ಸ್ಯಾಂಡಲ್ ವುಡ್ ನಲ್ಲಿರುವ ಕಲಾವಿದರ ಕುಟುಂಬದ ವೈಯುಕ್ತಿಕ ವಿಚಾರವಾಗಿ ಆಗಾಗ ಕೆಲವು ರೂಮರ್ಸ್ಗ ಳು ಕೇಳಿ ಬರುತ್ತಲೇ ಇರುತ್ತವೆ. ಕೆಲವೊಂದು ಗಾಳಿ ಸುದ್ದಿಯಾಗಿ ತೇಲಿ ಹೋದರೆ, ಕೆಲವೊಂದಿಷ್ಟು ಗ’ಲಾ’ಟೆ’ಗಳು ಮಾತ್ರ ಬೀದಿಗಿಳಿದು ರಂಪ ಮಾಡುವಷ್ಟು ದೊಡ್ಡದಾಗಿ ಕೊನೆಗೆ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿರುವ ಉದಾಹರಣೆಗಳು ಇವೆ. ಇವೆಲ್ಲದರ ನಡುವೆ ಮಾದರಿ ಎನಿಸಿಕೊಂಡಿರುವುದು ರಾಜಕುಟುಂಬ. ರಾಜವಂಶ ಎಂದರೆ ಹಾಗೆ ಕನ್ನಡ ಸಂಸ್ಕೃತಿ ಸಂಪ್ರದಾಯಕ್ಕೆ ರಾಯಭಾರಿಗಳು ಇವರು ಎಂದೇ ಹೇಳಬಹುದು. ಈ ರೀತಿ ಇಡೀ ಕನ್ನಡ ಚಿತ್ರರಂಗಕ್ಕೆ ವೈಯುಕ್ತಿಕ ವಿಚಾರವಾಗಿ ಆಗಲಿ, ಕುಟುಂಬ ವಿಚಾರವಾಗಿ ಆಗಲಿ ಎಲ್ಲಾ ವಿಷಯದಲ್ಲೂ ಕೂಡ ಸ್ಪೂರ್ತಿ ಆಗುವವರು ಇವರು. ಡಾಕ್ಟರ್ ರಾಜಕುಮಾರ್ ಮಾತ್ರವಲ್ಲದೆ ಅವರ ಮೂರು ಜನ ಮಕ್ಕಳು ಕೂಡ ಅದೇ ಹಾದಿಯಲ್ಲಿ ನಡೆದು ತಂದೆಯ ಹೆಸರು ಉಳಿಸಿದ್ದಾರೆ.
ಹೀಗಾಗಿ ಈ ಮೂರು ಜನರನ್ನು ಪಕ್ಕ ಫ್ಯಾಮಿಲಿ ಮ್ಯಾನ್ ಗಳು ಎನ್ನಬಹುದು. ಈ ಕಾರಣಕ್ಕಾಗಿ ಒಂದು ಸಂದರ್ಶನದಲ್ಲಿ ಶಿವರಾಜ್ ಕುಮಾರ್ ಅವರನ್ನು ಅವರ ವೈಯುಕ್ತಿಕ ಜೀವನದ ವಿಷಯವಾಗಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ ಅದಕ್ಕೆ ಶಿವಣ್ಣನ ಉತ್ತರ ಏನಿತ್ತು ಗೊತ್ತಾ?. ಕನ್ನಡದಲ್ಲಿ ಹನಿಮೂನ್ ಎನ್ನುವ ವೆಬ್ಸಿರೆಸ್ ಒಂದು ರೆಡಿಯಾಗಿದ್ದು ಇದಕ್ಕೆ ಶಿವರಾಜ್ ಕುಮಾರ್ ಅವರ ಪುತ್ರಿ ಅವರು ಪ್ರೊಡ್ಯೂಸ್ ಮಾಡುತ್ತಿದ್ದಾರೆ. ವೂಟ್ ಸೆಲೆಕ್ಟ್ ನಲ್ಲಿ ಈ ವೆಬ್ ಸೀರೀಸ್ ಎಪಿಸೋಡ್ಗಳು ಬರಲಿದ್ದು, ಈಗಾಗಲೇ ಟ್ರೈಲರ್ ಕೂಡ ಬಿಡುಗಡೆಯಾಗಿ ಸಾಕಷ್ಟು ಹವಾ ಕ್ರಿಯೆಟ್ ಮಾಡಿದೆ. ಈ ವೆಬ್ ಸೀರಿಸ್ ನಲ್ಲಿ ನಾಗಭೂಷಣ ಅವರು ಹೊಸದಾಗಿ ಮದುವೆಯಾಗಿರುವ ಹುಡುಗನಾಗಿ ಮತ್ತು ಸಂಜನಾ ಆನಂದ್ ಅವರು ಮಧುಮಗಳಾಗಿ ಕಾಣಿಸಿಕೊಂಡಿದ್ದಾರೆ. ವಾಸುಕಿ ವೈಭವ್ ಅವರ ಸಂಗೀತ ಹಾಗೂ ಸಾಹಿತ್ಯ ಹನಿಮೂನ್ ವೆಬ್ ಸೀರೀಸ್ ಗೆ ಇದೆ. ಮಧ್ಯಮವರ್ಗದ ಅರೆಂಜ್ ಮ್ಯಾರೇಜ್ ಕಪಲ್ ಗಳು ಹನಿಮೂನ್ ಗೆ ಹೋದಾಗ ಆಗುವ ವಿಷಯಗಳ ಬಗ್ಗೆ ಕಥೆಯನ್ನು ಇಟ್ಟುಕೊಂಡು ಇದನ್ನು ಶುರು ಮಾಡಲಾಗಿದೆ.
ಟ್ರೈಲರ್ ತುಂಬಾ ಗ್ರಾಂಡ್ ಆಗಿ ಮೂಡಿ ಬಂದಿದ್ದು ಕನ್ನಡಿಗರು ಸಾಕಷ್ಟು ಕುತೂಹಲದಿಂದ ಇದನ್ನು ನೋಡಲು ಕಾಯುತ್ತಿದ್ದಾರೆ. ಈ ಸೀರಿಸ್ ಗೆ ಸಂಬಂಧಪಟ್ಟ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಿವರಾಜ್ ಕುಮಾರ್ ಅವರನ್ನು ಈ ಸೀರಿಸ್ ನಾಯಕನಾದ ನಾಗಭೂಷಣ ಅವರು ಸಂಸಾರ ನಿರ್ವಹಣೆ ಬಗ್ಗೆ ಸಲಹೆಯನ್ನು ಕೇಳಿದ್ದಾರೆ. ನಿಮ್ಮ ಮತ್ತು ಗೀತಕ್ಕನ ನಡುವೆ ಜಗಳ ಆದಾಗ ಮೊದಲು ಯಾರು ಕ್ಷಮೆ ಕೇಳುತ್ತಾರೆ ಎಂದು ಕೇಳಿದ್ದಾರೆ ಅದಕ್ಕೆ ಉತ್ತರಿಸಿದ ಶಿವರಾಜಕುಮಾರ್ ಅವರು ನನ್ನದು ತಪ್ಪು ಇದೆ ಎಂದು ಗೊತ್ತಾದಾಗ ಖಂಡಿತವಾಗಿ ನಾನು ಮೊದಲು ಕ್ಷಮೆ ಕೇಳುತ್ತೇನೆ. ಯಾಕೆಂದರೆ ಯಾವುದೇ ವಿಷಯವನ್ನು ಮುಂದುವರಿಸಿಕೊಂಡು ಹೋಗುವುದು ಚೆನ್ನಾಗಿರುವುದಿಲ್ಲ, ಆಗ ಅಲ್ಲಿನ ವಾತಾವರಣವೇ ಬದಲಾಗುತ್ತದೆ. ಮುಂದೆ ನಮಗೆ ಇದರ ಬಗ್ಗೆ ಗಿಲ್ಟ್ ಕಾಡುತ್ತದೆ ಹಾಗಾಗಿ ನಾನು ಪ್ರಾಮಾಣಿಕವಾಗಿ ತಪ್ಪು ಮಾಡಿದರೆ ಒಪ್ಪಿಕೊಂಡು ಅದರಿಂದ ಹೊರಬರುವುದನ್ನು ನೋಡುತ್ತೇನೆ ಎಂದಿದ್ದಾರೆ.
ಸುಖ ಸಂಸಾರಕ್ಕೆ 12 ಸೂತ್ರಗಳು ಇದೆಯೆಂದು ಹೇಳುತ್ತಾರೆ ಆದರೆ ನನಗೆ ಗೊತ್ತಿರುವುದು ಒಂದೇ ಸೂತ್ರ ನಾನು ಅದನ್ನೇ ಪಾಲಿಸುವುದು ಅದೇನೆಂದರೆ ನನ್ನ ಹೆಂಡತಿ ಏನೇ ಹೇಳಿದರೂ ಕೂಡ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಹೀಗಾಗಿ ಸಂಸಾರದಲ್ಲಿ ಸಂತೋಷವಾಗಿರಬಹುದು ಎಂದು ಸಲಹೆ ನೀಡಿದ್ದಾರೆ. ಹಾಗೆಯೇ ಹೊಸದಾಗಿ ಮದುವೆಯಾದವರು ಹನಿ ಮೂನ್ ಗೆ ಹೋಗುವುದಾದರೆ ಮೈಸೂರು ಅಥವಾ ಸಿಂಗಪೂರ್ ಗೆ ಹೋಗಿ ಎಂದು ಸಲಹೆ ನೀಡಿದ್ದಾರೆ. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ & ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.