ಈ ಭೂಮಿ ಮೇಲೆ ಇರುವ ಒಬ್ಬ ವ್ಯಕ್ತಿಗಿಂತ ಮತ್ತು ಒಬ್ಬ ವ್ಯಕ್ತಿ ಬಹಳ ವಿಭಿನ್ನ. ಮನುಷ್ಯಂದ ಮನುಷ್ಯನಿಗೆ ಆತನ ಗುಣ ನಡತೆ ಸ್ವಭಾವ ಆಚಾರ ವಿಚಾರಗಳಿಂದ ಹಿಡಿದು ಆಸಕ್ತಿ ತನಕಬಹಳ ವ್ಯತ್ಯಾಸ ಇರುತ್ತದೆ. ಇದನ್ನು ಸೃಷ್ಟಿಯ ವಿಸ್ಮಯ ಎಂದರು ಕೂಡ ತಪ್ಪಾಗಲಾರದು ಅಥವಾ ಭಗವಂತನ ಇಚ್ಛೆಯೇ ಹೀಗಿದೆ ಎಂದು ನಂಬಲುಬಹುದು. ಮನುಷ್ಯ ಹುಟ್ಟಿದ ಘಳಿಗೆ, ಸಮಯ ಮತ್ತು ರಾಶಿ ಹಾಗೂ ನಕ್ಷತ್ರದ ಆಧಾರದ ಮೇಲೆ.
ಅವರ ಗುಣಸ್ವಭಾವಗಳು ಮತ್ತು ಭವಿಷ್ಯ ನಿರ್ಧಾರ ಆಗುತ್ತದೆ ಎನ್ನುವುದನ್ನು ನಮ್ಮ ಹಿರಿಯರು ಬಹಳ ಹಿಂದಿಯೇ ತಿಳಿಸಿದ್ದಾರೆ. ಈ ರಾಶಿ ಭವಿಷ್ಯದ ಆಧಾರದ ಮೇಲೆ ದ್ವಾದಶ ರಾಶಿಗಳಲ್ಲಿ 12 ರಾಶಿಗಳಿಗೂ ಕೂಡ ಪ್ರತಿ ರಾಶಿಗಳಿಗೂ ಅವರದ್ದೇ ಆದ ಒಂದಷ್ಟು ಗುಣಗಳು ಇರುತ್ತವೆ. ಇವುಗಳಲ್ಲಿ ಸಿಂಹ ರಾಶಿಯವರ ಗುಣಲಕ್ಷಣಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
ಈ ಸುದ್ದಿ ನೋಡಿ:- ಈ ನಾಲ್ಕು ಜನರು ಸಾಯುವವರೆಗೂ ಬಡವರಾಗಿಯೇ ಇರುತ್ತಾರೆ.!
ಸಿಂಹ ರಾಶಿಯನ್ನು ರಾಜ ರಾಶಿಯೆಂದೇ ಕರೆಯಬಹುದು. ಯಾಕೆಂದರೆ, ಕಾಡಿನ ರಾಜ ಸಿಂಹ ಹೇಗೋ ಹಾಗೆ ಸಿಂಹ ರಾಶಿಯಲ್ಲಿ ಹುಟ್ಟಿದವರ ಗುಣಲಕ್ಷಣಗಳು ಕೂಡ ಅದನ್ನೇ ಹೋಲುತ್ತದೆ. ಇವರು ಎಲ್ಲರ ಮಧ್ಯೆ ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ ಮತ್ತು ಸಿಂಹನಂತೆ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ.
ಹಾಗೂ ಆ ಸ್ಥಾನಕ್ಕೆ ಧಕ್ಕೆ ಬರದ ರೀತಿ ಗಂಭೀರವಾಗಿದ್ದು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಶ್ವಾಸಿಯಾಗಿರುತ್ತಾರೆ ಸಿಂಹ ರಾಶಿಯವರು ಹೇಳಿದ ಮಾತು ವೇದವಾಕ್ಯ ಎನ್ನುವಂತಿರುತ್ತದೆ. ಅದೇ ರೀತಿ ಅವರ ಬದುಕನ್ನು ಕಳೆಯುತ್ತಾರೆ. ತುಂಬಾ ಪಾರದರ್ಶಕವಾದ ಇವರ ಗುಣ ಸ್ವಭಾವವನ್ನು ಮೆಚ್ಚಿ ಎದುರಿಗಿರುವ ಯಾರೇ ಆದರೂ ಇವರ ವ್ಯಕ್ತಿತ್ವಕ್ಕೆ ಸೋಲುತ್ತಾರೆ.
ಬಹಳ ಆತ್ಮವಿಶ್ವಾಸ ಹೊಂದಿರುವ ಇವರು ಯಾವುದೇ ವಿಷಯವನ್ನು ಅಷ್ಟು ಸುಲಭಕ್ಕೆ ಬಿಟ್ಟು ಕೊಡುವುದಿಲ್ಲ. ಜೀವನದಲ್ಲಿ ತಮ್ಮದೇ ಆದ ಹಠಕ್ಕೆ ಬಿದ್ದು ನಿಶ್ಚಯಿಸಿದ್ದನ್ನು ಪೂರ್ತಿ ಮಾಡಿ ತೀರುತ್ತಾರೆ. ಸಿಂಹ ರಾಶಿಯವರು ದೈಹಿಕವಾಗಿ ಕೂಡ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಂಡಿರುತ್ತಾರೆ ಹಾಗೂ ಮಾನಸಿಕರಾಗಿಯೂ ಕೂಡ ತುಂಬಾ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುವಂತಹ ಮನುಷ್ಯರಾಗಿರುತ್ತಾರೆ.
ಈ ಸುದ್ದಿ ನೋಡಿ:- ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಚಿಂತೆ ಬೇಡ, ಮನೆಯಿಂದಲೇ ಅರ್ಜಿ ಹಾಕಬಹುದು ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ತಮ್ಮ ಬಳಿ ಸಮಸ್ಯೆಯನ್ನು ಕೇಳಿಕೊಂಡು ಬರುವವರಿಗೆ ಸರಿಯಾದ ನ್ಯಾಯಯುತವಾದ ತೀರ್ಮಾನವನ್ನು ಕೂಡ ಕೊಟ್ಟು ಕಳಿಸುವಂತಹ ವಿಶೇಷ ಗುಣ ಇವರಲ್ಲಿ ಇರುತ್ತದೆ. ಇವರು ಹೇಳುವ ಯಾವುದೇ ಮಾತನ್ನು ಮರು ಮಾತಿಲ್ಲದೆ ಒಪ್ಪಿಕೊಳ್ಳ ಬಹುದಾದಂತಹ ಅಪಾರಜ್ಞಾನವೂ, ಮುಂದಾಲೋಚನೆ ಮಾಡುವಂತಹ ಗುಣವು ಇವರಲ್ಲಿ ಇರುತ್ತದೆ.
ಸಿಂಹ ರಾಶಿಯವರು 10 ಜನಗಳ ಮಧ್ಯೆ ಇದ್ದರೆ ಕೂಡ ಆಕರ್ಷಣೆಯಾಗುವಂತಹ ವಿಶೇಷ ಶಕ್ತಿಯನ್ನು ಹೊಂದಿರುತ್ತಾರೆ. 12 ರಾಶಿಗಳಲ್ಲಿ ಬಹಳ ವಿಶೇಷವಾದ ಗುಣಸ್ವಭಾವವನ್ನು ಹೊಂದಿರುವವರು ಸಿಂಹ ರಾಶಿಯವರಾಗಿರುತ್ತಾರೆ. ತುಂಬಾ ಸ್ಪಷ್ಟ ನಿಲುಗಳನ್ನು ಇಟ್ಟುಕೊಂಡಿರುವ ಇವರು ಯಾವುದೇ ಕ್ಷೇತ್ರದಲ್ಲಿ ಇದ್ದರೂ ಕೂಡ ಅಲ್ಲಿ ಉನ್ನತ ಸ್ಥಾನಕ್ಕೆ ಇರಲು ಪ್ರಯತ್ನಿಸುತ್ತಾರೆ.
ಕೌಟುಂಬಿಕ ವಿಚಾರದಲ್ಲೂ ಕೂಡ ಕುಟುಂಬದಲ್ಲೇ ಇವರ ಮಾತೆ ಅಂತಿಮವಾಗಿರುತ್ತದೆ. ಆದರೆ ವೈವಾಹಿಕ ಜೀವನದಲ್ಲಿ ಇವರು ಬಹಳ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇರುತ್ತದೆ. ಇವರು ನೋಡಲು ಎಷ್ಟೇ ಒರಟಾಗಿ ಕಂಡರೂ ಕೂಡ ಅಷ್ಟೇ ಮೃದುವಾದ ಮನಸ್ಸುಳವರಾಗಿರುತ್ತಾರೆ ಸ್ನೇಹಿತರು ಕಡಿಮೆ ಇದ್ದರೂ ಶ್ರೇಷ್ಠರಾದವರೊಂದಿಗೆ ಆತ್ಮೀಯವಾಗಿರುತ್ತಾರೆ. ಇವರಿಗೆ ದ್ರೋಹ ಮಾಡಿದವರಿಗು ಕೂಡ ಕ್ಷಮಿಸುವಂತಹ ಉದಾತ್ತ ಗುಣವನ್ನು ಹೊಂದಿದ್ದಾರೆ. ಅವರ ಧರ್ಮ ನಿಷ್ಠೆಯೇ
ಅವರನ್ನು ಸದಾ ಕಾಯುತ್ತದೆ.