ಕರ್ನಾಟಕದಾದ್ಯಂತ ಇರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿಸುದ್ದಿ. ಕರ್ನಾಟಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಉದ್ಯೋಗಾವಕಾಶ ಇದ್ದು ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಈ ಹುದ್ದೆಗಳಿಗೆ ನೇರ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ. ಈ ಕುರಿತಂತೆ ಆರೋಗ್ಯ ಇಲಾಖೆಯಿಂದ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು ಆಸಕ್ತಿ ಇರುವ, ಅಧಿಸೂಚನೆಯಲ್ಲಿ ಕೇಳಿರುವ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯಸ್ಸಿನ ಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಅಂಕಣದಲ್ಲಿ ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಮುಖ ಅಂಶಗಳಾದ ಒಟ್ಟು ಹುದ್ದೆಗಳ ಸಂಖ್ಯೆ, ಹುದ್ದೆಗಳ ವಿವರ, ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ವಿಧಾನ, ಪ್ರಮುಖ ದಿನಾಂಕಗಳು ಸೇರಿದಂತೆ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಸಿಕೊಡುತ್ತಿದ್ದೇವೆ.
ಇವುಗಳ ಬಗ್ಗೆ ತಿಳಿದುಕೊಳ್ಳಲು ಲೇಖನವನ್ನು ಪೂರ್ತಿಯಾಗಿ ಓದಿ. ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಈ ಹುದ್ದೆಗಳಿಗೆ ಕೇಳಿರುವ ಶೈಕ್ಷಣಿಕ ಅರ್ಹತೆ ಹೊಂದಿರುವ ಉದ್ಯೋಗ ಆಕಾಂಕ್ಷಿಗಳಿಗೆ ಈ ಮಾಹಿತಿಯು ತಲುಪುವಂತೆ ಮಾಡಿ.
ನೇಮಕಾತಿ ಸಂಸ್ಥೆ:- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ.
ಉದ್ಯೋಗ ಸ್ಥಳ:- ಕೋಲಾರ
ಒಟ್ಟು ಹುದ್ದೆಗಳ ಸಂಖ್ಯೆ:- 09
ಹುದ್ದೆಗಳ ವಿವರ:-
● MBBS ವೈದ್ಯರು
● ಪ್ರಯೋಗಶಾಲೆ ತಂತ್ರಜ್ಞರು
● ಶುಷ್ರೂಷಕ ಅಧಿಕಾರಿಗಳು
ವೇತನ ಶ್ರೇಣಿ:-
ಹುದ್ದೆಗಳಿಗೆ ಅನುಸಾರವಾಗಿ 12,000 ದಿಂದ 43,000 ವರೆಗೆ ಮಾಸಿಕ ವೇತನ ಸಿಗಲಿದೆ.
ವಯೋಮಿತಿ:-
● MBBS ವೈದ್ಯರು – ಗರಿಷ್ಠ 65 ವರ್ಷ
● ಪ್ರಯೋಗಶಾಲೆ ತಂತ್ರಜ್ಞರು – ಗರಿಷ್ಠ 40 ವರ್ಷ
● ಶುಷ್ರೂಷಕ ಅಧಿಕಾರಿಗಳು – ಗರಿಷ್ಠ 40 ವರ್ಷ
ಶೈಕ್ಷಣಿಕ ವಿದ್ಯಾರ್ಹತೆ:-
● MBBS ವೈದ್ಯರು – MBBS ಉತ್ತೀರ್ಣರಾಗಿ ಕಡ್ಡಾಯವಾಗಿ ಇಂಟರ್ನ್ಶಿಪ್ ಪೂರೈಸಿರಬೇಕು.
KMC ನೋಂದಣಿ ಹೊಂದಿರಬೇಕು.
● ಪ್ರಯೋಗಶಾಲೆ ತಂತ್ರಜ್ಞರು – SSLC / PUC ಮತ್ತು ಪ್ರಯೋಗಶಾಲಾ ತಂತ್ರಜ್ಞತೆಯ ಡಿಪ್ಲೋಮಾ ಉತ್ತೀರ್ಣ ಹೊಂದಿರಬೇಕು. ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯ ನೋಂದಣಿ ಮತ್ತು ಕಂಪ್ಯೂಟರ್ ಸಾಕ್ಷರತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
● ಶುಷ್ರೂಷಕ ಅಧಿಕಾರಿಗಳು – ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಲ್ಲಿ B.Sc / GNM ನರ್ಸಿಂಗ್ ನಲ್ಲಿ ಕೆಎನ್ಸಿ ನೋಂದಣಿ ಹೊಂದಿರಬೇಕು. ಹಾಗೂ ಕಂಪ್ಯೂಟರ್ ಸಾಕ್ಷರತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
ಆಯ್ಕೆ ವಿಧಾನ:-
● ನೇರ ಸಂದರ್ಶನದ ಮೂಲಕ
● ಅರ್ಹ ಆಸಕ್ತ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ ಜೊತೆಗೆ ಒಂದು ಸೆಟ್ ಜೆರಾಕ್ಸ್ ಪ್ರತಿಯೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಗೆ ನೇರ ಸಂದರ್ಶನಕ್ಕೆ ಭಾಗಿಯಾಗಬೇಕು.
ಕಛೇರಿಯ ವಿಳಾಸ:-
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ,
ಕೆ.ಎನ್.ಟಿ.ಬಿ ಸ್ಯಾನಿಟೋರಿಯಂ ಆಸ್ಪತ್ರೆ ಆವರಣ,
ಬಂಗಾರಪೇಟೆ ರಸ್ತೆ, ಕೋಲಾರ.
ಪ್ರಮುಖ ದಿನಾಂಕ:-
13.06.2023 ರಂದು ಬೆಳಿಗ್ಗೆ 10:00 ರ ಒಳಗೆ ನೇರ ಸಂದರ್ಶನಕ್ಕೆ ಭೇಟಿ ಆಗಬೇಕು.
ಕೇಳಲಾಗುವ ಪ್ರಮುಖ ದಾಖಲೆಗಳು:-
● ಆಧಾರ್ ಕಾರ್ಡ್
● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
● ಮೊಬೈಲ್ ಸಂಖ್ಯೆ
● ವಯಸ್ಸಿನ ದೃಢೀಕರಣಕ್ಕೆ ಸಂಬಂಧಪಟ್ಟ ದಾಖಲೆಗಳು
● ಇನ್ನಿತರ ಪ್ರಮುಖ ದಾಖಲೆಗಳು.