ನಿದ್ದೆ ಮನುಷ್ಯ ಜೀವನದ ಒಂದು ಪ್ರಮುಖ ಅಂಶ. ನಾವು ನಿದ್ದೆ ಬಂದಾಗಲಷ್ಟೇ ಮಲಗುವುದಿಲ್ಲ. ದೇಹಕ್ಕೆ ಆಯಾಸ ಎನ್ನಿಸಿದಾಗ ಮನಸ್ಸು ಭಾರವಾದಾಗೆಲ್ಲಾ ಮಲಗುತ್ತೇವೆ. ಒಬ್ಬೊಬ್ಬರಿಗೆ ಒಂದೊಂದು ರೀತಿ ಮಲಗುವ ಅಭ್ಯಾಸವಿರುತ್ತದೆ. ಒಬ್ಬರು ನೇರವಾಗಿ ಮಲಗಿದರೆ ಇನ್ನೊಬ್ಬರು ಮಗ್ಗುಲಾಗಿ ಮಲಗುತ್ತಾರೆ. ಕೆಲವರು ಹೊಟ್ಟೆ ಕೆಳಗೆ ಹಾಕಿ ಉಲ್ಟಾ ಮಲಗುತ್ತಾರೆ.
ಹೀಗೆ ಅವರವರ ಅಭ್ಯಾಸ ಭಿನ್ನವಾಗಿರುವುದು ಸಹಜ. ಆದರೆ ನಾವು ಮಲಗುವ ರೀತಿ ನಮ್ಮಲ್ಲಿ ಅಡಕವಾಗಿರುವ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಈ ಸ್ಲೀಪಿಂಗ್ ಪರ್ಸನಾಲಿಟಿ ಎನ್ನುವುದು ನಮ್ಮ ಸಾಮಾಜಿಕ ವರ್ತನೆಯ ಮೇಲೂ ಪರಿಣಾಮ ಬೀರುತ್ತದೆ. ಯೂರೋಪಿಯನ್ ಜರ್ನಲ್ ಆಫ್ ಪರ್ನನಾಲಿಟಿ ಪ್ರಕಾರ ಈ ವಾರ ನಾವು ಪಡೆಯುವ ಗುಣಮಟ್ಟದ ನಿದ್ದೆಯು ಮುಂದಿನ ಐದು ವರ್ಷಗಳ ನಂತರದ ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದಂತೆ.
ಈ ಸುದ್ದಿ ನೋಡಿ:- ಹೆಂಗಸರಿಗೆ ಸೀರೆಗಳ ಕುರಿತು ಕಿವಿ ಮಾತು.!
ಸ್ವೀಪ್ ರಿಸರ್ಚರ್ ಸ್ಯಾಮ್ಯುಯೆಲ್ ಡಂಕೆಲ್ ಮಲಗುವ ಶೈಲಿ ಹಾಗೂ ವ್ಯಕ್ತಿತ್ವದ ಗುಣಲಕ್ಷಣಗಳ ನಡುವಿನ ಸಂಪರ್ಕವನ್ನು ಅನ್ವೇಷಿಸಲು ಕೆಲಸ ಮಾಡಿದ್ದಾರೆ. ನಾವು ಹೇಗೆ ಮಲಗುತ್ತೇವೆ ಹಾಗೆ ನಮ್ಮ ವ್ಯಕ್ತಿತ್ವ ಇರುತ್ತದೆ ಎಂದು ಅವರು ತಮ್ಮ ಪುಸ್ತಕ ಸ್ಟೀಪ್ ಪೊಸಿಷನ್ಸ್‌ನಲ್ಲಿ ಬರೆದಿದ್ದಾರೆ. ಹಾಗಾದರೆ ಯಾವ ರೀತಿ ಮಲಗಿದರೆ ಯಾವ ರೀತಿ ವ್ಯಕ್ತಿತ್ವ ಹೊಂದಿರುತ್ತಾರೆ ಎಂಬುದನ್ನು ತಿಳಿಯೋಣ.
* ಬೆನ್ನು ನೆಲಕ್ಕೆ ತಾಕಿಸಿ ನೇರ ಮಲಗುವುದು :- ಈ ರೀತಿ ಮಲಗುವ ಅಭ್ಯಾಸ ಹೊಂದಿರುವವರು ಫೋಕ ಆಗಿರುತ್ತಾರೆ. ಇವರು ಮೌನವಾಗಿದ್ದರೂ ಬಲವಾದ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ಜಗಳವಾಡಲು ಇಷ್ಟಪಡುವುದಿಲ್ಲ. ಗಡಿಬಿಡಿ ಇವರಿಗೆ ಆಗಿ ಬರುವುದಿಲ್ಲ. ಈ ರೀತಿ ಮಲಗುವವರು ನೂರು ಸುಳ್ಳು ಹೇಳುವುದಕ್ಕಿಂತ ಸತ್ಯವನ್ನು ಹೆಚ್ಚು ಮಾತನಾಡಲು ಬಯಸುತ್ತಾರೆ.
ಕುದುರೆಯ ಫೋಟೋ ಮನೆಯಲ್ಲಿ ಹೀಗಿಟ್ಟರೆ ಹಯಗ್ರೀವ ಸ್ವಾಮಿ ರಕ್ಷಣೆ ಮನೆಗೆ ಪ್ರಾಪ್ತಿ ಆಗುತ್ತೆ.!
ಇವರು ಕ್ರಮಬದ್ಧ ಜೀವನವನ್ನು ಹೆಚ್ಚು ಇಷ್ಟಪಡುತ್ತಾರೆ. ಇವರು ತಮ್ಮಿಂದ ಹಾಗೂ ಇತರರಿಂದ ಸಾಕಷ್ಟು ನಿರೀಕ್ಷೆ ಮಾಡುತ್ತಾರೆ. ಇವರು ಆಲೋಚನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಬಯಸುವುದಿಲ್ಲ. ಬೆನ್ನು ನೆಲಕ್ಕೆ ತಾಕಿಸಿ ಮಲಗುವವರು ಆಶಾವಾದಿಗಳಾಗಿರುತ್ತಾರೆ. ಜೀವನದಲ್ಲಿ ಹಿಡಿದ ಗುರಿಯನ್ನು ಬಿಡಲು ಬಯಸುವುದಿಲ್ಲ.
ಅಂದುಕೊಂಡಿದ್ದನ್ನು ಸಾಧಿಸಲೇಬೇಕು ಎಂಬ ಹಠಮಾರಿ ಮನೋಭಾವದವರು. ಇವರು ಸುಮ್ಮನೆ ಬೇಡದ ಗಾಸಿಪ್ ಮಾಡಲು ಇಷ್ಟಪಡುವುದಿಲ್ಲ. ರಾಜಮನೆತನದವರಂತೆ ಜೀವನ ನಡೆಸುವ ಒಲವು ಹೊಂದಿರುತ್ತೀರಿ.
ಈ ಸುದ್ದಿ ನೋಡಿ:- ಹೊಸ ವೋಟರ್ ಐಡಿ ಕಾರ್ಡ್ ಪಡೆಯುವ ವಿಧಾನ.! ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!
* ಸೈನಿಕರ ಶೈಲಿ ಮಲಗುವವರು :- ಕೆಲವರಿಗೆ ಮಲಗುವಾಗ ತೋಳು ಗಳನ್ನು ನೇರ ಚಾಚಿ ಮಲಗಿದರಷ್ಟೇ ನಿದ್ದೆ ಬರುತ್ತದೆ. ಇಂತಹವರು ಉನ್ನತ ಗುಣಮಟ್ಟ ಹೊಂದಿರುತ್ತಾರೆ. ಇಂತಹವರ ಹೃದಯದಲ್ಲಿ ಸ್ಥಾನ ಗಳಿಸುವುದು ಸುಲಭವಲ್ಲ. ಇವರು ಸ್ನೇಹಪರರು ಸಭ್ಯರು ಆಗಿರುತ್ತಾರೆ. ಆದರೆ ನಿಕಟ ವಲಯದಲ್ಲಿ ನಿಮ್ಮ ವ್ಯಕ್ತಿತ್ವವನ್ನು ಇಷ್ಟಪಡುವವರಿಗೆ ಮಾತ್ರ ಜಾಗ ನೀಡುತ್ತೀರಿ.
* ಸ್ಟಾರ್‌ಫಿಶ್ ರೀತಿ ಮಲಗುವುದು :- ನಿಮ್ಮ ಕಾಲುಗಳು ಹಾಗೂ ತೋಳುಗಳನ್ನು ಸ್ಟಾರ್‌ಫಿಶ್ ರೀತಿ ಮಡಿಚಿ ಮಲಗುವ ಅಭ್ಯಾಸ ಇದ್ದರೆ ನೀವು ಸ್ನೇಹ ಹಾಗೂ ಸಂಬಂಧಗಳನ್ನು ಗೌರವಿಸುತ್ತೀರಿ. ನೀವು ಇತರರ ನೋವು ಹಾಗೂ ಕಥೆಗಳನ್ನು ಆಲಿಸಲು ಇಷ್ಟಪಡುತ್ತೀರಿ. ಸಹಾನುಭೂತಿ ಮನೋಭಾವ ನಿಮ್ಮಲ್ಲಿರುತ್ತದೆ.
ಈ ಸುದ್ದಿ ನೋಡಿ:- ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ ಸರ್ಕಾರದಿಂದ ಮಹಿಳೆಯರಿಗೆ ಬಿಗ್ ಶಾ-ಕ್
* ಅಡ್ಡಲಾಗಿ ಮಲಗುವುದು :- ಅಡ್ಡಲಾಗಿ ಮಲಗುವುದು ಅಂದರೆ ಒಂದು ಮಗ್ಗುಲಿಗೆ ಮಲಗುವುದು. ಈ ರೀತಿ ಮಲಗುವವರ ವ್ಯಕ್ತಿತ್ವವು ಹೊರಗಿನಿಂದ ತೀರಾ ಜೋರಿನವರಾಗಿದ್ದು ಮನಸ್ಸಿನೊಳಗೆ ಬಹಳ ಸೂಕ್ಷ್ಮ ಮನೋಭಾವ ಹೊಂದಿರುತ್ತಾರೆ. ಇವರು ನಾಚಿಕೆಯ ಸ್ವಭಾವದ ವ್ಯಕ್ತಿಯಾಗಿರುತ್ತಾರೆ.
ಇವರು ಸಾಕಷ್ಟು ಅಂತರ್ಮುಖಿಯಾಗಿರಬಹುದು. ಬರವಣಿಗೆ, ಚಿತ್ರಕಲೆ, ನೃತ್ಯ, ಹಾಡುಗಾರಿಕೆ, ಬ್ಲಾಗಿಂಗ್ ಮುಂತಾದ ಸೃಜನಶೀಲ ಚಟುವಟಿಕೆಗಳನ್ನು ನೀವು ಆನಂದಿಸಬಹುದು. ನಿಮ್ಮ ಜೀವನದಲ್ಲಿ ಅಂದರೆ ಎಚ್ಚರವಿದ್ದಾಗ ಎದುರಾಗುವ ಎಲ್ಲಾ ಸಮಸ್ಯೆ ಗಳನ್ನು ಎದುರಿಸಲು ನೀವು ಹಿಂಜರಿಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.