ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಜನಸಾಮಾನ್ಯರು ಏರುತ್ತಿರುವ ಈ ಪೆಟ್ರೋಲ್ ಬೆಲೆ ನೋಡಿ ಶಾಕ್ ಆಗಿದ್ದರೆ, ಕಚ್ಚಾ ತೈಲಗಳ ಬೆಲೆ ಏರಿಕೆ ಆಗಿರುವುದು ಇದಕ್ಕೆಲ್ಲ ಕಾರಣ ಎಂದು ಕಾರಣ ಕೊಡುವ ಸರ್ಕಾರಗಳು ಹಾಗೊಮ್ಮೆ ಈಗೊಮ್ಮೆ ಕಡಿಮೆ ಮಾಡಿದರು ಕೂಡ ಪ್ರಸ್ತುತವಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಬಡವರಿಗೆ ಬಹಳ ದೊಡ್ಡ ಹೊರೆ ಆಗುತ್ತಿದೆ.
ಒಂದು ಕಡೆ ಸರ್ಕಾರ ಏರಿಸುತ್ತಿರುವ ಈ ಪೆಟ್ರೋಲ್ ಬೆಲೆಯಿಂದ ಜನ ಬೇಸತ್ತು ಹೋಗಿದ್ದರೆ ಮತ್ತೊಂದು ಕಡೆಯಿಂದ ಪೆಟ್ರೋಲ್ ಬಂಕ್ ಗಳಲ್ಲಿ ಹಣ ಕೊಟ್ಟರು ಕೂಡ ಆ ಮೊತ್ತಕ್ಕೆ ಪೆಟ್ರೋಲ್ ಸಿಗದೇ ಗ್ರಾಹಕರು ಮತ್ತೊಂದು ರೀತಿಯಲ್ಲಿ ವಂಚಿತರಾಗುತ್ತಿದ್ದಾರೆ. ಇತ್ತೀಚೆಗೆ ಎಲ್ಲಾ ಕಡೇ ಇದೇ ಮಾತು ಕೇಳಿ ಬರುತ್ತಿದ್ದು, 500 ರೂಪಾಯಿಗೆ ಪೆಟ್ರೋಲ್ ತುಂಬಿಸಿದರೆ ಕೂಡ 500 ರೂಪಾಯಿ ಪೆಟ್ರೋಲ್ ಕೊಡಬೇಕಾದಸ್ಟು ಮೈಲೇಜ್ ಗಾಡಿ ಕೊಡುತ್ತಿಲ್ಲವಲ್ಲಾ ಎಂದು ಸಾಕಷ್ಟು ಜನ ಅನುಮಾನ ಪಡುತ್ತಿದ್ದಾರೆ.
ಇದಕ್ಕೆಲ್ಲ ಕಾರಣ ಪೆಟ್ರೋಲ್ ಬಂಕ್ ಅವರು ಮಾಡುವ ಒಂದು ಟೆಕ್ನಿಕ್. ಎರಡು ರೀತಿಯಲ್ಲಿ ಪೆಟ್ರೋಲ್ ಬಂಕ್ ಅವರು ಟೆಕ್ನಿಕ್ ಮಾಡಿ ಲಾಭ ಮಾಡಿಕೊಳ್ಳುವ ಚಾನ್ಸಸ್ ಇರುತ್ತದೆ. ಮೊದಲನೇದಾಗಿ ಏನೆಂದರೆ ಪೆಟ್ರೋಲ್ ಹಾಕುವಾಗ ಆ ಡಿವೈಸ್ ಗೆ ಅವರು ಒಂದು ಮೆಮೊರಿ ಚಿಪ್ ಅನ್ನು ಇನ್ಸ್ಟಾಲ್ ಮಾಡಿರುತ್ತಾರೆ. ಅದರಲ್ಲಿ 1000ರೂ. ಗೆ ಎಂದು ಸೆಟ್ ಮಾಡಿರುತ್ತಾರೆ ಎಂದಿಟ್ಟುಕೊಳ್ಳೋಣ.
ಈಗ ನೀವು 1000 ರೂಗೆ ಪೆಟ್ರೋಲ್ ಹಾಕಿಸಲು ಹೋದಾಗ ನಿಮಗೂ ಮುಂಚೆ ಯಾರಾದರೂ 50 ಅಥವಾ 100 ರೂಪಾಯಿಗೆ ಪೆಟ್ರೋಲ್ ಹಾಕಿಸಿಕೊಂಡು ಹೋಗಿದ್ದರೆ ಪೆಟ್ರೋಲ್ ಬಂಕ್ ಅವರು ಅದನ್ನು ಮತ್ತೆ ರೀಸೆಟ್ ಮಾಡಿ ನಿಮಗೆ ಪೆಟ್ರೋಲ್ ಹಾಕಬೇಕು. ಆದರೆ ಅವರು ಆ ರೀತಿ ಮಾಡುವುದಿಲ್ಲ ಹೀಗಾಗಿ ನಿಮಗೆ 1000 ರೂ ಕೊಟ್ಟರು ಕೂಡ ನಿಮ್ಮ ಹಿಂದೆ ಹೋದವರು 100 ರೂಪಾಯಿ ಹಾಕಿಸಿಕೊಂಡಿದ್ದರೆ 900 ರೂಪಾಯಿಗೆ ಮಾತ್ರ ನಿಮಗೆ ಪೆಟ್ರೋಲ್ ಬಂದಿರುತ್ತದೆ.
ಜೊತೆಗೆ ನಾವು ರೀಡಿಂಗ್ ನೋಡುವಾಗ ಡಿಸ್ಪ್ಲೇ ನೋಡುತ್ತಿರುತ್ತೇವೆ ಅದರಲ್ಲಿ ಸರಿಯಾಗಿ ಕೊಟ್ಟ ಹಣಕ್ಕೆ ಪೆಟ್ರೋಲ್ ತುಂಬಿದ್ದಾರೆ ಎನ್ನುವಂತೆ ಶೋ ಆಗುತ್ತಿದ್ದರು ಕೂಡ ಅದರಲ್ಲೂ ಸಹ ಅವರು ಒಂದು ಸಾಫ್ಟ್ವೇರ್ ಅನ್ನು ಸೇರಿಸಿರುತ್ತಾರೆ. ಅದರಲ್ಲಿ ಅವರು 900 ರೂಪಾಯಿಗೆ ಪೆಟ್ರೋಲ್ ಹಾಕಿಸಿದರು ಕೂಡ 1000 ರೂಪಾಯಿ ಎಂದು ಶೋ ಆಗುವ ರೀತಿ ಮಾಡಿರುತ್ತಾರೆ. ಹೀಗಾಗಿ ನಿಮ್ಮ ಗಾಡಿ ಮೈಲೇಜ್ ಕಡಿಮೆ ಆಗಿದೆ ಎಂದು ನೀವು ಅಂದುಕೊಂಡು ಸುಮ್ಮನಾಗಿರುತ್ತೀರಿ.
ಇನ್ನು ಮುಂದೆ ಈ ರೀತಿಯ ಮೋಸದಿಂದ ನೀವು ತಪ್ಪಿಸಿಕೊಳ್ಳಬೇಕು ಎಂದರೆ ಒಂದು ಉಪಾಯ ಮಾಡಬಹುದು. ಅದೇನೆಂದರೆ 100, 500, 1000 ರೂಗೆ ಪೆಟ್ರೋಲ್ ಹಾಕಿಸುವ ಬದಲು 90, 490, 990 ಈ ರೀತಿ ಅಮೌಂಟ್ ಗೆ ಪೆಟ್ರೋಲ್ ಹಾಕಿಸಿದಾಗ ಮೋಸ ಹೋಗುವ ಚಾನ್ಸಸ್ ಬಹಳ ಕಡಿಮೆ ಇರುತ್ತದೆ. ಇನ್ನೊಮ್ಮೆ ಪೆಟ್ರೋಲ್ ತುಂಬಿಸಿಕೊಳ್ಳಲು ಗಾಡಿ ತೆಗೆದುಕೊಂಡು ಪೆಟ್ರೋಲ್ ಬಂಕ್ ಗೆ ಹೋದಾಗ ಈ ರೀತಿ ಐಡಿಯಾವನ್ನು ಟ್ರೈ ಮಾಡಿ ನೋಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರ ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.