ಹೊಸ ವರ್ಷ ಎನ್ನುವುದು ಒಂದು ಪಾಸಿಟಿವ್ ಎನರ್ಜಿ. ಹೊಸ ವರ್ಷದಿಂದ ಹೊಸ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಪ್ಲಾನ್ ಮಾಡಿ ತಯಾರಾಗುತ್ತಾರೆ, ಕೆಟ್ಟ ಚಟಗಳನ್ನು ಹೊಸ ವರ್ಷದಿಂದ ಬಿಡುತ್ತೇನೆ ಎಂದು ನಿರ್ಧಾರ ಮಾಡುತ್ತಾರೆ, ಮುಂದಿನ ಹೊಸ ವರ್ಷದಲ್ಲಿ ನಾನು ಆ ಕೆಲಸ ಮಾಡ್ತೀನಿ ಈ ಕೆಲಸ ಮಾಡುತ್ತೇನೆ ಎಂದು ಆಸೆಪಟ್ಟು ಕೆಲಸ ಕಾರ್ಯಗಳನ್ನು ಚುರುಕುಗೊಳಿಸುತ್ತಾರೆ.
ಹೀಗೆ ಎಲ್ಲರಿಗೂ ಕೂಡ ನೂತನ ವರ್ಷ ಎನ್ನುವುದು ಒಂದು ಹೊಸ ಭರವಸೆ, ಹೊಸತನವನ್ನು ತರುವ ಮನೆ ಮತ್ತು ಮನಸ್ಸಿಗೆ ಸಕಾರಾತ್ಮಕ ವಾತಾವರಣವನ್ನು ತುಂಬುವ ಇಂತಹ ಹೊಸ ವರ್ಷದ ಆರಂಭ ಹೇಗಿರಬೇಕು ಮತ್ತು ನಾವು ಅಂದುಕೊಂಡ ಗುರಿಯನ್ನು ಸಾಧಿಸಬೇಕು ಎಂದರೆ ಹೊಸ ವರ್ಷದ ಮೊದಲ ದಿನದಂದು ಯಾವ ಕಾರ್ಯಗಳನ್ನು ಮಾಡಬೇಕು ಯಾವುದನ್ನು ಮಾಡಬಾರದು ಎನ್ನುವ ಕೆಲ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
* ಮೊದಲನೆಯದಾಗಿ ಹೊಸ ವರ್ಷ ತಪ್ಪದೇ ಪ್ರತಿಯೊಬ್ಬರು ಬೆಳಗ್ಗೆ ಎದ್ದ ಕೂಡಲೇ ಸ್ನಾನ ಮಾಡಿ ತಮ್ಮ ಮನೆ ದೇವರಿಗೆ, ಇಷ್ಟ ದೇವರಿಗೆ ಪೂಜೆ ಮಾಡಬೇಕು.
* ಹೊಸ ವರ್ಷದಂದು ಈ ವರ್ಷದಲ್ಲಿ ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಹಾಗೆ ಅಭಿವೃದ್ಧಿ ಹೊಂದಬೇಕು ಎಂದು ಆಸೆ ಪಟ್ಟವರು ತಪ್ಪದೆ ಶ್ರೀ ವಿಷ್ಣು ಹಾಗೂ ಮಹಾಲಕ್ಷ್ಮಿಗೆ ಪೂಜೆ ಮಾಡಬೇಕು ಅವರನ್ನು ತಮ್ಮ ಕಾರ್ಯ ಕೈಗೊಳ್ಳುವಂತೆ ಆಶೀರ್ವದಿಸಿ ಎಂದು ಪ್ರಾರ್ಥಿಸಿ ಕೊಳ್ಳಬೇಕು.
* ಹೊಸ ವರ್ಷದಂದು ಕೆಲಸ ಇದ್ದರೆ ಅದಕ್ಕೆ ರಜೆ ಹಾಕಿ ಮಜಾ ಮಾಡುವ ಮನಸ್ಥಿತಿ ಇದ್ದರೆ ಅದನ್ನು ಮೊದಲು ಬಿಡಿ. ಮೊದಲು ಕೆಲಸ ಆ ಕೆಲಸದ ಮೂಲಕ ಹಣ ಬಂದರೆ ಮಾತ್ರ ಹಣದಿಂದ ನಿಮ್ಮ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಸಾಧ್ಯ ಹಾಗೂ ನಿಮ್ಮ ಹೊಸ ಕನಸುಗಳಿಗೆ ಜೀವ ತುಂಬಲು ಸಾಧ್ಯ. ಹಾಗಾಗಿ ಯಾವುದೇ ಕಾರಣಕ್ಕೂ ಹೊಸ ವರ್ಷದಂದು ಕೆಲಸ ಇದ್ದರೂ ನೆಪಗಳನ್ನು ಹೇಳಿ ತಪ್ಪಿಸಿಕೊಳ್ಳಬೇಡಿ. ಕೆಲಸಕ್ಕೆ ಹೋಗಿ ಉಳಿದ ಸಮಯದಲ್ಲಿ ಹೊಸ ವರ್ಷದ ಆಚರಣೆಗೆ ಸಮಯ ಕೊಡಿ
* ಈ ವರ್ಷದಲ್ಲಿ ನೀವು ಫಿಟ್ನೆಸ್, ಆರೋಗ್ಯ ಇವುಗಳ ಬಗ್ಗೆ ಹೆಚ್ಚು ಗಮನ ಕೊಡಬೇಕು ಎಂದು ನಿರ್ಧಾರ ಮಾಡಿದ್ದರೆ ಸರಿಯಾದ ಆಹಾರ ಪದ್ಧತಿ ಮತ್ತು ಜೀವನಶೈಲಿ ಅಳವಡಿಸಿಕೊಳ್ಳುವುದಕ್ಕೆ ಈ ದಿನದಿಂದಲೇ ಶುರು ಮಾಡಿ. ಧೂಮಪಾನ ಮದ್ಯಪಾನ ಅಭ್ಯಾಸಗಳನ್ನು ಹೊಸ ವರ್ಷದ ಮೊದಲ ದಿನದಿಂದಲೇ ಬಿಟ್ಟು ವ್ಯಾಯಾಮ ಯೋಗ ಧ್ಯಾನಕ್ಕೆ ಸಮಯ ಡಯಟ್ ಮಾಡುತ್ತೇನೆ ಎಂದು ಡಿಸೈಡ್ ಮಾಡಿದ್ದನ್ನು ಇಂದಿನಿಂದಲೇ ಕಾರ್ಯರೂಪಕ್ಕೆ ತನ್ನಿ
* ವೃತ್ತಿ ಯಾವುದೇ ಇದ್ದರೂ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಪ್ರವೃತ್ತಿ ಅವಶ್ಯಕತೆ ಇರುತ್ತದೆ. ಇದರಿಂದ ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಳ್ಳಬಹುದು ಮತ್ತು ಸಂತೋಷ ಕಾಣಬಹುದು. ಹಾಗಾಗಿ ನೀವು ಈ ವರ್ಷ ಬಿಡುವಿನ ಸಮಯದಲ್ಲಿ ಒಳ್ಳೆಯ ಹವ್ಯಾಸವನ್ನು ರೂಢಿಸಿಕೊಳ್ಳುವುದಕ್ಕೆ ನಿರ್ಧಾರ ಮಾಡಿದ್ದರೆ ಅದನ್ನು ಇಂದಿನಿಂದಲೇ ಆರಂಭಿಸಿ. ಸಂಗೀತ ಕಲಿಯಲು ಬಯಸಿದರೆ ಇದರಿಂದಲೇ ತರಗತಿಗೆ ಹೋಗಿ, ಪುಸ್ತಕ ಓದಲು ನಿರ್ಧರಿಸಿದ್ದರೆ ಇಂದೇ ಪುಸ್ತಕ ಖರೀದಿಸಿ ನಾಲ್ಕಾರು ಪುಟ ತಿರುಗಿಸಿ
* ನಾವು ಎಷ್ಟೇ ಬ್ಯುಸಿ ಇದ್ದರೂ, ಶ್ರೀಮಂತರಾಗಿದ್ದರು, ಮಕ್ಕಳಾಗಿದ್ದರು, ವೃದ್ಧರಾಗಿದ್ದರು ಪ್ರತಿಯೊಬ್ಬರಿಗೂ ಸ್ನೇಹ ಬಳಗ ಮುಖ್ಯ ಹಾಗಾಗಿ ಹೊಸ ವರ್ಷದ ಈ ಸಮಯದಲ್ಲಿ ನಿಮ್ಮ ಸ್ನೇಹಿತರ ಜೊತೆಗೆ ಸ್ವಲ್ಪ ಸಮಯ ಕಳೆಯಿರಿ
* ತಪ್ಪದೆ ಇಂದು ಹಿರಿಯರ ಆಶೀರ್ವಾದ ಪಡೆದುಕೊಳ್ಳಿ ಸಾಧ್ಯವಾದರೆ ಯಾವುದಾದರೂ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ನಿಮ್ಮ ಸ್ನೇಹಿತರು ಹಾಗು ಕುಟುಂಬದ ಎಲ್ಲರಿಗೂ ಕೂಡ ಹೊಸ ವರ್ಷದ ಶುಭಾಶಯಗಳು ಕರೆ ಮೂಲಕ ಅಥವಾ ಸಂದೇಶದ ಮೂಲಕ ಅಥವಾ ಸಾಧ್ಯವಾದರೆ ಭೇಟಿಯಾಗುವ ಮೂಲಕವೇ ತಿಳಿಸಿ ಸಂಬಂಧ ಕಾಯ್ದುಕೊಳ್ಳಿ.
* ಯಾವುದೇ ಕಾರಣಕ್ಕೂ ಹೊಸ ವರ್ಷದ ದಿನದಂದು ಯಾರ ಜೊತೆಗೂ ಜಗಳ ಮಾಡಿಕೊಳ್ಳಬೇಡಿ, ಯಾರ ಮನಸ್ಸಿಗೂ ನೋ’ವುಂಟು ಮಾಡಬೇಡಿ.