
ಕರ್ನಾಟಕದಲ್ಲಿ ಮೂರು ರೀತಿಯ ರೇಷನ್ ಕಾರ್ಡ್ ಗಳು ಚಾಲ್ತಿಯಲ್ಲಿ ಇವೆ. ಅದರಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ BPL ರೇಷನ್ ಕಾರ್ಡ್ ಅನ್ನು ನೀಡಲಾಗುತ್ತದೆ. ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳಿಗೆ ಶ್ರೀಮಂತರಿಗೆ APL ರೇಷನ್ ಕಾರ್ಡ್ ಕೊಡಲಾಗುತ್ತದೆ. ಅತಿ ಬಡತನದಿಂದ ಬಳಲುತ್ತಾ ಇರುವವರಿಗೆ AAY ರೇಷನ್ ಕಾರ್ಡ್ ಅಂದರೆ ಅಂತ್ಯೋದಯ ಪಡಿತರ ಚೀಟಿಯನ್ನು ನೀಡಲಾಗುತ್ತದೆ.
ಆದರೆ ಕೆಲವೊಮ್ಮೆ APL ಕಾರ್ಡ್ ಇದ್ದವರು ತಮ್ಮ ಕಾರ್ಡನ್ನು BPL ಕಾರ್ಡಿಗೆ ಬದಲಾಯಿಸುವ ಪರಿಸ್ಥಿತಿ ಬರುತ್ತದೆ. ಇಂತಹ ಸಮಯದಲ್ಲಿ APL ಕಾರ್ಡನ್ನು ಹೇಗೆ BPL ಕಾರ್ಡ್ ಗೆ ವರ್ಗಾಯಿಸಬೇಕು ಅಥವಾ ತಮಗಿರುವ APL ಕಾರ್ಡನ್ನು ಹೇಗೆ ರದ್ದು ಮಾಡಬೇಕು ಎನ್ನುವ ಮಾಹಿತಿ ಎಲ್ಲರಿಗೂ ತಿಳಿದಿರುವುದಿಲ್ಲ.
ಅದಕ್ಕಾಗಿ ಈ ಅಂಕಣದಲ್ಲಿ ಈ ಮಾಹಿತಿ ಜೊತೆ ಈ ರೀತಿ APL ಕಾರ್ಡನ್ನು ರದ್ದು ಮಾಡಿ BPL ಕಾರ್ಡ್ ಪಡೆಯುವುದರಿಂದ ಏನೆಲ್ಲಾ ಅನುಕೂಲಗಳು ಸಿಗಲಿವೆ ಎನ್ನುವುದನ್ನು ತಿಳಿಸುತ್ತಿದ್ದೇವೆ. ಇದರ ಜೊತೆ APL ಕಾರ್ಡ್ ಅನ್ನು ರದ್ದುಪಡಿಸಲು ದಾಖಲೆಗಳು ಏನೇನು ಕೊಡಬೇಕು ಮತ್ತು ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಎನ್ನುವ ಮಾಹಿತಿಯನ್ನು ಕೂಡ ತಿಳಿಸಿಕೊಡುತ್ತಿದ್ದೇವೆ.
ಅಂದುಕೊಂಡಂತೆ APL ಕಾರ್ಡನ್ನು ರದ್ದುಪಡಿಸುವುದು ಅಷ್ಟು ಸುಲಭದ ಕೆಲಸವಲ್ಲ, APL ಕಾರ್ಡನ್ನು ಯಾಕೆ ರದ್ದುಪಡಿಸಬೇಕು ಎನ್ನುವುದಕ್ಕೆ ಸೂಕ್ತ ಕಾರಣವನ್ನು ಕೊಟ್ಟು ಅರ್ಜಿ ಬರೆದು ಸರ್ಕಾರಕ್ಕೆ ಸಲ್ಲಿಸಬೇಕು, ಉದ್ದೇಶ ಸರಿಯಾಗಿದ್ದರೆ ಮಾತ್ರ ಇದಕ್ಕೆ ಅನುಮತಿ ಸಿಗುತ್ತದೆ.
APL ಕಾರ್ಡ್ ರದ್ದುಪಡಿಸಲು ಬೇಕಾಗುವ ದಾಖಲೆಗಳು:-
● APL ಕಾರ್ಡ್ ಅಲ್ಲಿ ಇರುವ ಕುಟುಂಬದ ಯಜಮಾನರ ಆಧಾರ್ ಕಾರ್ಡ್ ಪ್ರತಿ.
● ಒರಿಜಿನಲ್ APL ರೇಷನ್ ಕಾರ್ಡ್
● 20 ರೂಪಾಯಿಯ ಇ-ಸ್ಟ್ಯಾಂಪ್ ಪೇಪರ್ ಅಲ್ಲಿ ಘೋಷಣಾ ಪತ್ರ ಬರೆದು ವಕೀಲರಿಂದ ನೋಟರಿ ಮಾಡಿಸಿಕೊಳ್ಳಬೇಕು.
● ಕೃಷಿ ಅಧಿಕಾರಿಗಳಿಂದ ಪಡೆದ ಕೃಷಿ ಧೃಡೀಕರಣ ಪತ್ರ (ಈ ವರದಿಯನ್ನು ಪಡೆಯಲು ನಿಮ್ಮ ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಜಮೀನು ಇಲ್ಲವೆಂದು ಅಥವಾ ಒಂದು ವೇಳೆ ಜಮೀನು ಇದ್ದಲ್ಲಿ ವಿಸ್ತೀರ್ಣ ಎಷ್ಟಿದೆ ಎಂದು ಧೃಡೀಕರಿಸುವ ಪತ್ರ ತೆಗೆದುಕೊಳ್ಳಬೇಕು).
● ಬಿಳಿ ಹಾಳೆಯಲ್ಲಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಬರೆಯಬೇಕು.
ಅರ್ಜಿ ಬರೆಯುವ ವಿಧಾನ:-
● ಗೆ, ವಿಳಾಸದಲ್ಲಿ ತಹಶೀಲ್ದಾರ್ ಕಚೇರಿ ಎಂದು ಬರೆದು ನಿಮ್ಮ ಜಿಲ್ಲೆಯ ಮತ್ತು ಗ್ರಾಮದ ಹೆಸರನ್ನು ಬರೆಯಿರಿ.
● ವಿಷಯ APL ಕಾರ್ಡ್ ರದ್ದು ಪಡಿಸುವ ಬಗ್ಗೆ ಎಂದು ಬರೆಯಿರಿ.
● ನಂತರ ವಿವರವಾಗಿ ನಿಮ್ಮ ಹೆಸರು ಬರೆದು ನೀವು ಕೃಷಿ ಭೂಮಿ ಹೊಂದಿಲ್ಲದಿದ್ದರೂ ಅಥವಾ ಹೊಂದಿದ್ದರೆ ವಿಸ್ತೀರ್ಣವನ್ನು ಬರೆದು ನೀವು ಕಚ್ಚಾ ಮನೆ ಹೊಂದಿರುವ ಕಾರಣ ಬಡತನ ರೇಖೆಗಿಂತ ಕಡಿಮೆ ಇದ್ದರೂ BPL ಕಾರ್ಡಿಗೆ ಅರ್ಜಿ ಸಲ್ಲಿಸಿದಾಗ ತಪ್ಪಾಗಿ APL ಕಾರ್ಡ್ ಮಂಜೂರು ಆಗಿದೆ. ಆದ್ದರಿಂದ ಇದನ್ನು ರದ್ದುಪಡಿಸಿ BPL ಕಾರ್ಡನ್ನು ನೀಡಿ ಸರ್ಕಾರದ ಅನುದಾನಗಳನ್ನು ಪಡೆಯಲು ಅನುಮತಿ ಮಾಡಿಕೊಳ್ಳಬೇಕು ಎಂದು ಕೇಳಿಕೊಳ್ಳಬೇಕು.
● ಎಡಭಾಗದಲ್ಲಿ ಇದಕ್ಕೆ ನೀವು ಪೂರಕವಾಗಿ ನೀಡುತ್ತಿರುವ ಎಲ್ಲಾ ದಾಖಲೆಗಳನ್ನು ಲಗತ್ತುಗಳು ಎಂದು ಬರೆದು ಅವುಗಳ ಹೆಸರನ್ನು ಬರೆಯಬೇಕು.
● ಬಲಭಾಗದಲ್ಲಿ ಧನ್ಯವಾದಗಳೊಂದಿಗೆ ಎಂದು ಬರೆದು ನಿಮ್ಮ ಸಹಿಯನ್ನು ಮಾಡಬೇಕು.
ಈ ರೀತಿಯಾಗಿ ಅರ್ಜಿ ಬರೆದು ಸಂಬಂಧಿಸಿದ ದಾಖಲೆಗಳ ಪ್ರತಿಗಳನ್ನು ತೆಗೆದುಕೊಂಡು ಲಗತ್ತಿಸಿ ನಿಮ್ಮ ತಹಶೀಲ್ದಾರ್ ಕಚೇರಿಯ ಇನ್ವಾರ್ಡ್ ವಿಭಾಗಕ್ಕೆ ಸಲ್ಲಿಸಿದರೆ ಅಧಿಕಾರಿಗಳು ಅರ್ಜಿ ಸ್ವೀಕರಿಸಿ, ನಿಮ್ಮ ಅರ್ಜಿ ಪರಿಶೀಲಿಸಿ, ನಿಮ್ಮ ಮನವಿ ಸರಿಯಾಗಿದ್ದರೆ APL ಕಾರ್ಡ್ ಅನ್ನು ರದ್ದು ಮಾಡಿ BPL ಕಾರ್ಡ್ ಗೆ ಶಿಫಾರಸು ಮಾಡುತ್ತಾರೆ. ಇದರ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.
*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*