ಹಲವು ರೀತಿ ವಿಭಿನ್ನ ಪ್ರಯೋಗಗಳನ್ನು ಹೊಂದಿರುವ ಸಿನಿಮಾಗಳನ್ನು ಮಾಡುವುದು ಬಾಲಿವುಡ್ ಗೆ ಹೊಸದೇನಲ್ಲ, ಈ ರೀತಿಯ ಪ್ರಯೋಗಾತ್ಮಕ ಕಥೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಗೆದ್ದಿರುವ ಬಾಲಿವುಡ್ ಈಗ ನೈಜ ಕಥೆಯಾಧಾರಿತ ಸಿನಿಮಾಗಳ ಕಡೆ ಮುಖ ಮಾಡಿದೆ. ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಈ ರೀತಿ ನೈಜಕತೆ ಆಧಾರಿತ ಹಲವಾರು ಸಿನಿಮಾಗಳು ಯಶಸ್ಸು ಕಂಡಿದೆ. ಕ್ರಿಕೆಟರ್ ಎಂಎಸ್ ಧೋನಿ ಅವರ ಜೀವನ ಆಧಾರಿತ ಚಿತ್ರ, ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಆಧಾರಿತ ಸಿನಿಮಾ ಹೀಗೆ ಹತ್ತು ಹಲವು ಸಿನಿಮಾಗಳು ಈಗಾಗಲೇ ತೆರೆಕಂಡಿದೆ. ಈಗ ಇದೇ ಸಾಲಿಗೆ ಮತ್ತೊಬ್ಬರ ಜೀವನಗಾಥೆಯು ಚಿತ್ರವಾಗಿ ಸೇರುತ್ತಿದೆ. ಇದು ಮುಂಬೈನ ಗಂಗೂಬಾಯಿ ಕಾಠಿಯಾವಾಡಿ ಅವರ ಜೀವನ ಆಧಾರಿತ ಕಥೆ. ಸಿನಿಮಾ ಸೆಟ್ಟೇರಿದ ದಿನದಿಂದ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಈ ಸಿನಿಮಾವು ಈಗ ಭರ್ಜರಿ ಯಶಸ್ಸು ಕಾಣುತ್ತಿದೆ.
ಗಂಗೂಬಾಯಿ ಎನ್ನುವ ಮುಗ್ಧ ಹುಡುಗಿಯು ಹತ್ತಿರದ ಸಂಬಂಧಿಕರ ಮಾತನ್ನು ನಂಬಿ ಮುಂಬೈ ಅಂತಹ ಮಹಾನಗರದಲ್ಲಿ ಮೋಸಹೋಗಿ ನಂತರ ಬಲವಂತವಾಗಿ ವೇ’ಶ್ಯಾ’ವಾ’ಟಿ’ಕೆ ಜಾಲಕ್ಕೆ ಸಿಲುಕಿಕೊಂಡ ಕರುಣಾಜನಕ ಕಥೆಯ ಜೊತೆ ಮುಂದೆ ಆಕೆಯೇ ಮುಂಬೈನ ಡಾನ್ ಆಗಿ ಬೆಳೆದ ರೋಚಕ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿ ಈ ದುರಂತ ನಾಯಕಿಯ ಪಾತ್ರವನ್ನು ಮಾಡುತ್ತಿರುವುದು ಬಾಲಿವುಡ್ನ ಸ್ಟಾರ್ ಹೀರೋಯಿನ್ ಕೆಟಗರಿ ಸೇರಿರುವ ಆಲಿಯಾ ಭಟ್ ಅವರು. ಆಲಿಯಾ ಭಟ್ ಈವರೆಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದುವರೆಗೆ ಅವರು ನಟಿಸಿರುವ ಸಿನಿಮಾಗಳಲ್ಲಿ ಬಹುತೇಕ ಹಲವಾರು ಸಿನಿಮಾಗಳು ಸೂಪರ್ ಹಿಟ್ ಆಗಿದ್ದು ಈಗ ಆಲಿಯಾ ಭಟ್ ಅವರು ಬಾಲಿವುಡ್ ಅಂಗಳದ ಭರವಸೆಯ ನಾಯಕಿ ಆಗಿ ಮಿಂಚುತ್ತಿದ್ದಾರೆ. ತಮ್ಮ ಅದ್ಬುತ ನಟನೆಯಿಂದ ಎಲ್ಲರ ಮನಸೆಳೆದ ಇರುವವರು ಮತ್ತೊಮ್ಮೆ ಈ ಪಾತ್ರದ ಮೂಲಕ ತಮ್ಮ ನಟನೆಯನ್ನು ಸಾಬೀತು ಮಾಡುತ್ತಿದ್ದಾರೆ.
ಗಂಗೂಬಾಯಿ ಕಾಟಿಯವಾಡಿ ಸಿನಿಮಾದಲ್ಲಿ ಆಲಿಯಾ ಭಟ್ ಅವರು ನಿರ್ವಹಿಸುತ್ತಿರುವುದು ಒಂದು ವೇ’ಶ್ಯೆ’ಯ ಪಾತ್ರ. ಈಗಾಗಲೇ ಕನ್ನಡವೂ ಸೇರಿದಂತೆ ತಮಿಳು ತೆಲುಗು ಹಿಂದಿ ಮಲಯಾಳಂ ದೇಶದ ಬಹುತೇಕ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ಕೂಡ ಈ ರೀತಿಯ ಪಾತ್ರವನ್ನು ಒಪ್ಪಿಕೊಳ್ಳಲು ಮೊದಲಿಗೆ ಕೆಲವು ಸ್ಟಾರ್ ಹೀರೋಯಿನ್ ಗಳು ಹಿಂದು ಮುಂದು ನೋಡುತ್ತಾರೆ. ಆದರೆ ನಿಜಕ್ಕೂ ಈ ರೀತಿಯ ಪಾತ್ರಗಳು ಅಭಿನಯದಲ್ಲಿ ಪ್ರಯೋಗ ಮಾಡಬೇಕು ಎಂದು ಆಸೆ ಪಡುವವರಿಗೆ ಒಂದು ಉತ್ತಮ ಪಾತ್ರವಾಗಿ ಅವರನ್ನು ಪಳಗಿಸುತ್ತದೆ ಎಂದೇ ಹೇಳಬಹುದು. ಆಲಿಯಾ ಭಟ್ ಅವರ ಪಾಲಿಗೆ ಈ ಹಿಂದೆ ಅವರು ಅಭಿನಯಿಸಿದ್ದ ಪಾತ್ರಗಳ ಜೊತೆ ಈ ಸಿನಿಮಾದ ಅವಕಾಶವು ಅವರನ್ನು ಮತ್ತೊಂದು ಮಟ್ಟದಲ್ಲಿ ನೋಡುವಷ್ಟು ಹೆಸರು ತಂದುಕೊಟ್ಟಿದೆ ಎಂದರೆ ತಪ್ಪಲ್ಲ. ಸಂಜಯ್ ಬನ್ಸಾಲಿ ಅವರ ಸಿನಿಮವಾದ ಗಂಗೂಬಾಯಿ ಕಾಠಿಯವಾಡಿ ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚಿನ ಮಹತ್ವ ಕೊಡಲಾಗಿದೆ.
ಹಲವಾರು ಸೂಪರ್ಹಿಟ್ ಹಾಡುಗಳನ್ನು ಹೊಂದಿರುವ ಈ ಸಿನಿಮಾದಲ್ಲಿ ಡೊಲೇರೋ ಎನ್ನುವ ಹಾಡು ಆಡಿಯೋ ಲಾಂಚ್ ಆದ ಕೆಲವೇ ಕ್ಷಣಗಳಲ್ಲಿ ಒಂದು ಲಕ್ಷ ವೀಕ್ಷಣೆ ಪಡೆಯುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿತು. ಅಷ್ಟೇ ಅಲ್ಲದೆ ಸಿನಿಮಾ ತಂಡವು ಗಂಗೂಬಾಯಿ ಕಾಟಿಯವಾಡಿ ಸಿನಿಮಾದ ಟ್ರೆಲರನ್ನು ರಿಲೀಸ್ ಮಾಡಿದಾಗಲೂ ಸಹ ಇದೇ ರೀತಿಯಾಗಿ ಅಭಿಮಾನಿಗಳು ಒಂದೇ ದಿನದಲ್ಲಿ ಬರೋಬ್ಬರಿ ಒಂದು ಕೋಟಿ ವೀಕ್ಷಣೆ ಮಾಡುವ ಮೂಲಕ ಆಗಲೂ ಸಹ ದಾಖಲೆಯೊಂದನ್ನು ನಿರ್ಮಿಸಿದ್ದರು. ಹೀಗೆ ಸಿನಿಮಾದ ಪೋಸ್ಟರ್ ಮೂಲಕ ಟ್ರೈಲರ್ ಮೂಲಕ ಆಡಿಯೋ ಲಾಂಚ್ ಹಾಗೂ ರಿಲೀಸ್ ಆದ ಹಾಡುಗಳ ಮೂಲಕ ಹೊಸ ಹೊಸ ದಾಖಲೆಯನ್ನು ಸೃಷ್ಟಿ ಮಾಡುತ್ತಿದ್ದ ಈ ಸಿನಿಮಾವು ಫೆಬ್ರವರಿ 25ರಂದು ತೆರೆಮೇಲೆ ಬಂದಿತ್ತು. ನಿರೀಕ್ಷೆಯಂತೆ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕೂಡ ಕಾಣುತ್ತಿದೆ.
ಬಾಲಿವುಡ್ನ ಬಾಕ್ಸಾಫೀಸಿನಲ್ಲಿ ಸಕ್ಕತ್ ಕಲೆಕ್ಷನ್ ಮಾಡಿದ ಈ ಸಿನಿಮಾವು ಮನರಂಜನೆಯ ಜೊತೆಯೇ ಗಂಗೂಬಾಯಿ ಕಾಟಿಯವಾಡಿ ಅವರ ಬದುಕು ಹೇಗಿತ್ತು ಎನ್ನುವುದನ್ನು ಇಡೀ ಭಾರತಕ್ಕೆ ತಲುಪಿಸುವಲ್ಲಿ ಯಶಸ್ವಿ ಆಯಿತು ಎಂದೇ ಹೇಳಬಹುದು. ಬಾಲಿವುಡ್ ಮಂದಿ ಮಾತಾಡಿಕೊಳ್ಳುವಂತೆ ಸಂಜಯ್ ಬನ್ಸಾಲಿ ಅವರ ಸಿನಿಮಾಗಳು ಎಂದರೆ ಯಾವಾಗಲೂ ವಿವಾದಗಳಿಂದಲೇ ಕೂಡಿರುತ್ತದೆ. ಅದಕ್ಕೆ ಈ ಸಿನಿಮಾ ಏನು ಹೊರತೇನಲ್ಲ, ಈ ಸಿನಿಮಾದ ಮೇಲೆ ಕೂಡ ಮೂರು ಕೇಸ್ ಗಳು ದಾಖಲಾಗಿದ್ದರು ಕೂಡ ಸಿನಿಮಾ ಮಾತ್ರ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾಗೆ ಆಲಿಯಾ ಭಟ್ ಪಡೆದಿರುವ ಸಂಭಾವನೆ ಕೂಡ ಈಗ ದಾಖಲೆ ಪಟ್ಟಿ ಸೇರಿದೆ ಎಂದೇ ಹೇಳಬಹುದು.
ಈ ಸಿನಿಮಾಗೆ ಗಂಗೂಬಾಯಿ ಅವರ ಪಾತ್ರವನ್ನು ನಿರ್ವಹಿಸಲು ಆಲಿಯಾ ಭಟ್ ಪಡೆದಿರುವ ಸಂಭಾವನೆ ಬರೋಬ್ಬರಿ 20 ಕೋಟಿ ರೂಗಳು. ಸೆನ್ಸಾರ್ ಮಂಡಳಿಯಿಂದ ಸಿನಿಮಾದ ನಾಲ್ಕು ಸನ್ನಿವೇಶಗಳಿಗೆ ಕತ್ತರಿ ಬಿದ್ದಿದೆಯಂತೆ. ಇದರಿಂದ ಚಿತ್ರತಂಡವು ನಿರೀಕ್ಷೆ ಮಾಡಿಕೊಂಡಿದ್ದ ಅವಧಿಗಿಂತ ಸಿನಿಮಾದ ಅವಧಿಯು ಮತ್ತಷ್ಟು ಕಡಿಮೆಯಾಗಿದೆ. ನೆಹರು ಅವರು ಇದ್ದ ಸನ್ನಿವೇಶವನ್ನು ತೆಗೆಯಲು ಸೂಚನೆ ನೀಡಿದ್ದ ಕಾರಣ ಅದನ್ನು ಕೂಡ ಸಿನಿಮಾದಲ್ಲಿ ಕಟ್ ಮಾಡಲಾಗಿದೆಯಂತೆ ಇನ್ನೊಂದು ವಿಶೇಷ ಎಂದರೆ ಅಜಯ್ ದೇವಗನ್ ಅವರು ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯವೇನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.