ಮನೆಯಲ್ಲಿರುವಂತಹ ಗಂಡ ಹೆಂಡತಿ ಇಬ್ಬರೂ ಕೂಡ ಪರಸ್ಪರ ಪ್ರೀತಿ ವಿಶ್ವಾಸದಿಂದ ಪರಸ್ಪರ ನಂಬಿಕೆಯನ್ನು ಇಟ್ಟುಕೊಂಡು ಇರಬೇಕು. ಬದಲಿಗೆ ಯಾವುದೇ ಒಂದು ವಿಚಾರವಾಗಿ ಇಬ್ಬರು ಅನುಮಾನವನ್ನು ಪಡಬಾರದು ಹಾಗೂ ಮನಸ್ಥಾಪಗಳನ್ನು ತಂದುಕೊಳ್ಳಬಾರದು. ಯಾವುದೇ ವಿಚಾರವಾಗಿರಲಿ ಅದನ್ನು ಕುಳಿತು ಅದರ ಬಗ್ಗೆ ಚರ್ಚಿಸಿ ಆ ಒಂದು ಸಮಸ್ಯೆಯನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬೇಕು.
ಬದಲಿಗೆ ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಅದರ ಬಗ್ಗೆ ಆಲೋಚನೆ ಮಾಡುತ್ತಾ ಇಬ್ಬರೂ ಪರಸ್ಪರ ಯಾವುದೇ ರೀತಿಯ ಜಗಳವನ್ನು ಮಾಡಿಕೊಳ್ಳಬಾರದು. ಇದು ಕೇವಲ ಒಂದು ನಿಮಿಷದ ಜಗಳವಾಗಿರದೆ ಅದು ನಿಮ್ಮ ಜೀವನದಲ್ಲಿ ಒಂದು ಕೆಟ್ಟ ಸಮಯವೂ ಕೂಡ ಆಗಿರ ಬಹುದು. ಆದ್ದರಿಂದ ಯಾವುದೇ ಸಮಯದಲ್ಲಿಯೂ ಕೂಡ ಇಬ್ಬರು ತಾಳ್ಮೆಯನ್ನು ಕಳೆದುಕೊಳ್ಳ ಬಾರದು ಬದಲಿಗೆ.
ಆ ಒಂದು ವಿಚಾರದ ಬಗ್ಗೆ ಹೆಚ್ಚು ಆಲೋಚನೆಯನ್ನು ಮಾಡಿ ಈ ರೀತಿ ಯಾಗಿ ಮಾತನಾಡುವುದು ಸರಿಯೋ ತಪ್ಪೋ ಎನ್ನುವುದನ್ನು ತಿಳಿದು ಕೊಂಡು ಆನಂತರ ಅದಕ್ಕೆ ಒಂದು ಉತ್ತಮವಾದಂತಹ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು. ಇಲ್ಲವಾದರೆ ಒಂದು ಮಾತಿಗೆ ಮತ್ತೊಂದು ಮಾತು ಸೇರಿ ಅದು ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ.
ಆದ್ದರಿಂದ ಗಂಡ ಹೆಂಡತಿ ಇಬ್ಬರೂ ಕೂಡ ಕೆಲವೊಂದಷ್ಟು ವಿಚಾರದ ಬಗ್ಗೆ ಆದಷ್ಟು ಒಳ್ಳೆಯ ಮಾಹಿತಿಗಳನ್ನು ತಿಳಿದುಕೊಂಡಿರುವುದು ಒಳ್ಳೆಯದು. ಹಾಗಾದರೆ ಈ ದಿನ ಯಾವ ಕೆಲವು ವಿಚಾರವಾಗಿ ಪ್ರತಿಯೊಬ್ಬರು ತಿಳಿದುಕೊಂಡಿರಬೇಕು ಹಾಗೂ ಯಾವ ಸಮಯದಲ್ಲಿ ಇವರಿಬ್ಬರ ನಡುವೆ ಯಾವ ರೀತಿಯಾದಂತಹ ಹೊಂದಾಣಿಕೆ ಇರಬೇಕು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.
ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಡಬಲ್ ಆಗುವುದು ಖಂಡಿತ…!
* ಗಂಡ ಹೆಂಡತಿ ಜಗಳದ ನಂತರ ಮಾತು ಬಿಡುತ್ತಾರೆ. ಅದು ತಪ್ಪು ಅವರು ಯಾರದೇ ತಪ್ಪಿದ್ದರು ಒಬ್ಬರನ್ನೊಬ್ಬರು ಕ್ಷಮಿಸಿ ಮಾತನಾಡ ಬೇಕು.
* ಇಬ್ಬರ ನಡುವೆ ಏನಾದರೂ ಸಮಸ್ಯೆ ಬಂದರೆ ಇನ್ನೊಬ್ಬರ ಬಳಿ ಸಂಧಾನ ಮಾಡುವಂತೆ ಕೇಳಬಾರದು. ಅದರ ಬದಲು ಇಬ್ಬರೇ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿ.
* ಗಂಡ ಹೆಂಡತಿ ಮಾಡುವ ಅತೀ ದೊಡ್ಡ ತಪ್ಪು ಎಂದರೆ ತಮ್ಮ ಪತಿ ಅಥವಾ ಪತ್ನಿಯನ್ನು ಇನ್ನೊಬ್ಬರಿಗೆ ಹೋಲಿಸಿ ಮಾತನಾಡುವುದು. ಅದು ದೊಡ್ಡ ತಪ್ಪು ಇದರಿಂದ ಇಬ್ಬರ ಸಂಬಂಧ ಹಾಳಾಗುವ ಸಾಧ್ಯತೆ ಹೆಚ್ಚು.
* ಪತಿ ಪತ್ನಿಯಾದವರು ಅತಿಯಾಗಿ ಮೊಬೈಲ್, ಟಿವಿ ಇದರಲ್ಲೇ ಸಮಯ ಕಳೆಯುವುದು ಇತ್ತೀಚಿಗೆ ಸಾಮಾನ್ಯವಾಗಿ ಹೋಗಿದೆ. ಇದರ ಬದಲು ಇಬ್ಬರು ಪರಸ್ಪರ ಕುಳಿತು ಮಾತಾಡಬೇಕು.
ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಡಬಲ್ ಆಗುವುದು ಖಂಡಿತ…!
* ಗಂಡ ಹೆಂಡತಿ ಸಂಬಂಧ ನಂಬಿಕೆ ಮತ್ತು ಪ್ರೀತಿಯ ಮೇಲೆ ನಿಂತಿರುತ್ತದೆ ಆದರೆ ಈ ಸಂಬಂಧದ ನಡುವೆ ಸುಳ್ಳು ಹೇಳುವುದು ಇಬ್ಬರ ಪ್ರೀತಿಯ ಬುನಾದಿಗೆ ತೊಂದರೆ ಉಂಟಾಗಬಹುದು. ಇದರಿಂದ ಆದಷ್ಟು ದಾಂಪತ್ಯದಲ್ಲಿ ಸುಳ್ಳು ಹೇಳದಿರುವುದೇ ಉತ್ತಮ.
* ಪತಿ ಪತ್ನಿ ಆದವರು ಅಹಂಕಾರದಿಂದ ದೂರವಿರಬೇಕು. ಒಬ್ಬರ ಮಾತನ್ನು ಇನ್ನೊಬ್ಬರು ಕೇಳುವಂತೆ ಇರಬೇಕು.
* ಗಂಡ ಹೆಂಡತಿಯರಲ್ಲಿ ಅನುಮಾನ ಬರಬಾರದು. ಒಂದು ವೇಳೆ ದಾಂಪತ್ಯದಲ್ಲಿ ಅನುಮಾನವೆಂಬ ಬಿರುಗಾಳಿ ಎದ್ದರೆ ಇಬ್ಬರು ಪರಸ್ಪರ ಮಾತನಾಡಿಕೊಂಡು ಸರಿಪಡಿಸಿಕೊಂಡು ಮುಂದುವರೆಯುವುದು ಉತ್ತಮ.
* ಇತರರ ಮುಂದೆ ದಂಪತಿಗಳು ಪತಿಯನ್ನೇ ಆಗಲಿ, ಪತ್ನಿಯನ್ನೇ ಆಗಲಿ ಅಗೌರವ, ಹಾಗೂ ಅವಮಾನ ಪಡುವಂತೆ ಮಾಡಬಾರದು.
* ದಾಂಪತ್ಯದಲ್ಲಿ ತಾಳ್ಮೆ ಮುಖ್ಯ. ಲೈಂಗಿಕ ಬಯಕೆ, ಕೋಪ, ದುರಾಸೆ, ಅಹಂಕಾರ, ಮಾನಸಿಕ ಪ್ರಚೋದನೆಗಳ ಮೇಲೆ ನಿಯಂತ್ರಣವಿರಲಿ.
* ದಾಂಪತ್ಯ ಜೀವನದಲ್ಲಿ ತ್ಯಾಗ ಹಾಗೂ ಸಮರ್ಪಣೆ ಕೂಡ ಮುಖ್ಯ. ಪತಿಗಾಗಿ ಪತ್ನಿ ಹಾಗೂ ಪತ್ನಿಗಾಗಿ ಪತಿ ಕೆಲವೊಂದು ಆಸೆ ಬಯಕೆ ಗಳನ್ನು ತ್ಯಾಗ ಮಾಡಬೇಕು.