Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮನೆಯಲ್ಲಿ ಯಾವುದೇ ಕಾರಣಕ್ಕೂ ಈ 6 ವಸ್ತುಗಳು ಖಾಲಿಯಾಗಲು ಬಿಡಬೇಡಿ.!

Posted on March 25, 2024 By Kannada Trend News No Comments on ಮನೆಯಲ್ಲಿ ಯಾವುದೇ ಕಾರಣಕ್ಕೂ ಈ 6 ವಸ್ತುಗಳು ಖಾಲಿಯಾಗಲು ಬಿಡಬೇಡಿ.!

 

ನಮ್ಮ ಶಾಸ್ತ್ರಗಳಲ್ಲಿ, ಪುರಾಣಗಳಲ್ಲಿ ಕೆಲ ವಸ್ತುಗಳ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ಈ ಬ್ರಹ್ಮಾಂಡವೇ ಭಗವಂತನ ಸೃಷ್ಟಿಯಾಗಿದ್ದರು, ಸೃಷ್ಟಿಯಲ್ಲಿರುವ ಕೆಲವು ವಸ್ತುಗಳು ಭಗವಂತನನ್ನು ಪ್ರತಿನಿಧಿಸುತ್ತಿರುತ್ತವೆ ಮತ್ತು ದೇವರುಗಳ ಆವಾಸಸ್ಥಾನವಾಗಿರುತ್ತದೆ. ಈ ರೀತಿ ಮಂಗಳ ದ್ರವ್ಯಗಳ ಮೂಲಕ ಮನೆ ಸೇರುವ ದೇವತೆಗಳು ಆ ಮನೆಯ ಅದೃಷ್ಟವನ್ನು ಹೆಚ್ಚಿಸುತ್ತಾರೆ ಎನ್ನುವುದು ನಂಬಿಕೆ.

ತಾಯಿ ಮಹಾಲಕ್ಷ್ಮಿ, ಮಹಾ ಗೌರಿ, ಮಹಾ ಸರಸ್ವತಿ, ಮಹಾವಿಷ್ಣು ಮಹಾದೇವನ ಸ್ವರೂಪ ಎಂದು ಅನೇಕ ವಸ್ತುಗಳ ಬಗ್ಗೆ ಹಿರಿಯರು ಹೇಳಿರುವುದನ್ನು ಕೇಳಿರುತ್ತೇವೆ. ಯಾವುದೇ ಕಾರಣಕ್ಕೂ ಇಂತಹ ಪವಿತ್ರ ವಸ್ತುಗಳು ಮನೆಯಲ್ಲಿ ಖಾಲಿ ಆಗದಂತೆ ನೋಡಿಕೊಳ್ಳಬೇಕು ಇಲ್ಲವಾದಲ್ಲಿ ಮನೆಗೆ ದರಿದ್ರ ಬರುವುದರಲ್ಲಿ ಅನುಮಾನವೇ ಇಲ್ಲ. ಯಾವ ವಸ್ತುಗಳು ಮತ್ತು ಏಕೆ? ಎನ್ನುವುದನ್ನು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.

* ಅಕ್ಕಿ:- ಅನ್ನಂ ಪರಬ್ರಹ್ಮ ಸ್ವರೂಪಂ ಎನ್ನುತ್ತೇವೆ, ಅನ್ನವನ್ನು ತಾಯಿ ಅನ್ನಪೂರ್ಣೇಶ್ವರಿಯ ಪ್ರಸಾದ ಎಂದು ಹೇಳಲಾಗುತ್ತದೆ ಮತ್ತು ಅಕ್ಕಿಯನ್ನು ಚಂದ್ರ ಗ್ರಹದ ಪ್ರಭಾವ ಇರುವ ಧಾನ್ಯ ಎನ್ನುತ್ತೇವೆ. ಚಂದ್ರನ ಸಹೋದರಿಯು ತಾಯಿ ಮಹಾಲಕ್ಷ್ಮಿ ಆಗಿದ್ದಾರೆ.

ಹಾಗಾಗಿ ಯಾವುದೇ ಕಾರಣಕ್ಕೂ ಮನೆಯಲ್ಲಿ ಅಕ್ಕಿಯು ಖಾಲಿ ಆಗದಂತೆ ನೋಡಿಕೊಳ್ಳಬೇಕು ಮತ್ತು ಪ್ರತಿಬಾರಿ ಅಡುಗೆ ಮಾಡುವಾಗಲೂ ಕೃಷ್ಣ ಅಕ್ಷಯಂ ಎಂದು ಹೇಳಿ ಅಡುಗೆ ಮಾಡಬೇಕು. ಅಕ್ಕಿ ಹಾಗೂ ಇತರೆ ಧಾನ್ಯಗಳನ್ನು ಧನಲಕ್ಷ್ಮಿ ಎಂದು ಕೂಡ ಕರೆಯಲಾಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಮನೆಯಲ್ಲಿ ಇವುಗಳನ್ನು ಖಾಲಿ ಮಾಡಬಾರದು.

* ಉಪ್ಪು:- ಉಪ್ಪು ತಾಯಿ ಮಹಾಲಕ್ಷ್ಮಿಯ ಸ್ವರೂಪವಾಗಿದೆ. ಯಾಕೆಂದರೆ ಸಮುದ್ರದಲ್ಲಿ ಉಪ್ಪು ತಯಾರಾಗುತ್ತದೆ, ತಾಯಿ ಲಕ್ಷ್ಮಿ ಕೂಡ ಸಮುದ್ರದಿಂದಲೇ ಉದ್ಭವಿಸಿದವರು. ಯಾವುದೇ ಅಡುಗೆ ಆದರೂ ಉಪ್ಪು ಇಲ್ಲದೆ ಪರಿಪೂರ್ಣವಾಗುವುದಿಲ್ಲ. ಪರಿಹಾರ ಶಾಸ್ತ್ರದಲ್ಲಿ ಇದನ್ನು ಲವಣ ಎಂದು ಹೇಳಲಾಗಿದೆ. ಆಯುರ್ವೇದದಲ್ಲಿ, ವಾಸ್ತು ಶಾಸ್ತ್ರದಲ್ಲಿ, ಅಡಿಕೆ ಶಾಸ್ತ್ರದಲ್ಲಿ, ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲದರಲ್ಲೂ ಕೂಡ ಉಪ್ಪಿಗೆ ಬಹಳ ಪ್ರಾಶಸ್ತ್ಯ ಇದೆ. ಇಂತಹ ವಸ್ತುವು ಮನೆಯಲ್ಲಿ ಖಾಲಿ ಆಗುವುದು ಶುಭವಲ್ಲ ಹಾಗಾಗಿ ಎಚ್ಚರ ಇರಲಿ.

* ಅರಿಶಿಣ ಮತ್ತು ಕುಂಕುಮ:- ಅರಿಶಿಣ ಕುಂಕುಮವನ್ನು ಹರಿದ್ರ ಚೂರ್ಣ ಮತ್ತು ಕುಂಕುಮ ಚೂರ್ಣ ಎಂದು ಕರೆಯಲಾಗುತ್ತದೆ. ಯಾವ ಶುಭಕಾರ್ಯವು, ದೇವರ ಪೂಜೆಯು ಅರಿಶಿಣ ಕುಂಕುಮ ಇಲ್ಲದೇ ನಡೆಯುವುದಿಲ್ಲ. ಅರಿಶಿನ ಕುಂಕುಮ ಧರಿಸುವವರ ಜೊತೆಯಲ್ಲಿ ತಾಯಿ ಗೌರಿ, ಶಾರದೆ ಮತ್ತು ಲಕ್ಷ್ಮಿ ಆಶೀರ್ವಾದ ಇದ್ದೇ ಇರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮನೆಯಲ್ಲಿ ಇವು ಖಾಲಿ ಆಗಬಾರದು. ಒಂದು ವೇಳೆ ಖಾಲಿಯಾದ ಅರಿಶಿನ ಕುಂಕುಮದ ಬಟ್ಟಲನ್ನು ನೋಡಿದರೆ ಅದು ಬಹಳ ಅಪಶಕುನ ಹಾಗಾಗಿ ಎಚ್ಚರ ಇರಲಿ.

4. ನೀರು ತುಂಬಿದ ಪಾತ್ರೆ:- ನಿರು ಜೀವಜಲ. ನೀರಿನಲ್ಲಿ ಗಂಗಾ ಭವಾನಿ ನರ್ಮದೇ ಸರಸ್ವತಿ ಮಹಾಲಕ್ಷ್ಮಿ ಎಲ್ಲರೂ ನೆಲೆಸಿರುತ್ತಾರೆ. ಮನೆಯಲ್ಲಿ ಯಾವಾಗಲೂ ಒಂದು ಕುಡಿಯುವ ಬಿಂದಿಗೆ ಇಟ್ಟಿರುತ್ತೇವೆ. ಇದು ಅಡಿಗೆ ಮನೆಯಲ್ಲಿ ಇಡಬಹುದು ಅಥವಾ ಹಾಲ್ ನಲ್ಲಿ ಇಡಬಹುದು. ಯಾವುದೇ ಕಾರಣಕ್ಕೂ ಇದರಲ್ಲಿ ಪೂರ್ತಿ ನೀರು ಖಾಲಿ ಆಗದಂತೆ ನೋಡಿಕೊಳ್ಳಿ. ಸ್ವಲ್ಪ ಇರುವಾಗಲೇ ಪಾತ್ರೆಯನ್ನು ಶುದ್ಧ ಮಾಡಿ ಮತ್ತೆ ತುಂಬಿ ಇಟ್ಟುಕೊಳ್ಳಿ ಅದು ಖಾಲಿ ಆಗುತ್ತಿದ್ದಂತೆ ಗಮನಿಸಿ ಮತ್ತೆ ತುಂಬಿಸಿ. ಯಾಕೆಂದರೆ ಪೂರ್ತಿ ಖಾಲಿಯಾದ ಇಂತಹ ತಂಬಿಗೆ ನೋಡಿದರೆ ಅದು ಅಪಶಕುನ ಹಾಗಾಗಿ ಅದರಲ್ಲಿ ನೀರು ಖಾಲಿಯಾಗಬಾರದು.

5. ಹಣ:- ಹಣ ಒಡವೆ ಇದೆಲ್ಲವೂ ಕೂಡ ತಾಯಿ ಮಹಾಲಕ್ಷ್ಮಿ ಸ್ವರೂಪ. ಕೆಲವರು ಹಣ ಖರ್ಚು ಮಾಡಬೇಕಾದಾಗ ಅಥವಾ ಮನೆಯಿಂದ ಒಡವೆ ತೆಗೆದುಕೊಂಡು ಅಡ ಇಡಬೇಕಾದಾಗ ಅಥವಾ ಒಳ್ಳೆಯ ಕೆಲಸಕ್ಕೆ ಮನೆಯಿಂದ ಹಣ ತೆಗೆದುಕೊಂಡು ಹೋಗಬೇಕಾದಾಗ ಒಂದು ರೂಪಾಯಿಯೂ ಕೂಡ ಇಡದಂತೆ ಪೂರ್ತಿಯಾಗಿ ತೆಗೆದುಕೊಂಡು ಹೋಗುತ್ತಾರೆ.

ಯಾವುದೇ ಕಾರಣಕ್ಕೂ ಇಂತಹ ತಪ್ಪು ಮಾಡಬೇಡಿ. ನೀವು ಎಷ್ಟು ಹಣ ಇಟ್ಟಿರುತ್ತೀರೋ ಅದರಲ್ಲಿ 10% ಆದರೂ ಮನೆಯಲ್ಲಿಯೇ ಇಟ್ಟು ಉಳಿದ ಹಣವನ್ನು ತೆಗೆದುಕೊಂಡು ಹೋಗಿ. ಪೂರ್ತಿ ಹಣವನ್ನು ಖಾಲಿ ಮಾಡಿ ಖಾಲಿ ಪರ್ಸ್, ಪೆಟ್ಟಿಗೆ, ಬೀರು ಇಡುವುದು ಶುಭವಲ್ಲ. ಅಂತಹ ಸ್ಥಳಗಳಲ್ಲಿ ತಾಯಿ ಮಹಾಲಕ್ಷ್ಮಿ ನೆಲೆಸಲು ಇಷ್ಟಪಡುವುದಿಲ್ಲ.

News
WhatsApp Group Join Now
Telegram Group Join Now

Post navigation

Previous Post: ಏಪ್ರಿಲ್ 1, 2024 ರಿಂದ ಉಚಿತ ವಿದ್ಯುತ್ ಸೌಲಭ್ಯ ಬಂದ್, ರಾತ್ರೋರಾತ್ರಿ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!
Next Post: ಕಟಕ ರಾಶಿಯ ಯುಗಾದಿ ವಾರ್ಷಿಕ ಭವಿಷ್ಯ 2024-25, ನಿಮ್ಮ ಕಷ್ಟಗಳೆಲ್ಲಾ ಇಲ್ಲಿಗೆ ಕಳೆದು ಕನಸು ನನಸಾಗುವ ಸಮಯ ಆದರೆ ಶನಿಪ್ರಭಾವ ಹೇಗಿರುತ್ತದೆ ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore