Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಶ್ರೀ ಗುರುರಾಘವೇಂದ್ರ ಹಾಗೂ ಸಾಯಿಬಾಬಾ ಅವರ ಕೃಪೆ ಈ ರಾಶಿಯವರ ಮೇಲಿರಲಿದೆ, ಎಲ್ಲಾ ಕೆಲಸದಲ್ಲೂ ಯಶಸ್ಸು ದೊರೆಯಲಿದೆ. 12 ರಾಶಿಯವರ ಇಂದಿನ ದಿನಭವಿಷ್ಯ ಹೇಗಿದೆ ನೋಡಿ

Posted on June 8, 2023 By Kannada Trend News No Comments on ಶ್ರೀ ಗುರುರಾಘವೇಂದ್ರ ಹಾಗೂ ಸಾಯಿಬಾಬಾ ಅವರ ಕೃಪೆ ಈ ರಾಶಿಯವರ ಮೇಲಿರಲಿದೆ, ಎಲ್ಲಾ ಕೆಲಸದಲ್ಲೂ ಯಶಸ್ಸು ದೊರೆಯಲಿದೆ. 12 ರಾಶಿಯವರ ಇಂದಿನ ದಿನಭವಿಷ್ಯ ಹೇಗಿದೆ ನೋಡಿ

ಮೇಷ ರಾಶಿ:- ಕಛೇರಿಯಲ್ಲಿ ನೀವಿಂದು ಶ್ರದ್ಧೆಯಿಂದ ಕೆಲಸ ಮಾಡಬೇಕು. ನಿಮ್ಮ ಕೆಲಸದ ಮೂಲಕ ಮೇಲಾಧಿಕಾರಿಗಳ ನಂಬಿಕೆ ಗಳಿಸಿದರೆ ಇನ್ನು ಹೆಚ್ಚಿನ ಜವಾಬ್ದಾರಿಯುತ ಕೆಲಸಗಳನ್ನು ಪಡೆಯುತ್ತೀರಿ. ನಿಮಗೆ ವಹಿಸಿ ಕೊಟ್ಟ ಕೆಲಸವನ್ನು ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ಪೂರೈಸುವುದು ಉತ್ತಮ. ಹಣದ ಪರಿಸ್ಥಿತಿಯು ಉತ್ತಮವಾಗಿರುತ್ತದೆ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ.
ಅದೃಷ್ಟದ ಸಂಖ್ಯೆ: 06 ಅದೃಷ್ಟದ ಬಣ್ಣ: ಕೆಂಪು
ಒಳ್ಳೆಯ ಸಮಯ: ಸಂಜೆ 6:25 ರಿಂದ ರಾತ್ರಿ 9:30 ರವರೆಗೆ

ವೃಷಭ ರಾಶಿ:- ಆರ್ಥಿಕವಾಗಿ ಇಂದು ಒಳ್ಳೆಯ ದಿನವಲ್ಲ, ನೀವು ಪಡೆಯಲು ನಿರೀಕ್ಷಿಸುತ್ತಿದ್ದ ಆಸ್ತಿಯನ್ನು ಇಂದು ನೀವು ಸ್ವೀಕರಿಸುವುದಿಲ್ಲ. ಅದೇ ವಿಷಯ ನಿಮಗೆ ದುಃಖವನ್ನುಂಟು ಮಾಡುತ್ತದೆ. ಆದರೂ ಈ ಪರಿಸ್ಥಿತಿ ಹೆಚ್ಚು ಕಾಲ ಉಳಿಯುವುದಿಲ್ಲ. ಇಂದು ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ವೈಯುಕ್ತಿಕ ಸಂಬಂಧದಲ್ಲಿ ಅಪಶ್ರುತಿ ಇರುತ್ತದೆ. ನಿಮ್ಮ ಕುಟುಂಬ ಸದಸ್ಯರ ಜೊತೆ ವಿವಾದವನ್ನು ಹೊಂದಿರಬಹುದು.
ಅದೃಷ್ಟದ ಸಂಖ್ಯೆ: 09 ಅದೃಷ್ಟದ ಬಣ್ಣ: ಬಿಳಿ
ಒಳ್ಳೆಯ ಸಮಯ: ಮಧ್ಯಾಹ್ನ 2:30 ರಿಂದ ರಾತ್ರಿ 9:30 ರವರೆಗೆ.

ಮಿಥುನ ರಾಶಿ:- ಬಹಳ ಸಮಯದ ನಂತರ ನೀವು ಮಾನಸಿಕ ಶಾಂತಿಯನ್ನು ಅನುಭವಿಸುವಿರಿ. ಪ್ರೀತಿಪಾತ್ರರ ಜೊತೆ ಸಮಯ ಕಳೆಯಲು ಪ್ರಯತ್ನಿಸುತ್ತೀರಿ. ಸ್ನೇಹಿತರು, ಕುಟುಂಬದವರ ಜೊತೆ ಪ್ರವಾಸಕ್ಕೆ ಹೋಗುವ ಸಾಧ್ಯತೆಗಳು ಇವೆ. ಇದು ನಿಮಗೆ ಬಹಳ ಸಂತೋಷವನ್ನು ಕೊಡುತ್ತದೆ. ವ್ಯಾಪಾರಸ್ಥರು ತಮ್ಮ ವ್ಯವಹಾರಗಳಿಗೆ ಸಂಬಂಧಪಟ್ಟ ಹಾಗೆ ಧೃಡ ನಿರ್ಧಾರವನ್ನು ತೆಗೆದುಕೊಳ್ಳುವ ದಿನ.
ಅದೃಷ್ಟದ ಸಂಖ್ಯೆ: 06 ಅದೃಷ್ಟದ ಬಣ್ಣ: ಗುಲಾಬಿ.
ಒಳ್ಳೆಯ ಸಮಯ: ಬೆಳಗ್ಗೆ 8:00 ರಿಂದ ಸಂಜೆ 6:45 ರವರೆಗೆ.

ಕರ್ಕಾಟಕ ರಾಶಿ:- ಕೆಲಸ ಮತ್ತು ವೈಯುಕ್ತಿಕ ಜೀವನವನ್ನು ಸರಿದೂಗಿಸುವುದು ನಿಮಗೆ ಬಹಳ ಕಷ್ಟವಾಗಬಹುದು. ಕಛೇರಿಯಲ್ಲಿ ಕೆಲಸದ ಹೊರೆಯು ಹೆಚ್ಚಾಗಬಹುದು. ಇದರಿಂದ ನಿಮ್ಮ ಮಾನಸಿಕ ಒತ್ತಡವು ಹೆಚ್ಚಾಗುತ್ತದೆ. ಇಂದು ಅನೇಕ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಇಂತಹ ಎಲ್ಲಾ ಪರಿಸ್ಥಿತಿಯಲ್ಲೂ ನಿಮ್ಮ ಸಂಗಾತಿಯ ಬೆಂಬಲವನ್ನು ಪಡೆಯುತ್ತೀರಿ.
ಅದೃಷ್ಟದ ಸಂಖ್ಯೆ: 01 ಅದೃಷ್ಟದ ಬಣ್ಣ: ನೀಲಿ
ಒಳ್ಳೆಯ ಸಮಯ: ಸಂಜೆ 5:40 ರಿಂದ ರಾತ್ರಿ 9:00 ರವರೆಗೆ.

ಸಿಂಹ ರಾಶಿ:- ಹಣದ ವಿಚಾರವಾಗಿ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕೆಲಸದ ವಿಚಾರವಾಗಿ ಈ ದಿನವು ಚೆನ್ನಾಗಿರುತ್ತದೆ. ಕಛೇರಿಯಲ್ಲಿ ಕೆಲಸದ ಒತ್ತಡವು ಇದ್ದರೂ ಸಹ ನಿಮಗೆ ಕೊಟ್ಟ ಎಲ್ಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ಪೂರೈಸುತ್ತೀರಿ. ವ್ಯವಹಾರಕ್ಕೆ ಸಂಬಂಧಪಟ್ಟ ಜನರು ಪ್ರಯೋಜನಗಳನ್ನು ಪಡೆಯುತ್ತೀರಿ. ಕುಟುಂಬದವರ ಜೊತೆ ಸಂತಸದಿಂದ ಸಮಯ ಕಳೆಯುತ್ತೀರಿ.
ಅದೃಷ್ಟದ ಸಂಖ್ಯೆ: 05 ಅದೃಷ್ಟದ ಬಣ್ಣ: ಕೆಂಪು
ಒಳ್ಳೆಯ ಸಮಯ: ಮಧ್ಯಾಹ್ನ 2:00 ರಿಂದ ರಾತ್ರಿ 7:00 ರವರೆಗೆ.

ಕನ್ಯಾ ರಾಶಿ:- ಆರ್ಥಿಕ ಸಮಸ್ಯೆಯಿಂದ ಮನೆಯಲ್ಲಿ ಕಲಹಗಳು ಉಂಟಾಗಬಹುದು. ಹೆಚ್ಚು ಖರ್ಚು ಮಾಡುವ ಗುಣದಿಂದ ಪೋಷಕರು ನಿಮ್ಮ ಮೇಲೆ ಬಹಳ ಕೋಪಗೊಳ್ಳುವ ಸಾಧ್ಯತೆಗಳು ಇವೆ. ಮಾಡಿದ ತಪ್ಪನ್ನು ತಿದ್ದಿಕೊಳ್ಳದೆ ಹೋದರೆ ಭವಿಷ್ಯದಲ್ಲಿ ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಪೋಷಕರು ಮಕ್ಕಳ ಬಗ್ಗೆ ಬಹಳ ಚಿಂತೆ ಮಾಡುತ್ತಾರೆ. ವ್ಯಾಪಾರಿಗಳು ಜಾಗರೂಕರಾಗಿರಬೇಕು.
ಅದೃಷ್ಟದ ಸಂಖ್ಯೆ: 02 ಅದೃಷ್ಟದ ಬಣ್ಣ: ಹಸಿರು
ಒಳ್ಳೆಯ ಸಮಯ: ಬೆಳಗ್ಗೆ 4:25 ರಿಂದ ಮಧ್ಯಾಹ್ನ 12:30 ರವರೆಗೆ.

ತುಲಾ ರಾಶಿ:- ಮನೆಗೆ ಅತಿಥಿಗಳ ಹಠಾತ್ ಆಗಮನದಿಂದಾಗಿ ಕಾರ್ಯನಿರತರಾಗಿರುತ್ತೀರಿ. ಇದು ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತದೆ. ಹಣದ ದೃಷ್ಟಿಯಿಂದ ಈ ದಿನವೂ ಬಹಳ ದುಬಾರಿಯಾಗಿರುತ್ತದೆ. ಅಗತ್ಯಕ್ಕಿಂತ ಹೆಚ್ಚು ಖರ್ಚನ್ನು ಮಾಡುತ್ತೀರಿ. ಮೇಲಾಧಿಕಾರಿಗಳೊಂದಿಗೆ ಯಾವುದಾದರೂ ವಿಷಯ ಪ್ರಸ್ತಾಪ ಮಾಡಬೇಕು ಎಂದುಕೊಂಡಿದ್ದರೆ ವಿಶ್ವಾಸದಿಂದ ಪೂರ್ತಿಗೊಳಿಸಿ.
ಅದೃಷ್ಟದ ಸಂಖ್ಯೆ: 07 ಅದೃಷ್ಟದ ಬಣ್ಣ: ನೇರಳೆ
ಒಳ್ಳೆಯ ಸಮಯ: ಬೆಳಿಗ್ಗೆ 7:00 ರಿಂದ ಸಂಜೆ 6:00 ರವರೆಗೆ.

ವೃಶ್ಚಿಕ ರಾಶಿ:- ಇಂದು ಮನೆಯಲ್ಲಿ ವಾದ ವಿವಾದಗಳು ನಡೆಯುತ್ತವೆ. ಸಣ್ಣ ವಿಷಯಗಳು ಕೂಡ ದೊಡ್ಡ ಗಲಾಟೆಗೆ ಕಾರಣವಾಗಬಹುದು. ನಿಮ್ಮ ಸಂಗಾತಿಯ ಮನಸ್ಥಿತಿಯು ಉತ್ತಮವಾಗಿರುವುದಿಲ್ಲ. ಅವರ ಸ್ವಭಾವದಲ್ಲಿ ಕೋಪ ಮತ್ತು ಕಿರಿಕಿರಿಯನ್ನು ನೋಡಬಹುದು. ಕೆಲಸದ ವಿಚಾರವಾಗಿ ಈ ದಿನವು ಬಹಳ ಕಷ್ಟಕರವಾಗಿರುತ್ತದೆ. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಒತ್ತಡ ಇರುತ್ತದೆ.
ಅದೃಷ್ಟದ ಸಂಖ್ಯೆ: 04 ಅದೃಷ್ಟದ ಬಣ್ಣ: ಕೇಸರಿ.
ಒಳ್ಳೆಯ ಸಮಯ: ಸಂಜೆ 4:00 ರಾತ್ರಿ 10:45 ರವರೆಗೆ.

ಧನಸ್ಸು ರಾಶಿ:- ನಿರುದ್ಯೋಗಿಗಳಿಗೆ ಇಂದು ಶುಭದಿನ ವಾಗಿರುತ್ತದೆ. ದೀರ್ಘ ಕಾಲದ ನಂತರ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ. ಒಳ್ಳೆಯ ಕಂಪನಿಯಲ್ಲಿ ಉದ್ಯೋಗವನ್ನು ಪಡೆಯುವ ಸಾಧ್ಯತೆಗಳಿವೆ. ಹಣಕಾಸಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಉತ್ತಮವಾದ ದಿನವಾಗಿರುತ್ತದೆ. ಇಂದು ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಖರ್ಚು ಮಾಡಿ.
ಅದೃಷ್ಟದ ಸಂಖ್ಯೆ: 09 ಅದೃಷ್ಟದ ಬಣ್ಣ: ಕಿತ್ತಳೆ.
ಒಳ್ಳೆಯ ಸಮಯ: ಮಧ್ಯಾಹ್ನ 3:30 ರಿಂದ ರಾತ್ರಿ 10:00 ರವರೆಗೆ.

ಮಕರ ರಾಶಿ:- ನಿಮ್ಮ ಸಕಾರಾತ್ಮಕತೆಯನ್ನು ನೋಡಿ ಜನರು ಹೆಚ್ಚು ಪ್ರಭಾವಿತರಾಗುತ್ತಾರೆ. ಹಣದ ವಿಚಾರವಾಗಿ ಈ ದಿನವು ಪ್ರಯೋಜನಕಾರಿಯಾಗಿರಲಿದೆ. ಹೊಸ ವ್ಯಾಪಾರ ವ್ಯವಹಾರ ಆರಂಭಿಸಲು ಪ್ರಯತ್ನ ಪಡುತ್ತಿದ್ದರೆ ಈ ದಿನ ಉತ್ತಮವಾದ ದಿನವಾಗಿರುತ್ತದೆ, ಅದರಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಕೆಲಸಕ್ಕೆ ಸಂಬಂಧಪಟ್ಟ ಹಾಗೆ ಪ್ರಯಾಣ ಮಾಡುವ ಸಂದರ್ಭ ಬರುತ್ತದೆ.
ಅದೃಷ್ಟದ ಸಂಖ್ಯೆ: 01 ಅದೃಷ್ಟದ ಬಣ್ಣ: ಕಂದು
ಒಳ್ಳೆಯ ಸಮಯ: ಮಧ್ಯಾಹ್ನ 1:30 ರಿಂದ ಸಂಜೆ 6:00 ರವರೆಗೆ.

ಕುಂಭ ರಾಶಿ:- ಇಂದು ಯಾವುದಾದರು ಧಾರ್ಮಿಕ ಅಥವಾ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರಿ. ಅಗತ್ಯ ಇರುವವರಿಗೆ ಸಹಾಯ ಮಾಡುವುದರಿಂದ ಮಾನಸಿಕ ಶಾಂತಿ ದೊರೆಯುತ್ತದೆ. ಇದರಿಂದ ನಿಮ್ಮ ಗೌರವವು ಹೆಚ್ಚಾಗುತ್ತದೆ. ಕೆಲಸದ ಪರಿಸ್ಥಿತಿಯು ಅನುಕೂಲಕರವಾಗಿರುತ್ತದೆ. ನಿಮ್ಮ ಕಾರ್ಯಕ್ಷಮತೆ ಬಹಳ ಉತ್ತಮವಾಗಿದೆ. ಈ ದಿನದ ಎಲ್ಲಾ ಕೆಲಸ ಮೇಲೆ ಹಿರಿಯರ ಆಶೀರ್ವಾದವಿರುತ್ತದೆ.
ಅದೃಷ್ಟದ ಸಂಖ್ಯೆ: 02 ಅದೃಷ್ಟದ ಬಣ್ಣ: ಹಳದಿ.
ಒಳ್ಳೆಯ ಸಮಯ: ಮಧ್ಯಾಹ್ನ 12:00 ರಿಂದ ಸಂಜೆ 6:45 ರವರೆಗೆ.

ಮೀನಾ ರಾಶಿ:- ಈ ದಿನ ನಿಮಗೆ ಶುಭವಾಗಿರುತ್ತದೆ. ನಿಮ್ಮ ಕೆಲಸ ಕಾರ್ಯಗಳು ಹೆಚ್ಚು ಅಡೆತಡೆ ಇಲ್ಲದೆ ಪೂರ್ತಿಗೊಳ್ಳುತ್ತದೆ. ಹಣಕಾಸಿನ ವಿಚಾರದಲ್ಲಿ ಇಂದು ಬಹಳ ಅದೃಷ್ಟದ ದಿನವಾಗಿರುತ್ತದೆ. ಇಂದು ಮಾಡುವ ಹಣಕಾಸಿನ ಹೂಡಿಕೆ ಲಾಭ ತರುತ್ತದೆ. ಕುಟುಂಬ ಸದಸ್ಯರ ಜೊತೆ ವಿನೋದ ಹಾಗೂ ಸಂತೋಷದಿಂದ ಕೂಡಿರುತ್ತೀರಿ. ಧೀರ್ಘಕಾಲದಿಂದ ಕಾಯುತ್ತಿದ್ದ ಆಸೆ ನೆರವೇರುವುದರಿಂದ ಸಂತೋಷ ಇಮ್ಮಡಿಕೊಳ್ಳುತ್ತದೆ.
ಅದೃಷ್ಟದ ಸಂಖ್ಯೆ: 03 ಅದೃಷ್ಟದ ಬಣ್ಣ: ನೀಲಿ.
ಒಳ್ಳೆಯ ಸಮಯ: ಸಂಜೆ 5:00 ರಿಂದ ರಾತ್ರಿ 8.30 ರವರೆಗೆ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

Astrology
WhatsApp Group Join Now
Telegram Group Join Now

Post navigation

Previous Post: ಶಿವಲಿಂಗದ ಮುಂದೆ ಅಕ್ಕಿ ಇಟ್ಟರೆ ಅನ್ನ ಆಗುವ ಪವಾಡ, ನಿಂತ ರೂಪದಲ್ಲಿಯೇ ಶಿಲೆಯಾಗಿರುವ ಕಾಲಭೈರವೇಶ್ವರ.!
Next Post: ಗುರುವಾರದಂದು ಈ ರೀತಿ ಉಪವಾಸ ಇದ್ದು ನೋಡಿ. ನಿಮ್ಮ ಬೇಡಿಕೆ ಬೇಗ ಈಡೇರುತ್ತದೆ.! ಮನಸ್ಸಿನಲ್ಲಿ ಅಂದುಕೊಂಡ ಕೆಲಸ 100% ನಡೆಯುತ್ತದೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore