ಕರ್ನಾಟಕದಾತ್ಯಂತ ಇರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೂ ಕೂಡ ಸಿಹಿಸುದ್ದಿ. ಯಾಕೆಂದರೆ ಕೇಂದ್ರ ಸರ್ಕಾರ ರಕ್ಷಣಾ ಇಲಾಖೆ ಅಡಿಯಲ್ಲಿ ಬರುವ ಸಂಸ್ಥೆಯಲ್ಲಿ ಇರುವ ಖಾಲಿ ಇರುವ ಸಂಸ್ಥೆಯಲ್ಲಿ ಅಪ್ರೆಂಟಿಸ್ ಶಿಪ್ ನಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ಭಾರತದಾದ್ಯಂತ ಇರುವ ಎಲ್ಲಾ ಹತ್ತನೇ ತರಗತಿ ಮತ್ತು ITI ಓದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು ವಯಸ್ಸಿನ ವಿಚಾರದಲ್ಲಿ ಕೂಡ ಬಾರಿ ವಿನಾಯಿತಿ ಇದೆ. 15 ವರ್ಷ ವಯಸ್ಸಿನವರು ಕೂಡ ಅರ್ಜಿ ಸಲ್ಲಿಸಿ ಈ ಹುದ್ದೆಯನ್ನು ಪಡೆಯಬಹುದಾಗಿದೆ. ಆಕರ್ಷಕ ಸ್ಟೈಫಂಡ್ ಪಡೆಯುವ ಸೌಲಭ್ಯವೂ ಲಭ್ಯವಿದೆ.
ಆದ್ದರಿಂದ ಈ ಅಂಕಣದಲ್ಲಿ ಈ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿರುವ ಬಗ್ಗೆ ಹಾಗೂ ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಇದನ್ನು ಓದಿದ ಬಳಿಕ ಆಸಕ್ತರು ಅರ್ಜಿ ಸಲ್ಲಿಸಿ ಹುದ್ದೆ ಪಡೆದುಕೊಳ್ಳಿ.
ಇಲಾಖೆ:- ರಕ್ಷಣಾ ಇಲಾಖೆ
ಉದ್ಯೋಗ ಸಂಸ್ಥೆ:- ಹೆವಿ ವೆಹಿಕಲ್ಸ್ ಫ್ಯಾಕ್ಟರಿ,
ಯೂನಿಟ್ ಆಫ್ ಆರ್ಮರ್ಡ್ ವೆಹಿಕಲ್ಸ್ ನಿಗಮ್ ಲಿಮಿಟೆಡ್, ಗೌರ್ಮೆಂಟ್ ಆಫ್ ಇಂಡಿಯಾ ಎಂಟರ್ಪ್ರೈಸಸ್.
ಉದ್ಯೋಗ ಸ್ಥಳ:- ತಮಿಳುನಾಡು.
ಒಟ್ಟು ಹುದ್ದೆಗಳ ಸಂಖ್ಯೆ:- 168.
ಹುದ್ದೆಗಳ ವಿವರ:-
● ಫಿಟ್ಟರ್ (NON ITI ) – 32
● ಮೆಕ್ಯಾನಿಸ್ಟ್ (NON ITI ) – 36
● ವೆಲ್ಡರ್ (NON ITI ) – 24
● ಎಲೆಕ್ಟ್ರಿಷಿಯನ್ (EX ITI ) – 10
● ಮೆಕ್ಯಾನಿಕ್ (EX ITI) – 38
● ವೆಲ್ಡರ್ (EX ITI ) – 28
ಸ್ಟೈಫಂಡ್ – ಆಯಾ ಗ್ರೇಡ್ ಗೆ ಅನುಸಾರವಾಗಿ ಪ್ರತಿ ತಿಂಗಳು 6,000 ರಿಂದ 8,050 ತರಬೇತಿ ಭತ್ಯೆಯಾಗಿ ಸಿಗಲಿದೆ.
ಶೈಕ್ಷಣಿಕ ವಿದ್ಯಾರ್ಹತೆ:-
● ಹೆವಿ ವೆಹಿಕಲ್ಸ್ ಫ್ಯಾಕ್ಟರಿ ಹೊರಡಿಸಿರುವ ಅಧಿಸೂಚನೆ ಪ್ರಕಾರ ಈ ಮೇಲ್ಕಂಡ ಹುದ್ದೆಗಳಿಗೆ ಸೇರಲು ಇಚ್ಚಿಸುವ ಅಭ್ಯರ್ಥಿಗಳು SSLC, 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ITI ಅನ್ನು ಪೂರ್ತಿಗೊಳಿಸಿರಬೇಕು.
● SSLC ಪರೀಕ್ಷೆಯಲ್ಲಿಕನಿಷ್ಠ 50% ಅಂಕದೊಂದಿಗೆ ಪಾಸ್ ಆಗಿರುವುದು ಕಡ್ಡಾಯವಾಗಿದೆ.
ವಯೋಮಿತಿ:-
● ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಕೂಡ ಕನಿಷ್ಠ ವಯೋಮಾನ 15 ವರ್ಷಗಳು.
● ಗರಿಷ್ಠ ವಯೋಮಿತಿ ಸಾಮಾನ್ಯ ಅಭ್ಯರ್ಥಿಗಳಿಗೆ 24 ವರ್ಷಗಳು.
● OBC ವರ್ಗದ ಅಭ್ಯರ್ಥಿಗಳಿಗೆ 27 ವರ್ಷಗಳು.
● SC/ST ಗೆ ಸೇರಿದ ಅಭ್ಯರ್ಥಿಗಳಿಗೆ 29 ವರ್ಷಗಳು.
ಅರ್ಜಿ ಶುಲ್ಕ:-
● ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಕೂಡ 100 ರೂ. ಅರ್ಜಿ ಶುಲ್ಕ ವಿಧಿಸಲಾಗಿದೆ.
● SC/ST ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು ಮರುಪಾವತಿಯಾಗಲಿದೆ.
ಅರ್ಜಿ ಸಲ್ಲಿಸುವ ವಿಧಾನ:-
● ಆನ್ಲೈನ್ ಮತ್ತು ಆಫ್ಲೈನ್ ಅಲ್ಲಿ ಅರ್ಜಿ ಸಲ್ಲಿಸಬಹುದು.
● ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸುವವರು ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಹೋಗಿ ಕೇಳಲಾದ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು
●:ಆಫ್ಲೈನಲ್ಲಿ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸಿ ಸಂಸ್ಥೆ ವಿಳಾಸಕ್ಕೆ ಕಳುಹಿಸಬೇಕು.
ವಿಳಾಸ:-
ಚೀಫ್ ಜನರಲ್ ಮ್ಯಾನೇಜರ್,
ಹೆವಿ ವೆಹಿಕಲ್ಸ್ ಫ್ಯಾಕ್ಟರಿ,
ಅವಡಿ, ಚೆನ್ನೈ – 600054
ತಮಿಳುನಾಡು.
ಪ್ರಮುಖ ದಿನಾಂಕಗಳು:-
● ಅಧಿಸೂಚನೆ ಹೊರಡಿಸಿದ ದಿನಾಂಕ :- 10.06.2023
● ಅರ್ಜಿ ಸಲ್ಲಿಸುವಿಕೆ ಆರಂಭ ದಿನಾಂಕ :- 15.05.2023
● ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ :- 16.06.2023.
*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*