ದ್ವಾದಶ ರಾಶಿಗಳಲ್ಲಿ 10ನೇ ರಾಶಿಯಾಗಿರುವ ಮಕರ ರಾಶಿಯವರ ರಾಶಿ ಅಧಿಪತಿ ಶನಿ ಆಗಿರುತ್ತದೆ. ಮಕರ ರಾಶಿಯವರು ಸದಾ ಸೃಜನಶೀಲರಾಗಿರುವ, ಬದ್ಧತೆಯಿಂದ ಕಾರ್ಯವನ್ನು ನಿರ್ವಹಿಸುವ, ಸದಾ ಕಾರ್ಯನಿರತರಾಗಿರುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಟ್ರಾವೆಲಿಂಗ್ ಮಾಡುವುದು ಇವರಿಗೆ ಬಹಳ ಇಷ್ಟವಾದ ಹವ್ಯಾಸ.
ಇವರಿಗೆ ಇರುವ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಿ ವಾಸಿಸುವ ಅಥವಾ ಲಾಭ ಪಡೆದುಕೊಳ್ಳುವ ಗುಣಗಳು ಜನ್ಮತಹವಾಗಿಯೇ ಬಂದಿರುತ್ತದೆ. ಜುಲೈ ತಿಂಗಳಿನಲ್ಲಿ ಇವರ ಭವಿಷ್ಯ ಯಾವ ರೀತಿ ಇರುತ್ತದೆ ಯಾವ ವಿಚಾರಗಳಲ್ಲಿ ಲಾಭ ಇರುತ್ತದೆ ಯಾವ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಎನ್ನುವುದನ್ನು ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
● ಗುರು ಮೂರನೇ ಮನೆಯಿಂದ ನಾಲ್ಕನೇ ಮನೆಗೆ ಹೋಗುವುದರಿಂದ ಈ ಸಮಯದಲ್ಲಿ ರಾಹುವಿನ ಜೊತೆ ಗುರು ಸೇರಲಿದೆ, ಇದನ್ನು ಗುರು ಚಾಂಡಾಳ ಯೋಗ ಎನ್ನುತ್ತಾರೆ. ಈ ಸಮಯದಲ್ಲಿ ಸುಲಭವಾಗಿ ಆಗುವಂತಹ ಕೆಲಸಗಳು ಕೂಡ ಕಠಿಣವಾಗುತ್ತವೆ. ಗುರು ನಾಲ್ಕನೇ ಮನೆಯಲ್ಲಿ ಇರುವುದರಿಂದ ಪ್ರಯಾಣ ಮಾಡುವಾಗ ಹಣದ ನಷ್ಟ ಆಗುವ ಸಂದರ್ಭಗಳು ಇರುತ್ತವೆ. ಹಣ ಕಳ್ಳತನ ವಾಗಬಹುದು ಅಥವಾ ಅನಿರೀಕ್ಷಿತವಾಗಿ ಹಣ ಖರ್ಚಾಗುವ ಸಂದರ್ಭಗಳು ಎದುರಾಗಬಹುದು ಆದ್ದರಿಂದ ಜಾಗರೂಕರಾಗಿರಿ.
● ಗುರುವಿನ ಸ್ಥಾನ ಬದಲಾವಣೆಯ ಕಾರಣದಿಂದಾಗಿ ನಿಮಗೆ ಹಣಕಾಸಿನ ವಿಚಾರದಲ್ಲಿ ಕೂಡ ಅಡಚಣೆಗಳು ಉಂಟಾಗುತ್ತವೆ. ನೀವು ನಿರೀಕ್ಷಿಸಿದಷ್ಟು ಉಳಿತಾಯ ಅಥವಾ ಆದಾಯ ಆಗದೇ ಇರಬಹುದು ಅಥವಾ ನಿರೀಕ್ಷೆಗಿಂತ ಹೆಚ್ಚು ಖರ್ಚು ಆಗಲೂಬಹುದು.
● ಎರಡನೇ ಮನೆಯಲ್ಲಿ ಹಿಮ್ಮುಖವಾಗಿರುವ ಶನಿಯು ಹಣಕಾಸಿನ ತೊಂದರೆಯನ್ನು ನಿವಾರಿಸುತ್ತಾರೆ. ಹಣಕಾಸಿನ ಆದಾಯ ಮೂಲವನ್ನು ತುಂಬಿಸುತ್ತಾರೆ ಆದರೆ ಹಣಕಾಸಿನ ಮೂಲದ ವಿಚಾರದಲ್ಲಿ ಹೆಚ್ಚು ನಿರ್ಬಂಧನೆಯನ್ನು ವಿಧಿಸುತ್ತಾರೆ.
● ಹತ್ತನೇ ಮನೆಯಲ್ಲಿ ಇರುವ ಕೇತುವಿನ ಉಪಸ್ಥಿತಿಯು ಆಧ್ಯಾತ್ಮಿಕ ವಿಚಾರವಾಗಿ ಒಲವು ಉಂಟಾಗುವ ರೀತಿ ಮಾಡುತ್ತಾರೆ. ಆಧ್ಯಾತ್ಮಿಕ ವಿಚಾರವಾಗಿ ಪ್ರಯಾಣಗಳನ್ನು ಬೆಳೆಸುವ ಸಾಧ್ಯತೆಗಳು ಕೂಡ ಇವೆ. ಆ ರೀತಿ 10ನೇ ಮನೆಯಲ್ಲಿರುವ ಕೇತು ನಿಮ್ಮನ್ನು ಪ್ರೇರೇಪಿಸುತ್ತಾರೆ ಮತ್ತು ಆಧ್ಯಾತ್ಮದ ಕಡೆಗೆ ಆಸಕ್ತಿಯನ್ನು ಹುಟ್ಟಿಸುತ್ತಾರೆ.
● ಹತ್ತನೇ ಮನೆಯಲ್ಲಿರುವ ಕೇತು ನಿಮ್ಮನ್ನು ಭೌತಿಕ ವ್ಯವಹಾರಗಳಿಂದ ದೂರ ಇಡುವ ಪ್ರಯತ್ನ ಮಾಡುತ್ತಾರೆ. ಈ ಮೇಲೆ ತಿಳಿಸಿದಂತೆ ಅದು ಆಧ್ಯಾತ್ಮದ ವಿಚಾರಕ್ಕೆ ಸೇರುತ್ತದೆ ಹೀಗಾಗಿ ನೀವು ಆಧ್ಯಾತ್ಮಿಕ ಗುರುವನ್ನು ಹುಡುಕಿಕೊಂಡು ಹೋಗುವ ರೀತಿ ಕೇತು ನಿಮ್ಮಲ್ಲಿ ಬದಲಾವಣೆಯನ್ನು ತರಲಿದ್ದಾರೆ.
● ಸತ್ಸಂಗ ಗಳಲ್ಲಿ ಭಾಗಿಯಾಗುವುದು, ಪ್ರವಚನಗಳನ್ನು ಕೇಳುವುದು, ಆಧ್ಯಾತ್ಮಿಕ ಜ್ಞಾನವನ್ನು ಹೆಚ್ಚಿಸುವಂತಹ ಕೆಲಸಗಳನ್ನು ಕೇತು ಗ್ರಹವು ಜುಲೈ ತಿಂಗಳಿನಲ್ಲಿ ಮಕರ ರಾಶಿಯವರಿಗೆ ಮಾಡಲಿದ್ದಾರೆ.
● ಪ್ರೀತಿಯ ಗ್ರಹ ಎನಿಸಿರುವ ಶುಕ್ರನು ಸಹ ಹಿಮ್ಮುಖವಾಗಿ 8ನೇ ತಾರೀಕಿನಂದು ಅಸ್ತಾಂಗತರಾಗಿ 18ನೇ ತಾರೀಕು ಉದಯಿಸಲಿದ್ದಾರೆ. ಇದರ ಪ್ರಭಾವವಾಗಿ ಸಂಗಾತಿ ಜೊತೆಗಿನ ವಿರಸ ಕಡಿಮೆಯಾಗಿ ಸಾಮರಸ್ಯ ಮೂಡುತ್ತದೆ. ಯಾವುದೇ ರೀತಿಯ ಕೆಟ್ಟ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಇಲ್ಲ. ಪ್ರೀತಿ, ಪ್ರೇಮ ಅಥವಾ ಸಾಂಗತ್ಯದ ವಿಚಾರವಾಗಿ ನಿರಾಳವಾಗಿ ಇರುತ್ತೀರಿ. ಆದರೆ ಶುಕ್ರನು ಐದನೇ ಮನೆಯಲ್ಲಿ ಮತ್ತು ಹತ್ತನೇ ಮನೆಯಲ್ಲಿ ಅಧಿಪತಿ ಆಗಿರುವುದರಿಂದ ವೃತ್ತಿಯಲ್ಲಿ ಹಿನ್ನಡೆಯನ್ನು ಅನುಭವಿಸುತ್ತೀರಿ.
● ಬುಧ ಗ್ರಹವು ಕೂಡ ಹಿಮ್ಮುಖವಾದ ಚಲನೆ ಹೊಂದಿರುವುದರಿಂದ ಅಂತಹ ವಿಶೇಷ ಏನು ಇರುವುದಿಲ್ಲ, ಸಮಾಧಾನಕರವಾದ ಪ್ರಭಾವ ಉಂಟಾಗಲಿದೆ.
● ಮಕರ ರಾಶಿಯವರು ಪರಿಹಾರವಾಗಿ ಪ್ರತಿನಿತ್ಯವೂ ಕೂಡ ತಪ್ಪದೆ 108 ಬಾರಿ ಓಂ ನಮಃ ಶಿವಾಯ ಎನ್ನುವ ಪಂಚಾಕ್ಷರಿ ಮಂತ್ರವನ್ನು ಜಪಿಸಿದರೆ ಮಹದೇವನ ಆಶೀರ್ವಾದದಿಂದ ಎಲ್ಲವೂ ಒಳಿತಾಗಲಿದೆ.