ಮೊದಲ ಬಾರಿಗೆ ಚಿಕ್ಕಣ್ಣ ಅವರು ನಾಯಕ ನಟನಾಗಿ ನಟಿಸುತ್ತಿರುವಂತಹ ಸಿನಿಮಾಗೆ ಜನರಲ್ಲಿ ಹೆಚ್ಚಿನ ನಿರೀಕ್ಷೆಗಳು ಕಂಡುಬರುತ್ತಿದೆ. ಈ ಸಿನಿಮಾವನ್ನು ಶ್ರೀನಿವಾಸ್ ಉಮಾಪತಿ ಗೌಡ ಅವರು ನಿರ್ದೇಶನ ಮಾಡಲಾಗುತ್ತಿದ್ದು, ಉಮಾಪತಿ ಅವರು ಸಾಕಷ್ಟು ರೀತಿಯಾದಂತಹ ಒಳ್ಳೆ ಸಿನಿಮಾಗಳನ್ನು ಮೊದಲೇ ಕನ್ನಡ ಚಿತ್ರರಂಗಕ್ಕೆ ನೀಡಿರುವುದರಿಂದ ಇದು ಸಹ ಒಂದು ಬೇಡಿಕೆಯ ಚಿತ್ರವಾಗಲಿದೆ ಎಂದು ಹೇಳಿದರೆ ತಪ್ಪಾಗಲಾರದು. ಹಿಟ್ಲರ್ ಕಲ್ಯಾಣ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ನಟನೆ ಮಾಡುತ್ತಿದ್ದಂತ ನಟಿ ಎಂದರೆ ಮಲೈಕ ಇವರು ಕಿರುತೆರೆಯಲ್ಲಿ ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ಮೊದಲ ಬಾರಿಗೆ ಬಣ್ಣ ಹಚ್ಚಿ ನಟನೆಯನ್ನು ಮಾಡುತ್ತಿದ್ದರು ಇದೀಗ ಕಿರುತೆರೆಯಿಂದ ಸಿನಿಮಾಗೆ ಬಡ್ತಿಯನ್ನು ಪಡೆಯುತ್ತಿದ್ದು, ಮಲೈಕ ಅವರ ಮೊದಲ ಸಿನಿಮಾ ಇದಾಗಿದೆ. ಅಷ್ಟೇ ಅಲ್ಲದೆ ಚಿಕ್ಕಣ್ಣ ಅವರು ನಾಯಕನಾಗಿ ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ. ಹೀಗೆ ಚಿಕ್ಕಣ್ಣ ಮತ್ತು ಮಲೈಕ ಅವರು ನಟಿಸುತ್ತಿರುವ ಈ ಒಂದು ಸಿನಿಮಾಗೆ ಉಪಾಧ್ಯಕ್ಷ ಎಂದು ಹೆಸರನ್ನು ಸಹ ಇಡಲಾಗಿದೆ ಈ ಸಿನಿಮಾದ ಮುಹೂರ್ತ ನೆರವೇರಿದ್ದು ಚಿತ್ರೀಕರಣವನ್ನು ಸದ್ಯದಲ್ಲಿಯೇ ಶುರು ಮಾಡುತ್ತೇವೆ ಎಂದು ಚಿತ್ರತಂಡವು ತಿಳಿಸಿದ್ದಾರೆ.
ನಟ ಚಿಕ್ಕಣ್ಣ ಅವರು ತಾವು ತಮ್ಮ ಜೀವನದಲ್ಲಿ ಸಾಕಷ್ಟು ನೋವನ್ನು ಅನುಭವಿಸಿಕೊಂಡು ಬಂದವರು ಗಾರೆ ಕೆಲಸವನ್ನು ಮಾಡಿಕೊಂಡು ಇದ್ದಂತವರು ಈ ಒಂದು ನಟನೆಯಲ್ಲಿ ಎಷ್ಟರಮಟ್ಟಿಗೆ ಮುಂದುವರೆಯುತ್ತಿದ್ದಾರೆ ಎಂದರೆ ನಂಬಲು ಅಸಾಧ್ಯವಾದುದು. ಹೌದು ಅವರ ಪರಿಶ್ರಮ ಹಾಗೂ ಶ್ರದ್ದೆ ಇಲ್ಲಿಯ ಮಟ್ಟಿಗೆ ತಂದುಬಿಟ್ಟಿದೆ ಎಂದು ಹೇಳಿದರೆ ತಪ್ಪಾಗಲಾರದು. ಚಿಕ್ಕಣ್ಣ ಅವರು ಕೆಲವೊಂದಷ್ಟು ನಾಟಕಗಳನ್ನು ಮಾಡಿಕೊಂಡಿದ್ದವರು ಆನಂತರದಲ್ಲಿ ಯಶ್ ಅವರು ಚಿಕ್ಕಣ್ಣ ಅವರನ್ನು ಗುರುತಿಸಿ ಅವರಿಗೆ ಕಿರಾತಕ ಸಿನಿಮಾದಲ್ಲಿ ಒಂದು ಪಾತ್ರವನ್ನು ನೀಡುತ್ತಾರೆ ಆ ಪಾತ್ರದಲ್ಲಿ ಚಿಕ್ಕಣ್ಣ ಅವರ ಅಭಿನಯವನ್ನು ನೋಡಿ ಸಾಕಷ್ಟು ಜನರು ಮೆಚ್ಚುಗೆಯನ್ನು ಸಹ ವ್ಯಕ್ತಪಡಿಸುತ್ತಾರೆ. ಚಿಕ್ಕಣ್ಣ ಅವರ ಉತ್ತಮ ಅಭಿನಯದಿಂದ ಸಾಕಷ್ಟು ಸಿನಿಮಾಗಳು 50 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಹಾಸ್ಯನಟನಾಗಿ ಗುರುತಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಖಳ ನಾಯಾಕನಾಗಿಯು ಸಹ ಅಭಿನಯಿಸಿದ್ದಾರೆ. ಚಿಕ್ಕಣ್ಣ ಅವರಿಗೆ ಖಳನಾಯಕನಾಗಿ ಅಭಿನಯ ಮಾಡಬೇಕು ಎನ್ನುವುದು ತುಂಬಾ ಇಷ್ಟ, ಚಿಕ್ಕಣ್ಣ ಅವರು ನಾಯಕ ನಟನಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ ಉಪಾಧ್ಯಕ್ಷ ಆಗಿದ್ದು.
ಈ ಸಿನಿಮಾದಲ್ಲಿ ಚಿಕ್ಕಣ್ಣ ಅವರ ಅಭಿನಯ ಯಾವ ರೀತಿಯಲ್ಲಿ ಇರುತ್ತದೆ ಎಂದು ಕಾದು ನೋಡಬೇಕಿದೆ. ಈ ಚಿತ್ರದ ನಾಯಕಿಯಾಗಿ ನಟಿಸುತ್ತಿರುವ ಮಲೈಕ ಅವರು ಹಿಟ್ಲರ್ ಕಲ್ಯಾಣ ಧಾರಾವಾಹಿ ಯಲ್ಲಿ ಸಹ ನಟಿಸುತ್ತಾ ಜೊತೆಗೆ ಸಿನಿಮಾವನ್ನು ಮಾಡಬೇಕು ಎನ್ನುವಂತಹ ಒಂದು ಉತ್ಸಾಹವನ್ನು ಹೊಂದಿದ್ದರೆ. ನಾನು ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲಿಯೂ ಸಹ ನಟನೆಯನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಅವರು ಹೇಳಿದ್ದಾರೆ. ಚಿಕ್ಕಣ್ಣ ಅವರು ಈ ಒಂದು ಸಿನಿಮಾದಲ್ಲಿ 35 ಲಕ್ಷದಿಂದ 40 ಲಕ್ಷದವರೆಗೆ ಸಂಭಾವನೆಯನ್ನು ಪಡೆಯಲಿದ್ದಾರೆ ಎನ್ನುವಂತಹ ಹಲವಾರು ಚರ್ಚೆಗಳು ಇದೀಗ ಸೋಶಿಯಲ್ ಮೀಡಿಯಾ ಗಳಲ್ಲಿ ಹರಿದಾಡುತ್ತಿದೆ. ಚಿಕ್ಕಣ್ಣ ಅವರು ಅಭಿನಯಿಸಿದ ಕನ್ನಡದ ಮೊದಲ ಚಿತ್ರ ಎಂದರೆ ಕಿರಾತಕ ಈ ಒಂದು ಚಿತ್ರದಲ್ಲಿ ನಟಿಸುತ್ತಿರುವಂತಹ ಸಂದರ್ಭದಲ್ಲಿ ಚಿಕ್ಕಣ್ಣನವರು ಅತಿ ಕಡಿಮೆ ಸಂಭಾವನೆಯನ್ನು ಪಡೆದುಕೊಂಡಿದ್ದರು ಈಗ ಹೀರೋ ಆಗಿ ಬಡ್ತಿ ಪಡೆದುಕೊಂಡು ಇಷ್ಟೊಂದು ಹೆಚ್ಚಿನ ಮಟ್ಟದ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರೆ ಖುಷಿಯ ವಿಚಾರ. ಚಿಕ್ಕಣ್ಣ ಅವರು ಕಿರಾತಕ, ರಾಜಹುಲಿ, ರನ್ನ, ಅಧ್ಯಕ್ಷ, ದೊಡ್ಮನೆ ಹುಡುಗ, ರಾಂಬೊ, ಟೈಗರ್, ಕೃಷ್ಣ ಟಾಕೀಸ್, ಬೂತಯ್ಯನ ಮೊಮ್ಮಗ ಅಯ್ಯೊ, ಅಂಜನಿಪುತ್ರ, ಅಂಜದಗಂಡು, ಸೀತಾರಾಮ ಕಲ್ಯಾಣ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ.
ಚಿಕ್ಕಣ್ಣ ಅವರು ತಮ್ಮ ಕಾಮಿಡಿ ಅಂದರೆ ಹಾಸ್ಯ ನಟನೆಯ ಮೂಲಕ ಜನರನ್ನು ರಂಜಿಸಿದ್ದಾರೆ ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಲಿರುವ ಚಿಕ್ಕಣ್ಣ ಅವರು ಈಗ ಹೀರೋ ಹಾಗಿ ಮೊದಲ ಸಿನಿಮಾವನ್ನು ಮಾಡುತ್ತಿದ್ದಾರೆ. ಮೂಲತಹ ಚಿಕ್ಕಣ್ಣ ಅವರು ಗಾರೆ ಕೆಲಸವನ್ನು ಮಾಡುತ್ತಿದ್ದರು ಒಬ್ಬ ಉತ್ತಮ ವ್ಯಕ್ತಿತ್ವವನ್ನು ಉಳ್ಳಂತಹ ವ್ಯಕ್ತಿ ಚಿಕ್ಕಣ್ಣ ಇವರು ಮೈಸೂರಿನ ದೃಶ್ಯ ಕಲಾವಿದ ಎನ್ನುವಂತಹ ತಂಡದಲ್ಲಿ ಕೆಲವೊಂದು ನಾಟಕಗಳಲ್ಲಿ ಹಾಸ್ಯ ಪಾತ್ರಗಳ ಮೂಲಕ ಬಣ್ಣ ಹಚ್ಚಿದರು. ನಟ ಚಿಕ್ಕಣ್ಣ ಅವರು ಕೆಲವೊಂದಷ್ಟು ಕಾರ್ಯಕ್ರಮಗಳಲ್ಲಿ ಈ ರೀತಿಯಾದಂತಹ ನಟನೆಯನ್ನು ಮಾಡುತ್ತಿದ್ದರು. ನಂತರ ಇವರು ಸಿನಿಮಾಗೆ ಬಂದು ಸಾಕಷ್ಟು ರೀತಿಯಾದಂತಹ ಒಳ್ಳೆ ಒಳ್ಳೆ ಪಾತ್ರಗಳು ಇವರಿಗೆ ದೊರಕಿದವು. ಈ ಉಪಾಧ್ಯಕ್ಷ ಚಿತ್ರದ ನಟಿ ಮಲೈಕ ಅವರು ಇದೇ ಮೊದಲ ಬಾರಿಗೆ ನಾಯಕಿ ನಟಿಯಾಗಿ ನಟಿಸುತ್ತಿರುವ ಸಿನಿಮಾ ಇದಾಗಿದ್ದು ಈ ಚಿತ್ರದಲ್ಲಿ ಸಾಕಷ್ಟು ರೀತಿಯಾದಂತಹ ನಿರೀಕ್ಷೆಗಳನ್ನು ಹೊಂದಿದ್ದಾರೆ. ಈ ಒಂದು ಉಪಾಧ್ಯಕ್ಷ ಸಿನಿಮಾದ ಮೂಲಕ ಅವರ ಸಿನಿಮಾ ಜರ್ನಿ ಸ್ಟಾರ್ಟ್ ಆಗಿದ್ದು ಈ ಒಂದು ಸಿನಿಮಾ ಎಷ್ಟರಮಟ್ಟಿಗೆ ಯಶಸ್ಸನ್ನು ಕಾಣಲಿದೆ ಎಂದು ಕಾದು ನೋಡಬೇಕಿದೆ. ಉತ್ತಮವಾದಂತಹ ಚಿತ್ರತಂಡ ಇದಾಗಿದ್ದು ಈ ಒಂದು ಚಿತ್ರತಂಡದಿಂದ ಭಾರಿ ನಿರೀಕ್ಷೆಗಳನ್ನು ಹೊಂದಿದ್ದಾರೆ ಈ ಉಪಾಧ್ಯಕ್ಷ ಸಿನಿಮಾದಲ್ಲಿ ಸಾಕಷ್ಟು ಒಳ್ಳೆ ಒಳ್ಳೆಯ ಕಲಾವಿದರು ನಟಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ಕಾಮೆಂಟ್ ಮುಖಾಂತರ ತಿಳಿಸಿ ಮಾಹಿತಿ ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ.