ಇದುವರೆಗೆ ಎಲ್ಲರೂ ಕೂಡ ಬಿದ್ದು ಬಿಲ್ ಕಟ್ಟುವಾಗ ಮಾತ್ರ ಒಂದು ತಿಂಗಳಿಗೆ ಎಷ್ಟು ಚಾರ್ಜಸ್ ಬಂದಿದೆ ಎಂದು ನೋಡುತ್ತಿದ್ದರೆ ಹೊರತು ಅದರಲ್ಲಿರುವ ಅಂಕಿ ಅಂಶಗಳ ಬಗ್ಗೆ ಗಮನ ಕೊಟ್ಟಿದ್ದು ತೀರಾ ಕಡಿಮೆ. ಎಲ್ಲೋ ಕೆಲವೊಂದಿಷ್ಟು ಮಂದಿ ಮಾತ್ರ ವಿದ್ಯುತ್ ದರ ಹೆಚ್ಚಾದಾಗ ವಿಡಿಯೋದಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯ ಹೆಚ್ಚು ಚರ್ಚೆ ಆದಾಗ ಯೂನಿಟ್ ಎನ್ನುವ ಪದವನ್ನು ಕೇಳಿರಬಹುದು ಅಷ್ಟೇ.
ಆದರೆ ಯಾವಾಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 200 ಯೂನಿಟ್ ವಿದ್ಯುತ್ತನ್ನು ಪ್ರತಿ ಕುಟುಂಬಕ್ಕೂ ಉಚಿತವಾಗಿ ಕೊಡುವುದಾಗಿ ಹೇಳಿತ ಅಲ್ಲಿಂದ ಎಲ್ಲರೂ ತಮ್ಮ ಮನೆಯಲ್ಲಿ ಎಷ್ಟು ವಿದ್ಯುತ್ ಖರ್ಚಾಗುತ್ತಿದೆ ಎಂದು ತಲೆ ಕೆಡಿಸಿಕೊಂಡು ಲೆಕ್ಕ ನೋಡುತ್ತಿದ್ದಾರೆ. ಅಲ್ಲದೆ ಹಳೆಯ ತಿಂಗಳುಗಳ ಕರೆಂಟ್ ಬಿಲ್ ತೆಗೆದು ಇದುವರೆಗೂ ನಾವು ಪ್ರತಿ ತಿಂಗಳು ಎಷ್ಟು ಯೂನಿಟ್ ವಿದ್ಯುತ್ ಖರ್ಚು ಮಾಡಿದ್ದಕ್ಕಾಗಿ ಎಷ್ಟು ಹಣ ಕಟ್ಟಿದ್ದು ಎನ್ನುವ ಲೆಕ್ಕ ನೋಡುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರವು ಚುನಾವಣೆ ಪ್ರಚಾರ ವೇಳೆ ಕೊಟ್ಟಿದ್ದ ಮಾತಿನಂತೆ ಕರ್ನಾಟಕವನ್ನು ಕತ್ತಲೆಯಿಂದ ಮುಕ್ತ ಮಾಡುವ ಉದ್ದೇಶದಿಂದ ಪ್ರತಿ ಕುಟುಂಬಕ್ಕೆ ಗೃಹಜ್ಯೋತಿ ಯೋಜನೆ ಅಡಿ ಇನ್ನು ಮುಂದೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಕೊಡಲಿದೆ. ಇದಕ್ಕೆ ತಾತ್ವಿಕ ಆದೇಶ ಪತ್ರ ಹೊರ ಬಿದ್ದಿದ್ದರು ಕೂಡ ಅಧಿಕೃತ ಆದೇಶ ಪತ್ರ ಹಾಗೂ ಇದರ ಮಾರ್ಗಸೂಚಿಗಳು ಮತ್ತು ಕಂಡಿಶನ್ ಗಳ ಬಗ್ಗೆ ಜೂನ್ 1ನೇ ತಾರೀಖಿನಂದು ಪ್ರತ್ಯೇಕ ಆದೇಶ ಪತ್ರ ಹೊರಡಿಸಿ ತಿಳಿಸಲಿದ್ದೇವೆ ಎಂದು ಮುಖ್ಯಮಂತ್ರಿಗಳು ಕಾಲಾವಕಾಶ ತೆಗೆದುಕೊಂಡಿದ್ದಾರೆ.
ಈಗ ಕರ್ನಾಟಕದಲ್ಲಿರುವ ಎಲ್ಲಾ ಕುಟುಂಬಸ್ಥರು ಕೂಡ ತಮಗೂ ಇದು ಫ್ರೀಯಾಗಿ ಸಿಗಲಿದೆಯಾ ಎಂದು ಕ್ರಾಸ್ ಚೆಕ್ ಮಾಡಿಕೊಳ್ಳುತ್ತಿದ್ದಾರೆ. ಪ್ರತಿದಿನ ಕೂಡ ನಮ್ಮ ಮನೆಯಲ್ಲಿ ಎಷ್ಟು ವಿದ್ಯುತ್ ಖರ್ಚು ಮಾಡುತಿದ್ದೇವೆ ಎನ್ನುವ ಲೆಕ್ಕ ಸಿಕ್ಕರೆ ತಿಂಗಳಿಗೆ 200 ಯೂನಿಟ್ ಒಳಗೆ ಬಳಕೆ ಮಾಡಲು ಜನರಿಗೂ ಕೂಡ ಅನುಕೂಲ ಆಗುತ್ತದೆ. ಅದಕ್ಕಾಗಿ ಈ ಅಂಕಣದಲ್ಲಿ ಪ್ರತಿದಿನವೂ ನಾವು ಹೇಗೆ ನಮ್ಮ ಮೀಟರ್ ಬಾಕ್ಸ್ ನೋಡಿ ನಾವು ಬಳಸಿರುವ ವಿದ್ಯುತ್ತನ್ನು ಲೆಕ್ಕ ಹಾಕಬಹುದು ಎನ್ನುವ ಸುಲಭ ವಿಧಾನವನ್ನು ತಿಳಿಸಿ ಕೊಡುತ್ತಿದ್ದೇವೆ.
ಮೊದಲೆಲ್ಲ ವೀಲ್ ರನ್ನಿಂಗ್ ರೀತಿಯಲ್ಲಿ ಕರೆಂಟ್ ಬಿಲ್ ರನ್ ಆಗುತ್ತಿತ್ತು. ಈಗ ನಾವು ಓಡಿಸುತ್ತಿರುವ ವಿದ್ಯುತ್ ಲೆಕ್ಕಾಚಾರ ಡಿಜಿಟಲ್ ಮಾಪನದ ಮೂಲಕ ಅಳೆಯಲ್ಪಡುತ್ತಿದೆ. ಇದರಲ್ಲಿ ಹಲವಾರು ಅಕ್ಷರಗಳು ಓಡುತ್ತಿರುತ್ತದೆ ಐದು ನಿಮಿಷಗಳ ಕಾಲ ನಾವು ಮೀಟರ್ ಬಾಕ್ಸ್ ನೋಡುವದರಿಂದ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಯಾಕೆಂದರೆ, ಇಂಗ್ಲೀಷ್ ನ A ಅಕ್ಷರದಿಂದ ಬರುವುದು ಎಷ್ಟು ಆಂಪೈರ್ ವಿದ್ಯುತ್ ಎನ್ನುವುದನ್ನು ಸೂಚಿಸುತ್ತದೆ ನಂತರ ದಿನಾಂಕ ಬರುತ್ತದೆ ಪ್ರತಿದಿನವೂ ಕೂಡ ಇದು ಬದಲಾಗುತ್ತಿರುತ್ತದೆ.
ಇದರಲ್ಲಿ ದಿನಾಂಕ ತಿಂಗಳು ಹಾಗೂ ಇಸವಿ ಕೂಡ ಕೂಡಿರುತ್ತದೆ ನಂತರ ಬರುವುದೇ Kw/h. ಇದು ಎಷ್ಟು ವಿದ್ಯುತ್ ರನ್ ಆಗುತ್ತಿದೆ ಎಂದು ತೋರುತ್ತದೆ ಇದು ಪ್ರತಿಕ್ಷಣಕ್ಕೂ ಬದಲಾಗುತ್ತದೆ. ವಿದ್ಯುತ್ ಬಿಲ್ ಸಂಗ್ರಹಕಾರರು ಬಂದಾಗ ಅವರು ಇದೆಲ್ಲವನ್ನು ಒಟ್ಟಾರೆಯಾಗಿ ಒಂದು ತಿಂಗಳಿಗೆ ಲೆಕ್ಕ ಹಾಕಿ ಕರೆಂಟ್ ಬಿಲ್ಲನ್ನು ಕೊಟ್ಟು ನಮಗೆ ಹೋಗುತ್ತಾರೆ. ಹೀಗೆ ಪ್ರತಿದಿನವೂ ಕೂಡ ವಿದ್ಯುತ್ ಮಾಪನದಲ್ಲಿ ರನ್ ಆಗುವ ಸಂಖ್ಯೆಯನ್ನು ಬರೆದಿಟ್ಟುಕೊಂಡು ಮರುದಿನದ ಅಂತ್ಯದಲ್ಲಿ ಕೂಡ ಅದನ್ನು ಬರೆದಿಟ್ಟುಕೊಂಡು ಹಿಂದಿನ ದಿನದ ಕೌಂಟನ್ನು ಕಳೆದರೆ ಈ ದಿನ ಎಷ್ಟು ವಿದ್ಯುತ್ ಬಳಕೆ ಮಾಡಿದ್ದೇವೆ ಎನ್ನುವ ಲೆಕ್ಕ ಸಿಗುತ್ತದೆ.