ಗರುಡ ಪುರಾಣದಲ್ಲಿ ಮಾನವನ ಕೆಲವು ಅಭ್ಯಾಸಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗಿದೆ. ಈ ಅಭ್ಯಾಸಗಳಿಂದಾಗಿ ಮನುಷ್ಯನು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗು ಇದರೊಂದಿಗೆ ಹಣದ ಕೊರತೆಯಿಂದ ಬಡತನವೂ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಅಭ್ಯಾಸಗಳನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸಿಕೊಳ್ಳುವುದು ಅವಶ್ಯಕವಾಗಿದೆ.
* ಗರುಡ ಪುರಾಣದ ಪ್ರಕಾರ ಯಾವಾಗಲೂ ಇತರರ ನ್ಯೂನತೆಗಳನ್ನು ಕಂಡುಹಿಡಿಯುವವರು ಸಮಸ್ಯೆಗಳನ್ನು ಎದುರಿಸುತ್ತಾರಂತೆ. ಇತರರ ಬಗ್ಗೆ ಕೆಟ್ಟದಾಗಿ ಮಾತನಾಡಿ ಅವಮಾನ ಮಾಡುವ ಜನರ ಮೇಲೆ ತಾಯಿ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳಂತೆ. ಇಂತಹವರ ಮನೆಗೆ ಎಂದಿಗೂ ಲಕ್ಷ್ಮಿದೇವಿ ಪ್ರವೇಶಿಸುವುದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವುದೇ ಕಾರಣಕ್ಕೂ ಯಾವುದೇ ಪರಿಸ್ಥಿತಿಯಲ್ಲಿಯೂ ಕೂಡ ಬೇರೆಯವರ ನ್ಯೂನತೆಗಳನ್ನು ಕಂಡುಹಿಡಿಯುವುದು ತಪ್ಪು.
ಈ ಸುದ್ದಿ ನೋಡಿ:- ಹೊಸದಾಗಿ ರೇಷನ್ ಕಾರ್ಡ್ ಪಡೆಯುವ ಸುಲಭ ವಿಧಾನ
ಹಾಗೂ ಕೆಲವೊಂದು ಸಂದರ್ಭದಲ್ಲಿ ಬೇರೆಯವರ ಮನಸ್ಸನ್ನು ನೋಯ ಸುವುದು ಕೂಡ ತಪ್ಪು. ಅದರ ಒಂದು ಮಾತಿನಿಂದ ನಾವು ಮುಂದಿನ ದಿನಗಳಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಅಂದರೆ ನಾವು ಅವರ ಮನಸ್ಸನ್ನು ನೋಯಿಸಿದರೆ ಅದಕ್ಕೆ ತಕ್ಕ ಶಿಕ್ಷೆಯನ್ನು ನಾವು ಅನುಭವಿಸಬೇಕಾಗುತ್ತದೆ ಆದ್ದರಿಂದ ಯಾರೂ ಕೂಡ ಯಾರ ಬಗ್ಗೆಯೂ ಎಂತಹದ್ದೇ ಪರಿಸ್ಥಿತಿಯಲ್ಲೂ ಮಾತನಾಡಬಾರದು.
* ಯಾವುದೇ ಒಬ್ಬ ವ್ಯಕ್ತಿಗೆ ಹಣ ಬಂದರೆ ಆತನು ಎಂದಿಗೂ ಹೆಮ್ಮೆಪಡಬಾರದು. ಗರುಡ ಪುರಾಣದ ಪ್ರಕಾರ, ಹಣದ ಬಗ್ಗೆ ಹೆಮ್ಮೆ ಪಡುವ ಜನರ ಬೌದ್ಧಿಕ ಸಾಮರ್ಥ್ಯವು ದುರ್ಬಲಗೊಳ್ಳುತ್ತದೆ ಮತ್ತು ಕ್ರಮೇಣ ಬಡತನವು ಹರಡಲು ಪ್ರಾರಂಭಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವುದೇ ಎಂತದ್ದೇ ಪರಿಸ್ಥಿತಿಯಲ್ಲಿ ಹಣ ಇದ್ದರೂ ಇಲ್ಲದೆ ಇದ್ದರೂ ಒಂದೇ ರೀತಿಯಾಗಿ ಇರಬೇಕು.
ಹಾಗೂ ಹಣ ಇದ್ದಂತಹ ಸಮಯದಲ್ಲಿ ಒಂದು ರೀತಿಯ ಭಾವನೆ, ಹಣ ಇಲ್ಲದೆ ಇರುವಂತಹ ಸಮಯದಲ್ಲಿ ಒಂದು ರೀತಿಯ ಭಾವನೆಯನ್ನು ಹೊಂದಬಾರದು. ಅದರಲ್ಲೂ ಹಣ ಇಲ್ಲದೆ ಇರುವವರನ್ನು ಯಾವುದೇ ಕಾರಣಕ್ಕೂ ನಾವು ಹೀಯಾಳಿಸಿ ಮಾತನಾಡಬಾರದು. ಹಾಗೂ ನಮ್ಮ ಬಳಿ ಹಣ ಇದೆ ಎಂದು ಗರ್ವವನ್ನು ಸಹ ಪಡಬಾರದು. ಅದರಿಂದ ಮುಂದಿನ ದಿನದಲ್ಲಿ ನಾವೇ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ಹಣ ಇದ್ದರೂ ಇಲ್ಲದೆ ಇದ್ದರೂ ಒಂದೇ ರೀತಿಯ ಗುಣ ಸ್ವಭಾವವನ್ನು ಬೆಳೆಸಿಕೊಳ್ಳುವುದು ಉತ್ತಮ.
* ಯಾರ ಮನೆಯಲ್ಲಿ ಶುಚಿತ್ವವಿರುತ್ತದೋ ಅಂತವರ ಮನೆಯಲ್ಲಿ ತಾಯಿ ಲಕ್ಷ್ಮಿದೇವಿಯು ನೆಲೆಸುತ್ತಾಳಂತೆ. ಹೀಗಾಗಿ ಮನೆಯಲ್ಲಿ ಯಾವಾಗಲೂ ಶುಚಿತ್ವ ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಪ್ರತಿದಿನ ಸ್ನಾನದ ನಂತರ ಶುದ್ಧವಾದ ಬಟ್ಟೆಗಳನ್ನು ಧರಿಸುವುದು ಸಹ ಅವಶ್ಯಕ. ತಾಯಿ ಲಕ್ಷ್ಮಿದೇವಿ ಕೊಳಕು ಬಟ್ಟೆ ಧರಿಸಿದ್ದಕ್ಕೆ ಕೋಪಗೊಂಡು ಮನೆಯಿಂದ ಹೊರಹೋಗುತ್ತಾಳಂತೆ.
ಯಾವುದೇ ಒಬ್ಬ ಮನುಷ್ಯ ಎಂಥದ್ದೇ ಪರಿಸ್ಥಿತಿಯಲ್ಲಿ ಇದ್ದರೂ ಸರಿ ಶುಚಿತ್ವವಾಗಿ ಇರುವುದು ಬಹಳ ಮುಖ್ಯ ಹಾಗೂ ಸದಾಕಾಲ ದೇವರನ್ನು ನೆನಪಿಸಿಕೊಳ್ಳುತ್ತಾ ದೇವರ ಆರಾಧನೆಯನ್ನು ಮಾಡುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಆಗ ತಾಯಿ ಲಕ್ಷ್ಮಿ ದೇವಿ ನಿಮಗೆ ಒಲಿಯು ತ್ತಾಳೆ ಬದಲಿಗೆ ಕೊಳಕಾಗಿ ಯಾವುದೇ ದೇವರ ಪೂಜೆ ಆರಾಧನೆ ಮಾಡದೆ ಇದ್ದರೆ ತಾಯಿ ಲಕ್ಷ್ಮಿ ದೇವಿ ನಿಮಗೆ ಒಲಿಯುವುದಿಲ್ಲ.
ಬೆಳಗ್ಗೆ ಬೇಗ ಏಳುವುದು ಕೂಡ ಮಂಗಳಕರ ಎಂದು ಶಾಸ್ತ್ರ ಪುರಾಣ ದಲ್ಲಿ ಹೇಳಲಾಗಿದೆ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ. ಮುಂಜಾನೆ ಬೇಗ ಎದ್ದು ಪೂಜೆ ಮಾಡುವುದರಿಂದ ತಾಯಿ ಲಕ್ಷ್ಮಿ ದೇವಿಯು ಸಂತೋಷವಾಗಿರುತ್ತಾಳೆ. ದೀರ್ಘಕಾಲದವರೆಗೆ ಮಲಗುವ ವ್ಯಕ್ತಿಗಳು ಯಾವಾಗಲೂ ಹಣದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
https://youtu.be/jj3d9UjD9y8