Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮಕ್ಕಳಿರುವ ಪೋಷಕರು ತಪ್ಪದೆ ಇದನ್ನು ನೋಡಿ.!

Posted on January 31, 2024 By Kannada Trend News No Comments on ಮಕ್ಕಳಿರುವ ಪೋಷಕರು ತಪ್ಪದೆ ಇದನ್ನು ನೋಡಿ.!

 

ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು ಎಂದುಕೊಂಡಿರು ವಂತಹ ಪ್ರತಿಯೊಬ್ಬ ಪೋಷಕರು ಕೂಡ ಈಗ ನಾವು ಹೇಳುವಂತಹ ಕೆಲವೊಂದಷ್ಟು ಸಲಹೆಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ ವಾಗಿರುತ್ತದೆ. ಅದು ನಿಮ್ಮ ಮಕ್ಕಳ ಅಭಿವೃದ್ಧಿ ಬುದ್ಧಿವಂತಿಕೆಗೂ ಕೂಡ ಕಾರಣವಾಗಿರುತ್ತದೆ ಆದ್ದರಿಂದ ಪೋಷಕರು ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಪೋಷಕರಿಗೆ ಯಾವ ರೀತಿಯ ಕೆಲವು ಸಲಹೆಗಳು ಬಹಳ ಮುಖ್ಯವಾಗಿರುತ್ತದೆ ಎಂದು ಈ ಕೆಳಗೆ ತಿಳಿಯೋಣ. ಮಕ್ಕಳಿಗೆ ಎಲ್ಲದಕ್ಕಿಂತ ಉತ್ತಮವಾಗಿದ್ದನ್ನು ನೀಡಬೇಕು ಅವರಿಗೆ ಶಿಸ್ತು, ನಡತೆ, ಉತ್ತಮ ಗುಣ, ಜೀವನವನ್ನು ಎದುರಿಸುವ ರೀತಿ ಇವೆಲ್ಲವನ್ನು ಸೂಕ್ತವಾಗಿ ತಿಳಿಸಬೇಕು ಎನ್ನುವುದು ಪ್ರತಿಯೊಬ್ಬ ಪೋಷಕನ ಕನಸು. ದಯಾ ಗುಣಗಳನ್ನು ಹೊಂದಿರುವ ಮಕ್ಕಳನ್ನು ಬೆಳೆಸಬೇಕೆಂದರೆ ನಾವು ನೀಡುವ ಸಂಸ್ಕಾರ ಕೂಡ ಅದೇ ರೀತಿ ಇರಬೇಕು.

ಈ ಸುದ್ದಿ ಓದಿ:- ನಾವು ಮಲಗುವ ಭಂಗಿಯಲ್ಲಿ ಅಡಗಿದೆ ನಮ್ಮ ಗುಪ್ತ ವ್ಯಕ್ತಿತ್ವ ನಿಮ್ಮ ರಹಸ್ಯ ವ್ಯಕ್ತಿತ್ವ ಎಂಥದ್ದು ತಿಳಿಯಿರಿ.!

* ನಮ್ಮ ಮಕ್ಕಳೊಂದಿಗೆ ನಾವು ಸುರಕ್ಷಿತವಾದ ಸಂಬಂಧವನ್ನು ಹೊಂದು ವುದು ನಾವು ಅವರಿಗೆ ನೀಡಬಹುದಾದ ಒಂದು ದೊಡ್ಡ ಉಡುಗೊರೆ ಆಗಿದೆ. ಮಕ್ಕಳಿಗೆ ಗದರುವುದು ಅವರನ್ನು ಆಡಿಕೊಂಡು ನಗುವುದು ಈ ರೀತಿ ನಡುವಳಿಕೆಯು ಮಕ್ಕಳಲ್ಲಿ ನಮ್ಮ ಬಗ್ಗೆ ಋಣಾತ್ಮಕ ಭಾವನೆಯನ್ನು ಮೂಡಲು ಕಾರಣವಾಗಬಹುದು.

* ಭಾವನೆಗಳು ಆಯ್ಕೆಗಳಲ್ಲ: ಭಾವನೆಗಳು ನಾವು ಅಂದುಕೊಂಡಂತೆ ಬರುವುದಿಲ್ಲ ಕೆಲವೊಂದು ನಡವಳಿಕೆಗಳ ಮೇಲೆ ಮಕ್ಕಳಿಗೂ ನಿಯಂತ್ರಣ ಇರುವುದಿಲ್ಲ. ಹೀಗಾಗಿ ಯಾವುದೋ ಒಂದು ಸಂಕಷ್ಟದ ಸಂದರ್ಭದಲ್ಲಿ ಮಕ್ಕಳು ನಿಮ್ಮೊಂದಿಗೆ ಬಂದು ಅದನ್ನು ನಿಮ್ಮ ಬಳಿ ಹೇಳಿಕೊಂಡಾಗ ಅವರನ್ನು ಅವಮಾನಿಸುವ ಬದಲು ಸ್ನೇಹಿತರ ರೀತಿಯಲ್ಲಿ ವರ್ತಿಸುವುದು ಒಳ್ಳೆಯದು.

ಈ ಸುದ್ದಿ ಓದಿ:- ಹೊಸ ವೋಟರ್ ಐಡಿ ಕಾರ್ಡ್ ಪಡೆಯುವ ವಿಧಾನ.! ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!

* ಇದಾದ ಬಳಿಕ ಮಕ್ಕಳು ಅವರಿಗೆ ತೊಂದರೆಯಾದಾಗ ನಿಮ್ಮನ್ನು ಸಂಪರ್ಕಿಸಬೇಕೆಂಬುದನ್ನು ಕಲಿತುಕೊಳ್ಳುತ್ತಾರೆ ಮಾತ್ರವಲ್ಲದೆ ಪ್ರಮೇಯವಾಗಿ ಜೀವನದ ಸವಾಲುಗಳನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ತಿಳಿಯುತ್ತಾರೆ.

* ತಪ್ಪು ಮಾಡುವುದು ಸಹಜ ನಾವು ಪರಿಪೂರ್ಣ ಪೋಷಕರಾಗ ಬೇಕೆಂಬ ಆಸೆ ಎಲ್ಲರಲ್ಲೂ ಇರುತ್ತದೆ. ಮನುಷ್ಯ ಎಂದ ಮೇಲೆ ತಪ್ಪು ಗಳಾಗುವುದು ಸಹಜ ಅದನ್ನು ಸರಿಪಡಿಸಿಕೊಳ್ಳಲು ಮಾರ್ಗವನ್ನು ಕಂಡುಕೊಳ್ಳುವುದು ಒಳ್ಳೆಯದು. ಹತಾಶರಾಗುವುದರಿಂದ ಏನೂ ಸಿಗೋದಿಲ್ಲ.

* ಮಕ್ಕಳಿಗಾಗಿ ನೀವೇನು ಮಾಡುತ್ತೀರಿ ಎಂಬುದು ಮುಖ್ಯ ಮಕ್ಕಳಿಗೆ ಸುಮ್ಮನೇ ಭರವಸೆಗಳನ್ನು ನೀಡುವ ಬದಲು ಅವರಿಗಾಗಿ ನಾವೇನು ಮಾಡಬೇಕು ಎಂಬುದರ ಬಗ್ಗೆ ಗಮನ ಹರಿಸಬೇಕು. ಮಕ್ಕಳು ತಮ್ಮ ಪೋಷಕರನ್ನು ನೋಡಿ ಸಾಕಷ್ಟು ವಿಚಾರಗಳನ್ನು ಕಲಿಯುತ್ತಿರುತ್ತಾರೆ.
* ನಮ್ಮ ಮಕ್ಕಳು ಸಮಾಜದಲ್ಲಿ ಗೌರವಯುತರಾಗಿ ಇರಬೇಕು ಅವರು ಚಿಂತನಾಶೀಲರಾಗಿ ಇರಬೇಕು ಎಂದುಕೊಂಡರೆ ನಾವು ಅದೇ ರೀತಿ ವರ್ತನೆಯನ್ನು ಅವರೆದುರು ತೋರಿಸಬೇಕು.

ಈ ಸುದ್ದಿ ಓದಿ:- ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ ಸರ್ಕಾರದಿಂದ ಮಹಿಳೆಯರಿಗೆ ಬಿಗ್ ಶಾ-ಕ್

* ಮಕ್ಕಳ ಮೆದುಳಿನ ಮೇಲೆ ಪೋಷಕರಿಂದ ಪರಿಣಾಮ ಪೋಷಕ ರೊಂದಿಗೆ ಮಕ್ಕಳ ಸಂಬಂಧ ಹೇಗಿದೆ ಎನ್ನುವುದರ ಆಧಾರದ ಮೇಲೆ ಮಕ್ಕಳ ಮೆದುಳಿನ ಬೆಳವಣಿಗೆ ಆಗುತ್ತಾ ಹೋಗುತ್ತದೆ. ಹೀಗಾಗಿ ನಾವು ಮಕ್ಕಳನ್ನು ಪ್ರೀತಿಯಿಂದ ಕಾಳಜಿಯಿಂದ ನೋಡಿಕೊಳ್ಳಬೇಕು. ಆಗ ಮಕ್ಕಳು ಸಹ ಇತರರೊಂದಿಗೆ ಪ್ರೀತಿಯಿಂದ ವ್ಯವಹರಿಸುವುದನ್ನು ಕಲಿತುಕೊಳ್ಳುತ್ತಾರೆ.

ಮಕ್ಕಳ ಮೆದುಳಿನ ಮೇಲೆ ಉತ್ತಮ ಪರಿಣಾಮ ಬೀರಬೇಕು ಎಂದರೆ ಅಲ್ಲಿ ಪೋಷಕರ ಪ್ರೀತಿ ತುಂಬಾ ಮುಖ್ಯವಾಗುತ್ತದೆ ಪ್ರತಿಯೊಬ್ಬ ಪೋಷಕರು ನಿಮ್ಮ ಮಕ್ಕಳ ವಿಚಾರವಾಗಿ ಹಲವಾರು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಇದರಿಂದ ನಿಮ್ಮ ಮಕ್ಕಳ ಭವಿಷ್ಯವೂ ಕೂಡ ಮುಂದಿನ ದಿನದಲ್ಲಿ ಅತ್ಯುತ್ತಮವಾಗಿರುತ್ತದೆ.

ಆದ್ದರಿಂದ ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಕ್ಕಳ ವಿಚಾರವಾಗಿ ನಾವು ಯಾವ ರೀತಿಯಾಗಿ ನಡೆದುಕೊಳ್ಳ ಬೇಕು ಅವರಿಗೆ ಇಷ್ಟವಾಗುವ ರೀತಿ ನಾವು ಹೇಗೆ ಇರಬೇಕು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

https://youtu.be/fj8tZViRgGM?si=e_R5FW8MiF1WBUoj

News
WhatsApp Group Join Now
Telegram Group Join Now

Post navigation

Previous Post: ಸ್ತ್ರೀಯರು ಪಾಲಿಸಬೇಕಾದ ನಿಯಮಗಳು.!
Next Post: ನಿಮ್ಮ ಈ 12 ಅಭ್ಯಾಸಗಳು ನಿಮ್ಮನ್ನು ಬಡವರನ್ನಾಗಿ ಮಾಡುತ್ತದೆ ಇಂದಿನಿಂದಲೇ ಅವುಗಳಿಂದ ದೂರವಿರಿ……..||

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore