ಕೂದಲು ಉದುರುವಿಕೆ ಈಗ ಅತಿ ದೊಡ್ಡ ಸಮಸ್ಯೆಯಾಗಿದೆ. ಚಿಕ್ಕ ಚಿಕ್ಕ ವಯಸ್ಸಿನವರಲ್ಲೂ ಕೂಡ ತಲೆ ಕೂದಲು ಬೆಳ್ಳಗಾಗುವುದು ತೀರ ಸಾಮಾನ್ಯ ಎನಿಸಿದೆ. ಇದರ ಜೊತೆಗೆ ಕೂದಲು ಕವಲು ಒಡೆಯುವುದು, ಒರಟಾಗುವುದು, ಕೂದಲು ಉದುರುವುದು, ತಲೆ ಕೂದಲಿನಲ್ಲಿ ಹೊಟ್ಟು ಬರುವುದು ಈ ರೀತಿ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತಿವೆ.
ತಲೆ ಕೂದಲು ಬಿರುಸಾಗಿರುವುದು ಇಂತಹ ಸಮಸ್ಯೆಗಳು ಬರಲು ಕಾರಣ. ಈ ಸಮಸ್ಯೆಗಳೆಲ್ಲಾ ನ್ಯಾಚುರಲ್ ಆಗಿ ಪರಿಹಾರವಾಗಿ ತಲೆ ಕೂದಲು ಕಪ್ಪಾಗಿ ದಟ್ಟವಾಗಿ ಸೋಂಪಾಗಿ ಬೆಳೆಯಬೇಕು ಹಾಗೂ ರೇಷ್ಮೆಯಂತೆ ನಿಮ್ಮ ತಲೆ ಕೂದಲು ನುಣುಪಾಗಿರಬೇಕು ಎಂದರೆ ಈಗ ನಾವು ಹೇಳುವ ಒಂದು ಮನೆ ಮದ್ದು ಮಾಡಿ ಸಾಕು. ನೂರಕ್ಕೆ ನೂರರಷ್ಟು ಫಲಿತಾಂಶ ಖಂಡಿತ ಸಿಗುತ್ತದೆ.
SBI ಬ್ಯಾಂಕ್ ನಲ್ಲಿ ಒಂದು ಸಲ ಡೆಪಾಸಿಟ್ ಮಾಡಿದ್ರೆ ಸಾಕು 5 ವರ್ಷ ಪ್ರತಿ ತಿಂಗಳು 4950/- ಸಿಗುತ್ತೆ.!
ಈಗ ತಲೆ ಕೂದಲಿನ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡು ಅನೇಕ ಬ್ರಾಂಡಿನ ಶಾಂಪೂಗಳು ಆಯಿಲ್ ಗಳು ಮಾರ್ಕೆಟ್ ಗೆ ಲಗ್ಗೆ ಇಟ್ಟಿವೆ. ಈ ಕಾಂಪಿಟೇಶನ್ ಗಳ ನಡುವೆ ಯಾವುದೇ ದುಬಾರಿ ಖರ್ಚು ಇಲ್ಲದೆ ನಮ್ಮ ಮನೆಯಲ್ಲಿ ಸಿಗುವ ಸುಲಭ ವಸ್ತುಗಳನ್ನು ಬಳಸಿಕೊಂಡು ಈ ಕೂದಲಿನ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಕೆಮಿಕಲ್ ಯುಕ್ತ ಬ್ರಾಂಡೆಡ್ ಶ್ಯಾಂಪೂಗಳು ಹಾಗೂ ಆಯಿಲ್ ಗಳು ಸೈಡ್ ಎಫೆಕ್ಟ್ ಉಂಟುಮಾಡುವ ಸಾಧ್ಯತೆಗಳು ಕೂಡ ಇರುತ್ತವೆ.
ಆದರೆ ನ್ಯಾಚುರಲ್ ಆಗಿ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಮನೆಮದ್ದು ಮಾಡುವುದರಿಂದ ಈ ರೀತಿ ಯಾವುದೇ ಅಡ್ಡ ಪರಿಣಾಮ ಉಂಟಾಗುವ ಭಯವು ಇರುವುದಿಲ್ಲ, ಹಣ ದುಂದು ವೆಚ್ಚ ಕೂಡ ಆಗುವುದಿಲ್ಲ. ಹಾಗಾಗಿ ಮೊದಲಿಗೆ ಆಯುರ್ವೇದದಲ್ಲಿ ತಿಳಿಸಲಾಗಿರುವ ಅಥವಾ ನಿಮ್ಮ ಮನೆಯಲ್ಲಿ ಹಿರಿಯರು ತಿಳಿಸುವ ಈ ರೀತಿ ಮನೆಮದ್ದುಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ.
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ಎಷ್ಟೆಲ್ಲ ಫಲ ಸಿಗುತ್ತದೆ ನೋಡಿ.!
ನಮ್ಮ ಮನೆಯಲ್ಲಿ ಅಡುಗೆಗೆ ಬಳಸುವ ಸಣ್ಣ ಈರುಳ್ಳಿ ಈ ರೀತಿ ತಲೆ ಕೂದಲಿನ ಸಮಸ್ಯೆಗೆ ಅದ್ಭುತ ಔಷಧಿಯಾಗಿ ಕೆಲಸ ಮಾಡುತ್ತದೆ. ಈರುಳ್ಳಿಯನ್ನು ಅಡುಗೆಗೆ ಬಳಸುವುದರಿಂದ ಅಡುಗೆಯ ರುಚಿ ಹೆಚ್ಚಾಗುತ್ತದೆ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ. ದೇಹಕ್ಕೆ ಬೇಕಾದ ಅನೇಕ ವಿಟಮಿನ್ ಗಳು, ಪೋಷಕಾಂಶಗಳು ಈರುಳ್ಳಿಯಲ್ಲಿ ಇದೆ. ಇದು ದೇಹದ ಆರೋಗ್ಯ ಮಾತ್ರವಲ್ಲದೆ ಕೂದಲಿನ ಆರೋಗ್ಯವನ್ನು ಕೂಡ ಇಂಪ್ರೂವ್ ಮಾಡುತ್ತದೆ.
ಸಣ್ಣ ಈರುಳ್ಳಿಯನ್ನು ಯಾವ ರೀತಿ ಬಳಸಬಹುದು ಎಂದರೆ ಮೊದಲಿಗೆ ಇದನ್ನು ಚಿಕ್ಕ ಚಿಕ್ಕ ಪೀಸ್ ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಬೇಕು ನಂತರ ತಲೆಕೂದಲಿಗೆ ಹಚ್ಚಿ ಅರ್ಧ ಗಂಟೆ ಅಥವಾ ಒಂದು ತಾಸು ಒಣಗಲು ಬಿಡಬೇಕು ನಂತರ ಬೆಚ್ಚಗಿನ ನೀರಿನಲ್ಲಿ ತಲೆ ಕೂದಲನ್ನು ಚೆನ್ನಾಗಿ ವಾಶ್ ಮಾಡಬೇಕು.
ಲಕ್ಷಾಂತರ ಜನರ ಜೀವನ ಬದಲಾಗಿದೆ.! ಸುಲಭವಾಗಿ ದುಡ್ಡು ಮಾಡಲು ಇರುವ 6 ನಿಯಮಗಳು.!
ಈ ರೀತಿ ಕೂದಲು ವಾಶ್ ಮಾಡುವಾಗಲೂ ಸಹಾ ಶ್ಯಾಂಪೂಗಳನ್ನು ಕಂಡಿಶನರ್ ಗಳನ್ನು ಬಳಸುವ ಬದಲು ಶುದ್ಧವಾದ ಸೀಗೆಕಾಯಿ ಪುಡಿ ಅಥವಾ ಅಂಟುವಾಳ ಕಾಯಿಯ ಪುಡಿಯನ್ನು ಬಳಸಿ ಕೂದಲನ್ನು ತೊಳೆದುಕೊಳ್ಳುವುದು ಉತ್ತಮ. ಇದು ಇನ್ನೂ ಉತ್ತಮವಾದ ರಿಸಲ್ಟ್ ಕೊಡುತ್ತದೆ. ವಾರದಲ್ಲಿ ಎರಡು ಬಾರಿಯಾದರೂ ಈ ರೀತಿ ನಿಮ್ಮ ತಲೆ ಕೂದಲಿಗೆ ಈರುಳ್ಳಿ ಪೇಸ್ಟ್ ಹಚ್ಚಿ ಪ್ರಯೋಗ ಮಾಡಿ ನೋಡಿ. ಮತ್ತು ಈ ರೀತಿ ಮನೆಮದ್ದು ಮಾಡುವುದರಿಂದ ನಿಮ್ಮ ಕೂದಲಿನ ಆರೋಗ್ಯ ಸುಧಾರಿಸಿದ್ದರೆ ಈ ಉಪಯುಕ್ತ ಟಿಪ್ ನ ಬಗ್ಗೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೂ ಕೂಡ ತಿಳಿಸಿ.