ರಾಶಿ ಚಕ್ರದಲ್ಲಿ ಮೂರನೇ ರಾಶಿಯಾಗಿರುವ ಮಿಥುನ ರಾಶಿಯು ಬಹಳ ವಿಶೇಷವಾದ ರಾಶಿಯಾಗಿದೆ. ಮಿಥುನ ರಾಶಿಯವರು ಸ್ವಾವಲಂಬಿಗಳು, ಯಾವಾಗಲೂ ಪರಿಶ್ರಮಪಡುವವರು ಮತ್ತು ತಮ್ಮ ಕಾಲ ಮೇಲೆ ತಾವು ನಿಂತು ಬದುಕನ್ನು ನಡೆಸಲು ಇಚ್ಚಿಸುವವರು ಮತ್ತು ತಮ್ಮಿಂದ ಸಮಾಜಕ್ಕೂ ಒಳ್ಳೆಯದು ಮಾಡಲು ಬಯಸುವವರು.
ವೃತ್ತಿ ಬದುಕಿನ ಜೊತೆಗೆ ವೈಯುಕ್ತಿಕ ಬದುಕನ್ನು ಕೂಡ ಸರಿದೂಗಿಸಿ ಎರಡಕ್ಕೂ ಸಮಾನ ಸಮಯ ಕೊಟ್ಟು ಸರಿದೂಗಿಸಿಕೊಂಡು ಬದುಕು ನಡೆಸುವ ಇವರಿಗೆ 2024ನೇ ಇಸವಿ ಸಾಕಷ್ಟು ಮಿಶ್ರ ರೀತಿಯ ಫಲಿತಾಂಶಗಳನ್ನು ಕೊಡಲಿದೆ. ಮಿಥುನ ರಾಶಿಯವರಿಗೆ ವಿದ್ಯಾಭ್ಯಾಸದ ಮೇಲೆ ಹೆಚ್ಚು ಆಸಕ್ತಿ ಇದಕ್ಕೆ ಸಂಬಂಧಿಸಿದ ಹಾಗೆ ಹಾಗೂ ಸ್ವಂತ ಉದ್ಯಮ ಮಾಡಲು ಹಾತೊರೆಯುವ ಇವರ ಕನಸಿನ ಕುರಿತಾಗಿ ಮತ್ತು ವೈಯಕ್ತಿಕ ಬದುಕಿನ ಕುರಿತಾಗಿ ಏನೆಲ್ಲ ಮಹತ್ವದ ಬದಲಾವಣೆಗಳು ಉಂಟಾಗಲಿದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.
ಮಿಥುನ ರಾಶಿಯವರಿಗೆ ಈ ಮೇಲೆ ತಿಳಿಸಿದಂತೆ ಓದಿನಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ಅವರ ಓದು ಮುಕ್ತಾಯವಾಗಿದ್ದರು ಅಡ್ವಾನ್ಸ್ ಕೋರ್ಸ್ ಗಳನ್ನು ಮಾಡಲು ಮತ್ತು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಬಯಸುತ್ತಾರೆ. ಹೆಚ್ಚು ಹೆಚ್ಚು ಜ್ಞಾನವನ್ನು ಹೊಂದಬೇಕೆನ್ನುವ ಇವರ ಹಂಬಲಕ್ಕೆ ಈ ವರ್ಷ ಸ್ವಲ್ಪ ಅಡೆತಡೆಯಾಗುತ್ತದೆ.
ಯಾಕೆಂದರೆ ಬುಧ ಗ್ರಹದ ಅಧಿಪತ್ಯ ಇರುವ ಕನ್ಯಾ ರಾಶಿಯು ಇವರಿಗೆ ನಾಲ್ಕನೇ ಮನೆಯಾಗಿದೆ ಮತ್ತು ಕನ್ಯಾ ರಾಶಿಯಲ್ಲಿ 2024ರ ವರ್ಷ ಪೂರ್ತಿ ಕೇತು ಇರುತ್ತಾನೆ. ಈ ಕೇತು ಮಿಥುನ ರಾಶಿಯವರಿಗೆ ವಿದ್ಯಾಭ್ಯಾಸದ ಕುರಿತಾಗಿ ಸಮಸ್ಯೆ ಉಂಟು ಮಾಡುತ್ತಾನೆ ಹಾಗಾಗಿ ನೀವಂದು ಕೊಂಡಂತೆ ಈ ವರ್ಷ ವಿದ್ಯಾಭ್ಯಾಸ ಮುಂದುವರಿಸಲು ಅಥವಾ ನೀವಂದುಕೊಂಡ ಸ್ಥಳದಲ್ಲಿ ಅಥವಾ ನಿಮ್ಮ ಇಚ್ಛೆಯ ಕೋರ್ಸ್ ಗಳನ್ನು ಓದಲು ಸಾಧ್ಯವಾಗದೇ ಇರಬಹುದು.
ಇದೇ ಕೇತುವಿನ ಕೆಟ್ಟ ಪ್ರಭಾವದಿಂದ ನೀವು ವೃತ್ತಿ ಜೀವನದಲ್ಲೂ ಕೆಲವು ಸಮಸ್ಯೆಗಳನ್ನು ಅನುಭವಿಸುತ್ತೀರಿ. ಒಂದು ವೇಳೆ ನೀವೇನಾದರೂ ಹೊಸ ವ್ಯವಹಾರ ಆರಂಭಿಸಬೇಕು ಎಂದರೆ ಆ ಸ್ಥಳದ ಬಗ್ಗೆ ಬಹಳ ಗೊಂದಲಗಳಾಗುತ್ತದೆ ಅಥವಾ ವೃತ್ತಿ ಬದುಕಾಗಿದ್ದರೆ ನಿಮಗೆ ಸಿಕ್ಕ ಉತ್ತಮವಾದ ಆಪ್ಷನ್ ಗಳಲ್ಲಿ ಗೊಂದಲ ಉಂಟಾಗಿ ಯಾವುದೋ ಒಂದನ್ನು ಸೆಲೆಕ್ಟ್ ಮಾಡುತ್ತೀರಿ ಆದರೆ ಆ ಆಪ್ಷನ್ ನಂತರ ನಿಮಗೆ ತಪ್ಪಾಗಿತ್ತು ಎನ್ನುವುದು ಅರ್ಥವಾಗುತ್ತದೆ.
ಇದೆಲ್ಲವೂ ಕೇತು ಪ್ರಭಾವದಿಂದ ಉಂಟಾಗುತ್ತದೆ ಹಾಗಾಗಿ ಸಾಕಷ್ಟು ತಾಳ್ಮೆಯಿಂದ ಇದ್ದು ಮುಂದೆ ಪಶ್ಚಾತಾಪ ಪಡಬಾರದು ಎನ್ನುವ ರೀತಿ ಎಲ್ಲವನ್ನು ವಿಚಾರಿಸಿ ತೀರ್ಮಾನ ತೆಗೆದುಕೊಳ್ಳಿ. ನಿಮ್ಮ ದುಡುಕಿನ ನಿರ್ಧಾರಗಳು ಮಾತ್ರ ನಿಮಗೆ ಈ ರೀತಿ ದುಃ’ಖವನ್ನುಂಟು ಮಾಡುತ್ತವೆ. ಆದರೆ ಶನೇಶ್ವರನ ಕೃಪಾಕಟಾಕ್ಷವು ಈ ವರ್ಷ ಪೂರ್ತಿ ನಿಮ್ಮ ಮೇಲೆ ಇರುತ್ತದೆ.
ಹಾಗಾಗಿ ನೀವು ನಿಮ್ಮ ಮುಂಗೋಪ ಹಾಗೂ ತ ದುಡುಕುತನವನ್ನು ಬಿಟ್ಟರೆ ನಿಮ್ಮ ವ್ಯಾಪಾರದಲ್ಲಾಗಲಿ ಅಥವಾ ವೃತ್ತಿಯಲ್ಲಾಗಲಿ ಬಹಳ ಉತ್ತಮ ಸ್ಥಾನಕ್ಕೆ ತಲುಪುವ ಅದೃಷ್ಟವನ್ನು ಶನಿ ಪ್ರಭಾವದಿಂದ ಪಡೆಯುತ್ತೀರಿ. ಮೇ ತಿಂಗಳ ನಂತರ ನಿಮಗೆ ಗುರುಬಲ ಕಡಿಮೆ ಆಗುತ್ತದೆ ಈ ಕಾರಣದಿಂದಾಗಿ ನಿಮ್ಮ ವಿವಾಹ ವಿಚಾರದಲ್ಲಿ ಅಡೆತಡೆಗಳಾಗಬಹುದು.
ನೀವು ನಿಶ್ಚಯಿಸಿಕೊಂಡಿದ್ದ ವಿವಾಹವು ಮುರಿದು ಬೀಳಬಹುದು ಅಥವಾ ನೀವು ಹಠ ಮಾಡಿ ಒಪ್ಪಿಕೊಂಡ ವಿವಾಹದಿಂದಲೇ ಮುಂದೆ ಸಮಸ್ಯೆಗಳನ್ನು ಎದುರಿಸಬೇಕಾಗಿಯೂ ಬರಬಹುದು, ಹಾಗಾಗಿ ಈ ವಿಷಯದಲ್ಲೂ ನೀವು ವಿಚಾರ ಮಾಡಿ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳಿ ಮತ್ತು ತಪ್ಪದೆ ಮಿಥುನ ರಾಶಿಯವರು ಪಚ್ಚೆ ಹರಳನ್ನು ಬಂಗಾರದಲ್ಲಿ ಉಂಗುರ ಮಾಡಿಸಿ ಕಿರುಬೆರಳಿಗೆ ಧರಿಸಿ. ಇದರಿಂದ ಕೇತುವಿನ ಪ್ರಭಾವವು ಕಡಿಮೆಯಾಗಿ ಶುಭ ಪರಿಣಾಮಗಳು ಉಂಟಾಗುತ್ತವೆ.