ಮನೆಯಲ್ಲಿರುವ ಗೃಹಿಣಿಯರಿಗೆ ಮನೆಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದೇ ಒಂದು ದೊಡ್ಡ ಟಾಸ್ಕ್ ಆಗಿದೆ. ಯಾಕೆಂದರೆ ಅಷ್ಟು ಕೆಲಸ ಇರುತ್ತದೆ. ಹೊರಗೆ ಹೋಗಿ ದುಡಿಯುವವರು ಮನೆಗೆ ಬಂದು ರೆಸ್ಟ್ ಮಾಡುತ್ತಾರೆ, ಆದರೆ ಗೃಹಿಣಿಯರಿಗೆ ದಿನಪೂರ್ತಿ ಕೆಲಸ ಇರುತ್ತದೆ. ಮನೆಯಲ್ಲಿ ಬೆಳಗ್ಗೆ ಎದ್ದಾಗಲಿಂದ ರಾತ್ರಿ ಮಲಗುವವರೆಗೂ ಕೂಡ ಒಂದಲ್ಲ ಒಂದು ಕೆಲಸ ಇದ್ದೇ ಇರುತ್ತದೆ.
ಅದನ್ನು ವಿವರಿಸುತ್ತಾ ಹೋದರೆ ಆ ಪಟ್ಟಿ ಮುಗಿಯುವುದೇ ಇಲ್ಲ ಯಾಕೆಂದರೆ ಮನೆಯಲ್ಲಿರುವ ಸಣ್ಣ ಸಣ್ಣ ವಸ್ತುಗಳು ಕೂಡ ಕ್ಲೀನ್ ಆಗಿರುವಂತೆ ಅದು ಹೊಸದರಂತೆ ಕಾಣುವ ಹಾಗೆ ಮೆಂಟೇನ್ ಮಾಡಬೇಕಾದ ಜವಾಬ್ದಾರಿ ಆಕೆ ಮೇಲೆ ಇರುತ್ತದೆ. ಇಲ್ಲವಾದಲ್ಲಿ ಮನೆಗೆ ಬಂದವರು ಏನೆಂದು ಕೊಳ್ಳುತ್ತಾರೆ ಎನ್ನುವ ಕಳವಳ. ಅವರ ಶ್ರಮವನ್ನೆಲ್ಲ ಮನೆ ವಸ್ತುಗಳನ್ನು ಫಳಫಳ ಎನಿಸಲು ಖರ್ಚು ಮಾಡುತ್ತಾರೆ.
ಎರಡೇ ನಿಮಿಷಗಳಲ್ಲಿ ಹಲ್ಲು ನೋವು, ಬಾಯಿ ದುರ್ವಾಸನೆ, ಮಾಯ ಮಾಡುವ ಅದ್ಭುತ ಮನೆ ಮದ್ದು.!
ಆದರೆ ನೀವು ಸ್ವಲ್ಪ ಟೆಕ್ನಿಕ್ ಉಪಯೋಗಿಸಿದರೆ ಹೆಚ್ಚು ಶ್ರಮ ಪಡದೆ, ಹಣವನ್ನು ವ್ಯರ್ಥ ಮಾಡದೆ ನಿಮ್ಮ ಮನೆಯಲ್ಲಿ ಯುವ ವಸ್ತುಗಳು ಯಾವಾಗಲೂ ಶೈನಿಂಗ್ ಆಗಿ ಇರುವಂತೆ ಮಾಡಬಹುದು. ಉದಾಹರಣೆಗೆ, ಬಾತ್ ರೂಮ್ ನಲ್ಲಿ ನಾವು ಇಡುವ ಬಕೆಟ್ ಗಳು ಹಾಗೂ ಮಗ್ ಗಳು ಬಹಳ ಬೇಗ ಕಲರ್ ಕಳೆದುಕೊಳ್ಳುತ್ತವೆ.
ಯಾಕೆಂದರೆ, ಅದರ ಮೇಲೆ ನೀರಿನ ಕಲೆ, ಬಿಸಿನೀರು ಬಿದ್ದು ಹಾಗೂ ನಾವು ಉಪಯೋಗಿಸುವ ಶಾಂಪೂ ಸೋಪು ಈ ರೀತಿ ಕೆಮಿಕಲ್ ಬಿದ್ದು ಅದು ಅದರ ಹೊಳಪನ್ನು ಕಳೆದುಕೊಂಡಿರುತ್ತದೆ. ಮನೆಗೆ ಯಾರಾದರೂ ಗೆಸ್ಟ್ ಗಳು ಬಂದು ವಾಶ್ ರೂಮ್ ಗೆ ಹೋದಾಗ ನಮಗೆ ಇರಿಸು ಮುರಿಸು ಆಗುತ್ತದೆ.
2 ರೂ ಯಲ್ಲಿ ಕಿಡ್ನಿ ಸ್ಟೋನ್ ಮಂಗಮಾಯ.!
ಅವುಗಳಲ್ಲಿ ತಂದು ಎರಡು ಮೂರು ತಿಂಗಳಾಗಿದ್ದರೂ ಕೂಡ ಈ ರೀತಿ ಆಗುತ್ತವೆ ಹಾಗಾಗಿ ಅವುಗಳನ್ನು ಬಿಸಾಕಿ ಹೊಸದು ತರಲು ಕೂಡ ಮನಸಿರುವುದಿಲ್ಲ. ಅಂತಹ ಸಮಯದಲ್ಲಿ ನೀವು ಟೆಕ್ನಿಕ್ ಗಳನ್ನು ಉಪಯೋಗಿಸಿಕೊಂಡು ಅದನ್ನು ಕ್ಲೀನ್ ಮಾಡಬಹುದು. ಈಗ ನಾವು ಹೇಳುವ ಈ ವಿಧಾನದಿಂದ ನೀವು ಕ್ಲೀನ್ ಮಾಡಿದರೆ ಬಕೆಟ್ ಹಾಗೂ ಮಗ್ ಗೆ ಹೊಸ ರೂಪಕ್ಕೆ ಬರುತ್ತದೆ.
● ಒಂದು ಲೋಟ ನೀರಿಗೆ ಸ್ವಲ್ಪ ಬ್ಲೀಚಿಂಗ್ ಪೌಡರ್ ಅನ್ನು ಹಾಕಿ ಮಿಕ್ಸ್ ಮಾಡಿ ನಂತರ ಒಂದು ಬ್ರಷ್ ಸಹಾಯದಿಂದ ಅದರಲ್ಲಿ ಅದ್ದಿ ಬಕೆಟ್ ಮತ್ತು ಮಗ್ ಗಳನ್ನು ಚೆನ್ನಾಗಿ ಉಜ್ಜಬೇಕು. ಇದರಿಂದ ಬಣ್ಣ ಮಾಸಿದ ಬಕೆಟ್ ಕೂಡ ಫಳಫಳ ಹೊಳೆಯುತ್ತವೆ, ಉಜ್ಜಿದ ನಂತರ ತಣ್ಣೀರಿನಿಂದ ತೊಳೆಯಬೇಕು. ಹೀಗೆ ಮಾಡಿದರೆ ಎಷ್ಟೇ ಹಳೆಯ ಬಕೆಟ್ ಆಗಿದ್ದರೂ ಕೂಡ ಅದು ಹೊಳೆಯುತ್ತದೆ. ಆದರೆ ನೀವು ಈ ಕೆಲಸವನ್ನ ಮಾಡುವಾಗ ಕೈಗೆ ಏನಾದರೂ ಪ್ರೊಟೆಕ್ಷನ್ ಅನ್ನು ಹಾಕಿಕೊಳ್ಳಿ. ಇಲ್ಲವಾದರೆ ಬ್ಲೀಚಿಂಗ್ ಪೌಡರ್ ಸ್ಟ್ರಾಂಗ್ ಹಾಕಿರುವುದರಿಂದ ಅದು ರಿಯಾಕ್ಟ್ ಆಗಿ ಕೈ ಸುಟ್ಟು ಹೋಗುವ ಸಾಧ್ಯತೆ ಇರುತ್ತದೆ.
ನಿಮ್ಮ ಮನೆಯನ್ನು ಸುಂದರವಾಗಿಡಲು ಮತ್ತು ಅಡುಗೆ ಮನೆಗೆ ಉಪಯೋಗವಾಗುವಂತಹ ಸೂಪರ್ ಟಿಪ್ಸ್..!
● ಅಡಿಗೆ ಸೋಡಾ ಮತ್ತು ವಿನೆಗರ್ ಸಮಪ್ರಮಾಣದಲ್ಲಿ ತೆಗೆದುಕೊಂಡು ಒಂದು ಪೇಸ್ಟ್ ಅನ್ನು ತಯಾರಿಸಿ. ನಂತರ ಮಾಸಿದ ಬಕೆಟ್ ಗಳಿಗೆ ಹಾಕಿ ಉಜ್ಜಿ. ಚೆನ್ನಾಗಿ ಉಜ್ಜಿದ ನಂತರ ನೀರಿನಿಂದ ತೊಳೆಯಿರಿ. ಈ ರೀತಿ ನೀವು ವಾರಕ್ಕೆ ಎರಡು ಬಾರಿಯಾದರೂ ಕ ರೀತಿ ವಾಶ್ ಮಾಡುವುದರಿಂದ ಬಕೆಟ್ ಬಣ್ಣ ಬೇಗನೆ ಡಲ್ ಆಗುವುದಿಲ್ಲ. ಒಂದು ವೇಳೆ ಮಾಸಿದರೂ ಕೂಡ ಹೀಗೆ ಕ್ಲೀನ್ ಮಾಡಿದಾಗ ಅದು ಮತ್ತೆ ಹೊಳೆಯಲು ಶುರುವಾಗುತ್ತದೆ.