ಮದುವೆ ಮಾಡಿ ನೋಡು ಮನೆ ಕಟ್ಟಿನೋಡು ಎನ್ನುವ ಗಾದೆ ಮಾತೇ ಇದೆ ಯಾಕೆಂದರೆ ಈಗಿನ ಕಾಲದಲ್ಲಿ ಬೇಕಾದರೆ ಒಂದು ಮನೆಯನ್ನು ಖರೀದಿಸಬಹುದು ಆದರೆ ಒಂದು ಮದುವೆಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವುದು ತುಂಬಾ ಜವಾಬ್ದಾರಿಯ ಕೆಲಸವಾಗಿದೆ. ನಮ್ಮ ಹಿರಿಯರು ಹಿಂದೆ ಹೇಳಿರುವ ಗಾದೆಯಂತೆ ಒಂದು ಮದುವೆಯನ್ನು ಮಾಡಲು ಹಲವಾರು ವಿಘ್ನಗಳು ಎದುರಾಗುತ್ತಲೇ ಇರುತ್ತವೆ. ಮದುವೆಯೆನ್ನುವುದು ಎರಡು ದಿನ ನಡೆದರು ಅದರ ಹಿಂದಿನ ತಯಾರಿ ತಿಂಗಳುಗಳ ಹಿಂದೆಯೇ ಶುರುವಾಗಿರುತ್ತದೆ. ಬಡವರಾಗಲಿ ಶ್ರೀಮಂತರೆ ಆಗಲೇ ಸಂಪ್ರದಾಯಬದ್ಧವಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮದುವೆ ಮಾಡಬೇಕು ಎಂದರೆ ಅದರ ಹಿಂದೆ ಸಾಕಷ್ಟು ಶ್ರಮ ಬಿದ್ದಿರುತ್ತದೆ. ಕೆಲವೊಮ್ಮೆ ಈ ಮದುವೆ ಮನೆಯ ಖರ್ಚು ಹಾಗೂ ಕೆಲಸಗಳು ಮದುವೆ ನಿಶ್ಚಯವಾದ ದಿನದಿಂದ ಹಲವು ದಿನಗಳ ಹಿಂದೆ ಶುರುವಾಗಿ ಒಮ್ಮೊಮ್ಮೆ ಮದುವೆ ಮುಗಿದರೂ ಕೂಡ ಮುಗಿದೇ ಇರುವುದಿಲ್ಲ. ಒಂದು ಮದುವೆ ಮಾಡಬೇಕು ಎಂದರೆ ಹಿಂದೆಲ್ಲ ಅದು ಸಂಪೂರ್ಣವಾಗಿ ಹೆಣ್ಣಿನ ಮನೆಯ ಜವಾಬ್ದಾರಿಯಾಗಿತ್ತು. ಆದರೆ ಕಾಲ ಬದಲಾದಂತೆ ಈಗ ಎರಡು ಕಡೆಯವರು ಜವಾಬ್ದಾರಿ ಹಾಗು ಖರ್ಚು ವೆಚ್ಚವನ್ನು ಸಮಾನವಾಗಿ ಹಂಚಿಕೊಳ್ಳುತ್ತಿದ್ದಾರೆ.
ಆದರೆ ಮದುವೆ ಮನೆ ಎಂದ ಮೇಲೆ ಅದಕ್ಕೆ ಸಾಕಷ್ಟು ಖರ್ಚು ಗಳಿರುತ್ತದೆ. ವಧು-ವರರ ವಸ್ತ್ರ ಒಡವೆ, ಮೇಕಪ್, ಮದುವೆ ಮನೆ ಮತ್ತು ಮಂಟಪದ ಅಲಂಕಾರ, ನೆಂಟರು ಹಾಗೂ ಬಂಧುಗಳು ಗಿಫ್ಟ್ ಗಳ ಬಗ್ಗೆ ಯೋಚನೆ, ಹೂವು ಹಣ್ಣು, ಮದುವೆ ಮನೆ ಊಟ, ಫೋಟೋ ಶೂಟ್, ವಿಡಿಯೋಸ್, ಡೆಕೋರೇಷನ್, ಶಾಮಿಯಾನ, ಬಸ್ಸು ಕಾರುಗಳು ಬುಕಿಂಗ್, ಮದುವೆ ಹಾಲ್ ಗಳ ರೆಂಟ್ ಹೀಗೆ ಈ ಪಟ್ಟಿ ಮುಗಿಯುವುದೇ ಇಲ್ಲ. ಒಂದು ಸಾಮಾನ್ಯ ಕುಟುಂಬದ ಮದುವೆ ಮಾಡಬೇಕು ಎಂದರೆ ಈಗಿನ ಕಾಲದಲ್ಲಿ ಕನಿಷ್ಠ ಎಂದರೆ ಹತ್ತರಿಂದ ಹದಿನೈದು ಲಕ್ಷ ರೂಗಳು ಆದರೂ ಖರ್ಚು ಇದ್ದೇ ಇರುತ್ತದೆ. ಇನ್ನು ಸೆಲೆಬ್ರೆಟಿಗಳ ವಿಚಾರಕ್ಕೆ ಬರುವುದಾದರೆ ಅವರು ಅವರ ವಿವಾಹವನ್ನು ಮತ್ತಷ್ಟು ಗ್ರಾಂಡ್ ಆಗಿ ಸೆಲಬ್ರೇಟ್ ಮಾಡುವುದರಿಂದ ಇದರ ನೂರರಷ್ಟು ಖರ್ಚು ಖಂಡಿತವಾಗಿ ಇರುತ್ತದೆ. ಇನ್ನು ಮುಂದುವರಿದು ಈಗಿನ ಹಲವಾರು ಸೆಲೆಬ್ರಿಟಿಗಳು ವಿದೇಶಕ್ಕೆ ಹೋಗಿ ವಿವಾಹವಾಗುತ್ತಿದ್ದಾರೆ. ಉದಾಹರಣೆಗೆ ಹೇಳುವುದಾದರೆ ಫೇಮಸ್ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಜೋಡಿ ದೂರದ ದೇಶಕ್ಕೆ ವಿವಾಹವಾಗಿತ್ತು ಹಾಗೆ ಬಾಲಿವುಡ್ ಸ್ಟಾರ್ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕೂಡ ಇದೇ ರೀತಿ ಮಾಡಿದ್ದರು.
ಇನ್ನು ಕೆಲವು ಜೋಡಿಗಳು ವಿಶೇಷವಾಗಿ ಸೆಟ್ ಹಾಕಿಸಿಕೊಳ್ಳುವ ಮೂಲಕ ತಾವಿರುವಲ್ಲಿಯೇ ಒಂದು ಹೊಸ ಪ್ರಪಂಚವನ್ನು ಸೃಷ್ಟಿ ಮಾಡಿ ಅದ್ದೂರಿಯಾಗಿ ಮದುವೆಯಾಗುತ್ತಾರೆ. ಸೆಲೆಬ್ರಿಟಿ ಪಾಲಿಗಂತೂ ಮದುವೆ ಅನ್ನುವುದು ತಮ್ಮ ಅದ್ದೂರಿ ತನದ ಪ್ರದರ್ಶನವಿರುತ್ತದೆ. ಎಲ್ಲೋ ಕೆಲವರು ಮಾತ್ರ ಸರಳವಾಗಿ ಅಥವಾ ರಹಸ್ಯವಾಗಿ ಮದುವೆಯಾಗಿ ಸುದ್ದಿಯಾಗುತ್ತಾರೆ. ಒಟ್ಟಿನಲ್ಲಿ ಹೇಗೆ ಮದುವೆಯಾದರು ಕೂಡ ಮದುವೆಯ ಖರ್ಚು ಎನ್ನುವುದು ಎಂದಿಗೂ ಕೂಡ ಒಂದು ಭಾರವಾದ ವಿಷಯವೇ ಸರಿ. ಅದರಲ್ಲೂ ಸೆಲೆಬ್ರಿಟಿ ಮದುವೆಗಳಲ್ಲಿ ಹಣದ ದುಂದುವೆಚ್ಚವೇ ಹರಿದು ಹೋಗಿರುತ್ತದೆ. ಅವರ ಒಂದು ದಿನದ ಮದುವೆ ಖರ್ಚು ಹತ್ತಾರು ಕೋಟಿಯನ್ನು ದಾಟಿ ಹೋಗಿರುತ್ತದೆ. ಆದರೆ ಇತ್ತೀಚೆಗೆ ಮದುವೆಯಾದ ಸೆಲೆಬ್ರಿಟಿ ಜೋಡಿ ಒಂದು ಮದುವೆಗೆ ಖರ್ಚು ಮಾಡುವ ಬದಲು ತಮ್ಮ ಮದುವೆಯಿಂದ ಹಣವನ್ನು ಗಳಿಸಿದ್ದಾರೆ. ಇದು ಬೇರೆ ಯಾರು ಅಲ್ಲ ಕಳೆದ ವಾರ ಜೂನ್ 9ರಂದು ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ವಿವಾಹವಾದ ತಮಿಳಿನ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ಡೈರೆಕ್ಟರ್ ವಿಜ್ಞೇಶ್ ಶಿವನ್ ಅವರ ಜೋಡಿ.
ಡೈರೆಕ್ಟರ್ ವಿಜ್ಞೇಶ್ ಶಿವನ್ ಮತ್ತು ನಯನತಾರ ವಿವಾಹವಾಗುತ್ತಿದ್ದಾರೆ ಎಂದು ಸುದ್ದಿಯಾದ ಕೂಡಲೇ ಈ ಜೋಡಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ವಿಷಯಗಳು ಹರಿದಾಡುತ್ತಿದ್ದವು. ಪ್ರತಿದಿನವೂ ಕೂಡ ಈ ಜೋಡಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ರೀತಿಯ ಚರ್ಚೆ ನಡೆಯುತ್ತಲೇ ಇತ್ತು. ಇವರುಗಳ ಪಾಸ್ಟ್ ಲೈಫ್ ಮತ್ತು ಇವರುಗಳ ಸಿನಿಮಾ ಜರ್ನಿ ಹಾಗೂ ಇವರಿಬ್ಬರು ಒಟ್ಟಿಗೆ ಲಿವಿಂಗ್ ಇನ್ ರಿಲೇಶನ್ ಶಿಪ್ ನಲ್ಲಿ ಇರುವುದು ಮತ್ತು ಇವರಿಬ್ಬರಿಗೂ ಆಗಿರುವ ಲವ್ ಬ್ರೇಕಪ್ ಗಳು ಇನ್ನೂ ಹತ್ತು ಹಲವಾರು ವಿಷಯಗಳ ಬಗ್ಗೆ ದಿನನಿತ್ಯವೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಿದಾಡುತ್ತಿದ್ದವು. ಮತ್ತು ಇವರಿಬ್ಬರು ಈಗ ವಿವಾಹವಾಗುವ ನಿರ್ಧಾರವನ್ನು ಮಾಡಿದ ಮೇಲೆ ಸ್ವತಃ ಅವರೇ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ದಿನಕ್ಕೊಂದು ವಿಷಯವನ್ನು ಅವರ ಮದುವೆಗೆ ಸಂಬಂಧಪಟ್ಟ ಹಾಗೆ ಶೇರ್ ಮಾಡುತ್ತಿದ್ದರು ಮದುವೆಯ ಬಗ್ಗೆ ಅಭಿಮಾನಿಗಳು ಕೂಡ ಸಾಕಷ್ಟು ಕುತೂಹಲ ಹೊಂದಿದ್ದರು.
ಇಬ್ಬರು ಸ್ಟಾರ್ ಜೋಡಿ ಆದ್ದರಿಂದ ಇವರಿಬ್ಬರ ಅದ್ದೂರಿಯ ಮದುವೆಗೆ ಸಾಕಷ್ಟು ಹಣ ಖರ್ಚಾಗಿರುತ್ತದೆ ಎನ್ನುವುದು ಎಲ್ಲರ ಊಹೆ ಆದರೆ ಇವರ ವಿವಾಹಕ್ಕೆ ಒಂದು ರೂಪಾಯಿ ಕೂಡ ಖರ್ಚು ಮಾಡಿಲ್ಲ ಇವರ ವಿವಾಹದ ಸಂಪೂರ್ಣ ಜವಾಬ್ದಾರಿಯನ್ನು ನೆಟ್ಲಿಫಿಕ್ಸ್ ಸಂಸ್ಥೆ ಹೊತ್ತಿತ್ತು. ಕಾರಣ ಇವರಿಬ್ಬರ ವಿವಾಹದ ವೀಡಿಯೋ ಹಕ್ಕನ್ನು ಈ ಸಂಸ್ಥೆಯ ಹೊಂದಿರುವುದರಿಂದ ಇವರ ವಿವಾಹ ಸಂಭ್ರಮದ ಸುಂದರ ಕ್ಷಣಗಳು ನೆಟ್ಲಿಫಿಕ್ಸ್ ನಲ್ಲಿ ಪ್ರಸಾರವಾಗಲಿದೆ. ಈ ರೀತಿ ಮದುವೆಯಾಗುತ್ತಿರುವ ಮೊದಲನೇ ಜೋಡಿ ಇವರೇ ಆಗಿದ್ದಾರೆ ಮಹಾಬಲಿಪುರಂನ ಐಷಾರಾಮಿ ರೆಸಾರ್ಟ್ ನಲ್ಲಿ ವಿವಾಹ ಅದ್ದೂರಿಯಾಗಿ ಜರುಗಿತ್ತು. ಮದುವೆಗೆ ಬಂದಿದ್ದ ಸೆಲೆಬ್ರಿಟಿಗಳ ಊಟ ಮತ್ತು ರೂಮಿನ ವ್ಯವಸ್ಥೆ ಸೇರಿದಂತೆ ಸಂಪೂರ್ಣ ಶವನ್ನು ಈ ಸಂಸ್ಥೆಯ ಭರಿಸಿದ್ದು ಜೊತೆಗೆ ಈ ಜೋಡಿಗೆ 25 ಕೋಟಿಯನ್ನು ಕೂಡ ನೀಡಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿ ಇಷ್ಟ ಆದರೆ ಶೇರ್ & ಲೈಕ್ ಮಾಡಿ.