ಹಾಸ್ಯ ಎಂದ ಕೂಡಲೆ ಕೆಲವೊಂದಷ್ಟು ಮುಖಗಳು ನಮ್ಮ ನೆನಪಿಗೆ ಬರುತ್ತದೆ ಅಂತ ಮುಖಗಳಲ್ಲಿ ನವರಸ ನಾಯಕ ಜಗ್ಗೇಶ್ ಕೂಡ ಒಬ್ಬರು ಹೌದು ತಮ್ಮ ವಿಭಿನ್ನ ವಾದಂತಹ ಹಾಸ್ಯದ ಮೂಲಕ ಜನರನ್ನು ನಕ್ಕು ನಲಿಸುವಂತಹ ಪ್ರಯತ್ನವನ್ನು ಜಗ್ಗೇಶ್ ಅವರು ಮಾಡುತ್ತಾರೆ. ಜಗ್ಗೇಶ್ ಅವರು ಹಾಸ್ಯನಟನಾಗಿ ಹಾಗೆಯೇ ಖಳನಟನಾಗಿ ಚಿತ್ರರಂಗಕ್ಕೆ ಎಂಟ್ರಿಯನ್ನು ಕೊಟ್ಟರು ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡಿರುವಂತಹ ನವರಸನಾಯಕ ಜಗ್ಗೇಶ್ ರವರು ತದನಂತರದಲ್ಲಿ ನಾಯಕನಟನಾಗಿ ಸಹಕರಿಸಿ ಗುರುತಿಸಿಕೊಂಡಿದ್ದಾರೆ. ಹೀಗೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿರುವ ಜಗ್ಗೇಶ್ ಅವರು ಹಾಸ್ಯನಟನಾಗಿ, ಖಳನಟನಾಗಿ, ಹೀರೋ, ನಿರ್ಮಾಪಕನಾಗಿ, ಸಂಗೀತಗಾರನು ಆಗಿದ್ದಾರೆ ಚಿತ್ರರಂಗದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಪ್ರಾರಂಭದ ದಿನಗಳಲ್ಲಿ ಜಗ್ಗೇಶ್ ಅವರ ಸಿನಿಮಾ ಜರ್ನಿ ಅಷ್ಟೇನೂ ಚೆನ್ನಾಗಿರಲಿಲ್ಲ ಅವರು ಸಿನಿಮಾಗೆ ಬರಲು ತುಂಬಾ ಕಷ್ಟಪಟ್ಟಿದ್ದಾರೆ. ಅವರ ಈ ಹಿಂದೆ ಇರುವಂತಹ ದೊಡ್ಡ ಯಶಸ್ಸಿನ ಫಲ ಹಿಂದಿನ ದಿನಗಳಲ್ಲಿ ಪಟ್ಟಿರುವಂತಹುದು ಪರಿಶ್ರಮ ಎಂದೇ ಹೇಳಬಹುದು. ಇಬ್ಬನಿ ಕರಗಿತು ಎಂಬ ಸಿನಿಮಾದ ಮೂಲಕ ಅವರು ನಟಿಸಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ತದನಂತರದಲ್ಲಿ ತರ್ಲೆ ನನ್ ಮಗ ಎಂಬ ಸಿನಿಮಾದಲ್ಲಿ ನಾಯಕನಟನಾಗಿ ಇವರು ಗುರುತಿಸಿಕೊಂಡರು.
ಹೀಗೆಯೇ ನೂರಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿರುವಂತಹ ನವರಸನಾಯಕ ಜಗ್ಗೇಶ್ ರವರು ಜನರ ಮೆಚ್ಚುಗೆಯನ್ನು ಸಹ ಪಡೆದುಕೊಂಡಿದ್ದಾರೆ. ಜಗ್ಗೇಶ್ ಅವರು ತಮ್ಮ ಹಾವಭಾವದ ಮೂಲಕ ಒಂದಷ್ಟು ಹಾಸ್ಯ ವ್ಯಕ್ತಪಡಿಸಿದ್ದಾರೆ, ತಮ್ಮ ಹಾವಭಾವದಿಂದ ಜನರನ್ನು ರಂಜಿಸುವಂತಹ ಪ್ರಯತ್ನವನ್ನು ಜಗ್ಗೇಶ್ ಅವರು ಮಾಡುತ್ತಾರೆ ಇದು ಜನರಲ್ಲಿ ತುಂಬಾ ಇಷ್ಟವಾಗುವ ವಿಷಯವಾಗಿದೆ. ಇನ್ನು ಜಗ್ಗೇಶ್ ಅವರ ಕುಟುಂಬದ ವಿಚಾರಕ್ಕೆ ಬರುವುದಾದರೆ ಜಗ್ಗೇಶ್ ಅವರು ಪರಿಮಳ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು ಪ್ರಾರಂಭದಲ್ಲಿ ಇವರ ಪ್ರೀತಿಗೆ ಅಷ್ಟು ಮೆಚ್ಚುಗೆ ಇರಲಿಲ್ಲ ಅಂದರೆ ಕುಟುಂಬದವರು ಇಬ್ಬರ ಪ್ರೀತಿಯನ್ನು ಒಪ್ಪಿಕೊಂಡಿರಲಿಲ್ಲ ತದನಂತರದಲ್ಲಿ ಜಗ್ಗೇಶ್ ಅವರು ಕುಟುಂಬದವರನ್ನು ಒಪ್ಪಿಸಿ ನಂತರ ಪರಿಮಳ ಅವರನ್ನು ವಿವಾಹವಾಗುತ್ತಾರೆ. ಇವರು ವಿವಾಹವಾದ ನಂತರ ತುಂಬಾ ಸುಖವಾದಂತಹ ಸುಂದರವಾದ ಸಂಸಾರವನ್ನು ನಡೆಸಿಕೊಂಡು ಇಂದಿಗೂ ಸಹ ಹೋಗುತ್ತಿದ್ದಾರೆ. ಜಗ್ಗೇಶ್ ಮತ್ತು ಪರಿಮಳ ಜಗ್ಗೇಶ್ ಅವರಿಗೆ ಇಬ್ಬರು ಗಂಡು ಮಕ್ಕಳು ಒಬ್ಬ ಗುರುರಾಜ್ ಮತ್ತೊಬ್ಬ ಯುವರಾಜ್. ಜಗ್ಗೇಶ್ ಅವರ ಪುತ್ರ ಗುರುರಾಜ್ ಅವರು ಸಹ ಚಿತ್ರರಂಗದಲ್ಲಿ ಕಾಣಿಸಿಕೊಂಡರು ಗುರುರಾಜ್ ಅವರು ನಟಿಸಿರುವಂತಹ ಸಿನಿಮಾಗಳು ಬಹು ದೊಡ್ಡ ಮಟ್ಟದ ಹಿಟ್ ಕಾಣಲಿಲ್ಲ,.
ಚಿತ್ರರಂಗದಲ್ಲಿ ಇವರು ಸಕ್ರಿಯರಾಗದೆ ಇರಲು ಕಾರಣ ಅವರು ಮಾಡಿದಂತಹ ಸಿನಿಮಾಗಳು ದೊಡ್ಡ ಮಟ್ಟದ ಯಶಸ್ಸನ್ನು ಕಾರಣದೆ ಅವರು ಚಿತ್ರರಂಗದಿಂದ ದೂರ ಉಳಿದರು. ಜಗ್ಗೇಶ್ ಅವರ ಮಗ ಗುರುರಾಜ್ ಅವರು ಸಹ ಪ್ರೀತಿಸಿ ವಿದೇಶಿ ಹುಡುಗಿಯನ್ನು ಮದುವೆಯಾಗಿರುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತಹ ವಿಷಯ, ಗುರುರಾಜ್ ಅವರು ವಿದೇಶಿ ಹುಡುಗಿಯನ್ನು ಯಾಕೆ ಮದುವೆಯಾದರೂ ಎಂಬುದರ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. ಗುರುರಾಜ್ ಅವರು ಮುಯೆ ಥಾಯ್ ಕಲಿಯಬೇಕು ಎನ್ನುವಂತಹ ಆಸೆಯನ್ನು ತುಂಬಾ ಹೊಂದಿರುತ್ತಾರೆ, ಮನೆಯಲ್ಲಿ ತಮ್ಮ ತಂದೆ ತಾಯಿಯಾದ ಜಗ್ಗೇಶ್ ಮತ್ತು ಪರಿಮಳ ಅವರನ್ನು ಒಪ್ಪಿಸಿ ಮುಯೇ ಥಾಯ್ ಕಲಿಯಲು ಮುಂದಾಗುತ್ತಾರೆ ನಂತರ ಟಾಯ್ಲೆಟ್ ಗೆ ಹೋಗಿ ಮುಯೇ ಥಾಯ್ ಕಲಿಯಲು ಹಣವನ್ನು ಪಾವತಿ ಸುವಂತಹ ಸಂದರ್ಭದಲ್ಲಿ ಗುರುರಾಜ್ ಕ್ರೆಡಿಟ್ ಕಾರ್ಡ್ ಕೆಲಸ ಮಾಡದ ಕಾರಣ ಇವರು ಮತ್ತೊಂದು ಕ್ಯಾಂಪ್ ಗೆ ಸೇರಿಕೊಳ್ಳುತ್ತಾರೆ. ಆ ಕ್ಯಾಂಪ್ ನಲ್ಲಿ ಗುರುರಾಜ್ ಅವರು ಪ್ರೀತಿಸಿ ಮದುವೆಯಾಗಿ ಇರುವಂತಹ ಕೇಟಿ ಇರುತ್ತಾರೆ ಈ ಒಂದು ಕ್ಯಾಂಪ್ ನಲ್ಲಿ ಗುರುರಾಜ್ ಮತ್ತು ಕೇಟಿ ಅವರಿಗೆ ಸ್ನೇಹವು ಉಂಟಾಗುತ್ತದೆ. ನಂತರದ ದಿನಗಳಲ್ಲಿ ಆ ಸ್ನೇಹ ಪ್ರೀತಿಯಾಗಿ ಬದಲಾಗುತ್ತದೆ, ಮುಯೇ ಥಾಯ್ ಕಲಿಯಬೇಕು ಎಂಬ ಅಂತ ಆಸೆ ಇಟ್ಟುಕೊಂಡು ಥಾಯ್ಲಾಂಡ್ ಗೆ ಗುರುರಾಜ್ ಅವರು ಹೋಗಿರುತ್ತಾರೆ ತದನಂತರದಲ್ಲಿ ಇವರು ಅಲ್ಲಿಯೇ ವಿದೇಶಿ ಆದಂತಹ ಕೇಟಿ ಅವರನ್ನು ಪ್ರೀತಿಸುತ್ತಾರೆ.
ಈ ಪ್ರೀತಿಯ ವಿಚಾರವನ್ನು ಗುರುರಾಜ್ ಯವರು ತಮ್ಮ ತಾಯಿ ಪರಿಮಳ ಅವರಿಗೆ ತಿಳಿಸುತ್ತಾರೆ ಪರಿಮಳ ಅವರನ್ನು ಕರೆದುಕೊಂಡು ಹೋಗಿ ತಾವು ಪ್ರೀತಿಸಿದ ಕೇಟಿ ಅವರ ಪರಿಚಯ ಮಾಡಿ ತಾವು ಪ್ರೀತಿಸುತ್ತಿರುವ ವಿಚಾರವನ್ನು ತಾಯಿಗೆ ತಿಳಿಸುತ್ತಾರೆ ಇದಕ್ಕೆ ಪರಿಮಳ ಒಪ್ಪಿಗೆಯನ್ನು ಸಹ ಸೂಚಿಸುತ್ತಾರೆ. ಆದರೆ ಜಗ್ಗೇಶ್ ಯಾವುದೇ ರೀತಿಯಾದಂತಹ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ನಂತರದಲ್ಲಿ ಪರಿಮಳ ಅವರು ಅವರ ಪ್ರೀತಿಯ ವಿಚಾರದ ಬಗ್ಗೆ ಹೇಳಿದಾಗ ಜಗ್ಗೇಶ್ ಅವರು ಪ್ರೀತಿಸುವುದು ದೊಡ್ಡದಲ್ಲ ಅದನ್ನು ಉಳಿಸಿಕೊಂಡು ಹೋಗುವುದು ತುಂಬಾ ದೊಡ್ಡದು ಎಂದು ಹೇಳುತ್ತಾರೆ. ನೀನು ಈ ಹುಡುಗಿಯನ್ನು ಪ್ರೀತಿಸಿ ಮದುವೆಯಾಗುತ್ತೀಯಾ ಮುಂದೆ ಯಾವುದೇ ರೀತಿಯಾದಂತಹ ಭಿನ್ನಾಭಿಪ್ರಾಯಗಳು ಬಂದರು ಸರಿಯೇ ನೀವಿಬ್ಬರು ಯಾವುದೇ ಕಾರಣಕ್ಕೂ ದೂರವಾಗಬಾರದು ಎಂಬಂತಹ ಷರತ್ತಿನ ಮೇರೆಗೆ ಜಗ್ಗೇಶ್ ಅವರು ಮಗ ಗುರುರಾಜ್ ಮತ್ತು ಕೇಟಿ ಅವರಿಬ್ಬರ ಮದುವೆಯನ್ನು ನೆರವೇರಿಸುತ್ತಾರೆ. ಈಗ ಗುರುರಾಜ್ ಮತ್ತು ಕೇಟಿ ಅವರಿಗೆ ಒಂದು ಮುದ್ದಾದ ಗಂಡು ಮಗು ಇದೆ ಇವರು ಸುಂದರವಾದ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.