2023 ಮುಗಿದು 2024ನೇ ವರ್ಷವನ್ನು ಆರಂಭಿಸಲು ನಾವು ತಯಾರಾಗಿದ್ದೇವೆ. ಈಗಾಗಲೇ ಎಲ್ಲೆಡೆ ಹೊಸ ವರ್ಷವನ್ನು ಬರಮಾಡಿಕೊಳ್ಳುವುದಕ್ಕೆ ಸಿದ್ಧತೆಗಳು ಆರಂಭವಾಗಿ ಎಲ್ಲ ಮನೆಮನಗಳು ತಯಾರಾಗಿದೆ ಹೊಸ ವರ್ಷದಲ್ಲಿ ಸಹಜವಾಗಿ ಭವಿಷ್ಯ ಹೇಗಿರುತ್ತೆ ಎನ್ನುವ ಕುತೂಹಲವೂ ಕೂಡ ಉಂಟಾಗುತ್ತದೆ.
ಆ ಪ್ರಕಾರವಾಗಿ ದ್ವಾದಶ ರಾಶಿಯಲ್ಲಿ ಮಿಥುನ ರಾಶಿಯ ವರ್ಷ ಭವಿಷ್ಯ ಹೇಗಿದೆ? ಮಿಥುನ ರಾಶಿಯವರು ಈ ವರ್ಷದಲ್ಲಿ ಯಾವ ಕೆಲಸ ಕಾರ್ಯಗಳನ್ನು ಕೈಗೊಂಡರೆ ಲಾಭವಾಗುತ್ತದೆ ಮತ್ತು ಯಾವುದು ಅವರಿಗೆ ಸಮಸ್ಯೆಯುಂಟು ಮಾಡುವಂತಹ ಪರಿಸ್ಥಿತಿಗಳಾಗಿವೆ.
ಇದರ ಪರಿಹಾರಕ್ಕಾಗಿ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಕೆಲವು ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ತಪ್ಪದೆ ಈ ಮಾಹಿತಿಯನ್ನು ಮಿಥುನ ರಾಶಿಯ ಸ್ನೇಹಿತರೊಡನೆ ಹಾಗೂ ಬಂಧು ಬಾಂಧವರ ಜೊತೆ ಹಂಚಿಕೊಳ್ಳಿ.
ಮಿಥುನ ರಾಶಿಯವರಿಗೆ ಮೇ ತಿಂಗಳವರೆಗೆ ಗುರುಬಲ ಚೆನ್ನಾಗಿದೆ. ಈ ಕಾರಣಕ್ಕಾಗಿ ಅವರು ಮುಟ್ಟಿದೆಲ್ಲಾ ಚಿನ್ನವಾಗುತ್ತದೆ, ಹೊಸ ಮನೆ ಕಟ್ಟಲು ಶುರು ಮಾಡಬಹುದು ಅಥವಾ ಹೊಸ ವ್ಯಾಪಾರ ವ್ಯವಹಾರ ಆರಂಭ ಮಾಡಬಹುದು. ಹಣಕಾಸಿನ ಪರಿಸ್ಥಿತಿಯು ಕೂಡ ಉತ್ತಮವಾಗಿರುತ್ತದೆ ಅಂದುಕೊಂಡಂತೆ ಕೆಲಸ ಕಾರ್ಯಗಳಲ್ಲೂ ಕೂಡ ಜಯ ಪಡೆಯುತ್ತಾರೆ.
2024ರ ಪೂರ್ವ ಭಾಗ ಅವರಿಗೆ ಅತ್ಯಂತ ಉತ್ತಮ ಫಲಗಳನ್ನು ಕೊಡುತ್ತದೆ ಆದರೆ ಗುರುವು 12ನೇ ಸ್ಥಾನಕ್ಕೆ ಬರುವುದರಿಂದ ಇದು ಗುರುವಿನ ವ್ಯಯಸ್ಥಾನವಾಗಿ ಇದಕ್ಕೆ ವಿರುದ್ಧ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಅವರು ವರ್ಷದ ಆರಂಭದಲ್ಲಿ ಹಸು ತಂದಿದ್ದರೆ ಮೇ ತಿಂಗಳ ನಂತರ ಹಸುವಿನ ಆರೋಗ್ಯ ಹದಗೆಡುವುದು ಅಥವಾ ಅದು ನಿರೀಕ್ಷೆ ಮಟ್ಟದಲ್ಲಿ ಫಲ ಕೊಡದೆ ಇರುವುದು ಇಂತಹ ನ’ಷ್ಟಗಳು ಬರುತ್ತವೆ, ಆರಂಭದಲ್ಲಿ ಚೆನ್ನಾಗಿ ನಡೆಯುತ್ತಿದ್ದ ವ್ಯವಹಾರವು ಅರ್ಧ ವರ್ಷ ಆದನಂತರ ಕುಸಿಯುತ್ತದೆ.
ಹಾಗಾಗಿ ಮೇ ತಿಂಗಳ ನಂತರ ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಾರೆ ಇಂತಹ ಸಂದರ್ಭದಲ್ಲಿ ಯಾವುದೇ ಹೊಸ ಯೋಜನೆಗಳನ್ನು ಕೈಗೊಳ್ಳದೆ ಇರುವುದು ಹೊಸ ವ್ಯವಹಾರಕ್ಕೆ ಕೈ ಹಾಕದೆ ಇರುವುದು ಒಳ್ಳೆಯದು. ಮೇತಿಂಗಳ ನವರೆಗೆ ಅತ್ಯಂತ ಲಾಭದಾಯಕವಾಗಿದ್ದ ಇವರ ವ್ಯಾಪಾರ ವಹಿವಾಟು ಕೃಷಿ ನಂತರ ಕ್ರಮೇಣವಾಗಿ ಕ್ಷೀಣಿಸುತ್ತಾ ಹೋಗುತ್ತದೆ.
ಹಾಗಾಗಿ ನಂತರದ ದಿನಗಳಲ್ಲಿ ಹಣಕಾಸಿನ ವಹಿವಾಟಿನಲ್ಲಿ ಎಚ್ಚರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಈ ಎಲ್ಲ ವಿಚಾರಗಳು ಅವರನ್ನು ಮಾನಸಿಕವಾಗಿ ಕುಗ್ಗಿಸಿ ಇದರ ಪರಿಣಾಮ ಸಂಸಾರ ಜೀವನದಲ್ಲಿ ಕೂಡ ಬೀಳುತ್ತದೆ. ಮನೆಯಲ್ಲಿ ವಿನಾಕಾರಣ ಜಗಳ ಮನಸ್ತಾಪ ವೈ ಮನಸು ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇದನ್ನು ಅರ್ಥ ಮಾಡಿಕೊಂಡು ಸಮಯ ಸರಿ ಇಲ್ಲ ಎಂದು ನೀವೆ ಸುಮ್ಮನಾಗಿ ಪರಿಸ್ಥಿತಿಯನ್ನು ನಿಭಾಯಿಸಿ.
ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಮತ್ತು ಮಕ್ಕಳ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಳೆದುಕೊಂಡು ನೋವುಂಟು ಮಾಡಬಹುದು, ಹಾಗಾಗಿ ಮಕ್ಕಳ ಮೇಲೆ ನಿಗವಹಿಸಿ. ಈ ಎಲ್ಲಾ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಇದರಿಂದ ಪರಿಹಾರ ಕಂಡುಕೊಳ್ಳಲು ಶನಿ ದೇವರಿಗೆ ಎಳ್ಳೆಣ್ಣೆಯನ್ನು ಅರ್ಪಿಸಿ.
ಶನಿ ದೇವರಿಗೆ ನೀಲಿ ಬಣ್ಣದ ವಸ್ತುಗಳನ್ನು ಅರ್ಪಿಸುವುದರಿಂದ ನೀಲಿ ಪುಷ್ಪಗಳಿಂದ ಪೂಜೆ ಮಾಡುವುದರಿಂದ ಮನೆಯಲ್ಲಿ ಸ್ವಲ್ಪ ಸುಖ ಶಾಂತಿ ನೆಲೆಸುತ್ತದೆ. ಶನಿ ದೇವರ ಆಶೀರ್ವಾದ ನಿಮ್ಮ ಮೇಲೆ ಇರುವುದರಿಂದ ಹೆಚ್ಚಿನ ತೊಂದರೆಗಳಾಗುವುದಿಲ್ಲ. ಶನಿ ದೇವರ ಜೊತೆ ಸಂಕಷ್ಟಹರ ಗಣಪತಿ ಮತ್ತು ವೆಂಕಟರಮಣನನ್ನು ಕೂಡ ಆರಾಧಿಸಿ. ಈ ವರ್ಷ ಸಾಧ್ಯವಾದಷ್ಟು ಹಸಿರು ಬಣ್ಣವನ್ನು ಧರಿಸಿ ಮತ್ತು ಸಂಖ್ಯೆ 5 ಎನ್ನುವುದು ನಿಮಗೆ ಶುಭ ತಂದುಕೊಡುವ ಸಂಖ್ಯೆಯಾಗಿದೆ.