ಸರ್ಕಾರದ ಬಳಿ ಇದೆ.
ಆ ಕುಟುಂಬದ ಮಹಿಳೆಯರಲ್ಲಿ ಯಾರಿಗೆ ಹೋಗಬೇಕು ಎನ್ನುವುದನ್ನು ಕುಟುಂಬದವರೇ ನಿರ್ಧಾರ ಮಾಡಬೇಕು ಅರ್ಜಿ ಫಾರಂನಲ್ಲಿ ಇದರ ವಿವರ ಇರುತ್ತದೆ.
● ಫಲಾನುಭವಿಗೆ ಕಡ್ಡಾಯವಾಗಿ 18 ವರ್ಷ ತುಂಬಿರಬೇಕು.
● ಆಗಸ್ಟ್ 15ರವರೆಗೂ ಕೂಡ ಅರ್ಜಿ ಸ್ವೀಕಾರ ಪ್ರಕ್ರಿಯೆ ನಡೆಯುತ್ತದೆ, ಮಹಿಳೆಯರು ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ರೆಡಿ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು. ಮುಖ್ಯವಾಗಿ ಕುಟುಂಬದ ಯಜಮಾನಿ ಬ್ಯಾಂಕ್ ಖಾತೆ ಹೊಂದಿರಲೇಬೇಕು, ಅದಕ್ಕೆ ಆಧಾರ್ ಲಿಂಕ್ ಆಗಿರಬೇಕು.
●:ಈಗಾಗಲೇ ಮಹಿಳೆಯರು ವಿಧವೆ ವೇತನ ಅಥವಾ ವೃದ್ಯಾಪ ವೇತನ ಅಥವಾ ಅಂಗವಿಕಲ ವೇತನ ಈ ರೀತಿ ಸಾಮಾಜಿಕ ಭದ್ರತೆ ಪಿಂಚಣಿ ಪಡೆಯುತ್ತಿದ್ದರೂ ಕೂಡ ಅರ್ಜಿ ಸಲ್ಲಿಸಬಹುದು. ಸಾಮಾಜಿಕ ಭದ್ರತೆ ಪಿಂಚಣಿ ಹೊರತುಪಡಿಸಿ ಪ್ರತಿ ತಿಂಗಳು 2000 ಸಹಾಯಧನವನ್ನು ನೀಡಲಾಗುತ್ತದೆ.
● ಇತ್ಯಾದಿ ಅಂಶಗಳನ್ನು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡರು, ಮತ್ತು ಇನ್ನು ವಿವರವಾಗಿ ಆದೇಶ ಪತ್ರ ಹೊರಡಿಸಿ ತಿಳಿಸಲಾಗುವುದು ಎನ್ನುವ ಮಾಹಿತಿಯನ್ನು ಕೂಡ ತಿಳಿಸಿದರು.
*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*