ಮೊದಲ ಕೆಲಸ ಮೊದಲ ಸಂಬಳ ಎನ್ನುವುದು ಪ್ರತಿಯೊಬ್ಬರ ಜೀವನದ ಮರೆಯಲಾಗದ ಸನ್ನಿವೇಶ. ಸಾಮಾನ್ಯ ಜನರು ಕೂಡ ಈ ರೀತಿ ಅವರು ಮೊದಲು ಮಾಡಿದ ಕೆಲಸವನ್ನು ಕೊನೆಯವರೆಗೂ ನೆನಪಿಟ್ಟುಕೊಳ್ಳುತ್ತಾರೆ ಮತ್ತು ಅವಕಾಶ ಸಿಕ್ಕಾಗೆಲ್ಲ ತಾವು ಮೊದಲು ಈ ಕೆಲಸ ಮಾಡುತ್ತಿದ್ದೆ ಎಂದು ಹೇಳಿಕೊಳ್ಳುತ್ತಾರೆ ಹಾಗೂ ಮೊದಲ ಸಂಬಳದ ವಿಚಾರವೂ ಕೂಡ ಹಾಗೆ. ಮೊದಲ ಸಂಬಳ ಎನ್ನುವುದು ಇನ್ನು ಕೂಡ ಹಲವರಿಗೆ ಅದೊಂದು ಸೆಂಟಿಮೆಂಟ್. ಇದುವರೆಗೆ ತಮ್ಮ ಜೀವನದ ಎಲ್ಲಾ ಆಗುಹೋಗುಗಳಿಗೂ ಹೆತ್ತವರ ಅಥವಾ ಪೋಷಕರ ಮೇಲೆ ಅವಲಂಬಿತರಾಗಿದ್ದವರು. ಮೊದಲ ಬಾರಿಗೆ ತಾವೇ ದುಡಿಯಲು ಶುರುಮಾಡಿದಾಗ ಮೊದಲ ಸಂಬಳ ಪಡೆಯುವವರೆಗೂ ಅದೊಂದು ರೀತಿ ಎಕ್ಸೈಟ್ಮೆಂಟ್ ಇರುತ್ತದೆ. ತಿಂಗಳ ಸಂಬಳವೇ ಆಗಲಿ, ದಿನದ ಸಂಬಳವೇ ಆಗಲಿ ಮೊದಲು ತಮ್ಮ ಸಂತ ದುಡಿಮೆಗೆ ಪಡೆಯುವ ಹಣ ಎಂದರೆ ಎಲ್ಲರಿಗೂ ಕೂಡ ಒಂದು ರೀತಿಯ ಭಾವನಾತ್ಮಕ ವಿಷಯ.
ಸಾಮಾನ್ಯವಾಗಿ ನಮ್ಮಲ್ಲಿ ಈಗಲೂ ಕೂಡ ಹಲವಾರು ಜನರು ಈ ರೀತಿ ಪಡೆದ ಮೊದಲ ಸಂಬಳವನ್ನು ಇಷ್ಟು ದಿನ ತಮ್ಮ ಎಲ್ಲ ಖರ್ಚುವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದ ಹೆತ್ತವರಿಗೆ ಕೊಡಬೇಕು ಎಂದು ನಿರ್ಧಾರ ಮಾಡಿಕೊಂಡಿರುತ್ತಾರೆ. ಮತ್ತೆ ಕೆಲವರು ತಮ್ಮ ಮೊದಲ ಸಂಬಳದ ಹಣ ಅಥವಾ ಚೆಕ್ ಅನ್ನು ಜೋಪಾನವಾಗಿ ಕೊನೆಯ ತನಕವೂ ಇಟ್ಟುಕೊಳ್ಳಬೇಕು ಎಂದು ಎಷ್ಟೇ ಕಷ್ಟ ಬಂದರೂ ಅದನ್ನು ಖರ್ಚುಮಾಡದೆ ಹಾಗೇ ಇಟ್ಟುಕೊಳ್ಳುತ್ತಾರೆ. ಮತ್ತೆ ಕೆಲವರು ತಮಗೆ ಬರುವ ಮೊದಲ ಸಂಬಳವನ್ನು ದೇವರಿಗೆ ಅಥವಾ ಸಮಾಜಸೇವೆಗೆ ಕೊಡಬೇಕು ಎಂದು ಆಸೆಪಡುತ್ತಾರೆ. ಹಾಗೂ ಈಗಿನ ಕಾಲದಲ್ಲಿ ತುಂಬಾ ಕಾಮನ್ ವಿಷಯ ಏನೆಂದರೆ ಈಗಿನ ಕಾಲದಲ್ಲಿ ಯುವಕ-ಯುವತಿಯರು ಪಡೆಯುವ ಮೊದಲ ಸಂಬಳವನ್ನು ಅವರಿಗೆ ಕೆಲಸ ಸಿಕ್ಕ ಖುಷಿಗೆ ಪಾರ್ಟಿ ಕೊಡಲು ಸ್ನೇಹಿತರ ಜೊತೆಗೆ ಅವರ ಸಂತೋಷಕೂಟ ಏರ್ಪಾಟು ಮಾಡಲು ಖರ್ಚು ಮಾಡುತ್ತಾರೆ.
ಈ ರೀತಿ ಮೊದಲ ಸಂಬಳ ಎನ್ನುವುದು ಒಂದು ನೆನಪಾಗಿ ಎಲ್ಲರ ಜೀವನದಲ್ಲೂ ಇರುತ್ತದೆ. ಇದು ಸಾಮಾನ್ಯ ಜನರಿಗೆ ಮಾತ್ರವಲ್ಲ ಸೆಲೆಬ್ರಿಟಿಗಳು ಕೂಡ ತಮ್ಮ ಮೊದಲ ಸಂಭಾವನೆಯನ್ನು ನೆನಪಿಟ್ಟುಕೊಂಡು ಇರುತ್ತಾರೆ. ಅದು ಅವರ ಪ್ರತಿಭೆಗೆ ಮೊದಲು ಸಿಕ್ಕ ಪುರಸ್ಕಾರ ವಾಗಿರುತ್ತದೆ. ಮತ್ತು ಪ್ರತಿ ಬಾರಿಯೂ ಅವರು ಗೆಲ್ಲುವುದರ ಮೂಲಕ ಅವರ ಸಂಭಾವನೆಯನ್ನು ಮಿಂಚಿನ ವೇಗದಲ್ಲಿ ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಾರೆ. ಹೀಗಾಗಿ ಅವರು ಪಡೆವ ಮೊದಲ ಚಾನ್ಸ್ ಮತ್ತು ಅವರ ಮೊದಲ ಅಭಿನಯಕ್ಕಾಗಿ ಅವರು ಪಡೆಯುವ ಸಂಭಾವನೆಯೂ ಅವರ ಬದುಕಿನ ಬಹು ಮುಖ್ಯಭಾಗ. ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಹಲವು ನಟರುಗಳು ಅವರು ನಡೆದು ಬಂದ ದಾರಿಯನ್ನು ಹೇಳುವಾಗ ಅವರ ಮೊದಲ ಅವಕಾಶಕ್ಕಾಗಿ ಪಟ್ಟ ಕಷ್ಟ ಹಾಗೂ ಅವರು ಪಡೆದ ಮೊದಲ ಸಂಬಳದ ಬಗ್ಗೆ ಹಲವಾರು ಸಂದರ್ಶನಗಳಲ್ಲಿ ಹೇಳಿಕೊಂಡಿರುತ್ತಾರೆ.
ಖಂಡಿತವಾಗಿಯೂ ಇದೊಂದು ಒಳ್ಳೆಯ ವಿಷಯ ಎಂದು ಹೇಳಬಹುದು ಯಾಕೆಂದರೆ ಜೀವನದಲ್ಲಿ ನಾವು ಕೂಡ ತುಂಬಾ ಎತ್ತರಕ್ಕೆ ಬೆಳೆಯಬೇಕು ಎನ್ನುವುದರ ಬಗ್ಗೆ ಕನಸು ಕಾಣುವ ಯುವಪೀಳಿಗೆಗೆ ಈ ರೀತಿ ಚಿಕ್ಕ-ಚಿಕ್ಕ ಹೆಜ್ಜೆ ಗಳಿಂದಲೇ ಎತ್ತರಕ್ಕೆ ಏರುವುದು ಎನ್ನುವುದನ್ನು ನೆನಪಿಸಿಕೊಳ್ಳುವುದಕ್ಕೆ ಈ ವಿಚಾರಗಳು ತುಂಬಾ ಮುಖ್ಯ. ನಮ್ಮಲ್ಲಿ ಈಗ ದೊಡ್ಡ ದೊಡ್ಡ ಸ್ಟಾರ್ ಆಗಿರುವವರು ಕೂಡ ಅವರು ಮೊದಲ ದಿನಗಳಲ್ಲಿ ಪಡೆದ ಸಂಭಾವನೆ ಮತ್ತು ಅವರ ಮೊದಲ ಅವಕಾಶ ಪಡೆಯಲು ಪಟ್ಟ ಕಷ್ಟ ಎಲ್ಲರಿಗೂ ಸ್ಪೂರ್ತಿನೀಡುವ ಕಥೆಯಾಗುತ್ತದೆ. ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಇರುವ ನಮ್ಮ ಸ್ಟಾರ್ ನಟರುಗಳು ಮೊದಲಬಾರಿಗೆ ಪಡೆದ ಸಂಭಾವನೆ ಮತ್ತು ಅದು ಯಾವ ಸಿನಿಮಾ ಅಥವಾ ಧಾರಾವಾಹಿ ನಟನೆಗೆ ಅವರು ಪಡೆದುಕೊಂಡಿದ್ದರು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ವರ ನಟ ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಗೆ ಒಂದು ಐಡೆಂಟಿಟಿ ಎನ್ನಬಹುದು.1954 ರಲ್ಲಿ ಅವರು ತಮ್ಮ ಮೊದಲ ಸಿನಿಮಾದ ಬೇಡರಕಣ್ಣಪ್ಪ ಎನ್ನುವ ಚಿತ್ರಕ್ಕೆ ಪಡೆದ ಸಂಭಾವನೆ ಪ್ರತಿ ದಿನಕ್ಕೆ 45 ಪೈಸೆ ಮಾತ್ರ.
ನಟ ಕಿಚ್ಚ ಸುದೀಪ್ ಅವರು 1999 ರಲ್ಲಿ ಪ್ರೇಮದ ಕಾದಂಬರಿ ಎನ್ನುವ ಧಾರಾವಾಹಿಯ ಮೂಲಕ ನಟನೆಯನ್ನು ಶುರುಮಾಡಿದರು. ಅವರ ಮೊದಲ ಸಂಭಾವನೆ 1500 ರೂ ಗಳಾಗಿತ್ತು.
2000 ನೇ ಇಸವಿಯಲ್ಲಿ ದರ್ಶನ್ ಅವರು ಮೊದಲಿಗೆ ಅಂಬಿಕಾ ಎನ್ನುವ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಆಗ ಅವರಿಗೆ ಸಿಕ್ಕ ಮೊದಲ ಸಂಭಾವನೆ ಎರಡು ಸಾವಿರ ರೂಗಳು ಆಗಿತ್ತು.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು 2012 ರಲ್ಲಿ ತೆರೆಕಂಡ ತಮ್ಮ ಮೊದಲ ಸಿನಿಮವಾದ ಅದ್ದೂರಿ ಸಿನಿಮಾದಲ್ಲಿ ನಾಯಕನಟನಾಗಿ ಅಭಿನಯಿಸಲು ತೆಗೆದುಕೊಂಡು ಸಂಭಾವನೆ 40 ಲಕ್ಷ ರೂಗಳು.
ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರು 2009 ನೇ ಇಸ್ವಿಯಲ್ಲಿ ವಾಯುಪುತ್ರ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ವಿಶೇಷ ಏನೆಂದರೆ ಈ ಸಿನಿಮಾಗಾಗಿ ಒಂದು ರೂಪಾಯಿ ಸಂಭಾವನೆ ಪಡೆದಿರಲಿಲ್ಲ.
ಡಾ.ವಿಷ್ಣುವರ್ಧನ್ ಅವರು 1971 ರಲ್ಲಿ ವಂಶವೃಕ್ಷ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದರು. ಈ ಸಿನಿಮಾಗಾಗಿ ಅವರು ತೆಗೆದುಕೊಂಡ ಸಂಭಾವನೆ ಹತ್ತು ಸಾವಿರ ರೂಗಳು.
ಅಂಬರೀಶ್ ಅವರು ನಾಗರಹಾವು ಸಿನಿಮಾದಲ್ಲಿ ಮೊದಲಿಗೆ ಕಾಣಿಸಿಕೊಂಡರು ಮತ್ತು ಅದಕ್ಕಾಗಿ ಅವರು ಯಾವುದೇ ಸಂಭಾವನೆಯನ್ನು ಪಡೆದಿರಲಿಲ್ಲ.
ಅನಂತನಾಗ್ ಅವರು ಮೊದಲ ಸಿನಿಮಾ ಸಂಕಲ್ಪ ಅಭಿನಯಕ್ಕಾಗಿ ಐವತ್ತು ಸಾವಿರ ರೂಗಳನ್ನು ಪಡೆದಿದ್ದರು.
ದುನಿಯಾ ವಿಜಯ್ ಅವರು ರಂಗ ಎಸೆಸೆಲ್ಸಿ ಸಿನಿಮಾದಲ್ಲಿ ಫೈಟ್ ಬಾಯ್ ಆಗಿ ನಟಿಸಿದ್ದರು. ಅದಕ್ಕಾಗಿ ಅವರಿಗೆ ಸಿಕ್ಕ ಸಂಭಾವನೆ 50 ರೂಪಾಯಿಗಳು.
ನಟ ಪುನೀತ್ ರಾಜಕುಮಾರ್ ಅವರ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಮೊದಲಬಾರಿಗೆ ಕಾಣಿಸಿಕೊಂಡರು ಆದರೆ ಇದಕ್ಕಾಗಿ ಅವರು ಯಾವುದೇ ಸಂಭಾವನೆ ಪಡೆದಿರಲಿಲ್ಲ ಮತ್ತು ಶಿವರಾಜ್ ಕುಮಾರ್ ಅವರು ತಮ್ಮದೇ ಪ್ರೊಡಕ್ಷನ್ ನಲ್ಲಿ ಅಭಿನಯಿಸಿದ್ದ ರಿಂದ ಅವರು ಕೂಡ ಮೊದಲ ಸಂಭಾವನೆ ಪಡೆದಿರಲಿಲ್ಲ.
ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ನಿಮ್ಮ ಅಭಿಪ್ರಾಯವೇನು.? ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.