ಜೊತೆಯಲಿ ಧಾರಾವಾಹಿಯು ಸೆಪ್ಟೆಂಬರ್ 9, 2019 ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಯಿತು. ಈ ಧಾರಾವಾಹಿಯು ಮರಾಠಿ ಭಾಷೆಯ ತುಲಾ ಪಾಹತೆ ರೇ ಧಾರಾವಾಹಿಯ ರಿಮೇಕ್ ಆಗಿದ್ದು ಆರೂರು ಜಗದೀಶ್ ಅವರ ನಿರ್ದೇಶನದಲ್ಲಿ ಈ ಧಾರವಾಹಿಯು ಮೂಡಿ ಬಂದಿದೆ. ಇದರಲ್ಲಿ ಮೊದಲಿಗೆ 45 ವರ್ಷದ ಶ್ರೀಮಂತ ಉದ್ಯಮಿ, ಆರ್ಯವರ್ಧನ್ / ಆರ್ಯ ಹಾಗೂ 20 ವರ್ಷದ ಮಧ್ಯಮ ವರ್ಗದ ಮಹಿಳೆ ಅನು ಸಿರಿಮನೆಳನ್ನು ಪ್ರೀತಿಸುತ್ತಾನೆ. ಆರ್ಯನ ಜೀವನಕ್ಕೆ ಪ್ರವೇಶಿಸಿದ ನಂತರ ಅನು ಜೀವನ ಬದಲಾಗುತ್ತದೆ. ನಂತರ ಈ ಕಥೆಯಲ್ಲಿ ಆರ್ಯವರ್ಧನ್ ಹಾಗೂ ರಾಜನಂದಿನಿ ಅವರ ಫ್ಲ್ಯಾಶ್ ಬ್ಯಾಕ್ ಬಗ್ಗೆ ಈ ಧಾರಾವಾಹಿಯು ಮುಂದುವರೆದಿದೆ. ಇದರಲ್ಲಿ ರಾಜನಂದಿನಿಯು ಶ್ರೀಮಂತ ಕುಟುಂಬದವಳಾಗಿದ್ದು ಇವರ ಪರಿಚಯವಾದಾಗ, ಬಹಳ ಒಳ್ಳೆಯವನಾಗಿದ್ದ ಆರ್ಯವರ್ಧನ್ ನಂತರ ಹಣ, ಆಸ್ತಿಗಾಗಿ ಹೇಗೆ ಬದಲಾಗುತ್ತಾನೆ ಎಂಬ ಕಥೆಯಾಗಿದೆ. ಆರ್ಯ ವರ್ಧನ್ ಪಾತ್ರದಲ್ಲಿ ಅಭಿನಯಿಸುವ ಅನಿರುದ್ಧ್ ಅವರ ಅಭಿನಯವು ಪ್ರೇಕ್ಷಕರ ಮನ ಗೆದ್ದಿದೆ.
ಈ ಪ್ಲ್ಯಾಶ್ ಬ್ಯಾಕ್ ಕಥೆಯಲ್ಲಿ ರಾಜನಂದಿನಿ ಹಾಗೂ ಆರ್ಯವರ್ದನ್ ಇಬ್ಬರು ಪರಿಚಯವಾಗಿ, ನಂತರ ಪರಸ್ಪರ ಪ್ರೀತಿಸಿ ಮದುವೆ ಆಗುತ್ತಾರೆ. ರಾಜನಂಧಿನಿಯು ಒಬ್ಬ ಶ್ರೀಮಂತ ಕುಟುಂಬದವಳು ಆಗಿದ್ದು, ಆರ್ಯ ಒಬ್ಬ ಬಡ ಕುಟುಂಬದವನಾಗಿ ಇರುತ್ತಾನೆ. ಆದ್ದರಿಂದ ರಾಜ ನಂದಿನಿ ಅವರ ತಂದೆ ಮೊದಲಿಗೆ ಇವರ ಮದುವೆಗೆ ವಿರೋಧ ವ್ಯಕ್ತ ಪಡಿಸಿರುತ್ತಾರೆ. ನಂತರ ಒಪ್ಪಿ ರಾಜನಂದಿನಿ ಹಾಗೂ ಆರ್ಯ ಇಬ್ಬರಿಗೂ ಮದುವೆ ಮಾಡುತ್ತಾರೆ. ಮದುವೆಯ ನಂತರ ಒಳ್ಳೆಯವನಾಗಿದ್ದ ಆರ್ಯವರ್ಧನ್ ಹಣ, ಆಸ್ತಿಗಾಗಿ ಬದಲಾಗುತ್ತಾನೆ, ರಾಜನಂದಿನಿ ತಂದೆಯನ್ನು ಮೋಸದಿಂದ ಕೊ’ಲ್ಲು’ತ್ತಾ’ನೆ, ವರ್ಧನ್ ಸಂಸ್ಥೆಯನ್ನು ತನ್ನದಾಗಿ ಮಾಡಿಕೊಳ್ಳುತ್ತಾನೆ. ಆರ್ಯ ಮಾಡಿದ ಎಲ್ಲಾ ತಂತ್ರ ಕುತಂತ್ರಗಳನ್ನು ಜಲಂಧರ್ ರಾಜನಂದಿನಿಗೆ ತಿಳಿಸುತ್ತಾನೆ ಆದರೆ ರಾಜನಂದಿನಿಗೆ ನಂಬಲು ಸಾಧ್ಯವಾಗುವುದಿಲ್ಲ. ನಂತರ ಆರ್ಯನ ದಾರಿಯಲ್ಲೇ ಹೋಗಿ ಅವನನ್ನು ಹಿಡಿಯಬೇಕು ಎಂದು ನಿರ್ಧರಿಸುವ ರಾಜನಂದಿನಿ, ಆಫೀಸ್ ಟೇಬಲ್ ಕೆಳಗೆ ರೆಕಾರ್ಡರ್ ಇರಿಸಿ, ಆರ್ಯ ಮತ್ತು ಝೇಂಡೆ ಆಡುವ ಎಲ್ಲಾ ಮಾತುಗಳನ್ನು ಕೇಳಿಸಿಕೊಳ್ಳುತ್ತಾ, ಆರ್ಯ ಮಾಡಿದ ಎಲ್ಲಾ ಕುತಂತ್ರಗಳನ್ನು ತಿಳಿದ ನಂತರ ರಾಜನಂದಿನಿಗೆ ಆರ್ಯನ ನಿಜ ಸ್ವರೂಪ ಗೊತ್ತಾಗಿ ದಿಕ್ಕೆ ತೋಚದೆ ಹಾಗೆ ಆಗುತ್ತದೆ.
ನಂತರ ಒಂದು ಟೇಪ್ ರೆಕಾರ್ಡರ್ ನಲ್ಲಿ ಒಂದು ಸಂದೇಶವನ್ನು ಆರ್ಯನಿಗೆ ತಲುಪಿಸುತ್ತಾಳೆ ಅದರಲ್ಲಿ , ಆರ್ಯ ನಾನು ನಿನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಸುಳ್ಳು ಮಾಡಿದ್ದೀಯ. ನನ್ನಿಂದ ನನ್ನ ತಂದೆ, ನನ್ನ ಬ್ಯುಸಿನೆಸ್ ಎಲ್ಲವನ್ನು ಕಿತ್ತು ಕೊಂಡಿದ್ದೀಯ, ನೀನು ಮಾಡಿದ್ದೆಲ್ಲ ನನಗೆ ಗೊತ್ತಾಗಿದೆ ಎಂದು ಹೇಳಿರುತ್ತಾಳೆ ಇದನ್ನು ಕೇಳಿ ಆರ್ಯ ಮತ್ತು ಝೇಂಡೆ ಇಬ್ಬರಿಗೂ ಶಾಕ್ ಆಗುತ್ತದೆ. ನಂತರ ಕೋಪಗೊಂಡ ಆರ್ಯ ರಾಜನಂದಿನಿಗೆ ಕರೆ ಮಾಡಿ ತಮ್ಮೊಂದಿಗೆ ನಾನು ಇನ್ನು ಕೆಲವು ಸತ್ಯಗಳನ್ನು ಹೇಳಬೇಕು ಎಂದು ಒಂದು ಸ್ಥಳಕ್ಕೆ ಬರಲು ಕರೆಯುತ್ತಾನೆ. ಅದಕ್ಕೆ ರಾಜನಂದಿನಿಯು ಇದು ಕೊನೆಯ ಬಾರಿ ಎಂದು ಕೊಂಡು ಬರಲು ಒಪ್ಪುತ್ತಾಳೆ. ಆರ್ಯನ ಕೋಪವನ್ನು ಗಮನಿಸಿದ ಝೇಂಡೆ ಕೋಪದಲ್ಲಿ ರಾಜನಂದಿನಿಗೆ ಏನಾದರೂ ಮಾಡಿ ಬಿಡುತ್ತಾನೋ ಎಂಬ ಭಯದಿಂದ ರೌಡಿಗಳಿಗೆ ರಾಜ ನಂದಿನಿಯನ್ನು ಅಟ್ಯಾಕ್ ಮಾಡಲು ತಿಳಿಸುತ್ತಾನೆ.
ರಾಜ ನಂದಿನಿಯು ಮನೆಯಿಂದ ಹೊರಡುವಾಗ ಅವಳ ತಾಯಿಯು ಎಲ್ಲಿಗೆ ಹೋಗುತ್ತಿರುವೆ ಎಂದು ಕೇಳುತ್ತಾಳೇ ಆಗ ರಾಜನಂದಿನಿಯು ಆರ್ಯನ ಜೊತೆ ಹೋಗುತ್ತಿದ್ದೇನೆ ಎಂದು ಹೊರಡುತ್ತಾಳೆ. ಆದರೆ ಅವಳು ತನ್ನ ಮನಸ್ಸಿನಲ್ಲಿ ಆರ್ಯವರ್ಧನ್ ಮಾಡಿರುವ ನಂಬಿಕೆ ದ್ರೋಹ, ವಂಚನೆ, ತಂದೆ ಸಾವಿಗೆ ಕಾರಣ ಎಂಬ ಎಲ್ಲಾ ವಿಷಯವನ್ನು ನೆನೆದು ಇನ್ನು ಮುಂದೆ ಆರ್ಯವರ್ಧನ್ ನನ್ನ ಜೊತೆ ಇರಲು ಸಾಧ್ಯವಿಲ್ಲ ಎಂದು ಅಂದು ಕೊಳ್ಳುತ್ತಾ ಹೊರಡುತ್ತಾಳೆ. ರಾಜನಂದಿನಿಯು ಹೋಗುತ್ತಿರುವಾಗ ರೌಡಿಗಳು ಅಟ್ಯಾಕ್ ಮಾಡಿದಾಗ ಅವಳು ಓಡಲು ಆರಂಭಿಸುತ್ತಾಳೆ. ಈ ಘಟನೆಯು ಕನಸ್ಸಿನ ರೂಪದಲ್ಲಿ ಅನು ಸಿರಿಮನೆಗೆ ಕಾಡುತ್ತಿರುತ್ತದೆ. ಈಗ ಅನು ಸಿರಿಮನೆಗೆ ಹಿಂದಿನ ಎಲ್ಲ ವಿಷಯವು ಗೊತ್ತಾಗಿದೆ. ಆರ್ಯವರ್ಧನ ಹಾಗೂ ಝೇಂಡೆ ಇಬ್ಬರು ಸೇರಿ ಮಾಡಿರುವ ಅಪರಾಧ ದ್ರೋಹ ವಂಚನೆಗಳ ಬಗ್ಗೆ ಎಲ್ಲವೂ ಅನು ಸಿರಿಮನೆಗೆ ತಿಳಿದಿದೆ. ಆದ್ದರಿಂದ ನಿಧಾನವಾಗಿ ಅನುಸಿರಿಮನೆಯು ವರ್ಧನ್ ಮನೆತನಕ್ಕೆ ಸೇರಿದ ಸಮಸ್ತ ಆಸ್ತಿಯನ್ನು ಆ ಮನೆಯ ಮಗನಾದ ಹಾಗೂ ರಾಜನಂದಿನಿಯ ಪ್ರೀತಿಯ ತಮ್ಮನಾದ ಹರ್ಷವರ್ಧನಿಗೆ ಸಿಗುವ ಹಾಗೆ ಮಾಡಿ, ಆರ್ಯವರ್ಧನ್ ಗೆ ಶಿ’ಕ್ಷೆ ಕೊಡಿಸುವುಸು ಅಂತಿಮವಾಗಿ ಇದೆ. ಆರ್ಯನಿಗೆ ಶಿ’ಕ್ಷೆ ಆದರೆ ಈ ಧಾರಾವಾಹಿಯು ಮುಗಿಯುತ್ತದೆ ಎಂಬುದು ಪ್ರೇಕ್ಷಕರ ಅಭಿಪ್ರಾಯವಾಗಿದೆ.